ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಟಾರ್ಗೆಟ್ ಪ್ಲಸ್ ಪಾಯಿಂಟ್ ಆಗುತ್ತಿದ್ಯಾ ಡ್ರೋನ್ ಪ್ರತಾಪ್‌ಗೆ?

ಬಿಗ್ ಬಾಸ್ ಕನ್ನಡದ ಈ 10ನೇ ಸೀಸನ್ ವಿಶೇಷವಾಗಿದ್ದು, ಹಲವು ಹೊಸ ಹೊಸ ವಿಚಾರಗಳು ಹೊರ ಬರುತ್ತಿವೆ. ವಿವಾದ, ಹೆಚ್ಚು ಚರ್ಚೆಗೆ ಒಳಗಾಗಿರುವ ಅನೇಕರು ಇದರಲ್ಲಿ ಇದ್ದು, ಡ್ರೋನ್ ಪ್ರತಾಪ್ ಕೂಡ ಬಿಗ್ ಬಾಸ್ ಸ್ಪರ್ಧಿಯಾಗಿದ್ದಾರೆ. ವೈಟಿಂಗ್ ಲಿಸ್ಟ್‌ನಿಂದ ಮನೆಗೆ ಹೋಗಿರುವ ಇವರು ಈಗ ಜನರ ಪ್ರೀತಿ ಗಳಿಸುತ್ತಿದ್ದಾರೆ ಎನ್ನಿಸುತ್ತಿದೆ.

ಹೌದು...ಇದಕ್ಕೂ ಕಾರಣವಿದೆ. ಬಿಗ್ ಬಾಸ್‌ನಲ್ಲಿ ಇರುವ ಡ್ರೋನ್ ಪ್ರತಾಪ್ ತಮ್ಮ ನಗು ಮತ್ತು ಮೃದು ಸ್ವಭಾವದಿಂದ ದಿನದಿಂದ ದಿನಕ್ಕೆ ಹೆಚ್ಚು ವೀಕ್ಷಕರಿಗೆ ಇಷ್ಟವಾಗುತ್ತಿದ್ದಾರೆ. ಬಿಗ್ ಬಾಸ್‌ನ ಯಾವುದೇ ಪ್ರೋಮೋ, ವಿಡಿಯೋಗಳನ್ನು ಕಲರ್ಸ್ ಕನ್ನಡ ಹಂಚಿಕೊಂಡರೂ ಅಲ್ಲಿ ಪ್ರತಾಪ್ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ.

Bigg Boss kannada: Drone Prathap becoming star in viewers eyes?

ಇತರರ ಟಾರ್ಗೆಟ್ ಡ್ರೋನ್ ಪ್ರತಾಪ್‌ಗೆ ಪ್ಲಸ್ ಪಾಯಿಂಟ್?

ಬಿಗ್ ಬಾಸ್‌ನಲ್ಲಿ ಈ ಒಂದು ವಾರದಲ್ಲಿ ಹೆಚ್ಚು ಟಾರ್ಗೆಟ್ ಆಗಿರುವ ವ್ಯಕ್ತಿ ಎಂದರೆ ಅದು ಡ್ರೋನ್ ಪ್ರತಾಪ್. ನಗುವಿನ ಕಾರಣಕ್ಕೂ ತಮಾಷೆಗಾಗಿಯೋ ಅಥವಾ ಸಿರೀಯಸ್ ಆಗಿಯೋ ಅವರನ್ನು ಇತರ ಬಿಗ್ ಬಾಸ್ ಸ್ಪರ್ಧಿಗಳು ಟಾರ್ಗೆಟ್ ಮಾಡುತ್ತಿರುವುದನ್ನು ಜನ ಗಮನಿಸುತ್ತಿದ್ದಾರೆ. ಪ್ರತಾಪ್ ಅರ್ಧ ರಾತ್ರಿಯಲ್ಲಿ ಅಡುಗೆ ಮಾಡಿಕೊಟ್ಟ ಸಹಾಯ ಮಾಡಿದವರು ಕೂಡ ಪ್ರತಾಪ್ ಪರ ನಿಲ್ಲದೆ ಇರುವುದು ಜನರಿಗೆ ಹೆಚ್ಚು ಬೇಸರ ತರಿಸಿದೆ.

ವಾಶ್ ರೂಂನಲ್ಲಿ ಹೋಗಿ ಅಳುತ್ತಿದ್ದ ಕಾರಣ ಜನರು ಹೆಚ್ಚು ಭಾವುಕರಾಗಿದ್ದು, ಇದು ಕೂಡ ಜನರಿಗೆ ಅವರ ಬಗ್ಗೆ ಭಾವನಾತ್ಮಕ ಬಂಧ ಬೆಸೆಯುತ್ತಿದೆ ಎನ್ನಿಸುತ್ತಿದೆ. "ನಿಮ್ಮನ್ನು ಟ್ರೋಲ್ ಮಾಡಿದವರಲ್ಲಿ ನಾನೂ ಒಬ್ಬ, ಆದರೆ ನಾನು ಈವತ್ತು ನಿಮಗೆ ಓಟ್ ಮಾಡ್ತಿದಿನಿ! ಆ ನಿಷ್ಕಲ್ಮಶ ನಗುವಿನಿಂದ ಎಲ್ಲರ ಮನಸು ಗೆದ್ದು ಬಿಟ್ರಿ ಪ್ರತಾಪ್ , ಬಿಗ್ ಬಾಸ್ ಸೀಸನ್ -10 ವಿನ್ನರ್ ನೀವೇ" ಎಂದು ಅವರ ಫೋಟೋಗಳಿಗೆ ಕಾಮೆಂಟ್ ಮಾಡಲಾಗುತ್ತಿದೆ.

Bigg Boss kannada: Drone Prathap becoming star in viewers eyes?

ಪ್ರತಾಪ್‌ಗೆ ಹರಿದು ಬರುತ್ತಿದೆ ಹೆಚ್ಚಿನ ಸಪೋರ್ಟ್!

ಹಲವು ಮಂದಿ ಡ್ರೋನ್ ಪ್ರತಾಪ್‌ಗೆ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. "ನೈಟ್ ನೀವು ಹೋಗಿ ವಾಶ್ರೂಮ್ ನಲ್ಲಿ ಅಳ್ತಿದ್ರು. ಆವಾಗ ನಮ್ ಮನೆಯಲ್ಲಿ ಎಲ್ಲರ ಕಣ್ಣಲ್ಲೂ ನೀರ್ ಬಂತು ತುಂಬಾ ಬೇಜಾರ್ ಆಯ್ತು. ಎಲ್ಲ ನಮ್ ಮನೆಯಲ್ಲಿ ತುಂಬಾ ಇಷ್ಟ ಪಡ್ತಾರೆ ಪ್ರತಾಪ್ ಅವ್ರೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

'ನಮ್ ಕಣ್ಣಲ್ಲು ನೀರು ಬರುವಂತೆ ಮಾಡಿದ್ಯಲ್ಲಣ್ಣ, ಕರ್ನಾಟಕದ ಮನೆ ಮಗ ಆಗೋದೆ...', 'ಲಕ್ಷಾಂತರ ಜನ ನೋಡೋ ಶೋನಲ್ಲಿ ನೀನು ನಾಲಯಕ್ ಅಂತ ಬೋರ್ಡ್ ಹಾಕೋಸ್ಕೊಂಡಿಲ್ಲ ಪ್ರತಾಪ್. ಇವತ್ತು ನೋಡು ನಿನ್ ಕಣ್ಣಿರ್‌ಗೆ ಜನ ಹೇಗೆ ನಿಂಗ್ ಸಪೋರ್ಟ್ ಆಗಿ ನಿಂತಿದ್ದಾರೆ...', 'ಅವರು ಡ್ರೋನ್ ಮಾಡಿದರೋ ಇಲ್ವೋ ಗೊತ್ತಿಲ್ಲ ಆದರೆ, ಅವ್ರ ಅಕೌಂಟ್ ಅಲ್ಲಿ ಡ್ರೋನ್ ಎಲ್ಲಾವನ್ನು ಒಳ್ಳೆ ಕಾರ್ಯಕ್ಕೆ ಯುಸ್ ಮಾಡಿದರೆ. ಇಷ್ಟು ಸಾಕಲ್ವ ನಮಗೆ ಸಪೋರ್ಟ್ ಮಾಡ್ಲಿಕ್ಕೆ...... ಇವ್ರು ಗುಣ ನೋಡಿ ಎಲ್ಲಾ ಫ್ಯಾನ್ ಆಗ್ತಾ ಇದ್ದಾರೆ. ಇದನ್ನೇ ನಾವು ಪ್ರೋವ್ ಮಾಡಬೇಕಿರೋದು..' ಹೀಗೆ ಹಲವು ಮಂದಿ ಡ್ರೋನ್ ಪ್ರತಾಪ್‌ಗೆ ಬೆಂಬಲ ನೀಡುತ್ತಿದ್ದಾರೆ.

ಒಟ್ಟಾರೆ, ಬಿಗ್ ಬಾಸ್‌ ಮನೆಗೆ ಹೋಗುವ ಮುನ್ನ ಟ್ರೋಲ್‌ಗಳಿಗೆ ಒಳಗಾಗುತ್ತಿದ್ದ ಡ್ರೋನ್ ಪ್ರತಾಪ್, ಈಗ ಬಿಗ್‌ ಬಾಸ್ ಮನೆಯಲ್ಲಿ ಎಲ್ಲರಿಂದ ಟಾರ್ಗೆಟ್ ಆಗಿ ಜನರ ಮನಸ್ಸನ್ನು ಗೆಲ್ಲುತ್ತಿರುವುದು ನಿಜಕ್ಕೂ ಅಚ್ಚರಿಯೇ ಸರಿ.

More from Filmibeat

English summary
Bigg Boss kannada: Drone Prathap becoming star in viewers eyes?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X