ಬೆಡ್ ರೂಮ್‌ನಲ್ಲಿ ರೀಲ್; ಅಪರಿಚಿತರೊಂದಿಗೆ ಡ್ಯಾನ್ಸ್ ಎಂದ ನಿವೇದಿತಾ ಗೌಡ.. ಕಾಮೆಂಟ್ಸ್ ಮಾತ್ರ ಓದಂಗಿಲ್ಲ!
ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ ಅನ್ನೋದು ಗೊತ್ತೇ ಇದೆ. ಚಂದನವನದಲ್ಲಿ ಬಹಳಷ್ಟು ಹೆಸರು ಗಳಿಸಿರುವ ಈ ಸುಂದರಿ ಇದೀಗ ಮತ್ತೊಮ್ಮೆ ರೀಲ್ಸ್ ಮಾಡುತ್ತಾ ಜನರ ಮನಸನ್ನು ಗೆಲ್ಲಲು ಹೊರಟಿದ್ದಾರೆ. ಬಾತ್ ರೂಮ್ ಆಯಿತು ಇವಾಗ ಬೆಡ್‌ರೂಮ್‌ನಲ್ಲಿ ನಿವೇದಿತಾ ಬೊಂಬಾಟ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ನಿವೇದಿತಾ ಹಾಡುಗಾರಿಕೆ ಸೈ.. ಡ್ಯಾನ್ಸ್ ಮಾಡುವುದಕ್ಕೂ ಸೈ ಅಂತ ಸಾಬೀತು ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಿದೇಶ ಪ್ರವಾಸಕ್ಕೆ ಮಾಡಿದ್ದರು. ಅಲ್ಲಿ ತಾನು ಜಾಲಿ ಮಾಡಿದ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸಾಕಷ್ಟು ರೀಲ್ಸ್ ಮಾಡಿದ್ದರು. ಈಗ ಸ್ವದೇಶಕ್ಕೆ ಮರಳಿರುವ ನಿವೇದಿತಾ ರೀಲ್ಸ್ ಮಾಡುವುದನ್ನು ಮುಂದುವರೆಸಿದ್ದಾರೆ. ನಿವೇದಿತಾ ಗೌಡ ರೀಲ್ಸ್ ಮಾಡಿ ನೆಟ್ಟಿಗರಿಗೆ ಮನೋರಂಜನೆ ನೀಡುವುದಕ್ಕೆ ಮುಂದಾಗಿದ್ದಾರೆ. ತುಂಡುಡುಗೆಯನ್ನು ತೊಡುತ್ತಾ ಅನೇಕ ಅಭಿಮಾನಿಗಳ ಕೆಂಗಣ್ಣಿಗೆ ನಿವೇದಿತಾ ಗೌಡ ಗುರಿಯಾಗುತ್ತಾರೆ. ಚಂದನ್ ಶೆಟ್ಟಿ ಜೊತೆಗೆ ನಿವೇದಿತಾ ಗೌಡ ವಿಚ್ಛೇದನ ಆದ ಬಳಿಕ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿದ್ದಾರೆ.

ನಿವೇದಿತಾ ಗೌಡ ಮತ್ತೊಂದು ರಿಯಾಲಿಟಿ ಶೋ ನಲ್ಲಿ ಅವಕಾಶಗಳು ಬರುತ್ತಿದ್ದು ಅಭಿಮಾನಿಗಳು ಮಾತ್ರ ನಿವೇದಿತಾ ಗೌಡ ಪರ್ಫಾಮೆನ್ಸ್ ನೋಡುವುದಕ್ಕೆ ತುದಿಗಾಲಿನಲ್ಲಿ ಕುಳಿತಿದ್ದಾರೆ. ಅಂದ್ಹಾಗೆ ನಿವೇದಿತಾ 'ಬಾಯ್ಸ್ ವರ್ಸಸ್ ಗರ್ಲ್ಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರೆ. ಈ ಸುದ್ದಿ ಕೇಳಿ ನಿವೇದಿತಾ ಗೌಡ ಅಭಿಮಾನಿಗಳು ಬಹಳಷ್ಟು ಖುಷಿ ಪಟ್ಟಿರೋದಂತೂ ನಿಜ.
ನಿವೇದಿತಾ ಗೌಡ ಬಿಗ್ ಬಾಸ್ ಮೂಲಕ ಎಲ್ಲರ ಮನಗೆದ್ದ ಚೆಲುವೆ. ಅಲ್ಲಿಂದ ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ಜನಪ್ರಿಯತೆ ಗಳಿಸಿದ್ದಾರೆ. ಅಲ್ಲಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇದ್ದಾರೆ. ಆ ವಿಡಿಯೋ ಹಾಗೂ ಫೋಟೊಗಳು ವೈರಲ್ ಆಗುತ್ತಿವೆ. ನಿವೇದಿತಾ ಗೌಡ ರೀಲ್ಸ್ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿ ಇರುತ್ತವೆ. ಒಂದೇ ಒಂದು ವಿಡಿಯೋ ಪೋಸ್ಟ್ ಮಾಡಿದರೆ ನೂರಾರು ಕಾಮೆಂಟ್‌ಗಳು ಬಂದಿ ಬೀಳುತ್ತವೆ.
ಇತ್ತೀಚಿನ ದಿನಗಳಲ್ಲಿ ಶ್ರೀಲಂಕಾಗೆ ತಾಯಿ ಜೊತೆಗೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದಲೂ ಅಮ್ಮನೊಂದಿಗೆ ರೀಲ್ಸ್ ಮಾಡಿದ್ದರು. ಆಗಲೂ ನೆಟ್ಟಿಗರು ಕಮ್ಮಿ ಕಾಮೆಂಟ್‌ಗಳನ್ನೇನು ಮಾಡಿರಲಿಲ್ಲ. ನಿವೇದಿತಾ ಗೌಡ ಇದೀಗ ಬೆಂಗಳೂರಿಗೆ ಹಿಂತಿರುಗಿದ್ದು, ರೀಲ್ಸ್ ಏನು ಕಮ್ಮಿ ಮಾಡಿಲ್ಲ. ಈಗ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅದೂ ಕೂಡ ಬೆಡ್‌ರೂಮ್‌ನಲ್ಲೇ ಮಾಡಿರುವ ವಿಡಿಯೋ ಆಗಿದ್ದು, ಸಾಕಷ್ಟು ಮಂದಿ ಲೈಕ್ಸ್ ಮಾಡಿದ್ದಾರೆ. ಮತ್ತೆ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ.
ಸದ್ಯ ನಿವೇದಿತಾ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 'ರಾಜಾ-ರಾಣಿ', 'ಗಿಚ್ಚಿ ಗಿಲಿಗಿಲಿ' ಸೇರಿದಂತೆ ಹಲವು ಟಿವಿ ರಿಯಾಲಿಟಿ ಶೋಗಳಲ್ಲಿ ನಿವೇದಿತಾ ಗೌಡ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಜನರಿಗೆ ಎಂಟೇನ್ಮೆಂಟ್ ಕೂಡ ನೀಡಿದ್ದಾರೆ. ರೀಲ್ಸ್ ಮೂಲಕ ಎಲ್ಲರ ಮನಸನ್ನು ಕದ್ದ ಈ ಚೆಲುವೆ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.


Click it and Unblock the Notifications











