For Quick Alerts
  ALLOW NOTIFICATIONS  
  For Daily Alerts

  BBK9: ಆರ್ಯವರ್ಧನ್‌ಗೆ ನೀವೂ ಯಾವತ್ತೂ ನನ್ನ ತಂದೆಯಾಗಲೂ ಸಾಧ್ಯವಿಲ್ಲ ಎಂದಿದ್ದೇಕೆ ದಿವ್ಯಾ?

  By ಎಸ್ ಸುಮಂತ್
  |

  ಬಿಗ್ ಬಾಸ್ ಮನೆಯಲ್ಲಿ ದಿನೇ ದಿನೆ ಒಂದೊಂದು ಕಾಮಿಡಿ, ಜಗಳ, ಸಣ್ಣ ಸಣ್ಣ ಮನ:ಸ್ತಾಪ ಹೀಗೆ ಎಲ್ಲದೂ ಮಿಕ್ಸ್ ಆಗಿರುತ್ತದೆ. ಬೆಳಗ್ಗೆ ಬಿಗ್ ಬಾಸ್ ಹಾಕುವ ಹಾಡಿನೊಂದಿಗೆ ಶುರುವಾಗುವ ಮನೆ ಸದಸ್ಯರ ದಿನ, ವರ್ಕೌಟ್, ಡ್ಯಾನ್ಸ್, ಅಡುಗೆ, ಟಾಸ್ಕ್, ಒಂದಿಷ್ಟು ಮಾತುಕತೆ ಎನ್ನುವಷ್ಟರಲ್ಲಿ ಮತ್ತದೇ ಪ್ರಪಂಚದಲ್ಲಿ ಕತ್ತಲು ಆವರಿಸಿಕೊಳ್ಳುತ್ತದೆ. ಮತ್ತದೇ ದಿನವನ್ನು ಕಳೆದಿರುತ್ತಾರೆ.

  ಕಳೆದ ಎರಡು ದಿನದಿಂದ ಅಂದ್ರೆ ಮನೆಯಲ್ಲಿ ರಿಯಲ್ ಮತ್ತು ಫೇಕ್ ಆಟ ಶುರುವಾದ ಮೇಲೆ ರಾಜಣ್ಣನ ವರ್ತನೆಯೇ ವಿಚಿತ್ರವಾಗಿತ್ತು. ಮನೆಯೊಳಗಿರುವವರಿಗೆ ಮಾತ್ರವಲ್ಲ, ನೋಡುಗರಿಗೂ ರಾಜಣ್ಣ ಯಾಕೆ ಹೆಂಗೆಂಗೋ ಆಡುತ್ತಿದ್ದಾರಲ್ಲ ಎಂದೆನಿಸುವುದಕ್ಕೆ ಶುರುವಾಗಿತ್ತು. ಹಾಗೋ ಹೀಗೋ ರಾಜಣ್ಣ ಮೊದಲ ಚಾರ್ಮ್‌ಗೆ ಮರಳಿದ್ದಾರೆ. ಆದರೆ, ಈಗೀಗ ಆರ್ಯವರ್ಧನ್ ಶುರು ಮಾಡಿಕೊಂಡಿದ್ದಾರೆ.

  ಒಂದು ಕಡೆ ಗುರೂಜಿ.. ಮತ್ತೊಂದು ಕಡೆ ರಾಜಣ್ಣ..!

  ಒಂದು ಕಡೆ ಗುರೂಜಿ.. ಮತ್ತೊಂದು ಕಡೆ ರಾಜಣ್ಣ..!


  ಆರ್ಯವರ್ಧನ್ ಗುರೂಜಿ ಮನೆಯಲ್ಲಿ ಎಲ್ಲರಿಂದಲೂ ಭೇಷ್ ಎನಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಾರೆ. ಅದರಲ್ಲೂ ನಾಮಿನೇಷನ್ ದಿನವಂತು ಕೇಳುವ ಹಾಗೆಯೇ ಇಲ್ಲ. ಇನ್ನೆಲ್ಲಿ ನಾಮಿನೇಷನ್ ಮಾಡಿ ಬಿಡುತ್ತಾರೋ ಅಂತ ಮನೆ ಮಂದಿಗೆಲ್ಲ ಫೇವರ್ ಆಗಿರುವುದಕ್ಕೆ ಟ್ರೈ ಮಾಡುವುದು ಅಲ್ಲದೆ, ಕೇಳಿದ್ದೆಲ್ಲವನ್ನೂ ಮಾಡಿಕೊಡುವುದಕ್ಕೆ ಟ್ರೈ ಮಾಡುತ್ತಾರೆ. ಯಾರ ಜೊತೆ ಹೇಗಿರಬೇಕು ಎಂದು ತಿಳಿದಿರುವ ಆರ್ಯವರ್ಧನ್ ಇದೀಗ ಏಕಪಾತ್ರಾಭಿನಯ ಮಾಡಿ, ರಾಜಣ್ಣನ ಬಗ್ಗೆ ತಿಳಿಸಿ ಕೊಡುತ್ತಿದ್ದಾರೆ.

  ರಾಜಣ್ಣನ ಬಗ್ಗೆ ಅದ್ಭುತವಾಗಿ ನಟಿಸಿದ ಗುರೂಜಿ

  ರಾಜಣ್ಣನ ಬಗ್ಗೆ ಅದ್ಭುತವಾಗಿ ನಟಿಸಿದ ಗುರೂಜಿ

  ರೂಪೇಶ್ ಶೆಟ್ಟಿಯನ್ನು ಕೂರಿಸಿಕೊಂಡು ರಾಜಣ್ಣ ಮಾಡುವ ಅವಾಂತರಗಳನ್ನು ಗುರೂಜಿ ತಿಳಿಸಿದ್ದಾರೆ. "ರಾಜಣ್ಣ ಧಗಧಗನೇ ಬರುತ್ತಾರೆ. ಆರ್ಯವರ್ಧನ್ ನಾನೊಂದು ಹೇಳುತ್ತೀನಿ ಕೇಳು. ಆಗ ನಾನು ಆಮೇಲೆ ಹೇಳಿ ಎನ್ನುತ್ತೇನೆ. ಅದಕ್ಕೆ ರಾಜಣ್ಣ, ಆರ್ಯವರ್ಧನ್ ಈಗಲೇ ಕೇಳಿ ಎನ್ನುತ್ತಾರೆ. ಎಲ್ಲದನ್ನು ಮರೆತು ಇರೋಣಾ ಎಂದಾಗ ನೀನೆ ಮಾತಾಡಿದ್ದೀಯಾ ಆರ್ಯವರ್ಧನ್ ಇಂಥದ್ದನ್ನೇ ಮಾತನಾಡುವುದಕ್ಕೆ ನೀನು ಬರ್ತಾ ಇದ್ದೀಯಾ. ನಿಂಗೆ ಕಾಲಿಗೆ ಬೀಳುತ್ತೀನಿ ಬಿಡು ಮಾರಾಯ ಎಂದರು ಬಿಡುವುದಿಲ್ಲ. ಏನು ಗೊತ್ತಿಲ್ಲದಂತೆ ಮಗು ಬಿದ್ದು, ಹೊರಳಾಡಿಕೊಂಡು, ಹೆಂಗೆಗೋ ಆಡಿದಾಗ ಬೇಕಿತ್ತಾ ಆರ್ಯವರ್ಧನ್ ಇದು ನಿಂಗೆ ಎನಿಸುತ್ತದೆ. ನೋಡುಗರ ಕಣ್ಣಿಗೆ ಇಲ್ಲಿ ಏನೇನೋ ನಡೆಯುತ್ತಿದೆ ಎನಿಸಬಹುದು. ಆದರೆ, ಅದೆಲ್ಲ ಏನು ಇರಲ್ಲ" ಎಂದು ಕ್ಲಾರಿಟಿ ಕೊಟ್ಟಿದ್ದಾರೆ.

  ಅರುಣ್ ಸಾಗರ್ ಹಾದಿ ಹಿಡಿದ ಆರ್ಯವರ್ಧನ್

  ಅರುಣ್ ಸಾಗರ್ ಹಾದಿ ಹಿಡಿದ ಆರ್ಯವರ್ಧನ್

  ಈ ಮನೆಗೆ ಬಂದಾಗಿನಿಂದ ಅರುಣ್ ಸಾಗರ್ ತಮ್ಮದೇ ಆದ ಸ್ಟೈಲ್‌ನಲ್ಲಿ ಎಲ್ಲರನ್ನು ರಂಜಿಸುತ್ತಾ ಬಂದಿದ್ದಾರೆ. ಜೋಕರ್ ಪಾತ್ರದಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಇವತ್ತು ಕೂಡ ಜೋಕರ್ ರೀತಿಯೇ ನಟಿಸುತ್ತಿದ್ದಾರೆ. ಅವರ ವೇಷ-ಭೂಷಣಗಳೆಲ್ಲಾ ಜೋಕರ್ ರೀತಿಯೇ ಇದೆ. ಇದೀಗ ಆರ್ಯವರ್ಧನ್ ಕೂಡ ಅರುಣ್ ಸಾಗರ್ ದಾರಿ ಹಿಡಿದಿದ್ದು, ಜೋಕರ್ ರೀತಿ ಮೇಕಪ್ ಮಾಡಿಸಿಕೊಳ್ಳುತ್ತಿದ್ದಾರೆ.

  ಅಪ್ಪ ಮಗಳ ವಿಚಾರಕ್ಕೆ ದಿವ್ಯಾ ಹೇಳಿದ್ದೇನು

  ಅಪ್ಪ ಮಗಳ ವಿಚಾರಕ್ಕೆ ದಿವ್ಯಾ ಹೇಳಿದ್ದೇನು

  ಗುರೂಜಿಗೆ ಜೋಕರ್ ರೀತಿಯಲ್ಲಿ ದಿವ್ಯಾ ಬಣ್ಣ ಹಚ್ಚುತ್ತಾ , ತಂದೆ ಮಗಳ ಸಂಬಂಧದ ಬಗ್ಗೆ ತಿಳಿಸಿ ಹೇಳಿದ್ದಾರೆ. "ನಿಮ್ಮನ್ನ ಅಪ್ಪನ ಥರ ನೋಡಿದ್ರೆ, ಅಪ್ಪ ಅಂತ ಒಪ್ಪಿಕೊಂಡರೆ, ಏನನ್ನು ಹೇಳುವುದಕ್ಕೆ ಆಗಲ್ಲ. ನಿಮ್ಮ ಮಗಳ ಸ್ಥಾನದಲ್ಲಿ ನಾನಿರೋದಕ್ಕೆ ಆಗಲ್ಲ. ನಮ್ಮ ಅಪ್ಪನ ಸ್ಥಾನ ನೀವೂ ತುಂಬೋದಕ್ಕೆ ಆಗಲ್ಲ. ನಮ್ಮ ಅಪ್ಪ ಆಗಿದ್ರೆ, ಆ ರೀತಿ ನನ್ನನ್ನು ಹೊರಗೆ ಕಳುಹಿಸುತ್ತಾರಾ ಹೇಳಿ ಅಂತ ಅರ್ಥ ಮಾಡಿಸುತ್ತಿದ್ರು." ಎಂದು ದಿವ್ಯಾ ಹೇಳಿದ್ದಾರೆ.

  English summary
  Bigg Boss Kannada November 11th Episode Written Update. Here is the details about Divya explaining father and daughter relationship to Aryavardhan.
  Friday, November 11, 2022, 23:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X