Don't Miss!
- Sports
ಭಾರತ vs ನ್ಯೂಜಿಲೆಂಡ್: ನಿರ್ಣಾಯಕ ಪಂದ್ಯಕ್ಕಾಗಿ ಲಕ್ನೋಗೆ ಬಂದಿಳಿದ ಹಾರ್ದಿಕ್ ಪಡೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK 9: ರಾಜಣ್ಣನ ಸೋಲಿಸಲು ರಾಕೇಶ್ ಟ್ರಿಕ್ಸ್: ಆದರೂ ತಂಡ ಗೆಲ್ಲಲಿಲ್ಲ!
ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ಬಾಂಧವ್ಯವೂ ಇದೆ. ಜೊತೆಗೆ ಆಟ ಆಡಲೇಬೇಕಾದ ಅವಶ್ಯಕತೆಯೂ ಇದೆ. ಯಾಕಂದ್ರೆ ಈಗ ಉಳಿದಿರುವ ಸದಸ್ಯರಲ್ಲಿ ಎಲ್ಲರೂ ಟಫ್ ಕಾಂಪಿಟೇಟರ್‌ಗಳೇ ಆಗಿದ್ದಾರೆ. ಹೀಗಾಗಿ ಹುಷಾರಾಗಿ ಆಡಬೇಕಾದ ಅನಿವಾರ್ಯತೆ ಇದೆ. ಪಾಯಿಂಟ್ಸ್‌ಗಾಗಿ ಕೆಲವೊಂದು ಉಪಾಯಗಳನ್ನು ಮಾಡಬೇಕಾಗುತ್ತದೆ. ರಾಕೇಶ್ ಅಡಿಗ ಇವತ್ತು ಆ ರೀತಿಯ ಉಪಾಯ ಮಾಡಿದ್ದಂತು ಕಂಡು ಬಂತು.
ಇವತ್ತು ಬಿಗ್ ಬಾಸ್ ಎರಡು ಟಾಸ್ಕ್‌ಗಳನ್ನು ನೀಡಿದೆ. ಆ ಎರಡು ಟಾಸ್ಕ್‌ನಲ್ಲಿ ಅಮೂಲ್ಯ ಅವರ ಟೀಂ ಆದ ಮಿನುಗುತಾರೆ ಟೀಂ ಗೆದ್ದಿದೆ. ಆದರೆ, ರಾಕೇಶ್ ಟೀಂನಲ್ಲಿ ಇಬ್ಬರು ಏನೋ ಮಾಡಲು ಹೋಗಿ ಮಿನುಗು ತಾರೆ ಟೀಂನವರಿಗೆ ಅನುಕೂಲ ಮಾಡಿಕೊಟ್ಟಂತೆ ಆಗಿದೆ.

ಬಿಗ್ ಬಾಸ್‌ನಿಂದ ಟಿಂ ಗೇಮ್
ಬಿಗ್ ಬಾಸ್‌ನಲ್ಲಿ ಈಗ ಹತ್ತು ಜನ ಉಳಿದಿದ್ದಾರೆ. ಹೀಗಾಗಿ ಟೀಂ ಮಾಡುವುದು ತುಂಬಾ ಸುಲಭದ ಕೆಲಸ. ಇಂದು ಟಾಸ್ಕ್‌ಗಳನ್ನು ಕೊಡುವುದಕ್ಕೂ ಮುನ್ನ ಬಿಗ್ ಬಾಸ್ ಎರಡು ಟೀಂಗಳನ್ನಾಗಿ ಮಾಡಿತ್ತು. ಒಂದು ಮಿನುಗುತಾರೆ ತಂಡ. ಈ ತಂಡದಲ್ಲಿ ಅಮೂಲ್ಯ ಕ್ಯಾಪ್ಟನ್ ಆಗಿದ್ದರು. ಉಳಿದಂತೆ ಅನುಪಮಾ, ರಾಜಣ್ಣ, ಪ್ರಶಾಂತ್ ಸಂಬರ್ಗಿ, ರೂಪೇಶ್ ಶೆಟ್ಟಿ ಟೀಂ ಸದಸ್ಯರಾಗಿದ್ದರು. ಮತ್ತೊಂದು ತಂಡ ಕೂಲ್ ತಂಡ. ಇದರಲ್ಲಿ ರಾಕೇಶ್ ಅಡಿಗ ಕ್ಯಾಪ್ಟನ್ ಆಗಿದ್ದರೆ ದೀಪಿಕಾ ದಾಸ್, ಅರುಣ್ ಸಾಗರ್, ದಿವ್ಯಾ ಉರುಡುಗ, ಆರ್ಯವರ್ಧನ್ ಸದಸ್ಯರಾಗಿದ್ದರು. ಅದರಲ್ಲಿ ಒಂದು ಬಾಲ್ ಹಾಕುವ ಟಾಸ್ಕ್ ಇನ್ನೊಂದು ಲೈಟ್ಸ್ ಹಾಕುವ ಟಾಸ್ಕ್ ನೀಡಿತ್ತು.

ಬಿಗ್ ಬಾಸ್ ನೀಡಿದ ಟಾಸ್ಕ್ ಗೆದ್ದವರು ಯಾರು?
ಎರಡು ಸಮದಟ್ಟವಾದ ಬ್ಯಾಟ್ ರೀತಿಯ ಹಲಗೆಯಲ್ಲಿ ಬಾಲನ್ನು ಬ್ಯಾಲೆನ್ಸ್ ಮಾಡಿ, ಮೇಲೆ ಇಡಲಾಗಿದ್ದ ಬಾಕ್ಸ್‌ನಲ್ಲಿ ಹಾಕಬೇಕು. ಮೊದಲಿಗೆ ಕೂಲ್ ತಂಡದಿಂದ ರಾಕೇಶ್ ಬಂದರೂ ಮಿನುಗು ತಾರೆ ತಂಡದಿಂದ ಅಮೂಲ್ಯ ಬಂದರು. ಮೊದಲ ಆಟದಲ್ಲಿ ರಾಕೇಶ್ ಒಂದು ಬಾಲ್ ಹಾಕಿದರು. ಅಮೂಲ್ಯ ಸೋತರು. ಎರಡನೇ ಬಾರಿಗೆ ಕೂಲ್ ತಂಡದಿಂದ ದಿವ್ಯಾ ಬಂದರೆ, ಮಿನುಗು ತಾರೆ ತಂಡದಿಂದ ಅನುಪಮಾ ಬಂದರು. ಅನುಪಮಾ ಬಾಲ್ ಹಾಕುವಲ್ಲಿ ಸಕ್ಸಸ್ ಆದರು, ದಿವ್ಯಾ ಸೋತರು. ಮೂರನೇ ಬಾರಿಗೆ ಕೂಲ್ ತಂಡದಿಂದ ದೀಪಿಕಾ ದಾಸ್, ಮಿನುಗು ತಾರೆ ತಂಡದಿಂದ ರೂಪೇಶ್ ಶೆಟ್ಟಿ ಬಂದರು. ಫೈನಲಿ ರೂಪೇಶ್ ಶೆಟ್ಟಿ ಬಾಲ್ ಹಾಕಿದರು, ದೀಪಿಕಾ ಔಟ್ ಆದರು.

ರಾಕೇಶ್ ಮಾಡಿದ ಕುತಂತ್ರಕ್ಕೆ ಸೋತ ರಾಜಣ್ಣ
ಈ ಗೇಮ್ ಇನ್ನೇನು ಮಿನುಗು ತಾರೆ ತಂಡದವರು ಗೆದ್ದು ಬಿಡುತ್ತಿದ್ದರು. ರಾಕೇಶ್ ಸಖತ್ತಾಗಿ ಪ್ಲ್ಯಾನ್ ಮಾಡಿ, ಗೇಮ್ ಫ್ಲಾಪ್ ಮಾಡಿದ್ದರು. ಆದರೆ, ಅದು ಆಗಲಿಲ್ಲ. ಹೇಗೆಂದರೆ, ರಾಜಣ್ಣ ಮತ್ತು ಆರ್ಯವರ್ಧನ್ ನಡುವೆ ಸ್ಪರ್ಧೆ ಆರಂಭವಾಗಿತ್ತು. ರಾಜಣ್ಣನಿಗೆ ಈ ಗೇಮ್ ತುಂಬಾ ಸುಲಭವಾಗಿ ಅರ್ಥವಾಗಿತ್ತು. ಹೀಗಾಗಿ ತುಂಬಾನೇ ಫಾಸ್ಟ್ ಆಗಿ ಆಡುವುದಕ್ಕೆ ಶುರು ಮಾಡಿದರು. ಇನ್ನೇನು ಬಾಲ್ ಬಾಕ್ಸ್ ಒಳಗೆ ಬೀಳಬೇಕು, ಅಷ್ಟರಲ್ಲಿ ರಾಕಿ, ರಾಜಣ್ಣ ಅವರ ಗಮನ ಸೆಳೆದು ಬಾಲ್ ಔಟ್ ಮಾಡುವುದಕ್ಕೆ ಯೋಚಿಸಿದಂತೆ ಇತ್ತು. ರಾಕೇಶ್ ಟೀಂ ಜೋರು ಧ್ವನಿಯಲ್ಲಿ ಕೂಗಲಾರಂಭಿಸಿದರು. ಗುರೂಜಿ ಗುರೂಜಿ ಎಂದು ಕೂಗುತ್ತಿದ್ದಂತೆ ಅಲ್ಲಿ ರಾಜಣ್ಣ ಡಿಸ್ಟರ್ಬ್ ಆದರು. ಗುರೂಜಿ ಹಾಕಿಯೇ ಬಿಟ್ಟರೇನೋ ಎಂದುಕೊಂಡು ಕೈ ನಡುಗಿಸಿ, ಬಾಲ್ ಕೆಳಗೆ ಬೀಳಿಸಿ ಬಿಟ್ಟರು. ಆದ್ರೆ ಮತ್ತೆ ಪ್ರಯತ್ನ ಪಟ್ಟ ರಾಜಣ್ಣ ಯಾರ ವಾಯ್ಸ್‌ಗೂ ಕಿವಿಕೊಡದೆ ಫೈನಲಿ ಬಾಲ್ ಹಾಕಿದರು. ಈ ಬಾಲ್‌ನಿಂದ ಮಿನುಗು ತಾರೆ ತಂಡ ಮೂರು ಬಾಲ್‌ಗಳನ್ನು ಹಾಕಿ ಗೇಮ್ ಗೆದ್ದಿದ್ದಾರೆ.