BBK9: ಕಾಳಜಿ & ಸ್ವಾರ್ಥಿಯ ಲೀಸ್ಟ್ ನಲ್ಲಿದ್ದವರು ಯಾರು? ಸುದೀಪ್ ಮೂಡ್ ಆಫ್ ಮಾಡಿಕೊಂಡಿದ್ದೇಕೆ?
ಶನಿವಾರ ಮತ್ತು ಭಾನುವಾರದ ಕಾರ್ಯಕ್ರಮದಲ್ಲಿ ಹಲವು ವಿಚಾರಗಳು ಗಮನ ಸೆಳೆಯುತ್ತವೆ. ಒಂದು ಕಿಚ್ಚನ ಚಪ್ಪಾಳೆ ಯಾರಿಗೆ ಸಿಗುತ್ತದೆ ಎಂಬುದು, ಹೊಗಳಿಕೆ ಯಾರಿಗೆ, ತೆಗಳಿಕೆ ಯಾರಿಗೆ ಹೀಗೆ ನಾನಾ ವಿಚಾರಗಳು ನೋಡುಗರ ಆಸಕ್ತಿಯನ್ನು ಹೆಚ್ಚಿಸುತ್ತದೆ. ವಾರವಿಡಿ ಮನೆ ಮಂದಿ ಅವರವರೇ ಮಾತಾಡಿಕೊಳ್ಳಬೇಕು, ಅವರವರೇ ನಗಬೇಕು. ಬಿಗ್ ಬಾಸ್ ಮನೆಯಲ್ಲಿ ನಗುಗಿಂತ ಮಾತುಗಳೇ ಹೆಚ್ಚಾಗಿರುತ್ತದೆ.
ಮನೆ ಮಂದಿಯೆಲ್ಲಾ ಮನಸ್ಸಾರೆ ನಗುವುದು ವಾರದ ಕಥೆಯಲ್ಲಿಯೇ. ಅದರಲ್ಲೂ Yes or No ಗೇಮ್ ನಲ್ಲಿ ಬಿದ್ದು ಬಿದ್ದು ನಗುತ್ತಾರೆ. ಮನೆ ಮಂದಿಯ ಬಗ್ಗೆಯೇ ಕಿಚ್ಚ ಪ್ರಶ್ನೆಗಳನ್ನು ಕೇಳುತ್ತಾರೆ. ಈ ವಾರ ಏನೆಲ್ಲಾ ಆಗಿರುತ್ತೆ ಅದನ್ನು ಕೇಳಿ, Yes or No ಉತ್ತರ ಕೊಡುವಾಗ ಮನೆ ಸದಸ್ಯರು ತುಂಬಾನೇ ಎಂಜಾಯ್ ಮಾಡುತ್ತಾರೆ. ಆದ್ರೆ ಈ ವಾರ ಕಿಚ್ಚನಿಗೆ ಬೇಸರವಾಗಿ, ಅದೇ ಸ್ಟಾಪ್ ಆಗಿದೆ.

ಕಾವ್ಯಾ ಕಾಳಜಿಯಾದರೆ ರಾಜಣ್ಣ ಸ್ವಾರ್ಥಿ!
ಸಹಜವಾಗಿ ಮನೆ ಮಂದಿಗೆ ಅವರವರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಬಿಗ್ ಬಾಸ್ ಒಂದೊಂದು ರೀತಿಯಲ್ಲಿ ಗೇಮ್ ಕೊಡುತ್ತಾರೆ. ಅವರ ಬಗ್ಗೆ ಏನು ಅಭಿಪ್ರಾಯ ಇದೆ ಎಂಬುದನ್ನು ಆ ಟಾಸ್ಕ್ ಮೂಲಕ ತಿಳಿದುಕೊಳ್ಳಬಹುದು. ಈ ವಾರವು ಅಂತ ಟಾಸ್ಕ್ ನೀಡಲಾಗಿತ್ತು. ಅದರಲ್ಲಿ ಕಾಳಜಿ ಎಂಬುದನ್ನು ಕಾವ್ಯಶ್ರೀಗೆ ಕೊಡಲಾಯಿತು, ಸ್ವಾರ್ಥಿ ಎಂಬುದನ್ನು ಹೆಚ್ಚು ಜನ ರಾಜಣ್ಣಗೆ ನೀಡಲಾಗಿತ್ತು. ಆದರೆ ಇದರ ನಂತರ ನಡೆದಿದ್ದು ಕಿಚ್ಚನಿಗೆ ಬೇಸರ ತರಿಸಿತ್ತು.

ನಿಯಮ ಮೀರಿದರಾ ರಾಜಣ್ಣ..?
ಕಾಳಜಿ ಮತ್ತು ಸ್ವಾರ್ಥದ ಬಗ್ಗೆ ಹೇಳುವಾಗ ಫೋಟೋ ಆಯ್ಕೆ ಮಾಡಿಕೊಂಡು ಹೇಳಬೇಕು. ರಾಜಣ್ಣ ಸ್ವಾರ್ಥಿ ಎಂದು ಬಹುಮತ ಬಂದ ಕಾರಣ, ರಾಜಣ್ಣ ಅದಾಗಲೇ ರೊಚ್ಚಿಗೆದ್ದಿದ್ದರು. ಅವರ ಸರದಿ ಬಂದಾಗ, ಯಾರ ಫೋಟೋವನ್ನು ಸೆಲೆಕ್ಟ್ ಮಾಡದ ಹಾಗೆ ವಿವರಣೆ ನೀಡುವುದಕ್ಕೆ ರೆಡಿಯಾಗಿದ್ದರು. ಆಗ ಸುದೀಪ್ ಅವರು, ಮೊದಲು ಫೋಟೋ ಆಯ್ಕೆ ಮಾಡಿ ಎಂದರು. ಆಗಲು ರಾಜಣ್ಣ ಇಲ್ಲ ಎಂದರು. ಮತ್ತೆ ಹೇಳಿದಾಗ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಫೋಟೋ ಆಯ್ಕೆ ಮಾಡಿಕೊಂಡು, ಕಾಳಜಿ ರೂಪೇಶ್, ಸ್ವಾರ್ಥಿ ರಾಕೇಶ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಬರ್ಗಿ ಸ್ವಾರ್ಥಿಯಾಗಿದ್ದು ಯಾಕೆ ಗೊತ್ತಾ..?
ಹೀಗೆ ಎಲ್ಲರ ಅಭಿಪ್ರಾಯ ಸಂಗ್ರಹವಾದ ಮೇಲೆ ಯಾರಿಗಾದರೂ ಮಾತನಾಡಬೇಕು ಎನಿಸುತ್ತಿದೆಯಾ ಎಂದು ಕಿಚ್ಚ ಕೇಳಿದ್ದಾರೆ. ಆಗ ಪ್ರಶಾಂತ್ ಸಂಬರ್ಗಿ ಕೈ ಎತ್ತಿ, ರೂಪೇಶ್ ಶೆಟ್ಟಿ ಬಗ್ಗೆ ಎಗರಾಡಿದ್ದಾರೆ. ನಂತರ ಅದಕ್ಕೆ ಉತ್ತರ ಕೊಟ್ಟ ರೂಪೇಶ್ ಶೆಟ್ಟಿ, ಎಲ್ಲದ್ದಕ್ಕೂ ಸ್ವಾರ್ಥದಲ್ಲಿಯೇ ಯೋಚಿಸುತ್ತಾರೆ. ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ. ಹೀಗಾಗಿ ಸ್ವಾರ್ಥ ಕೊಟ್ಟೆ ಎಂದಿದ್ದಾರೆ.

ಅರುಣ್ ಸಾಗರ್ ಅವರಿಗೆ ಭಯವಾಯಿತಾ..?
ಬಳಿಕ ತನ್ನ ಒಪಿನಿಯನ್ ಹೇಳುವುದಕ್ಕೆ ಕೈ ಮೇಲೆ ಮಾಡಿದ ಅರುಣ್ ಸಾಗರ್, ಮನೆಯಲ್ಲಿ ಎಲ್ಲರೂ ಕಾಳಜಿ ಮಾಡುತ್ತಾರೆ. ಆದ್ರೆ ಅದರಲ್ಲಿ ಒಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಾದ ಕಾರಣ ಕಾವ್ಯಾಳನ್ನು ಆಯ್ಕೆ ಮಾಡಿದ್ದು. ನನಗೆ ಗೊಬ್ಬರಗಾಲ, ಅನುಪಮಾ, ದಿವ್ಯಾ ಎಲ್ಲರೂ ಕಾಳಜಿಯಿಂದಾನೇ ನೋಡಿಕೊಂಡಿದ್ದಾರೆ ಎಂದು ಯಾರಿಗೂ ಹರ್ಟ್ ಆಗಬಾರದು ಎಂದು ವಿವಾರಣೆ ನೀಡಿದ್ದಾರೆ.

ಜಗಳವೇ ಬೇಸರಕ್ಕೆ ಕಾರಣವಾಯ್ತಾ..?
ಹೀಗೆ ಸ್ವಾರ್ಥ ಮತ್ತು ಕಾಳಜಿ ವಿಚಾರಕ್ಕೆ ಕಿಚ್ಚ ಕೂಡ ವಿವರಣೆ ನೀಡಿದ್ದಾರೆ. ಈಗ ಬಿಗ್ ಬಾಸ್ ವಿನ್ನರ್ ಅಂತ ಘೋಷಿಸುವುದು ಒಬ್ಬರನ್ನು ಮಾತ್ರ. ಅದಕ್ಕೂ ಮುನ್ನ ಇವರು ತುಂಬಾ ಚೆನ್ನಾಗಿ ಆಡಿದ್ದಾರೆ, ಆದರೆ ವಿನ್ನರ್ ಆಗುತ್ತಾ ಇರುವುದು ಇವರು ಎಂದೇ ಅನೌನ್ಸ್ ಮಾಡುತ್ತೇವೆ ಎಂದು ಮನೆ ಮಂದಿಗೆ ಬೇಸರವಾಗದಂತೆ ಹುಮ್ಮಸ್ಸು ತುಂಬಿದ್ದಾರೆ. ಆದ್ರೆ ಇದರ ನಡುವೆ ಕೆಲವೊಂದು ನಡವಳಿಕೆಗಳು ಕಿಚ್ಚ ಸುದೀಪ್ ಗೆ ಬೇಸರ ತಂದಿದೆ ಎನಿಸಿದೆ. ಒಂದು ಬ್ರೇಕ್ ಆದ ಮೇಲೆ ಕಿಚ್ಚ ಸುದೀಪ್, ಇವತ್ತು Yes / No ರೌಂಡ್ ಇರುವುದಿಲ್ಲ. ನಾನು ಕಾಮಿಡಿ ಮಾಡುವ ಮೂಡ್‌ನಲ್ಲಿಯೂ ಇಲ್ಲ. ಕ್ಷಮಿಸಿ ಎಂದು ನಾಮಿನೇಷನ್ ರೌಂಡ್ ಕಡೆಗೆ ಹೋಗಿದ್ದಾರೆ.


Click it and Unblock the Notifications











