BBK 10: ವಿನಯ್ ಮೇಲೆ ಸಿಂಪಥಿನಾ..? ಭಯನಾ..? ತುಕಾಲಿ ಸಂತು ಕ್ಯಾಪ್ಟನ್ಸಿ ಟಾಸ್ಕ್ ಆಯ್ಕೆ ಸರಿ ಇದ್ಯಾ?
ಬಿಗ್ ಬಾಸ್ ಮನೆಗೆ ಬಂದ ಪ್ರತಿಯೊಬ್ಬರಿಗೂ ಕ್ಯಾಪ್ಟನ್ ಆಗಬೇಕೆಂಬ ಬಯಕೆ ಇದ್ದೆ ಇರುತ್ತದೆ. ಕ್ಯಾಪ್ಟನ್ ಆಗದೆ ಇದ್ದರೆ ಬಿಗ್ ಬಾಸ್ ಮನೆಗೆ ಬಂದಿದ್ದು ವ್ಯರ್ಥ ಎಂಬಂತೆಯೇ ಸರಿ. ಹಾಗಂತ ಎಲ್ಲರೂ ಕ್ಯಾಪ್ಟನ್ ಆಗುವುದಕ್ಕೆ ಆಗುವುದಿಲ್ಲ. ಅದಕ್ಕೆ ಅಂತ ಒಂದಷ್ಟು ಶಕ್ತಿ ಬೇಕಾಗುತ್ತದೆ. ಕ್ಯಾಪ್ಟನ್ ಆಗಬೇಕೆಂದರೆ ಬಿಗ್ ಬಾಸ್ ಕೊಡುವ ಟಾಸ್ಕ್‌ಗಳಲ್ಲಿ ಬಲವನ್ನು ತೋರಿಸಲೇಬೇಕಾಗಿದೆ.
ಈಗಾಗಲೇ ಬಿಗ್ ಬಾಸ್ ಸೀಸನ್ 10ರಲ್ಲಿ ಮೂರು ಜನ ಕ್ಯಾಪ್ಟನ್ ಆಗಿ ಆಗಿದೆ. ಈ ವಾರದ ಕ್ಯಾಪ್ಟನ್ ಆಗುವುದಕ್ಕೆ ವಿನಯ್ ಮನೆತನ ಆಯ್ಕೆಯಾಗಿದೆ. ಹಳ್ಳಿ ಜೀವನದಲ್ಲಿ ಕೊಟ್ಟಂತ ಟಾಸ್ಕ್‌ಗಳಲ್ಲಿ ಸಂಗೀತಾ ಟೀಂ ಸೋತು, ಕ್ಯಾಪ್ಟನ್ ಟಾಸ್ಕ್‌ನಿಂದ ದೂರ ಉಳಿದಿದೆ.

ಟೈಯರ್ ಓಡಿಸುವ ಟಾಸ್ಕ್
ಇವತ್ತಿಗೆ ನೀತೂ ಕ್ಯಾಪ್ಟನ್ ಅವಧಿ ಮುಗಿದಿದೆ. ಹೊಸದಾಗಿ ಕ್ಯಾಪ್ಟನ್ ಆಗುವವರಿಗೆ ಬಿಗ್ ಬಾಸ್ ಟೈಯರ್ ಓಡಿಸುವುದಕ್ಕೆ ಹೇಳಿದ್ದಾರೆ. ಅದರಲ್ಲಿ ಎಂಟು ಜನ ಈ ಸ್ಪರ್ಧೆಯಲ್ಲಿ ಇದ್ದರು. ಟೈಯರ್ ಓಡಿಸಿ ಯಾರು ಮೊದಲು ಗುರಿ ಮುಟ್ಟುತ್ತಾರೋ ಅವರು ಪ್ರತಿ ಸಲ ಒಬ್ಬರನ್ನು ಕ್ಯಾಪ್ಟನ್ಸಿ ಟಾಸ್ಕ್ ನಿಂದ ಒಬ್ಬರನ್ನು ಹೊರಗೆ ಇಡಬಹುದು. ವಿನಯ್ ಅತಿ ಹೆಚ್ಚು ಬಾರಿ ಗೆದ್ದರು. ನೀತೂ, ರಕ್ಷಕ್, ಸ್ನೇಹಿತ್ ನಮ್ರತಾ ಅವರನ್ನು ಹೊರಗೆ ಇಟ್ಟರು.
2ನೇ ಬಾರಿ ಟೈಯರ್ ಆಟದಲ್ಲಿ ಗೆದ್ದ ತುಕಾಲಿ
ಮುಂದೆ ತುಕಾಲಿ ಸಂತೂ ಬೇಗ ಟೈಯರ್ ಹಾಕಿದರು. ಎಲ್ಲರ ನಿರೀಕ್ಷೆ ವಿನಯ್ ರನ್ನೇ ಹೊರಗೆ ಇಡುತ್ತಾರೆ. ಆಗ ಗೆಲುವಿಗೆ ಸುಲಭ ಆಗುತ್ತೆ ಎಂದೇ ನಿರೀಕ್ಷೆ ಮಾಡಿದ್ದರು. ಆದರೆ, ಸಂತೂ ಎರಡು ಬಾರಿ ಅವಕಾಶ ಸಿಕ್ಕಿದಾಗಲೂ ಇಶಾನಿ ಹಾಗೂ ಸಿರಿ ಅವರನ್ನು ಹೊರಗೆ ಇಟ್ಟು, ಆನೆಯೊಂದಿಗೆ ಗುದ್ದಾಡುತ್ತೇನೆ ಎಂದು ವಿನಯ್ ಜೊತೆಗೆ ಸ್ಪರ್ಧೆಗೆ ಇಳಿದಿದ್ದಾರೆ.
ಸಂತುಗೆ ಭಯ ಎಂದ ಡ್ರೋನ್
ವಿನಯ್ ಜೊತೆಗೆ ಸ್ಪರ್ಧೆಗೆ ಇಳಿದಿದ್ದು ಶಕ್ತಿ ಪ್ರದರ್ಶನಕ್ಕೆ ಅಲ್ಲ ಭಯಕ್ಕೆ ಎಂದು ಪ್ರತಾಪ್ ಹೇಳಿದ್ದಾರೆ. ಬೆಡ್ ರೂಮಿನಲ್ಲಿ ವಿನಯ್ ಮನೆತನದವರು ಮಾತನಾಡುತ್ತಾ ಕುಳಿತಿದ್ದರು. ಆಗ ಸಂತೂ ನಿಧಾನಕ್ಕೆ ಅಲ್ಲಿಗೆ ಹೋದರು. ಸೋಫಾ ಮೇಲೆ ಕೂತಿದ್ದ ಪ್ರತಾಪ್ ಹಾಗೂ ವರ್ತೂರು ಸಂತೋಷ್, ತುಕಾಲಿ ಬಗ್ಗೆ ಮಾತನಾಡಿದ್ದಾರೆ. ನೋಡು ಹೇಗೆ ಹೆದರಿಕೊಂಡು ನಿಂತಿದ್ದಾನೆ. ಬೇರೆಯವರನ್ನು ಉಳಿಸಿಕೊಳ್ಳಬೇಕು ಅಲ್ವಾ. ಅವನಿಗೆ ವಿನಯ್ ಕಂಡರೆ ಭಯ ಎಂದೇ ಮಾತನಾಡಿಕೊಂಡಿದ್ದಾರೆ.
ವಿನಯ್ ಆಯ್ಕೆಯ ಬಗ್ಗೆ ತುಕಾಲಿ ಹೇಳಿದ್ದೇನು..?
ತುಕಾಲಿ ಸಂತು ಬೆಡ್ ರೂಮಿಗೆ ಬಂದಾಗ ನಮ್ರತಾ ಒಂದು ಮಾತನ್ನ ಹೇಳಿದ್ದರು. ಫ್ರೆಂಡ್‌ಶಿಪ್‌ಗೋಸ್ಕರ ಈ ರೀತಿ ಮಾಡಿದ್ದಾರೆ ಎಂದಾಗ ವಿನಯ್ ಖುಷಿಯಾಗಿದ್ದಾರೆ. ಅಲ್ಲಿಂದ ಮಾತುಕತೆ ಮುಗಿದ ಮೇಲೆ ತುಕಾಲಿ ಸಂತು, ಪ್ರತಾಪ್ ಮತ್ತು ಸಂತೋಷ್ ಇರುವಲ್ಲಿಗೆ ಬಂದಿದ್ದಾರೆ. ಅಲ್ಲಿಯೂ ಅದೇ ಪ್ರಶ್ನೆ ಕೇಳಿದಾಗ, ತುಕಾಲಿ ಕೊಟ್ಟ ಉತ್ತರ ಪಾಪ ಬಿಡೋ. ಕ್ಯಾಪ್ಟನ್ ಟಾಸ್ಕ್‌ನಲ್ಲಿ ಅವರೇ ಗೆದ್ದರು ಪರವಾಗಿಲ್ಲ. ಆದರೆ, ಅದು ಆಟ. ನಾನು ಅಲ್ಲಿ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ. ಬೆಡ್ ರೂಮಿನಲ್ಲೂ ಇದೇ ಮಾತು ಹೇಳಿದ್ದರು. ಪಾಪ ಕಷ್ಟ ಪಟ್ಟು ಆಡದೆ ಇದ್ದರೆ ನಮಗೆ ಲಕ್ಸುರಿ ಕೂಡ ಸಿಕ್ತಾ ಇರಲಿಲ್ಲ ಅಂತ.


Click it and Unblock the Notifications











