Big News: ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿಗೆ ಕೆಲಸ ಆರಂಭಿಸಿದ ಸುದೀಪ್
ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ನಡೆಯಲ್ಲ ಎಂದು ಪ್ರೇಕ್ಷಕರು ನಿರಾಸೆಯಾಗಿದ್ದರು. ಆದ್ರೀಗ ಸಿಹಿ ಸುದ್ದಿ ಹೊರಬಿದ್ದಿದೆ. ಬಿಗ್ ಬಾಸ್ ಹೊಸ ಆವೃತ್ತಿಗೆ ಚಾಲನೆ ಸಿಕ್ಕಿದೆ. ಬಿಗ್ ಬಾಸ್ ಕಾರ್ಯಕ್ರಮ ಕನ್ನಡದಲ್ಲಿಯೂ ಆರಂಭವಾಗುತ್ತಿದ್ದು, ಈಗಾಗಲೇ ಕಿಚ್ಚ ಸುದೀಪ್ ತಯಾರಿ ಆರಂಭಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಅವರೇ ಸ್ವತಃ ಈ ಕುರಿತು ಮಾಹಿತಿ ನೀಡಿದ್ದು, ''ಹೊಸ ಆವೃತ್ತಿಯ ಕೆಲಸ ಪ್ರಗತಿಯಲ್ಲಿದೆ' ಎಂದು ಸುದೀಪ್ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ಕನ್ನಡ ಬಿಗ್ ಬಾಸ್ ವೀಕ್ಷಕರು ಥ್ರಿಲ್ ಆಗಿದ್ದಾರೆ. ಮುಂದೆ ಓದಿ...

ಸಂಕ್ರಾಂತಿಗೆ ಬಿಗ್ ಬಾಸ್ ಆರಂಭ!
ಎಲ್ಲ ಅಂದುಕೊಂಡಂತೆ ಆಗಿದ್ದರೆ ಇಷ್ಟೋತ್ತಿಗಾಗಲೇ ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಫಿನಾಲೆ ಮುಗಿದು ಹೋಗ್ತಿತ್ತು. ಆದ್ರೆ, ಕೊರೊನಾ ಕಾರಣದಿಂದ ಈ ವರ್ಷ ಶೋ ಆರಂಭವಾಗಲೇ ಇಲ್ಲ. ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಶೋ ಆರಂಭವಾಗದರೂ, ಕನ್ನಡದಲ್ಲಿ ಮಾತ್ರ ಪ್ರಸಾರವಾಗಿರಲಿಲ್ಲ. ಇದು ಸಹಜವಾಗಿ ನಿರಾಸೆ ಮೂಡಿಸಿತ್ತು. ಸದ್ಯದ ಮಾಹಿತಿ ಪ್ರಕಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಗ್ ಬಾಸ್ ಹೊಸ ಆವೃತ್ತಿ ಶುರುವಾಗಲಿದೆ.

ಸೆಲೆಬ್ರಿಟಿಗಳು ಮಾತ್ರ ಭಾಗಿ
ಈ ಹಿಂದಿನ ಆವೃತ್ತಿಯಂತೆ ಸೆಲೆಬ್ರಿಟಿಗಳ ಜೊತೆ ಕಾಮನ್ ಮ್ಯಾನ್ ಕಾನ್ಸೆಪ್ಟ್ ಈ ಸೀಸನ್‌ನಲ್ಲಿ ಇರವುದಿಲ್ಲ ಎಂಬ ವಿಚಾರ ಹೊರಬಿದ್ದಿದೆ. ಬಿಗ್ ಬಾಸ್ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಏಂಟನೇ ಆವೃತ್ತಿಯಲ್ಲಿ ಕೇವಲ ಸೆಲೆಬ್ರಿಟಿಗಳು ಮಾತ್ರ ಸ್ಪರ್ಧಿಗಳಾಗಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಆರಂಭ
ಬಿಗ್ ಬಾಸ್ ಹೊಸ ಆವೃತ್ತಿಗಾಗಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಈಗಾಗಲೇ ಸೆಲೆಬ್ರಿಟಿಗಳ ಪಟ್ಟಿ ಸಿದ್ಧವಾಗಿದ್ದು, ಅವರನ್ನು ಸಂಪರ್ಕಿಸುತ್ತಿದ್ದಾರಂತೆ.

ಕ್ವಾರಂಟೈನ್ ಕಡ್ಡಾಯ
ಅಂದ್ಹಾಗೆ, ಕೊರೊನಾ ಭೀತಿ ಇರುವುದರಿಂದ ಈ ಆವೃತ್ತಿಯಲ್ಲಿ ಪ್ರಕ್ರಿಯೆಗಳು ಸಹ ಸ್ವಲ್ಪ ವಿಶೇಷವಾಗಿರಲಿದೆ. ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸುವ ಮುನ್ನ ಕೆಲವು ದಿನ ಕ್ವಾರಂಟೈನ್ ಮಾಡಲಾಗುವುದು. ಕೊನೆಯ ದಿನ ಪರೀಕ್ಷೆ ಸಹ ಮಾಡಲಾಗುವುದು. ನೆಗಿಟಿವ್ ಬಂದವರನ್ನು ಮಾತ್ರ ಮನೆಯೊಳಗೆ ಕಳುಹಿಸಲಾಗುವುದು.

ಫ್ಯಾಂಟಮ್ ಮುಗಿಸಿದ ಸುದೀಪ್!
ಇತ್ತೀಚಿಗಷ್ಟೆ ಫ್ಯಾಂಟಮ್ ಸಿನಿಮಾದ ಚಿತ್ರೀಕರಣವನ್ನು ಸುದೀಪ್ ಮುಗಿಸಿದ್ದಾರೆ. ಹಲವು ದಿನಗಳಿಂದ ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಸದ್ಯಕ್ಕೆ ಹೈದರಾಬಾದ್‌ನ ಚಿತ್ರೀಕರಣ ಮುಗಿದಿದೆ. ಹಾಗಾಗಿ, ಬಿಗ್ ಬಾಸ್ ಆರಂಭಿಸಲು ಸುದೀಪ್ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯದಲ್ಲೇ ಪ್ರೋಮೋ ಶೂಟ್‌ನಲ್ಲು ಸಹ ಸುದೀಪ್ ಪಾಲ್ಗೊಳ್ಳಲಿದ್ದಾರೆ.


Click it and Unblock the Notifications











