ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆ ಬಿಗ್ ಬಾಸ್ ಸ್ಪರ್ಧಿ ಅರವಿಂದ್ ಕೆ ಪಿ ಸೆಲ್ಫಿ.. ನೆಟ್ಟಿಗರು ಏನಂದ್ರು?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ರ ಖ್ಯಾತಿಯ ಅರವಿಂದ್ ಕೆಪಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಶೇರ್ ಮಾಡಿಕೊಂಡಿದ್ದು ಈಗ ಬಹಳಷ್ಟು ಕಮೆಂಟ್ ಗಳ ಮಳೆ ಸುರಿದಿದೆ.
ಹೌದು! ಅರವಿಂದ್ ಕೆ ಪಿ ಅವರೂ ಕೂಡ ಒಬ್ಬ ಬೈಕ್ ರೈಡರ್. ಇದರೊಂದಿಗೆ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಬಹಳಷ್ಟು ಖ್ಯಾತಿಯನ್ನು ಪಡೆದಿದ್ದರು. ಕಿರುತೆರೆ ನಟಿ ಹಾಗೂ ಇದೇ ಬಿಗ್ ಬಾಸ್ ಸೀಸನ್‌ನ ಸ್ಪರ್ಧಿಯಾಗಿರೋ ದಿವ್ಯಾ ಉರುಡುಗ ಜೊತೆ ಆಗಾಗ ಕಾಣಿಸಿಕೊಂಡು ಸುದ್ದಿಯಲ್ಲಿ ಇರುತ್ತಾರೆ.

ಅಂದ ಹಾಗೆ ಈ ಬಾರಿ ಇವರು ಒಂದು ವಿಶೇಷ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ಖುಷಿಯಿಂದ ತಮ್ಮ ಅಭಿಮಾನಿಗಳಿಗೆ, ಫಾಲೋವರ್‌ಗೆ ಈ ಸಿಹಿ ಸಮಾಚಾರವನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್ ನಟ ರಣವೀರ್ ಸಿಂಗ್ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿರುವ ನಟ ಅರವಿಂದ್ ಕೆಪಿ ಅವರು "ಹೀಗೂ ಆಗೋಯ್ತು" ಎಂದು ಖುಷಿಯಿಂದ ಬರೆದುಕೊಂಡಿದ್ದಾರೆ.
ಬಾಲಿವುಡ್ ನಟ ರಣವೀರ್ ಸಿಂಗ್ ಅವರೇ ಅರವಿಂದ್ ಕೆ ಪಿ ಅವರ ಹೆಗಲ ಮೇಲೆ ಕೈ ಹಾಕಿ ಆಪ್ತತೆಯಿಂದ ತೆಗೆದುಕೊಂಡಿರುವ ಈ ಫೋಟೋವನ್ನು ನೆಟ್ಟಿಗರಂತೂ ಬಹಳ ಮೆಚ್ಚಿದ್ದಾರೆ. ಅರವಿಂದ್ ಕೆ ಪಿ ಬಗ್ಗೆ ಹೆಮ್ಮೆಯನ್ನೂ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಅಥ್ಲೀಟ್, ಬೈಕ್ ರೈಡರ್ ಆಗಿರುವ ಅರವಿಂದ್ ಕೆಪಿ ಯವರು ಮೋಟೋ ಜಿಪಿ ಭಾರತ 2023ರ ಅವಾರ್ಡ್ ಫಂಕ್ಷನ್‌ನಲ್ಲಿ ಭಾಗವಹಿಸಿದ್ದರು. ಇತ್ತೀಚೆಗಷ್ಟೇ ನೋಯ್ಡದಲ್ಲಿ ನಡೆದ ಇಂಟರ್ನ್ಯಾಷನಲ್ ಸರ್ಕ್ಯೂಟ್ ಇದಾಗಿದ್ದು ಇದರ ವಿಭಾಗ ವಹಿಸಿದ ಅರವಿಂದ್ ಕೆಪಿ ಅವರು ರಣವೀರ್ ಸಿಂಗ್ ಅವರನ್ನು ಭೇಟಿ ಮಾಡಿದ್ದಲ್ಲದೇ ಇಷ್ಟು ಚಂದದ ಫೋಟೋವನ್ನು ಕ್ಲಿಕ್ಕಿಸಿಕೊಂಡಿರುವುದು ಅವರ ಅಭಿಮಾನಿಗಳಿಗೆಲ್ಲರಿಗೂ ಖುಷಿ ಕೊಟ್ಟಿದೆ.

ಅಲ್ಲದೇ ಮೋಟಾರ್ ಸ್ಪೋರ್ಟ್ಸ್ ರೈಡರ್ಸ್ ಜೊತೆ ನಮ್ಮ ಕನ್ನಡದ ಹುಡುಗ ಅರವಿಂದ್ ಕೆಪಿ ಅವರು ಕಾಣಿಸಿಕೊಂಡಿರುವುದು ಇನ್ನೊಂದು ಹೆಮ್ಮೆಯ ವಿಚಾರ. ಗೆದ್ದ ಅಥ್ಲೀಟ್ ಗಳಿಗೆ ಅವಾರ್ಡ್ ನೀಡಲು ಬಂದ ರಣವೀರ್ ಸಿಂಗ್ ಅವರು ಅರವಿಂದ್ ಅವರೊಂದಿಗೆ ಈ ಫೋಟೋ ತೆಗೆಸಿಕೊಂಡಿದ್ದಾರೆ.
ಬೈಕ್ ರೈಡಿಂಗ್ ಕಡೆಗೆ ಬಹಳಷ್ಟು ಒಲವು ಹೊಂದಿರುವ ಅರವಿಂದ್ ಕೆಪಿ ಅವರು ಈಗಾಗಲೇ ಬಹಳಷ್ಟು ಅವಾರ್ಡ್ ಗಳನ್ನು ಗೆದ್ದಿದ್ದಾರೆ. 2019 ರಲ್ಲಿ ವಾಟರ್ ಸ್ಪೋರ್ಟ್ಸ್ ಡಾಕಾರ್ ರೇಸ್ ಫಿನಿಷ್ ಮಾಡಿದ ಭಾರತೀಯರಲ್ಲಿ ಅರವಿಂದ್ ಕೆಪಿ ಕೂಡ ಒಬ್ಬರು. ಸದ್ಯಕಂತೂ ಅರವಿಂದ್ ಅವರು ಹಾಕಿರುವಂತಹ ಈ ಪೋಸ್ಟ್ ಬಹಳ ವೈರಲ್ ಆಗಿದ್ದು ನೆಟ್ಟಿಗರು ಸಂಭ್ರಮ ವ್ಯಕ್ತಪಡಿಸಿದ್ದಾರೆ.


Click it and Unblock the Notifications











