"ಕಮೀಟ್‌ಮೆಂಟ್ ಹೆಸರಿನಲ್ಲಿ ನನ್ನ ಹೆಸರು ಹರಿದಾಡಿತ್ತು"; ಇಂಡಸ್ಟ್ರಿ ಕರಾಳ ಮುಖ ತೆರೆದಿಟ್ಟ ನಮ್ರತಾ

ಚಿತ್ರರಂಗದ ಕಾಸ್ಟಿಂಗ್ ಕೌಚ್ ಎಂಬ ಕರಾಳ ಮುಖದ ಬಗ್ಗೆ ಸಾಕಷ್ಟು ನಟ-ನಟಿಯರು ಮಾತನಾಡಿದ್ದಾರೆ. ಅವಕಾಶ ಕೊಡಿಸುವ ನೆಪದಲ್ಲಿ ಚಿತ್ರರಂಗದಲ್ಲಿ ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವ ಬಗ್ಗೆಯೂ ಹೇಳಿದ್ದಾರೆ. ಇದೀಗ ನಟಿ ನಮ್ರತಾ ಗೌಡ ಇಂಡಸ್ಟ್ರಿಯಲ್ಲಿರುವ ಮತ್ತೊಂದು ಜಾಲದ ಬಗ್ಗೆ ಮಾತನಾಡಿದ್ದಾರೆ.

ನಟಿಯರ ಹೆಸರು ಬಳಸಿಕೊಂಡು ಕೆಲವರು ಯಾವ ರೀತಿ ಹಣ ಮಾಡುತ್ತಾರೆ. ತಮ್ಮನ್ನು ಕೂಡ ಆ ಟ್ರ್ಯಾಪ್‌ನಲ್ಲಿ ಬೀಳಿಸಲು ಯತ್ನಿಸಿದ್ದರು, ಎಚ್ಚೆತ್ತುಕೊಂಡು ನಾನು ಆ ಬಗ್ಗೆ ಕ್ರಮ ಕೈಗೊಂಡಿದ್ದಾಗಿ ವಿವರಿಸಿದ್ದಾರೆ. ರಿಪಬ್ಲಿಕ್ ಕನ್ನಡ ಸುದ್ದಿ ವಾಹಿನಿ ಸಂದರ್ಶನದಲ್ಲಿ ಈ ಬಗ್ಗೆ ನಮ್ರತಾ ಗೌಡ ವಿವರವಾಗಿ ಹೇಳಿಕೊಂಡಿದ್ದಾರೆ.

bigg Boss kannada Fame namratha gowda Shares A Scary Incidence Of Casting Couch

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಬಂದ ನಮ್ರತಾ ಗೌಡ ಬಳಿಕ ನಾಯಕಿಯಾಗಿ ಧಾರಾವಾಹಿಗಳಲ್ಲಿ ಮಿಂಚಿದ್ದರು. 'ಪುಟ್ಟ ಗೌರಿ ಮದುವೆ' ಧಾರಾವಾಹಿ ಒಳ್ಳೆ ಹೆಸರು ತಂದುಕೊಟ್ಟಿತ್ತು.ಬಳಿಕ 'ನಾಗಿಣಿ'-2 ಧಾರಾವಾಹಿಯಲ್ಲಿ ಮಿಂಚಿ ಮತ್ತಷ್ಟು ಗಮನ ಸೆಳೆದರು. ನಟಿ ನಮ್ರತಾ ಗೌಡ ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿ ಆಗಿದ್ದರು. 105 ದಿನಗಳ ಕಾಲ ಮನೆಯೊಳಗೆ ಉಳಿದುಕೊಂಡಿದ್ದರು. ಎಲ್ಲಾ ಸ್ಪರ್ಧಿಗಳಿಗೆ ಒಳ್ಳೆ ಪೈಪೋಟಿ ಕೊಟ್ಟಿದ್ದರು.

ನನ್ನನ್ನು ಚಿಕ್ಕಂದಿನಿಂದಲೂ ಕಿರುತೆರೆ, ಚಿತ್ರರಂಗದವರು ನೋಡಿದ್ದಾರೆ. ಹಾಗಾಗಿ ಯಾರು ಬೇರೆ ರೀತಿ ನೋಡುತ್ತಿರಲಿಲ್ಲ ಎಂದು ನಮ್ರತಾ ಮಾತು ಆರಂಭಿಸಿದ್ದಾರೆ.

bigg Boss kannada Fame namratha gowda Shares A Scary Incidence Of Casting Couch

ನಾನು ಚಿತ್ರೀಕರಣಕ್ಕೆ ಹೋಗುವಾಗಲೂ ಅಪ್ಪ, ಅಮ್ಮ ಬರ್ತಿದ್ರು. ಹಾಗಾಗಿ ಬಹಳ ಸುರಕ್ಷಿತ ವಾತಾವರಣದಲ್ಲಿ ನಾನಿದ್ದೆ. ಇತ್ತೀಚೆಗೆ ನಮ್ರತಾ ಕಮೀಟ್‌ಮೆಂಟ್‌ಗೆ ಬರ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಬೇರೆ ನಟಿಯರ ಹೆಸರು ಇದರಲ್ಲಿದೆ. ಅವರ ಬಗ್ಗೆ ನಾನು ಮಾತನಾಡಲ್ಲ ಎಂದು ನಮ್ರತಾ ಗೌಡ ಹೇಳಿದ್ದಾರೆ.

ಕಾಸ್ಟಿಂಗ್ ಡೈರೆಕ್ಟರ್ ಒಬ್ರು ಕಾಲ್ ಮಾಡಿ ಹೀಗೆ ಒಂದು ಕಡೆ ಹೋಗಬೇಕು ಅಂತಾರೆ. ನನಗೆ ಅರ್ಥ ಆಗ್ಲಿಲ್ಲ, ನನಗೆ ಹಿಂದೆ ಹೀಗೆ ಆಗಿರಲಿಲ್ಲ. ಕೊನೆಗೆ ಕೇಳಿದಾಗ ನಿಮಗೆ ಗೊತ್ತಿರಲ್ವಾ? ಕಮೀಟ್‌ಮೆಂಟ್ ಅಂದ್ರು. ಕಮೀಟ್‌ಮೆಂಟ್ ಎನ್ನುವುದಕ್ಕೆ ಈವೆಂಟ್ ಎನ್ನುವ ಕೋಡ್ ವರ್ಡ್ ಬಳಸುತ್ತಾರೆ. ಈವೆಂಟ್‌ಗೆ ಹೋಗ್ತೀರಾ ಎಂದು ಕೇಳುತ್ತಾರೆ ಎಂದು ಶಾಕಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.

ಮಹಿಳೆ ಒಬ್ಬರು ಫೋನ್ ಮಾಡಿ ಈವೆಂಟ್ ಇದೆ. ಆರ್‌ಆರ್‌ ನಗರದಲ್ಲಿ ಹೋಗ್ತೀರಾ ಎಂದು ಕೇಳಿದಳು. ಏನ್ ಈವೆಂಟ್ ಎಂದು ಕೇಳಿದೆ. ನಿಮಗೆ ಗೊತ್ತಿಲ್ವಾ? ಅಂದ್ರು. ಕೊನೆಗೆ ನಾನು ಆಕೆಯ ಫೋನ್ ಕಾಲ್ ಕಟ್ ಮಾಡಿದ್ದೆ. ಬಳಿಕ ಒಂದಷ್ಟು ಸ್ಕ್ರೀನ್ ಶಾಟ್ ಬಂತು. ನಮ್ಮ ಫೋಟೊಗಳನ್ನು ಬಳಸಿ ಪ್ರೋಫೈಲ್ ಸಿದ್ಧಪಡಿಸುತ್ತಾರೆ. ಅದಕ್ಕೆ ಒಂದು ರೇಟ್ ಫಿಕ್ಸ್ ಮಾಡ್ತಾರೆ. ಯಾರೋ ಕಸ್ಟಮರ್ಸ್‌ಗೆ ಕಳುಹಿಸುತ್ತಾರೆ. ಬಳಿಕ ಹಣ ಪಡೆದು ಫೋನ್ ಸ್ವಿಚ್‌ ಆಫ್ ಮಾಡಿಕೊಳ್ಳುತ್ತಾರೆ. ಹೀಗೆ ಬ್ಯುಸಿನೆಸ್ ಮಾಡುತ್ತಾರೆ ಎಂದು ನಮ್ರತಾ ಹೇಳಿದ್ದಾರೆ.

ಈ ಬಗ್ಗೆ ನಾನು ಸಾಕಷ್ಟು ಮಾಹಿತಿ ಕಲೆ ಹಾಕಿ, ಪೋಷಕರ ನೆರವಿನಿಂದ ಕ್ರಮ ಕೈಗೊಂಡೆ. ಇದನ್ನು ಸಾಕಷ್ಟು ಜನ ನಂಬಿ ಮೋಸ ಹೋಗುತ್ತಾರೆ. ನನಗೆ ಇದೊಂದು ಕಹಿ ಅನುಭವ ಆಗಿತ್ತು ಎಂದು ನಟಿ ನಮ್ರತಾ ಗೌಡ ವಿವರಿಸಿದ್ದಾರೆ.

ಇಂತಹ ಪ್ರೊಫೈಲ್ ಎಲ್ಲಾ ಕಡೆ ಹರಿದಾಡಿದ್ದಾಗ ಕೆಟ್ಟ ಅಭಿಪ್ರಾಯ ಬರುತ್ತದೆ. ಓಹ್ ನಮ್ರತಾ ಹೀಗೆ ಅಂತೆ, ಇವರೆಲ್ಲಾ ಹೀಗೆ ಹಣ ಮಾಡುವುದು ಎಂದುಕೊಳ್ಳುತ್ತಾರೆ. ಈ ಬಗ್ಗೆ ಗೊತ್ತಾದಾಗ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದು ಗೊತ್ತಾಗಲಿಲ್ಲ. ಮೀಡಿಯಾ ಮುಂದೆ ಹೋಗಬೇಕಾ? ಸುಮ್ಮನಾಗಬೇಕಾ? ತಿಳಿಯಲಿಲ್ಲ. ಈಗ ಮಾಹಿತಿ ಕೆಲ ಹಾಕಿದ್ದೀನಿ. ಇಂತಹ ಅನುಭವ ಇಂಡಸ್ಟ್ರಿಯಲ್ಲಿ ಎಲ್ಲರಿಗೂ ಆಗುತ್ತದೆ. ಕೆಲವರು ಮಾತನಾಡಲ್ಲ ಎಂದು ನಮ್ರತಾ ತಿಳಿಸಿದ್ದಾರೆ.

More from Filmibeat

English summary
Commitment code word in industry Event says, Tv Actress Namratha Gowda; she opens up about her bitter experience in industry;
Read more about: actress tv sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X