Don't Miss!
- News
ಇಂದಿರಾ, ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕ: ಉತ್ತರಖಂಡ ಸಚಿವ ವಿವಾದ
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK 9 : ರಾಕಿಯನ್ನು ಪುಸಲಾಯಿಸುತ್ತಿದ್ದ ರೂಪೇಶ್ ರಾಜಣ್ಣನನ್ನು ಕಂಡ ಸಂಬರ್ಗಿ ಕೆಂಡಾಮಂಡಲ!
ಬಿಗ್ ಬಾಸ್ ಮನೆಯಲ್ಲಿ ಆರಂಭದಲ್ಲಿ ಹಾವು ಮುಂಗುಸಿಯಂತೆ ಇದ್ದವರು ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ. ಬಿಗ್ ಬಾಸ್ ಮನೆಯೊಳಗಿನ ಸಂಬಂಧಕ್ಕಿಂತ ಹೊರಗಿನ ವಿಚಾರಗಳು ಸಂಬರ್ಗಿಗೆ ಹೆಚ್ಚಾಗಿಯೇ ಗೊತ್ತಿತ್ತು. ಅವರ ಹೋರಾಟದ ಬಗ್ಗೆ ರಾಜಾರೋಷವಾಗಿ ಮಾತನಾಡಿದ್ದ ಸಂಬರ್ಗಿ, ಕನ್ನಡ ಪರ ಹೋರಾಟಗಾರರಿಂದ ಎಚ್ಚರಿಕೆಯ ಗಂಟೆಯನ್ನು ತೆಗೆದುಕೊಂಡಿದ್ದರು. ಅದಾದ ಮೇಲೆ ಇಬ್ಬರು ತುಂಬಾನೇ ಕ್ಲೋಸ್ ಆಗಿದ್ದರು.
ಆ ಸ್ನೇಹಕ್ಕೆ ಕಾರಣವೇನು ಎಂಬುದನ್ನು ಸಂಬರ್ಗಿ 'ವಾರದ ಕಥೆ ಕಿಚ್ಚನ ಜೊತೆ'ಯಲ್ಲಿ ತಿಳಿಸಿದ್ದರು. ರಾಜಣ್ಣನ ಮುಗ್ಧತೆ ನಂಗೆ ತುಂಬಾ ಇಷ್ಟವಾಗಿದ್ದ ಕಾರಣ ನಾನು ಎಲ್ಲವನ್ನು ಮರೆತು ಒಳ್ಳೆ ಫ್ರೆಂಡ್ಸ್ ಆಗಿದ್ದೀವಿ ಎಂದಿದ್ದರು. ಇದಕ್ಕೆ ರಾಜಣ್ಣ ಕೂಡ ಕ್ಲಾರಿಟಿ ನೀಡಿದ್ದರು. ಯಾವಾಗ ಬೇಕಾದರೂ ನಮ್ಮಿಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಎನಿಸಬಹುದು. ಆಗ ಜಗಳ ಮತ್ತೆ ಆರಂಭವಾಗಬಹುದು ಎಂದಿದ್ದರು. ಅದಕ್ಕೀಗ ಕಾಲ ಸನಿಹವಿದೆ ಎನಿಸುತ್ತಿದೆ.

ಆರ್ಯವರ್ಧನ್, ಗುರೂಜಿಗೆ ವೋಟ್
ಈ ವಾರ ನಾಮಿನೇಷನ್ ಪ್ರಕ್ರಿಯೆಯಲ್ಲಿ ಅರುಣ್ ಸಾಗರ್ ಹೆಸರು ಕೂಡ ಇರುವುದು ಆಶ್ಚರ್ಯವಾಗಿದೆ. ಪ್ರತಿ ವಾರ ನಾಮಿನೇಷನ್ ಬಂದಾಗ ಅರುಣ್ ಸಾಗರ್ ಹೆಸರು ಕಡಿಮೆ ಮಟ್ಟದಲ್ಲಿ ಪ್ರಸ್ತಾಪವಾಗುತ್ತಿತ್ತು. ಆದರೆ ಈ ಬಾರಿ ಹೆಚ್ಚು ಜನರು ಅವರ ಹೆಸರನ್ನೇ ತೆಗೆದುಕೊಂಡಿದ್ದಾರೆ. ದೀಪಿಕಾ ದಾಸ್, ಅನುಪಮಾ, ದಿವ್ಯಾ, ಅಮೂಲ್ಯ, ಆರ್ಯವರ್ಧನ್, ಪ್ರಶಾಂತ್ ಸಂಬರ್ಗಿ, ಅರುಣ್ ಸಾಗರ್, ರಾಕೇಶ್ ಅಡಿಗ ಈ ವಾರದ ನಾಮಿನೇಷನ್ ಲೀಸ್ಟ್ ನಲ್ಲಿದ್ದಾರೆ. ರಾಕೇಶ್ ಸದಸ್ಯರಾಭಿಪ್ರಾಯದಲ್ಲಿ ಬಚಾವ್ ಆಗಿದ್ದರು ಕೂಡ ಕ್ಯಾಪ್ಟನ್ ಲೆಕ್ಕದಲ್ಲಿ ನಾಮಿನೇಷನ್ ಲಿಸ್ಟ್ಗೆ ಬಂದಿದ್ದಾರೆ.

ರಾಕೇಶ್ ಬಳಿ ಕ್ಷಮೆ ಕೇಳಿದರಾ ರಾಜಣ್ಣ..?
ಈ ವಾರದ ಮನೆಯ ಕ್ಯಾಪ್ಟನ್ ರೂಪೇಶ್ ರಾಜಣ್ಣ ಆಗಿದ್ದಾರೆ. ಕ್ಯಾಪ್ಟನ್ ಅವರ ನೇರ ನಾಮಿನೇಷನ್ ಆಯ್ಕೆ. ರಾಜಣ್ಣ ರಾಕೇಶ್ ಅವರನ್ನು ನೇರವಾಗಿ ನಾಮಿನೇಷನ್ ಮಾಡಿದರು. ರಾಜಣ್ಣ ಅವರು ರಾಕೇಶ್ ಅವರನ್ನು ನಾಮಿನೇಷನ್ ಮಾಡಿದ ಮೇಲೆ ಒಂದಷ್ಟು ಕ್ಲಾರಿಟಿ ಕೊಡುತ್ತಿದ್ದರು. ಅದೇನಂದ್ರೆ, "ನೀನು ನಂಗೆ ಬೆಸ್ಟ್ ಫ್ರೆಂಡ್. ಆದ್ರೆ ಅಲ್ಲಿ ಇದ್ದ ಆಪ್ಶನ್ ನೀನೆ ಆಗಿದ್ದೆ. ಅದಕ್ಕೆ ನಾಮಿನೇಷನ್ ಮಾಡಿದೆ. ಈಗ ನಾನು ಅಮೂಲ್ಯ ಇದ್ದರೆ, ನೀನು ನನ್ನನ್ನೇ ನಾಮಿನೇಷನ್ ಮಾಡುತ್ತಿದ್ದೆ ಅಲ್ಲವಾ" ಎಂದು ರಾಜಣ್ಣ ಕೇಳಿದ್ದು "ಖಂಡಿತಾ ಇಲ್ಲ. ನಾನು ಅಮೂಲ್ಯ ಅವರನ್ನೇ ನಾಮಿನೇಷನ್ ಮಾಡುತ್ತಿದ್ದೆ" ಎಂದು ರಾಕೇಶ್ ಹೇಳಿದ್ದಾರೆ.

ಸಂಬರ್ಗಿ ಕೋಪ ಮಾಡಿಕೊಂಡಿದ್ದು ಯಾಕೆ..?
ರಾಕೇಶ್ ಬಳಿ ನಿಂತು ರೂಪೇಶ್ ರಾಜಣ್ಣ ಮಾತನಾಡುತ್ತಿದ್ದೆಲ್ಲವನ್ನು ಕೇಳಿಸಿಕೊಂಡ ಸಂಬರ್ಗಿ, "ನಾಮಿನೇಷನ್ ಮಾಡಿ ರಾಕಿ ಬಳಿ ಹೋಗಿ ಪೂಸಿ ಹೊಡೆಯುತ್ತಿದ್ದ. ಅದು ಯಾಕೆ ಬೇಕು. ಏನೋ ಸಂಕೋಚವಾದವನಂತೆ ನಡೆದುಕೊಳ್ಳುತ್ತಿದ್ದ. ನಿನ್ನ ಮೇಲೆ ಲವ್ ಇದೆ. ಆದರೂ ನಾಮಿನೇಷನ್ ಮಾಡಬೇಕಾದ ಪರಿಸ್ಥಿತಿ ಬಂತು. ಅದಕ್ಕೆ ಮಾಡಿದೆ ಎಂಬಂತೆ ಇತ್ತು. ಅವನ ರಿಲೇಷನ್ ಶಿಪ್ ಅಸಹ್ಯವಾಗಿತ್ತು. ನಂಗೆ ಆ ದೃಶ್ಯ ನೋಡಿ ಅಸಹ್ಯ ಆಗೋಯ್ತು" ಎಂದಿದ್ದಾರೆ.

ಕ್ಲಾರಿಟಿ ಕೊಟ್ಟ ರಾಜಣ್ಣ
ರಾಜಣ್ಣ ಅವರ ಬಳಿಯೂ ಸಂಬರ್ಗಿ ಈ ಬಗ್ಗೆ ಚರ್ಚೆ ಮಾಡಿದರು. "ಹೆಮ್ಮೆಯಿಂದ ರಾಜಣ್ಣ ಒಬ್ಬ ಲೀಡರ್ ಎಂದುಕೊಂಡಿದ್ದೆ. ಆದ್ರೆ ತಲೆ ತಗ್ಗಿಸುವಂತ ಕೆಲಸ ಮಾಡಿಬಿಟ್ಟೆ ಅಣ್ಣ. ನಾಮಿನೇಷನ್ ಮಾಡಿ ಹೆಮ್ಮೆಯಿಂದ ಓಡಾಡಬೇಕು. ನಾಮಿನೇಷನ್ ಮಾಡಿದ ಮೇಲೆ ತಲೆತಗ್ಗಿಸಿ ಅವರ ಬಳಿ ಹೋಗಬಾರದು" ಎಂದಾಗ ರಾಜಣ್ಣ, "ರಾಕೇಶ್ ಹತ್ರ ನಾನು ಕ್ಷಮೆ ಕೇಳಿದ್ನಾ. ನಾನು ಅಲ್ಲಿ ಕೂತಿದ್ದೆ. ಅಲ್ಲಿಗೆ ರಾಕೇಶ್ ಬಂದ. ಆಗ ಏನೋ ಬೇರೆ ಮಾತುಕತೆ ನಡೆಯಿತು. ನಾನು ರಾಕಿ ಎಲ್ಲೋ ಹೋಗಿ ಮಾತನಾಡುವುದನ್ನು ನೋಡಿದ್ದೀರಾ" ಎಂದು ತಿರುಗೇಟು ನೀಡಿದ್ದಾರೆ.