'ಬಿಗ್ ಬಾಸ್' ಮನೆ ಕಂಡ ಬಿಸಿ ಬಿಸಿ ಪ್ರೇಮ ಪ್ರಸಂಗಗಳು
Recommended Video
'ಬಿಗ್ ಬಾಸ್' ಕಾರ್ಯಕ್ರಮವನ್ನು ಗಮನಿಸಿ ಪ್ರತಿ ಸೀಸನ್ ನಲ್ಲಿಯೂ ಒಂದು ಪ್ರೇಮ ಪ್ರಸಂಗಗಳು ಇದ್ದೇ ಇರುತ್ತದೆ. ಸ್ಪರ್ಧಿಗಳ ನಡುವೆ ಆಕರ್ಷಣೆಯೋ, ಪ್ರೀತಿಯೋ.. ಏನೇ ಆಗಿದ್ದರೂ ಇಬ್ಬರು ಜೋಡಿಗಳು ಮಾತ್ರ ಸುದ್ದಿ ಮಾಡುತ್ತಾರೆ.
ಕೆಲವರು ತಾವು ಸೇಫ್ ಆಗಬೇಕು, ಹೆಚ್ಚು ದಿನ ಶೋನಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಈ ತಂತ್ರ ಬಳಸುತ್ತಾರೆ. ಕಾರ್ಯಕ್ರಮದಲ್ಲಿ ಜೋಡಿ ಹಕ್ಕಿಗಳಾದರೆ, ಕ್ಯಾಮರಾ ಹಾಗೂ ವೀಕ್ಷಕರ ಗಮನ ಸೆಳೆಯಬಹುದು ಎನ್ನುವುದು ಕೆಲವರ ಪ್ಲಾನ್.
ಬಿಗ್ ಬಾಸ್ ಆಯ್ಕೆ ಪ್ರಕ್ರಿಯೆ ಏನೇ ಇದ್ದರೂ, ಪ್ರತಿ ಸೀಸನ್ ನಲ್ಲಿ ಪ್ರೇಮಿಗಳು ಮಾತ್ರ ಹುಟ್ಟಿಕೊಳ್ಳುತ್ತಾರೆ. ಕೆಲವು ಬಾರಿ ಈ ಜೋಡಿಗಳು ವರ್ತನೆ ಅತಿ ಅನಿಸುತ್ತದೆ. ಕಿರುತೆರೆಯ ಬಿಗ್ ಬಾಸ್ 18+ ಕಾರ್ಯಕ್ರಮವಾಗಿ ಬಿಡುತ್ತದೆ. ಒಟ್ಟಿನಲ್ಲಿ ಬಿಗ್ ಬಾಸ್ ನಲ್ಲಿ ವಿಶೇಷತೆಯಲ್ಲಿ ಜೋಡಿ ಹಕ್ಕಿಗಳು ಕೂಡ ಒಂದು.
ಅಂದಹಾಗೆ, ಬಿಗ್ ಬಾಸ್ ಸೀಸನ್ 7 ಕಾರ್ಯಕ್ರಮದ ಪ್ರಾರಂಭಕ್ಕೆ ಕೆಲವೇ ದಿನಗಳ ಬಾಕಿ ಇದೆ. ಈ ಸಮಯದಲ್ಲಿ ಹಳೆ ಜೋಡಿಗಳ ಬಗ್ಗೆ ಸಣ್ಣ ವಿವರ ಇಲ್ಲಿದೆ.

ತಿಲಕ್ ಹಾಗೂ ಶ್ವೇತ ಪಂಡಿತ್
'ಬಿಗ್ ಬಾಸ್' ಆಗ ತಾನೇ ಕನ್ನಡಕ್ಕೆ ಬಂದಿತ್ತು. ಆ ಕಾರ್ಯಕ್ರಮ ಎಷ್ಟೋ ವೀಕ್ಷಕರಿಗೆ ಇನ್ನು ಸರಿಯಾಗಿ ಅರ್ಥ ಆಗಿರಲಿಲ್ಲ. ನವರಸಗಳನ್ನು ಹೊಂದಿದ್ದ ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಶೃಂಗಾರ ಗಮನ ಸೆಳೆಯಿತು. ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳ ನಡುವೆ ಲವ್ ಶುರು ಆಗಿತ್ತು. ತಿಲಕ್ ಹಾಗೂ ಶ್ವೇತ ಪಂಡಿತ್ ತುಂಬ ಕ್ಲೋಸ್ ಆಗಿದ್ದರು. ಬಳಿಕ 'ಗಂಡ ಹೆಂಡತಿ' ಜೋಡಿ ಸಂಜನಾ ಮತ್ತು ತಿಲಕ್ ಕೂಡ ಸುದ್ದಿ ಮಾಡಿದರು.

ನೀತು ಹಾಗೂ ಆದಿ ಲೋಕೇಶ್
ಮೊದಲ ಸೀಸನ್ ನಲ್ಲಿ ನಡೆದ ಪ್ರೇಮ ಪ್ರಸಂಗಗಳು ಎರಡನೇ ಸೀಸನ್ ನಲ್ಲಿಯೂ ಮುಂದುವರೆಯಿತು. ಈ ಬಾರಿ ನಟಿ ನೀತು ಹಾಗೂ ನಟ ಆದಿ ಲೋಕೇಶ್ ತುಂಬ ಹತ್ತಿರ ಆಗಿದ್ದರು. ಒಟ್ಟಿಗೆ ಓಡಾವುಡು, ಒಟ್ಟಿಗೆ ಇರುವುದು, ಸೀಕ್ರೆಟ್ ಮಾತುಗಳು ಇವೆಲ್ಲದರಿಂದ ಈ ಜೋಡಿ ಸೀಸನ್ ಎರಡರ ಕೇಂದ್ರ ಬಿಂದುವಾದರು. ಟ್ರೋಫಿ ಗೆಲ್ಲದೆ ಇದ್ದರೂ, ಹೆಚ್ಚು ಅವಧಿ ಟಿವಿಯಲ್ಲಿ ಕಾಣಿಸುವಲ್ಲಿ ಯಶಸ್ವಿಯಾದರು.

ಪೂಜಾ ಗಾಂಧಿ ಹಾಗೂ ಅಯ್ಯಪ್ಪ
ಸಿನಿಮಾ ಅವಕಾಶಗಳು ಕಡಿಮೆ ಆದ ಸಮಯಕ್ಕೆ ನಟಿ ಪೂಜಾ ಗಾಂಧಿ 'ಬಿಗ್ ಬಾಸ್' ಸೀಸನ್ 3ಕ್ಕೆ ಬಂದರು. ಇದೇ ಸೀಸನ್ ನಲ್ಲಿ ಕ್ರಿಕೆಟ್ ಆಟಗಾರ ಅಯ್ಯಪ್ಪ ಕೂಡ ಇದ್ದರು. ಮೊದ ಮೊದಲು ದೂರವೇ ಇದ್ದ ಈ ಜೋಡಿ ಬರುಬರುತ್ತಾ ಒಂದಾದರು. 'ಬಿಗ್ ಬಾಸ್' ಆಟಗಳ ಜೊತೆಗೆ ಇನ್ನಷ್ಟು ಹತ್ತಿರ ಆದರು. ಪೂಜಾ ಗಾಂಧಿ - ಅಯ್ಯಪ್ಪ ಸೀಸನ್ 3ರ ರೋಮ್ಯಾಟಿಂಕ್ ಜೋಡಿಯಾಗಿದ್ದರು.

ಪ್ರಥಮ್, ಸಂಜನಾ, ಭುವನ್ ತ್ರಿಕೋನ ಪ್ರೇಮಕಥೆ
'ಬಿಗ್ ಬಾಸ್'ನಲ್ಲಿ ಸಿಕ್ಕಾಪಟ್ಟೆ ಮಜಾ ನೀಡಿದ ಪ್ರೇಮಕಥೆ ಸೀಸನ್ 4 ನಲ್ಲಿ ಬಂತು. ಭುವನ್ ಪೊನ್ನಣ್ಣ ಮತ್ತು ಸಂಜನಾ ಪ್ರೇಮ ಪಕ್ಷಿಗಳ ಹಾಗೆ ಒಟ್ಟೊಟ್ಟಿಗೆ ಕಾಣಿಸಿಕೊಂಡರು. ಆದರೆ, ಅವರ ನಡುವೆ ಪ್ರಥಮ್ ಬಂದ ಮೇಲೆ ಟ್ವಿಸ್ಟ್ ಬಂತು. ಸಂಜನಾ ಮತ್ತು ಭುವನ್ ಅಣ್ಣ ತಂಗಿ ಎಂದು ಹೇಳಿದ ಪ್ರಥಮ್ ಇಬ್ಬರಿಗೆ ತುಂಬ ಕಾಟ ಕೊಟ್ಟರು. ಪ್ರೇಮಿಗಳ ಹಾಗೆ ಪೋಸ್ ಕೊಟ್ಟ ಭುವನ್ - ಸಂಜನಾ ಆಚೆ ಬಂದ ಮೇಲೆ ತಮ್ಮ ಪಾಡಿಗೆ ತಾವು ಇದ್ದಾರೆ.

ಜೆಕೆ ಹಾಗೂ ಶ್ರುತಿ ಪ್ರಕಾಶ್
ಸೀಸನ್ 5 ನಲ್ಲಿ ಒಂದಲ್ಲ.. ಎರಡೆರಡು ಜೋಡಿಗಳು ಇದ್ದವು. ಒಂದು ಕಡೆ ಚಂದನ್ ಹಾಗೂ ನಿವೇದಿತಾ ಮತ್ತೊಂದು ಕಡೆ, ಜೆಕೆ ಹಾಗೂ ಶ್ರುತಿ ಪ್ರಕಾಶ್ ಇದ್ದರು. ಯಾರು ಯಾರ ಮೇಲೆ ಆಕರ್ಷಣೆ ಹೊಂದಿದ್ದಾರೆ ಎನ್ನುವುದೇ ಗೊಂದಲ ಆಗಿತ್ತು. ಸದ್ಯ, ಚಂದನ್ ಮತ್ತು ನಿವೇದಿತಾ ಎಂಗೇಜ್ ಆಗಿದ್ದಾರೆ. ಈ ಹಿಂದೆ ಯಾವ 'ಬಿಗ್ ಬಾಸ್' ಜೋಡಿ ಕೂಡ ರಿಯಲ್ ಲೈಫ್ ನಲ್ಲಿ ಒಂದಾಗಿಲ್ಲ.

ಶಶಿ ಹಾಗೂ ಕವಿತಾ ಗೌಡ
ಕಳೆದ ಬಾರಿ 'ಬಿಗ್ ಬಾಸ್'ನಲ್ಲಿ ಹೆಚ್ಚು ಗಮನ ಸೆಳೆದ ಜೋಡಿಗಳು ಶಶಿ ಕುಮಾರ್ ಹಾಗೂ ಕವಿತಾ ಗೌಡ. ಕಾಮನ್ ಮ್ಯಾನ್ ಕ್ಯಾಟಗೆರಿಯಲ್ಲಿ, ರೈತ ಎಂಬ ಹೆಸರಿನಲ್ಲಿ ಬಂದ ಶಶಿ, ನಟಿ ಕವಿತಾ ಗೌಡ ಹಿಂದೆ ಬಿದ್ದರು. ಕವಿತಾ ಕೂಡ ಶಶಿಯನ್ನು ದೂರ ಇಡಲಿಲ್ಲ. ಇದರ ಜೊತೆಗೆ ಸೋನು ಪಾಟೀಲ್ ಹಾಗೂ ಗಾಯಕ ನವೀನ್ ಸಜ್ಜು ಜೋಡಿ ಕೂಡ ಕೆಲ ದಿನಗಳು ಸುದ್ದಿ ಮಾಡಿತ್ತು.


Click it and Unblock the Notifications











