Don't Miss!
- News
ಬೆಂಗಳೂರು: ಶಾರುಖ್ ನಟನೆಯ ಪಠಾಣ್ ಪೋಸ್ಟರ್ಗಳನ್ನು ಸುಟ್ಟು ಪ್ರತಿಭಟನೆ ನಡೆಸಿದ ವಿಎಚ್ಪಿ ಕಾರ್ಯಕರ್ತರು
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Finance
ಷೇರು ಮಾರಾಟದಲ್ಲಿ ಭಾರೀ ನಷ್ಟ: ದುರ್ಬಲಗೊಳ್ಳಲಿವೆಯೇ ಅದಾನಿ ಪೋರ್ಟ್ಸ್, ಅಂಬುಜಾ ಸಿಮೆಂಟ್?
- Sports
ಆಸ್ಟ್ರೇಲಿಯನ್ ಓಪನ್: ಫೈನಲ್ಗೆ ಪ್ರವೇಶಿಸಿದ ಸಾನಿಯಾ ಮಿರ್ಜಾ, ರೋಹನ್ ಬೋಪಣ್ಣ ಜೋಡಿ
- Technology
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- Lifestyle
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕುUTI: ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: ಸಂಬರ್ಗಿ ಮತ್ತು ರೂಪೇಶ್ ಶೆಟ್ಟಿ ಡ್ಯಾನ್ಸ್ ನೋಡಿ ಜನ ಕಣ್ಣು ಕಳೆದು ಹೋಗ್ತಿತ್ತು!
ಇದೊಂದು ಪ್ರಶ್ನೆ ಖಂಡಿತ ಇಂದು ಬಿಗ್ ಬಾಸ್ ನೋಡಿದವರ ಮನಸ್ಸಲ್ಲಿ ಮೂಡದೆ ಇರುವುದಿಲ್ಲ. ಇವತ್ತಿನ ಮನರಂಜನೆಗಾಗಿ ನಡೆದ ಎಪಿಸೋಡಿನಲ್ಲಿ ಅದೆಷ್ಟು ಜನ ಕಣ್ಣು ಮುಚ್ಚಿಕೊಂಡು ಕುಳಿತು ಬಿಟ್ಟರೋ ಏನೋ. ಯಾಕಂದ್ರೆ ಬಿಗ್ ಬಾಸ್ ಮನೆಯಲ್ಲಿ ಡ್ಯಾನ್ಸ್ ಎಂಬುದು ಇವತ್ತು ಹೀಗೆಲ್ಲಾ ನಡೆದು ಹೋಗಿದೆ.
ಗಂಡು ಮಕ್ಕಳು ಡ್ಯಾನ್ಸ್ ಮಾಡಿದರೆ ಚೆಂದ. ಆದ್ರೆ ಹೆಣ್ಣು ಮಕ್ಕಳಂತೆ ಡ್ಯಾನ್ಸ್ ಮಾಡಿದರೆ ಅಲ್ಲಿ ಮನರಂಜನೆಗೆ ಕಡಿಮೆಯೇ ಇರುವುದಿಲ್ಲ. ಆ ರೀತಿಯಾಗಿದೆ ಬಿಗ್ ಬಾಸ್. ಅನುಪಮಾ ಸಿಕ್ಕಾಪಟ್ಟೆ ಎಲ್ಲರನ್ನು ನಕ್ಕು ನಲಿಸಿದ್ದಾರೆ.

ಆರ್ಯವರ್ಧನ್ ಪೋಲಿ ಡ್ಯಾನ್ಸ್
ಆರ್ಯವರ್ಧನ್ ಪೋಲಿ ನಾನು ಎಂದು ಅನುಪಮಾ ಹೇಳಿಕೊಟ್ಟ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಆರ್ಯವರ್ಧನ್ ಮಾಡಿದ ಡ್ಯಾನ್ಸಿಗೆ ಮನೆಯವರ ನಗು ನಿಲ್ಲುತ್ತಿಲ್ಲ. ಒಂದೇ ಸಮನೆ ನಗುತ್ತಿದ್ದಾರೆ. ಅದರಲ್ಲೂ ಆರ್ಯವರ್ಧನ್ ತಮ್ಮ ತಲೆಯನ್ನೆಲ್ಲಾ ಸವರಿಕೊಂಡು ಖುಷಿ ಖುಷಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಆರ್ಯವರ್ಧನ್ ಅವರು ಒಮ್ಮೊಮ್ಮೆ ಏನು ಅರ್ಥವಾಗದಂತೆ ನಟಿಸಿದರು. ಅದು ನೋಡುಗರಿಗೂ, ಕೇಳುಗರಿಗೂ ಸಿಕ್ಕಾಪಟ್ಟೆ ಖುಷಿ ನೀಡುತ್ತದೆ. ಅದೇ ಖುಷಿ ಅವರು ಮಾಡಿದ 'ಪೋಲಿ ಇವನು ಎಂಬ ಹಾಡು ಮನರಂಜನೆಯನ್ನು ನೀಡಿದೆ.

ಸಂಬರ್ಗಿ ಡ್ಯಾನ್ಸ್ ನೋಡಿ ಜನ ಸುಸ್ತು
ಅನುಪಮಾ
ಎಲ್ಲರಿಗೂ
ಡ್ಯಾನ್ಸ್
ಹೇಳಿಕೊಡುತ್ತಿದ್ದಾರೆ.
ಯಾಕಂದ್ರೆ
ನೀಡು
ಕುಡಿಯಬೇಕು
ಅಲ್ವಾ
ಅದಕ್ಕಾಗಿ.
ಆದ್ರೆ
ಗಂಡು
ಮಕ್ಕಳಿಗೆಲ್ಲಾ
ಬೆಲ್ಲಿ
ಡ್ಯಾನ್ಸ್
ಹೇಳಿಕೊಟ್ಟಿದ್ದಾರೆ.
ಸಂಬರ್ಗಿ
ಅವರಿಗೆ
ಹೇಳಿಕೊಡುವಾಗ
ಮಸ್ತ್
ಮಜವಾಗಿತ್ತು.
ಇವರಿಗೆ
ಏನಾಯ್ತು
ಅಂತ
ಜನರೇ
ಶಾಕ್
ಆಗಿದ್ದರು.
ಮನೆಯಲ್ಲಿದ್ದ
ಹೆಣ್ಣು
ಮಕ್ಕಳ
ಡ್ರೆಸ್
ಹಾಕಿಕೊಂಡು
ಬಂದ
ಸಂಬರ್ಗಿ
ಫುಲ್
ಮೇಕಪ್
ಮಾಡಿಕೊಂಡು
ಬಂದಿದ್ದರು.
ಡ್ಯಾನ್ಸ್
ಕೂಡ
ಅದೇ
ರೀತಿ
ಮಾಡಿ
ನಗಿಸಿದ್ದಾರೆ.

ಬೆಲ್ಲಿ ಡ್ಯಾನ್ಸ್ಗೆ ರೂಪೇಶ್ ಶೆಟ್ಟಿ ಫುಲ್ ಸುಸ್ತು
ಇನ್ನು ಅನುಪಮಾ ರೂಪೇಶ್ ಶೆಟ್ಟಿಗೆ ಡ್ಯಾನ್ಸ್ ಕಲಿಸಲು ಬಂದಾಗ, ಮತ್ತೆ ಬೆಲ್ಲಿ ಡ್ಯಾನ್ಸ್ ಕಲಿಸಲು ಶುರು ಮಾಡಿದರು. ರೂಪೇಶ್ ಶೆಟ್ಟಿ ಡ್ರೆಸ್ ಬದಲಾವಣೆ ಮಾಡಿಕೊಳ್ಳಲಿಲ್ಲ. ಆದ್ರೆ ಹಾಕಿದ್ದ ಶರ್ಟ್ ಅನ್ನೇ ಹೊಟ್ಟೆ ಕಾಣುವಂತೆ ಕಟ್ಟಿಕೊಂಡಿದ್ದರು. ಅನುಪಮಾ ಹೇಳಿಕೊಡುತ್ತಿದ್ದ ಸ್ಟೆಪ್ಗೆ ರೂಪೇಶ್ ಸಿಕ್ಕಾಪಟ್ಟೆ ಟ್ರೈ ಮಾಡುತ್ತಿದ್ದರು. ಆದರೂ ಯಾವ ಸ್ಟೆಪ್ ಕೂಡ ಬರುತ್ತಿರಲಿಲ್ಲ. ನೋಡಿದಾಗ ಅರ್ಥವಾಗುತ್ತಿದ್ದ ಸ್ಟೆಪ್ ಆಮೇಲೆ ತಿಳಿಯುತ್ತಾ ಇರಲಿಲ್ಲ. ಇದನ್ನು ಕಂಡು ಮನೆಯವರು ಹೊಟ್ಟೆ ಉಣ್ಣಗುವಷ್ಟು ನಕ್ಕಿದ್ದಾರೆ.

ರಾಕೇಶ್ ಅಂಡ್ ರೂಪೇಶ್ನಿಂದ ಅನುಪಮಾ ಕಲಿತಿದ್ದೇನು?
ರೂಪೇಶ್ಗೆ ಬೆಲ್ಲಿ ಡ್ಯಾನ್ಸ್ ಹೇಳಿಕೊಟ್ಟು ಸುಸ್ತಾದ ಅನುಪಮಾ ಸುಸ್ತಾಗಿದ್ದರು. ಬಳಿಕ ರಾಕೇಶ್ ಕೂಡ ಜೊತೆಯಾದರೂ. ಅವರು ಕೂಡ ಶರ್ಟ್ ಎತ್ತಿ ಮೇಲಕ್ಕೆ ಕಟ್ಟಿ ಬೆಲ್ಲಿ ಡ್ಯಾನ್ಸ್ ಮಾಡಲು ಶುರು ಮಾಡಿದರು. ಅನುಪಮಾ ಹೇಳಿಕೊಟ್ಟಿದ್ದೆ ಬಂತು, ಆದರೆ ಇಬ್ಬರು ಕಲಿಯಲೇ ಇಲ್ಲ. ನೀರು ಕುಡಿಯಬೇಕಲ್ಲ ಅಂತ ಇವರಿಗೆ ಹೇಳಿಕೊಡಲು ಹೋದರೆ, ಇವರಿಗೆ ಹೇಳಿಕೊಟ್ಟು ಕೊಟ್ಟು ನೀರು ಕುಡಿಯುವಂತ ಸ್ಥಿತಿ ಬಂದಿದೆ ಎಂದು ಅನುಪಮಾ ಕೊರಗುತ್ತಾ ಇದ್ದರು. ಆದರೆ ಬಿಗ್ ಬಾಸ್ ಮನೆಯಲ್ಲಿ ಹೆಣ್ಣು ಮಕ್ಕಳೆಲ್ಲಾ ಮನಸ್ಸಾರೆ ನಕ್ಕಿದ್ದು ಮಾತ್ರ ಇದೇ ವಿಚಾರಕ್ಕೆ. ಗಂಡು ಮಕ್ಕಳು ಬೆಲ್ಲಿ ಡ್ಯಾನ್ಸ್ಗೆ ತಮ್ಮ ಬೆಲ್ಲಿ ಕುಣಿಸುತ್ತಾ ಇದ್ದರೆ ನೋಡಿ ನೋಡಿ ನಗುತ್ತಿದ್ದರು.