Tanisha Kuppanda:10 ಗ್ರಾಂ ಬೆಳ್ಳಿ ನಾಣ್ಯ ಫ್ರೀಯಾಗಿ ಕೊಡ್ತಾರಂತೆ ತನಿಷಾ ಕುಪ್ಪಂಡ
ನಟಿ ತನಿಷಾ ಕುಪ್ಪಂಡ, ವರ್ಷದ ಹಿಂದೆ 'ಕುಪ್ಪಂಡ ಜ್ಯುವೆಲರ್ಸ್' ಎಂಬ ಚಿನ್ನ ಬೆಳ್ಳಿ ಆಭರಣಗಳ ಅಂಗಡಿ ತೆರೆದಿದ್ದರು. ಇದೀಗ ಈ ಅಂಗಡಿಗೆ ಒಂದು ವರ್ಷವಾಗಿದ್ದು, ಈ ಸಂಭ್ರಮವನ್ನು ಹೆಚ್ಚು ಮಾಡಲು ತಮ್ಮ ಗ್ರಾಹಕರಿಗೆ ಬೆಳ್ಳಿ ಉಚಿತವಾಗಿ ಕೊಡುವುದಾಗಿ ನಟಿ ತನಿಷಾ ಕುಪ್ಪಂಡ ಘೋಷಿಸಿದ್ದಾರೆ.
ಹೌದು, 'ಕುಪ್ಪಂಡ ಜ್ಯುವೆಲರ್ಸ್' ಆರಂಭವಾದಾಗಿನಿಂದಲೂ ಬಹಳ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಕಳೆದ ವರ್ಷ ಮಾರ್ಚ್ 29ರಂದು ಹಲವಾರು ಸೆಲೆಬ್ರಿಟಿಗಳು ಈ ಕುಪ್ಪಂಡ ಜುವೆಲರ್ಸ್ ಉದ್ಘಾಟನೆಗೆ ಆಗಮಿಸಿದ್ದರು. ಬಹಳ ಭರ್ಜರಿಯಾಗಿಯೇ ಆರಂಭವಾದ ಈ ಅಂಗಡಿಗೆ ಜನರಿಂದ ಚಿನ್ನ ಬೆಳ್ಳಿ ಗ್ರಾಹಕರಿಂದ, ತನಿಷಾ ಅವರ ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

ಇದೀಗ 29 ಮಾರ್ಚ್ 2025 ಗೆ ಕುಪ್ಪಂಡ ಜ್ಯುವೆಲರ್ಸ್‌ಗೆ ಒಂದು ವರ್ಷವಾಗಲಿದ್ದು ಇಲ್ಲಿನ ಗ್ರಾಹಕರಿಗೆ 1 ಗ್ರಾಂ ಬೆಳ್ಳಿ ನಾಣ್ಯ ಉಚಿತವಾಗಿ ಕೊಡುವುದಾಗಿ ನಟಿ ತನಿಷಾ ಘೋಷಿಸಿದ್ದಾರೆ. 20 ಗ್ರಾಂಗೂ ಹೆಚ್ಚಿನ ಚಿನ್ನವನ್ನು ಕುಪ್ಪಂಡ ಜುವೆಲರ್ಸ್ ನಿಂದ ಖರೀದಿಸಿದ ಗ್ರಾಹಕರಿಗೆ 10 ಗ್ರಾಂ ಬೆಳ್ಳಿ ನಾಣ್ಯ ಫ್ರೀ ಗಿಫ್ಟ್ ನೀಡಲಿದ್ದಾರೆ ತನಿಷಾ ಕುಪ್ಪಂಡ. ಈ ಸಿಹಿ ಸುದ್ದಿಯನ್ನು ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ತನಿಷಾ ಕುಪ್ಪಂಡ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ತನಿಷಾ "ಹೌದು, ನೋಡ್ತಾ ನೋಡ್ತಾ ನಮ್ಮ ಕುಪ್ಪಂಡ ಜ್ಯುವೆಲರ್ಸ್ ಒಂದು ವರ್ಷ ಪೂರೈಸಿದೆ. ಈ ಸಂಭ್ರಮವನ್ನು ನಾವು ಗಿಫ್ಟ್ ಕೊಡೋದರ ಮೂಲಕ ಆಚರಿಸುತ್ತಾ ಇದ್ದೇವೆ. 20,000 ಹಾಗೂ ಅದಕ್ಕಿಂತ ಹೆಚ್ಚು ಖರೀದಿ ಮಾಡಿ ಗೆಟ್ 10 ಗ್ರಾಂ ಸಿಲ್ವರ್ ಕಾಯಿನ್ ಫ್ರೀ" ಎಂದು ಆಕೆ ಬರೆದುಕೊಂಡಿದ್ದಾರೆ.
ತನಿಷಾ ಕುಪ್ಪಂಡ ಅವರ ಫಾಲೋವರ್ಸ್ ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಅಂದಹಾಗೆ ನಟಿ ತನಿಷಾ ಕುಪ್ಪಂಡ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿ ಬಹಳಷ್ಟು ಖ್ಯಾತಿ ಹಾಗೂ ಜನರ ಪ್ರೀತಿ ಗಳಿಸಿದರು. ನಂತರ, ಇದೀಗ ನಟಿಯಷ್ಟೇ ಅಲ್ಲದೆ ನಿರ್ಮಾಪಕಿಯೂ ಆಗಿರುವ ಅವರು 'ಕುಪ್ಪಂಡ ಪ್ರೊಡಕ್ಷನ್ಸ್' ಆರಂಭಿಸಿದ್ದಾರೆ. ಇದರ ಮೊದಲ ಚಿತ್ರವಾಗಿ 'ಕೋಣ' ಎಂಬ ಚಿತ್ರ ತಯಾರಾಗುತ್ತಿದೆ. ನಟ ಕೋಮಲ್ ನಾಯಕ ನಟನಾಗಿ ನಟಿಸುತ್ತಿದ್ದಾರೆ.
34ವರ್ಷದ ತನಿಷಾ ಕುಪ್ಪಂಡ, ಬಿಗ್ ಬಾಸ್ ಸೀಸನ್ 10 ರ ಸಹಸ್ಪರ್ಧಿ ವರ್ತೂರ್ ಸಂತೋಷ್ ಅವರ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಕಾರಣಕ್ಕೆ ಅವರಿಬ್ಬರನ್ನು ಪ್ರೇಮಿಗಳೆಂದು ಹಲವರು ಕರೆದದ್ದು ಇದೆ. ಅವರ ಮಾಡುವ ಬಗ್ಗೆ ಅಭಿಮಾನಿಗಳು ಆಸಕ್ತಿ ತೋರಿಸಿದಾಗ ನಾವಿಬ್ಬರು ಸ್ನೇಹಿತರಷ್ಟೇ ಎಂಬ ಸ್ಪಷ್ಟೀಕರಣ ನೀಡಿದ್ದಾರೆ. ಬೆಂಕಿ ಎಂಬ ಹೆಸರಿನಿಂದ ಖ್ಯಾತಿ ಪಡೆದ ತನಿಷಾ ಕುಪ್ಪಂಡ, ಈಗ ನಟಿಯಷ್ಟೇ ಅಲ್ಲದೆ ನಿರ್ಮಾಪಕಿ ಹಾಗೂ ಬಿಸಿನೆಸ್ ವುಮನ್ ಆಗಿಯೂ ಕಾಣಿಸಿಕೊಳ್ಳುತ್ತಿರುವುದು ಶ್ಲಾಘನೀಯ.


Click it and Unblock the Notifications











