ಬಿಗ್‌ಬಾಸ್ ಕನ್ನಡದ ಕಿಶನ್ ಜೊತೆ ನಮ್ರತಾ ಮಸ್ತ್ ಡಾನ್ಸ್: ವಿಡಿಯೋ ನೋಡಿ ಥ್ರಿಲ್ ಆದ ಫ್ಯಾನ್ಸ್
ಸೋಶಿಯಲ್ ಮೀಡಿಯಾದಲ್ಲಿ ಈಗ ಇವರಿಬ್ಬರದ್ದೇ ಹವಾ. ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳಿಬ್ಬರ ಡಾನ್ಸ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಅರೆರೆ.. ಯಾರದು? ಅಷ್ಟು ಅದ್ಭುತವಾಗಿ ಡಾನ್ಸ್ ಮಾಡಿದ್ರಾ? ಎಲ್ಲರನ್ನೂ ಸೆಳೆಯುವ ಹಾಗೆ ಡಾನ್ಸ್ ಮಾಡಿದ್ದಾದರೂ ಯಾರು? ಅನ್ನೋ ಕುತೂಹಲನಾ? ಅವರು ಬೇರೆ ಯಾರೂ ಅಲ್ಲ ನಮ್ರತಾ ಗೌಡ ಹಾಗೂ ಕಿಶನ್. ಇವರಿಬ್ಬರ ಡಾನ್ಸ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.
ನಮ್ರತಾ ಹಾಗೂ ಕಿಶನ್ ಜೋಡಿ ಅಷ್ಟು ಸೊಗಸಾಗಿ ಡಾನ್ಸ್ ಮಾಡಿದ್ದಾರೆ. ನಮ್ರತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆಕ್ಟಿವ್ ಆಗಿರುವ ನಟಿ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋವನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಕಿಶನ್ ಕೂಡ ಒಬ್ಬ ಒಳ್ಳೆಯ ಡಾನ್ಸರ್. ತಮ್ಮ ಡಾನ್ಸ್ ಮೂಲಕವೇ ಎಲ್ಲರ ಮನಗೆದ್ದವರು ಕಿಶನ್. ಈಗ ನಮ್ರತಾ ಹಾಗೂ ಕಿಶನ್ ಇಬ್ಬರ ಕೆಮಿಸ್ಟ್ರಿ ಮ್ಯಾಚ್ ಆಗುತ್ತಿದೆ. ಹಾಗೆಯೇ ರೋಮ್ಯಾಂಟಿಕ್ ಆಗಿ ಇಬ್ಬರು ಡಾನ್ಸ್ ಮಾಡಿ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ.

ಇವರಿಬ್ಬರ ಡಾನ್ಸ್ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಸಾಕಷ್ಟು ಲೈಕ್ ಹಾಗೂ ಕಾಮೆಂಟ್‌ಗಳು ಹರಿದು ಬರುತ್ತಿದೆ.
'ಯುವ' ಸಿನಿಮಾದ ಹಾಡಿಗೆ ಇವರಿಬ್ಬರೂ ಸಖತ್ ಆಗಿ ಡಾನ್ಸ್ ಮಾಡಿದ್ದು, "ಏನು ಹೇಳಲಿ ನಾನು ಹೊಸತರ.." ಎನ್ನುತ್ತಾ ಸಖತ್ ಅಗಿಯೇ ಸ್ಟೆಪ್ ಹಾಕಿದ್ದಾರೆ. ಆದರೆ, ಅಭಿಮಾನಿಗಳು ಮಾತ್ರ ಕಿಶನ್‌ಗಿಂತ ಸ್ನೇಹಿತ್ ಜೊತೆ ನಮ್ರತಾ ಡ್ಯಾನ್ಸ್ ಮಾಡಿದರೆ ಇನ್ನಷ್ಟು ಕಳೆ ಬರಬಹುದು ಎಂದು ಕಮೆಂಟ್ ಮಾಡಿದ್ದು ಇದೆ. ಆದರೆ, ನಮ್ರತಾ ಮಾತ್ರ ಅದ್ಯಾವುದಕ್ಕೂ ಕೂಡ ತಲೆ ಕೆಡಿಸಿಕೊಂಡ ಹಾಗೆ ಕಾಣಿಸುತ್ತಿಲ್ಲ.
ಮಾಡೆಲಿಂಗ್‌ನಲ್ಲಿ ನಮ್ರತಾ ಮಿಂಚಿಂಗ್
ನಮ್ರತಾ ಗೌಡ ನಟನೆಗಿಂತ ಮೊದಲು ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದ್ದಾರೆ. ನಮ್ರತಾ ಗೌಡ ಬಿಗ್ ಬಾಸ್‌ಗೆ ಹೋದ ಬಳಿಕ ಮತ್ತಷ್ಟು ಜನರಿಗೆ ಹತ್ತಿರವಾಗಿದ್ದರು. ಅಲ್ಲದೆ ಇನ್ನಷ್ಟು ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಕಿಶನ್ ಮೂಲತಃ ಚಿಕ್ಕ ಮಗಳೂರಿನವರು. ಬಿಗ್ ಬಾಸ್‌ಗೆ ಬರುವ ಮೊದಲು ಕಿಶನ್ ಎಂದರೆ ಕೆಲವು ಜನರಿಗೆ ಮಾತ್ರ ತಿಳಿದಿತ್ತು. ಆದರೆ, ಇದೀಗ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ನಮ್ರತಾ ಕೂಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕೊನೆಯವರೆಗೂ ಇದ್ದರೂ ಎನ್ನುವುದೇ ಒಂದು ಖುಷಿಯ ಸಂಗತಿ.
ಕಿಶನ್ ಹಾಗೂ ನಮ್ರತಾ ಡಾನ್ಸ್ ಮೋಡಿ
ಕಿಶನ್ ಹಾಗೂ ನಮ್ರತಾ ಇಬ್ಬರ ಡಾನ್ಸ್ ನೋಡಿ ಅಭಿಮಾನಿಗಳು ಬಹುತೇಕ ಮೆಚ್ಚಿಕೊಂಡು ಇದ್ದಾರೆ. ಅಷ್ಟು ಅದ್ಭುತವಾಗಿ ಡಾನ್ಸ್ ಮಾಡಿದ್ದಾರೆ. ಬಿಗ್ ಬಾಸ್ ಮೂಲಕ ತನ್ನದೇ ಆದ ಹವಾ ಸೃಷ್ಟಿ ಮಾಡಿಕೊಂಡ ನಟಿ ನಮ್ರತಾ ಎಂದು ಹೇಳಿದರೆ ತಪ್ಪಾಗದು. ಇನ್ನೂ ನಮ್ರತಾ ಚಿಕ್ಕ ವಯಸ್ಸಿನಲ್ಲಿ ಬಹಳ ಏಳು ಬೀಳುಗಳನ್ನು ಕಂಡವರು. ಆದರೆ, ಇದೀಗ ಡಾನ್ಸ್ ಮಾಡಿ ಎಲ್ಲರ ಮನಸ್ಸನ್ನೂ ಗೆದ್ದು ಬಿಟ್ಟಿದ್ದಾರೆ.
ನಟನೆಗೂ ಸೈ ಡಾನ್ಸ್ ಗೂ ಸೈ
ನಮ್ರತಾ ಬಹಳ ಅದ್ಭುತ ನಟನಾಗಾರ್ತಿ. ಹಾಗೆಯೇ ಡಾನ್ಸ್‌ನಲ್ಲಿ ಕೂಡ ಸದಾ ಮುಂದು. ಎಲ್ಲಾ ಕೆಲಸಗಳನ್ನೂ ಅಚ್ಚು ಕಟ್ಟಾಗಿ ಮಾಡಿ ಮುಗಿಸುವ ಚೆಲುವೆ ಎಂದು ಹೇಳಿದರೆ ತಪ್ಪಾಗದು. ಬಿಗ್ ಬಾಸ್‌ನಲ್ಲಿ ಕೂಡ ವೀಕ್ಷಕರಿಗೆ ಮನರಂಜನೆಯನ್ನು ನೀಡಿದ್ದರು. ಇದೀಗ ಒಂದೊಳ್ಳೆಯ ಅವಕಾಶಕ್ಕಾಗಿ ನಮ್ರತಾ ಕಾಯುತ್ತಿದ್ದು, ಮತ್ತೆ ಹೊಸ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಮಿಂಚಿದರೂ ಅಚ್ಚರಿಯಿಲ್ಲ.


Click it and Unblock the Notifications











