ಹೆಂಡತಿ, ಮಾವನಿಗೆ ಎಚ್ಚರಿಕೆ ಕೊಟ್ಟ ಬಿಗ್ ಬಾಸ್ ಖ್ಯಾತಿಯ ವರ್ತೂರ್ ಸಂತೋಷ್; ಮತ್ತೆ ಯಾಕೆ?

By ಫಿಲ್ಮಿಬೀಟ್ ಡೆಸ್ಕ್

ಬಿಗ್‌ ಬಾಸ್ ಕನ್ನಡ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ವರ್ತೂರು ಸಂತೋಷ್‌ಗೆ ಹೆಸರು, ಹಣ ಎಲ್ಲವೂ ಇದೆ. ಆದರೆ, ಅವರ ಕೌಟುಂಬಿಕ ಜೀವನ ಮಾತ್ರ ಯಶಸ್ವಿಯಾಗಿಲ್ಲ. ಬಿಗ್‌ ಬಾಸ್ ಮನೆಗೆ ಕಾಲಿಡುತ್ತಿದ್ದಂತೆ ಅವರ ವೈವಾಹಿಕ ಜೀವನದ ಬಗ್ಗೆ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಇವರ ಪತ್ನಿಯ ತಂದೆ ಮಾಧ್ಯಮಗಳ ಮುಂದೆ ಬಂದು ಗಂಭೀರ ಆರೋಪಗಳನ್ನು ಮಾಡಿದ್ದರು. ಅಲ್ಲಿಂದ ತೆರೆಮರೆಯಲ್ಲಿ ನಡೆಯುತ್ತಿದ್ದ ಕಿತ್ತಾಟ ಬೀದಿ ರಂಪಾಟವಾಗಿತ್ತು.

ಅಂದು ಜಗತ್‌ಜಾಹೀರಾಗಿದ್ದ ವರ್ತೂರು ಸಂತೋಷ್ ಫ್ಯಾಮಿಲಿ ಮ್ಯಾಟರ್ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಈಗ ಬಿಗ್‌ ಬಾಸ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್ ಇದ್ದಕ್ಕಿದ್ದ ಹಾಗೆ ಮತ್ತೆ ಪತ್ನಿ ಹಾಗೂ ಮಾವನ ಮೇಲೆ ರೊಚ್ಚಿಗೆದ್ದಿದ್ದಾರೆ. ಯೂಟ್ಯೂಬ್ ಚಾನೆಲ್‌ಗಳಿಗೆ ಪತ್ನಿ ಹಾಗೂ ಅವರ ನೆನಪುಗಳನ್ನ ಶಾಶ್ವತವಾಗಿ ಹೊರ ಹಾಕುವುದಾಗಿ ಹೇಳಿದ್ದಾರೆ. ಅಲ್ಲದೇ ಮನೆಯೊಳಗೆ ಕರೆದುಕೊಂಡು ಹೋಗಿ ಪತ್ನಿ ಪಸ್ತುಗಳೆಲ್ಲ ಹಾಗೇ ಇದೆ ಎಂದು ತೋರಿಸಿದ್ದಾರೆ.

Bigg Boss Kannada fame Varthur Santhosh angry about his wife and father in law

ಯಶಸ್ ಟಾಕೀಸ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಪತ್ನಿ ಹಾಗೂ ಅವರ ಮನೆಯವರಿಗೆ ಟಾರ್ಚರ್ ಅನುಭವಿಸಿದ್ದಾಗಿ ವರ್ತೂರು ಸಂತೋಷ್ ಹೇಳಿಕೊಂಡಿದ್ದಾರೆ. ಹಾಗೇ ಇನ್ಮುಂದೆ ತನ್ನ ತಂಟೆಗೆ ಬಂದರೆ, ಎಲ್ಲಾ ವಿಷಯವನ್ನು ಹೊರ ಹಾಕುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಹಾಗಿದ್ದರೆ, ವರ್ತೂರು ಸಂತೋಷ್‌ ಯುಟ್ಯೂಬ್ ಚಾನೆಲ್‌ಗಳಲ್ಲಿ ಏನೆಲ್ಲ ಗಂಭೀರ ಆರೋಪಗಳನ್ನು ಮಾಡಿದ್ದಾರೆ? ಏನು ಹೇಳಿದ್ದಾರೆಂದು ನೋಡುವುದಾದರೇ..

ಮುಂದೆ ಓದಿ...

ಮದುವೆ ಆಗುತ್ತೇನೆ ಅಂತ ಸುಮಾರು ವಿಡಿಯೋಗಳನ್ನು ಬಿಟ್ಟಿದ್ದೆ
ನನ್ನ ಲೈಫ್‌ನಿಂದ ಹೆಂಡತಿ ಹೊರ ಹೋಗಿ ಐದು ವರ್ಷ ಆಯ್ತು
"ತಿರುಬೋಕಿ ಬಾಳು ಮಾಡಬಾರದು" ಹೆಂಡತಿ ಮೇಲೆ ಆರೋಪ
ಮನೆಯಲ್ಲಿ ಇದ್ದ ಹೆಂಡ್ತಿಯ ವಸ್ತುಗಳೆಲ್ಲವೂ ಆಚೆ ಹೋಗುತ್ತವೆ
ವರ್ತೂರು ಲೈಫ್‌ನಲ್ಲಿ ನಡೆದಿದ್ದು ಮದುವೆನೇ ಅಲ್ಲ ಡೊಂಬರಾಟ

ವರ್ತೂರು ಸಂತೋಷ್ ಪತ್ನಿ ತಂದೆ ಮನೆಯಲ್ಲಿ ವಾಸವಿದ್ದಾರೆ. ಎರಡೂ ಕುಟುಂಬಗಳ ನಡುವೆ ವೈಮನಸ್ಸು ಮೂಡಿದ್ದು, ಅದು ವಿವಾದಕ್ಕೆ ತಿರುಗಿದೆ. ಸುಮಾರು ಐದು ವರ್ಷಗಳಿಂದ ಈ ವಿವಾದ ನಡೆಯುತ್ತಲೇ ಇದೆ. "ನನ್ನ ಜೀವನದಲ್ಲಿ ಕೆಲವನ್ನು ಒದ್ದು ಹೊರಗೆ ಹಾಕುತ್ತಿದ್ದೇನೆ. ಕೆಲವೊಂದನ್ನು ಇಟ್ಟುಕೊಂಡಿದ್ದೆ. ನನಗೆ ಅದು ಅವಶ್ಯಕತೆನೇ ಇರಲಿಲ್ಲ. ಆದರೂ ಮಾನವೀಯತೆ, ಧರ್ಮ ಅನ್ನೋದು ಇದೆಯಲ್ಲ. ನಾನು ಅಂತಲ್ಲ. ನನ್ನಂಥ ಯುವಕರು ಅದೆಷ್ಟು ಮಂದಿ ಎಷ್ಟು ನೋವು ತಿನ್ನುತ್ತಿದ್ದಾರೋ ಗೊತ್ತಿಲ್ಲ. ನೂರಕ್ಕೆ 90 ಪರ್ಸೆಂಟ್ ಯುವಕರೇ ಸಾಯೋದು. ಯಾಕಂದ್ರೆ, ಜವಾಬ್ದಾರಿ ಇರುತ್ತೆ. ಮಾನ ಮರ್ಯಾದೆಗೆ ಅಂಜುತ್ತಾರೆ" ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.

ಕೆಲವು ತಿಂಗಳಿಂದ ವರ್ತೂರು ಸಂತೋಷ್ ಮದುವೆಯಾಗುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದರು. ಆ ನಂತರ ಪತ್ನಿ ಮನೆಯಿಂದ ಆರೋಪಗಳು ಹೆಚ್ಚಾಯ್ತು ಎಂದಿದ್ದಾರೆ. "ನಾನು ಮದುವೆ ಆಗುತ್ತೇನೆ ಅಂತ ಸುಮಾರು ವಿಡಿಯೋಗಳನ್ನು ಬಿಟ್ಟೆ. ನ್ಯಾಯ, ಧರ್ಮ, ಸತ್ಯ ಟೈಮ್‌ಗೆ ಮರೆ ಮಾಚುತ್ತವೆ. ಸುಳ್ಳು ಕುಣಿಯುತ್ತಿರುತ್ತೆ. ನಾನು ಅತ್ತು ಮಾತಾಡಿರುವುದರಲ್ಲಿ ನೋವಿರುತ್ತೆ. ಅಲ್ಲಿ ನಾಟಕ ಬರುವುದೇ ಇಲ್ಲ." ಎಂದಿದ್ದಾರೆ.

Bigg Boss Kannada fame Varthur Santhosh angry about his wife and father in law

ಹಾಗೇ ಮನೆಯಲ್ಲಿದ್ದ ಪತ್ನಿಯ ವಸ್ತುಗಳು ಏನೇನಿವೆ ಎಂದು ತೋರಿಸಿದ್ದಾರೆ. ಪತ್ನಿಗಾಗಿ ತಂದು ಕೊಟ್ಟಿದ್ದ ವಸ್ತುಗಳನ್ನು ತೋರಿಸಿದ್ದಾರೆ. ಜೊತೆಗೆ ಮನೆಯಲ್ಲಿ ಅವರ ವಸ್ತುಗಳು ಏನೇನಿವೆ ಎನ್ನುವುದನ್ನೂ ತೋರಿಸಿದ್ದಾರೆ. ಅದೆಲ್ಲವೂ ಮನೆಯಿಂದ ಹೊರಗೆ ಹಾಕುತ್ತೇನೆ ಎಂದಿದ್ದಾರೆ. "ನಾನು ಬಿಗ್‌ಬಾಸ್‌ಗೆ ಹೋಗಿ ಬಂದು ಎರಡು ವರ್ಷ ಆಯ್ತು. ನನ್ನ ಲೈಫ್‌ನಲ್ಲಿ ಈ ಡ್ಯಾಶ್ (ಹೆಂಡ್ತಿ) ಹೋಗಿ ಐದು ವರ್ಷದ ಮೇಲಾಗುತ್ತಿದೆ. ಕೆಲವರು ಬಂದು ಹೇಗೆ ಪ್ರಶ್ನೆ ಮಾಡುತ್ತಾರೆ. ಆ ಟೈಮ್‌ನಲ್ಲಿ ಉತ್ತರ ಕೊಡುವುದಕ್ಕೆ ಆಗಲ್ಲ. ಅವರ ಮನಸ್ಥಿತಿಯ ಹೇಗಿರುತ್ತೆ ಅಂತ ತಿಳಿದುಕೊಳ್ಳುವುದಕ್ಕೆ ಆಗುವುದಿಲ್ಲ. ಬಿಲ್ಡಪ್‌ ಕೊಡುವುದಕ್ಕೆ ಆ ಮನೆಯಲ್ಲಿ ಚಿನ್ನ ಬಿಟ್ಟು ಬಂದಿದ್ದೇನೆ ಎನ್ನುವ ಮಾತು ಬಂತು. ಅದ್ಯಾರು ಹೇಳಿದ್ದಾರೋ ಅವರನ್ನೇ ಕಳಿಸಿ. ಇದ್ದರೆ ಎತ್ತಿಕೊಂಡು ಹೋಗಬಹುದು. ಇಂತಹ ತಿರುಬೋಕಿ ಬಾಳು ಮಾಡಬಾರದು." ಎಂದು ಆ ಮನೆಯಲ್ಲಿದ್ದ ಹೆಂಡತಿಯ ವಸ್ತುಗಳನ್ನು ಯೂಟ್ಯೂಬರ್‌ಗಳಿಗೆ ತೋರಿಸಿ ಆಕ್ರೋಶ ಹೊರ ಹಾಕಿದ್ದಾರೆ.

ಹಾಗೇ ಪತ್ನಿಯ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. "ಈ ಐದು ವರ್ಷಗಳಲ್ಲಿ ನಮ್ಮ ಮನೆಯಲ್ಲಿ 8 ತಿಂಗಳು ಸಂಸಾರ ಮಾಡಿರಬಹುದು. ವರ್ಷದ ಮೇಲೆ ಮೂರು ತಿಂಗಳು ಮಾಡಿರಬಹುದು. 8 ತಿಂಗಳು ಅಂತ ಯಾಕೆ ಹೇಳುತ್ತಿದ್ದೇನೆ ಅಂದರೆ, ಅಲ್ಲಿ ಹೋಗಿರುವುದೇ ಜಾಸ್ತಿ ಅಲ್ವ, ಅದಕ್ಕೆ ಹೇಳುತ್ತಿದ್ದೇನೆ. ಇಲ್ಲಿವರೆಗೂ ಹೇಳಿದ್ದೆಲ್ಲ ಆಯ್ತು. ಇನ್ಮುಂದೆ ಸುಮ್ಮನೆ ಇದ್ದು ಬಿಡಬೇಕು. ನೀವು ಮಾಡಿರುವ ಅನ್ಯಾಯವನ್ನೆಲ್ಲ ಇಟ್ಟುಕೊಂಡು ಬಂದಿದ್ದೇನೆ. ನೀನು ಇಳಿಯುವ ಲೆವೆಲ್‌ಗೆ ನಾನು ಇಳಿಯಬೇಕಂದ್ರೆ. ನೀವು ಕಟ್ಟಿದ್ದಿಯಲ್ಲ ಆ ಡ್ಯೂಪ್ಲಿಕೇಟ್ ಕೋಟೆ ಪರಪ್ಪನ ಅಗ್ರಹಾರಕ್ಕೆ ನೀನು ಹೋಗುತ್ತೇಯೋ? ನಾನು ಹೋಗುತ್ತೇನೋ ನೋಡೋಣ. ವರ್ತೂರು ಲೈಫ್‌ನಲ್ಲಿ ನಡೆದಿದ್ದು ಮದುವೆನೇ ಅದಲ್ಲ ಅದೊಂದು ಡೊಂಬರಾಟ" ಎಂದು ಆಕ್ರೋಶ ಹೊರ ಹಾಕಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X