For Quick Alerts
  ALLOW NOTIFICATIONS  
  For Daily Alerts

  BBK9: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರ ಸುಳಿವು ನೀಡಿದ್ದು ಆಕೆಯ ನೇಲ್ ಪಾಲಿಶ್, ಉಂಗುರ!

  By ಎಸ್ ಸುಮಂತ್
  |

  ಬಿಗ್ ಬಾಸ್ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮನೆ ಮಂದಿಗೆ ಉಳಿದಿರುವುದು ಇನ್ನು ನಾಲ್ಕು ವಾರಗಳು ಮಾತ್ರ. ಫೈನಲ್‌ಗೆ ಹೋಗುವುದು ಮೂವರು ಮಾತ್ರ. ಆದ್ರೆ ಈಗ ಹನ್ನೊಂದು ಜನ ಇದ್ದಾರೆ. ಇನ್ನುಳಿದ ಮೂರು ವಾರದಲ್ಲಿ ಇಬ್ಬರಿಬ್ಬರು ನಾಮಿನೇಟ್ ಆಗಬಹುದು. ಇದರ ಜೊತೆಗೆ ಹೊಸದಾಗಿ ಇನ್ನೊಬ್ಬರು ಅದು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಸೇರಿಕೊಂಡಿದ್ದಾರೆ.

  ಬಿಗ್ ಬಾಸ್ ಸೀಸನ್‌ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಸಾಮಾನ್ಯವಾಗಿರುತ್ತದೆ. ಬಿಗ್ ಬಾಸ್ ಮಧ್ಯದಲ್ಲಿ ಬಂದು ಸೇರುತ್ತಾರೆ. ಈ ಬಾರಿ ಪ್ರಶಾಂತ್ ಸಂಬರ್ಗಿ ಒಳಗೆ ಇರುವ ಕಾರಣ ಚಂದ್ರಚೂಡ್ ಹೋಗಬಹುದು ಎನ್ನಲಾಗುತ್ತಿತ್ತು. ಜೊತೆಗೆ ಓಟಿಟಿ ಸೀಸನ್‌ನಲ್ಲಿ ಮನರಂಜನೆ ನೀಡಿದ ಸೋನು ಗೌಡ ಹೋಗಬಹುದು ಎಂದು ಅಂದಾಜಿಸಲಾಗಿತ್ತು.

  ಬಿಗ್‌ಬಾಸ್ ಮನೆ ಸದಸ್ಯರಿಗೆ ಅರಣ್ಯವಾಸ, ಮನೆಗೆ ಎಂಟ್ರಿ ಕೊಟ್ಟ ಹೊಸ ಸ್ಪರ್ಧಿ! ಯಾರದು?ಬಿಗ್‌ಬಾಸ್ ಮನೆ ಸದಸ್ಯರಿಗೆ ಅರಣ್ಯವಾಸ, ಮನೆಗೆ ಎಂಟ್ರಿ ಕೊಟ್ಟ ಹೊಸ ಸ್ಪರ್ಧಿ! ಯಾರದು?

  ಇವರೊಂದಿಗೆ ಮನೆಯಿಂದ ಹೊರ ಬಂದ ಮೇಲೆ ಸಾನ್ಯಾ ಎಲ್ಲೂ ಕಾಣಿಸಿಕೊಳ್ಳದ ಕಾರಣ ಸಾನ್ಯಾ ಎಂಟ್ರಿಯಾಗಬಹುದು ಎನ್ನಲಾಗುತ್ತಿತ್ತು. ಆದರೆ, ಈ ಲೆಕ್ಕಚಾರ ಈಗ ಉಲ್ಟಾ ಆಗಿದೆ. ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟವರೆ ಬೇರೆಯಾಗಿದ್ದಾರೆ.

  ಬಿಗ್ ಬಾಸ್ ಮನೆ ಕಾಡಾದ ಕಥೆ

  ಬಿಗ್ ಬಾಸ್ ಮನೆ ಕಾಡಾದ ಕಥೆ

  ಬಿಗ್ ಬಾಸ್‌ನಲ್ಲಿ ಆಗಾಗ ಊಹೆಯನ್ನೇ ಮಾಡದಂತ ಘಟನೆಗಳು ನಡೆಯುತ್ತಿರುತ್ತವೆ. ನಿರೀಕ್ಷೆಗೆ ನಿಲುಕದಂತ ಟಾಸ್ಕ್‌ಗಳನ್ನು ನೀಡುತ್ತಾ ಇರುತ್ತದೆ. ಯಾವ ಸೂಚನೆಯನ್ನೂ ನೀಡದೆ ರಾತ್ರೋ ರಾತ್ರಿ ಮನೆಗೆ ಬೀಗವನ್ನು ಹಾಕುತ್ತೆ. ಸೂಚನೆ ನೀಡದೆ ಸಪ್ರೈಸ್ ಆಗುವಂತೆ ಮನೆಯನ್ನು ಅಲಂಕಾರ ಕೂಡ ಮಾಡುತ್ತೆ. ಇವತ್ತು ಬಿಗ್ ಬಾಸ್ ಮನೆ ಮಂದಿಗೆ ಎಲ್ಲಾ ಕಡೆಯಿಂದಾನೂ ಲಾಕ್ ಮಾಡಿ, ಕಾಡಲ್ಲಿ ವಾಸಿಸುವಂತೆ ಮಾಡಿದೆ.

  ಸೌದೆ ಒಲೆಯಲ್ಲಿಯೇ ಅಡುಗೆ

  ಸೌದೆ ಒಲೆಯಲ್ಲಿಯೇ ಅಡುಗೆ

  ಹಿಂದಿನ ಕಾಲದಲ್ಲಿ ಹಳ್ಳಿಗಳ ಜೀವನವಾಗಲಿ, ಕಾಡಿನಲ್ಲಿ ವಾಸಿಸುವವರ ಜೀವನವಾಗಲಿ ಕಷ್ಟಕರವಾಗಿತ್ತು. ಕಾಡಿನೊಳಗೆ ಸಿಕ್ಕ ಸೌದೆಗಳನ್ನು ತಂದು ಅಡುಗೆ ಮಾಡಿಕೊಳ್ಳಬೇಕಿತ್ತು. ಬಿಗ್ ಬಾಸ್ ಮನೆಯ ಮಂದಿಗೆ ಈಗ ಕಾಡಿನ ಪರಿಚಯ ಮಾಡಿಕೊಡುತ್ತಿದ್ದಾರೆ ಬಿಗ್ ಬಾಸ್. ಬೆಳಗ್ಗೆ ಎದ್ದು ಮನೆ ಮಂದಿಗೆ ಬಿಗ್ ಬಾಸ್ ಶಾಕ್ ಕೊಟ್ಟಿದೆ. ʻಮನೆಯ ಎಲ್ಲಾ ಭಾಗಗಳನ್ನು ಲಾಕ್ ಮಾಡಲಾಗಿದೆ. ಮನೆಯ ಸದಸ್ಯರು ಕಾಡಾಗಿರುವ ಗಾರ್ಡನ್ ಏರಿಯಾದಲ್ಲಿಯೇ ಇರಬೇಕು. ಊಟ, ತಿಂಡಿ ಎಲ್ಲವೂ ಇಲ್ಲೆ ಆಗಬೇಕುʼ ಎಂದು ಸೂಚನೆ ನೀಡಿದೆ. ಮನೆ ಮಂದಿ ಅಲ್ಲಿಯೇ ಒಂದು ಒಲೆ ಹಾಕಿ, ಕೊಳವೆಯಲ್ಲಿ ಊದುತ್ತಾ ಅಡುಗೆ ಮಾಡುತ್ತಿದ್ದಾರೆ.

  ಮನೆಯವರಿಗೆ ತರಕಾರಿ ಕೊಟ್ಟಿದ್ದು ಯಾರು?

  ಮನೆಯವರಿಗೆ ತರಕಾರಿ ಕೊಟ್ಟಿದ್ದು ಯಾರು?

  ಬಿಗ್ ಬಾಸ್ ಮನೆ ಮಂದಿಗೆ ಅಷ್ಟು ಸುಲಭದಲ್ಲಿ ಏನನ್ನು ನೀಡುವುದಿಲ್ಲ. ಬಿಗ್ ಬಾಸ್ ಮನೆಯಲ್ಲಿ ಒಂದನ್ನು ಪಡೆಯಬೇಕು ಎಂದರೆ ಅದಕ್ಕೋಸ್ಕರ ಕಷ್ಟಪಡಲೇಬೇಕಾಗುತ್ತದೆ. ಈ ಬಾರಿ ಅಡುಗೆ ಮಾಡುವುದಕ್ಕೆ ತರಕಾರಿ ಬೇಕಲ್ಲವಾ..? ಆ ತರಕಾರಿಗೂ ಟಾಸ್ಕ್ ಒಂದನ್ನು ನೀಡಿತ್ತು. ತರಕಾರಿ ಪಡೆಯಲು ಆ ಟಾಸ್ಕ್‌ನಲ್ಲಿ ಗೆಲ್ಲಲೇಬೇಕಿತ್ತು. ಆದರೆ ಮನೆಯವರಲ್ಲಿ ಯಾರೂ ಕೂಡ ಆ ಟಾಸ್ಕ್ ಗೆಲ್ಲಲು ಆಗಲಿಲ್ಲ. ಕಡೆಗೆ ತರಕಾರಿಯನ್ನು ವೈಲ್ಡ್ ಕಾರ್ಡ್ ಎಂಟ್ರಿಯ ಸದಸ್ಯೆ ಗೆದ್ದಿದ್ದಾರೆ.

  ಮತ್ತೆ ಮರಳಿದ ದೀಪಿಕಾ ದಾಸ್

  ಮತ್ತೆ ಮರಳಿದ ದೀಪಿಕಾ ದಾಸ್

  ಈ ವಾರ ಅಚಾನಕ್ಕಾಗಿ ದೀಪಿಕಾ ದಾಸ್ ಮನೆಯಿಂದ ಹೊರ ಬಂದಿದ್ರು. ವೇದಿಕೆ ಮೇಲೆ ಕಿಚ್ಚ ಸುದೀಪ್ ದೀಪಿಕಾ ದಾಸ್ ಅವರನ್ನು ಮಾತಾಡಿಸಿದ್ದರು. ಇದೆಲ್ಲ ಬೆಳವಣಿಗೆ ನೋಡಿ ದೀಪಿಕಾ ದಾಸ್ ಹೊರಗೆ ಬಂದೇ ಬಿಟ್ಟರು ಎಂದುಕೊಳ್ಳಲಾಗಿತ್ತು. ಆದ್ರೆ ಆಶ್ಚರ್ಯವೆಂಬಂತೆ ದೀಪಿಕಾ ದಾಸ್ ಮತ್ತೆ ಮನೆಗೆ ಎಂಟ್ರಿ ಪಡೆದಿದ್ದಾರೆ. ಇಂದು ಮನೆ ಸದಸ್ಯರು ಗೆಲ್ಲದ ಆಟವನ್ನು ದೀಪಿಕಾ ಗೆದ್ದು ತೋರಿಸಿದ್ದಾರೆ. ಆಗ ದೀಪಿಕಾ ಕೈ ಬೆರಳನ್ನು ಮಾತ್ರ ತೋರಿಸಲಾಗಿದೆ. ಅದರಲ್ಲಿ ಶನಿವಾರ ದೀಪಿಕಾ ಹಾಕಿದ್ದ ನೇಲ್ ಪಾಲಿಶ್ ಹಾಗೆಯೇ ಇದೆ. ಇನ್ನು ಯಾವಾಗಲೂ ಹಾಕುವ ರಿಂಗ್ ಕೂಡ ಬೆರಳಲ್ಲಿ ಕಾಣುತ್ತಿದೆ. ಹೀಗಾಗಿ ದೀಪಿಕಾ ದಾಸ್ ಮತ್ತೆ ಎಂಟ್ರಿ ಕೊಟ್ಟಿದ್ದಾರೆ ಅಂತ ನೆಟ್ಟಿಗರು ಮಾತಾಡಿಕೊಳ್ಳುತ್ತಿದ್ದಾರೆ.

  English summary
  Bigg Boss Kannada November 22nd Episode Written Update. Here Is The Details About Deepika Das Wildcard Entry.
  Tuesday, November 22, 2022, 17:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X