ನ್ಯೂ ಇಯರ್ ಮೂಡ್‌ನಲ್ಲಿ ನಿವೇದಿತಾ ಗೌಡ; ಥೈಲ್ಯಾಂಡ್‌ನಲ್ಲಿ ಜಾಲಿ ಜಾಲಿ
ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಕಮಾಲ್ ಮಾಡುತ್ತಿರುವ ನಟಿ, ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಕಾಲ ಆಕ್ಟಿವ್ ಆಗಿರುವ ನಟಿ ನಿವೇದಿತಾ ಗೌಡ. ಇದೀಗ ಈಕೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಬಳಿಕ ನಿವೇದಿತಾ ಗೌಡ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಉದ್ದ ಜಡೆಯ ಮುದ್ದಿನ ಬೆಡಗಿ, ಬಾರ್ಬಿ ಡಾಲ್ ಎಂದೇ ಆಕೆಯನ್ನು ಎಲ್ಲರೂ ಕರೆಯುತ್ತಿದ್ದರು.
ಅದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿಯ ನಟನೆಗೆ ಹಾಗೆಯೇ ಡ್ಯಾನ್ಸ್‌ಗೆ ಫಿದಾ ಆಗದವರೇ ಇಲ್ಲ. ತದನಂತರ ಚಂದನ್ ಶೆಟ್ಟಿ ಕೈ ಹಿಡಿದ ಚೆಲುವೆ ಉದ್ದ ಜಡೆಗೆ ಕತ್ತರಿ ಹಾಕಿ ಇದೀಗ ಸಖತ್ ಮಾಡರ್ನ್ ಲುಕ್ ಕೊಟ್ಟು ಎಲ್ಲರ ಮನದಲ್ಲಿ ಚಿಟ್ಟೆ ಹರಿಯ ಬಿಡುತ್ತಾರೆ. ಚಂದನ್ ಶೆಟ್ಟಿ ಜೊತೆ ವಿಚ್ಛೇದನ ಪಡೆದುಕೊಂಡ ನಿವೇದಿತಾ ಗೌಡ ಎಲ್ಲರ ಜೊತೆ ಬಹಳ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಇದೀಗ ಜಾಲಿ ಮೂಡ್‌ನಲ್ಲಿರುವ ನಿವೇದಿತಾ ಗೌಡ ನೋಟಕ್ಕೆ ಅನೇಕ ಜನರು ಫಿದಾ ಆಗಿರುವುದು ಸತ್ಯ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಈಕೆ ಆಗಾಗ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಫೋಟೊಗಳಿಗೆ ಪಡ್ಡೆ ಹೈಕಳು ಕಣ್ಣರಳಿಸಿ ನೋಡುತ್ತಾ ಕಾಮೆಂಟ್‌ಗಳನ್ನು ಪಾಸ್ ಮಾಡುತ್ತಾರೆ.

ನಿವೇದಿತಾ ಗೌಡ ಸಾಂಸಾರಿಕ ಜೀವನದಿಂದ ಬೇರೆಯಾದ ಮೇಲೆ ಸಿಂಗಲ್ ಆಗಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಗೆಳತಿಯ ಜೊತೆ ಕಾಣಿಸಿಕೊಳ್ಳುವ ನಿವೇದಿತಾ ತಮ್ಮ ಖುಷಿಯ ಕ್ಷಣಗಳನ್ನು ಅವರೊಂದಿಗೆ ಕಳೆಯುತ್ತಿದ್ದಾರೆ. ಸದ್ಯ ಈಗ ನಿವೇದಿತಾ ವೆಕೇಷನ್ ಮೂಡ್‌ನಲ್ಲಿ ಇದ್ದಾರೆ. ಅಲ್ಲಿನ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ನಿವೇದಿತಾ ಹೊಸ ವರ್ಷದ ಖುಷಿಯನ್ನು ಥೈಲ್ಯಾಂಡ್‌ನ ಮಾಯಾ ಬೇ ನಲ್ಲಿ ಕಳೆಯುತ್ತಿದ್ದಾರೆ.
ನಿವೇದಿತಾ ತಮ್ಮ ವೆಕೇಷನ್‌ನ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಥೈಲ್ಯಾಂಡ್‌ನ ಮಾಯಾ ಬೇ ಬೀಚ್‌ನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಗ್ಲಾಮರ್ ಲುಕ್ ಕೊಡುತ್ತಾ ಪೋಸ್ ಕೊಟ್ಟಿದ್ದಾರೆ. ಅದೇ ಫೋಟೊಗಳಿಗೆ ಎಂದಿನಂತೆ ಪಾಸಿಟಿವ್ ಹಾಗೂ ನೆಗೆಟಿವ್ ಕಾಮೆಂಟ್‌ಗಳು ಬರುತ್ತಿವೆ.
ಈ ಫೋಟೊಗಳನ್ನು ಶೇರ್ ಮಾಡಿಕೊಳ್ಳುವುದಕ್ಕೆ ಒಂದು ದಿನ ಮುನ್ನ ಕೆಂಪು ಬಣ್ಣದ ಡ್ರೆಸ್ ತೊಟ್ಟ ಫೋಟೊಗಳನ್ನು ಶೇರ್ ಮಾಡಿದ್ದರು. ನಿವೇದಿತಾ ಗೌಡ ಅವರ ಆ ಲುಕ್‌ಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದರು. ಬಹಳಷ್ಟು ಜನ ಅಭಿಮಾನಿಗಳು ನಿವೇದಿತಾ ಗೌಡ ಲುಕ್‌ಗೆ ಸಿಕ್ಕಾಪಟ್ಟೆ ಲೈಕ್ಸ್ ಕೊಟ್ಟಿದ್ದಾರೆ. ಈ ಫೋಟೊಗಳಿಗೂ ಕಾಮೆಂಟ್‌ಗಳೇನು ಕಮ್ಮಿ ಬಂದಿಲ್ಲ.
ಸಿಂಗಲ್ ಆಗಿರುವ ನಟಿಯ ಕ್ಯೂಟ್ ಮಾತಿಗೆ, ಕ್ಯೂಟ್ ಲುಕ್‌ಗೆ ತೆಗಳುವವರು ಎಷ್ಟು ಮಂದಿ ಇದ್ದಾರೋ ಅಷ್ಟೇ ಮಂದಿ ಅಭಿಮಾನಿಗಳು ಕೂಡ ಇದ್ದಾರೆ. ಆದರೆ ಕೆಲವೊಂದು ಬಾರಿ ನಿವೇದಿತಾ ಡ್ರೆಸ್ಸಿಂಗ್ ಸೆನ್ಸ್‌ಗೆ ನೆಟ್ಟಿಗರು ಟೀಕೆ ಮಾಡಿದ್ದೂ ಇದೆ. ನಾನು ಇರುವುದು ಹೇಗೆ ? ಯಾರು ಒಪ್ಪಲಿ ಬಿಡಲಿ. ನಾನು ನಾನಾಗಿಯೇ ಇರುತ್ತೇನೆ ಎಂದು ಅನೇಕ ಸಾರಿ ಖಡಕ್ ಆಗಿ ಹೇಳಿದರು. ಆದರೂ ಕೆಟ್ಟದಾಗಿ ಮೆಸೇಜ್ ಮಾಡುವವರು ಮಾತ್ರ ಕಡಿಮೆ ಏನು ಆಗುತ್ತಿಲ್ಲ.


Click it and Unblock the Notifications











