twitter
    For Quick Alerts
    ALLOW NOTIFICATIONS  
    For Daily Alerts

    BBK9: ಕಾಡಿನ ಊಟ ಉಂಡು ಹೌಹಾರಿದ ಮನೆ ಮಂದಿ: ರೂಪೇಶ್ ಗೋಳೋ ಕೇಳೋರಿಲ್ಲ..!

    By ಎಸ್ ಸುಮಂತ್
    |

    ಅನ್ನದ ಬೆಲೆ ತಿಳಿಯಬೇಕು ಅಂದ್ರೆ ಹಸಿವಿರಬೇಕು ಅಂತಾರೆ. ಹಸಿವಾದಾಗ ಅಳಸಿದ ಅನ್ನವೂ ಸಲೀಸಾಗಿ ಹೊಟ್ಟೆಯೊಳಕ್ಕೆ ಹೋಗಿ ಬಿಡುತ್ತದೆ. ಅಂತದ್ದೊಂದು ಅನ್ನದ ಮಹತ್ವವನ್ನು ಸಾರಿದ್ದು ಇಂದಿನ ಬಿಗ್ ಬಾಸ್. ಸಿಟಿಯಲ್ಲಿ ರಾಯಲ್ ಲೈಫ್ ಲೀಡ್ ಮಾಡುತ್ತಾ, ಒಳ್ಳೊಳ್ಳೆ ಹೊಟೇಲ್‌ಗಳಲ್ಲಿ ತಿನ್ನುತ್ತಾ ಇದ್ದವರಿಗೆ ಬಿಗ್ ಬಾಸ್ ಕಠಿಣ ಟಾಸ್ಕ್ ಒಂದನ್ನು ನೀಡಿದೆ. ಅಡುಗೆ ಮಾಡಲು ಏನು ಇಲ್ಲದೆ ಇದ್ದಾಗ ಸಿಕ್ಕಿದ್ದನ್ನು ತಿನ್ನುವುದು ಹೇಗೆ ಎಂಬುದನ್ನು ಕಲಿಸಿಕೊಟ್ಟಿದ್ದಾರೆ.

    ಇಂದಿನಿಂದ ಮೂರು ದಿನಗಳ ಕಾಲ ಬಿಗ್ ಬಾಸ್ ಮನೆ ಸದಸ್ಯರಿಗೆ ಕಾಡಿನಲ್ಲಿ ವಾಸ ಮಾಡುವಂತೆ ಬಿಗ್ ಬಾಸ್ ಆದೇಶ ನೀಡಿದೆ. ಮನೆಯೊಳಗಡೆ ಎಲ್ಲವನ್ನು ಲಾಕ್ ಮಾಡಲಾಗಿದೆ. ಗಾರ್ಡನ್ ಏರಿಯಾದಲ್ಲಿಯೇ ಜೀವನ. ಕಾಡಿನಂತೆ ಎಲ್ಲಾ ಸಿದ್ಧತೆ ಮಾಡಿದ್ದು, ಸೌದೆ ಒಲೆಯಲ್ಲಿಯೇ ಅಡುಗೆ ಮಾಡಿ ತಿನ್ನಬೇಕು.

    ಕಾಡಿನ ಊಟಕ್ಕೆ ಸುಸ್ತೋ ಸುಸ್ತು

    ಕಾಡಿನ ಊಟಕ್ಕೆ ಸುಸ್ತೋ ಸುಸ್ತು

    ಊಟಕ್ಕೆಂದು ಬೇರೆ ಏನನ್ನು ಬಿಗ್ ಬಾಸ್ ನೀಡಿಲ್ಲ. ಬೆಳಗ್ಗಿನ ತಿಂಡಿಗೆ ಮನೆಯಲ್ಲಿ ಇದ್ದ ಅಕ್ಕಿಯನ್ನು ಬಳಸಿ ಅನ್ನ ಮಾಡಿ, ಬೇಳೆ ಬೇಯಿಸಿ, ಅನ್ನ ಬೇಳೆ ಮಿಕ್ಸ್ ಮಾಡಿ ಎಲ್ಲರಿಗೂ ನೀಡಲಾಗಿದೆ. ಅದನ್ನೇ ಮೃಷ್ಟಾನ್ನ ಬೋಜನ ಎಂದು ಎಲ್ಲರೂ ಸವಿದಿದ್ದಾರೆ. ಆದರೆ ಮಧ್ಯಾಹ್ನಕ್ಕೆ ಏನು ಮಾಡುವುದು ಎಂದು ಮನೆಯವರೆಲ್ಲಾ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಅದರಲ್ಲೂ ಇನ್ನು ಎರಡು ದಿನಗಳ ಕಾಲ ಇದೇ ವನವಾಸದಲ್ಲಿ ಇರಬೇಕು ಎಂಬ ಆತಂಕ ಮನೆ ಮಂದಿಗೆ ಶುರುವಾಗಿದೆ.

    ಮಧ್ಯಾಹ್ನಕ್ಕೆ ಬಂತು ಕ್ಯಾಪ್ಸಿಕಮ್ ರೈಸ್ ಬಾತ್

    ಮಧ್ಯಾಹ್ನಕ್ಕೆ ಬಂತು ಕ್ಯಾಪ್ಸಿಕಮ್ ರೈಸ್ ಬಾತ್

    ತರಕಾರಿ ಬೇಕು ಎಂದರೆ ಬಿಗ್ ಬಾಸ್ ಕೊಟ್ಟ ಟಾಸ್ಕ್ ಗೆಲ್ಲಬೇಕಿತ್ತು. ಆದ್ರೆ ಮನೆ ಮಂದಿ ಸೋತರು. ಆ ಟಾಸ್ಕ್ ಅನ್ನು ಆಡಿ ದೀಪಿಕಾ ದಾಸ್ ಗೆದ್ದಿದ್ದಾರೆ. ಮನೆಯವರಿಗೆಲ್ಲಾ ಮೂರು ಥರದ ತರಕಾರಿ ಸಿಕ್ಕಿದೆ. ತರಕಾರಿ ಬಂದ ಕೂಡಲೇ ದಿವ್ಯಾ ಗೆದ್ದಿದ್ದಾರೆ ಎಂದು ಎಲ್ಲರೂ ಕಂಗ್ರಾಟ್ಸ್ ಹೇಳಿದ್ದರು. ಆದ್ರೆ ಅಲ್ಲಿ ಗೆದ್ದಿದ್ದು ದೀಪಿಕಾ. ಅದೇ ತರಕಾರಿಯಲ್ಲಿ ಮಧ್ಯಾಹ್ನಕ್ಕೆ ಕ್ಯಾಪ್ಸಿಕಮ್ ರೈಸ್ ಮಾಡಲಾಗಿದೆ. ಕ್ಯಾಪ್ಸಿಕಮ್ ಸುಟ್ಟು, ಅದಕ್ಕೊಂದಿಷ್ಟು ಉಪ್ಪನ್ನು ಹಾಕಿ, ಅನ್ನಕ್ಕೆ ಮಿಕ್ಸ್ ಮಾಡಿ ತಿಂದಿದ್ದಾರೆ.

    ಇಂಡಿಯಾದಲ್ಲಿಯೇ ಇಂಥ ಊಟ ಇಲ್ಲವಂತೆ

    ಇಂಡಿಯಾದಲ್ಲಿಯೇ ಇಂಥ ಊಟ ಇಲ್ಲವಂತೆ

    ಕ್ಯಾಪ್ಸಿಕಮ್‌ ರೈಸ್ ಎಂದಾಕ್ಷಣಾ ಎಲ್ಲಾ ರೀತಿಯ ಮಸಾಲೆ ಮಿಶ್ರಿತ ರೈಸ್ ಎಂದುಕೊಳ್ಳುವ ಹಂಗಿಲ್ಲ. ಬದಲಿಗೆ ಅದಕ್ಕೆ ಒಂದಿಷ್ಟು ಉಪ್ಪು ಅಷ್ಟೇ ಬೆರೆತಿದೆ. ಇದನ್ನು ನೋಡಿದ ರೂಪೇಶ್ ಶೆಟ್ಟಿ, ಬಿಗ್ ಬಾಸ್ ಕ್ಯಾಮರಾ ಮುಂದೆ ಬಂದು, ಈ ರೀತಿಯ ಫುಡ್ ಇಂಡಿಯಾದಲ್ಲಿಯೇ ಇಲ್ಲ ಎನಿಸುತ್ತದೆ. ಇದರಲ್ಲಿ ಏನಿದೆ. ಬರಿ ಉಪ್ಪು ಹಾಕಿರೋದು. ಇದನ್ನು ಹೇಗೆ ತಿನ್ನಬೇಕು. ಬಿಗ್ ಬಾಸ್ ಪ್ಲೀಸ್ ಅರ್ಥ ಮಾಡಿಕೊಳ್ಳಿ. ಇದೇ ಊಟ ತಿಂದರೆ ನಾಳೆ ಶಕ್ತಿ ಇರುವುದಿಲ್ಲ. ಮಂಗಳೂರು ಕಡೆ ಒಣ ಮೀನು ಸಿಗುತ್ತೆ. ಬರೀ ಹತ್ತು ರೂಪಾಯಿ. ಅದನ್ನು ಕಳ್ಸಿ ಉಪ್ಪಿನಕಾಯಿ ಆದರೂ ಕಳುಹಿಸಿ ಎಂದು ಗೋಳು ತೋಡಿಕೊಂಡಿದ್ದಾರೆ.

    ಅರುಣ್ ಸಾಗರ್ ಹೇಗೆ ತಿಂದರು?

    ಅರುಣ್ ಸಾಗರ್ ಹೇಗೆ ತಿಂದರು?

    ಅನ್ನಕ್ಕೆ ಉಪ್ಪು, ಕ್ಯಾಪ್ಸಿಕಮ್‌ಗೆ ಉಪ್ಪು. ಇಷ್ಟನ್ನ ಹೇಗೆ ತಿನ್ನಬೇಕು. ಪಾಪ ಮನೆ ಮಂದಿ ಅದನ್ನೇ ಸವಿದಿದ್ದಾರೆ. ಗೊಬ್ಬರಗಾಲಗೆ ಒಳಗೆ ಹೋಗುತ್ತಿಲ್ಲ. ಆದರೂ ಕಷ್ಟಪಟ್ಟು ತಿನ್ನುತ್ತಿದ್ದಾರೆ. ಹೇಗಿದೆ ಅಂದ್ರೆ ಸೂಪರ್ ಆಗಿದೆ ಅಂತೆಲ್ಲಾ ಹೊಗಳುತ್ತಿದ್ದಾರೆ. ಇನ್ನು ಅರುಣ್ ಸಾಗರ್ ಕೂಡ ಊಟ ಚೆನ್ನಾಗಿದೆ ಎಂದು ಹೊಗಳಿಕೊಂಡೆ ತಿಂದಿದ್ದಾರೆ. ಎಲ್ಲರಿಗೂ ಇದೇ ಗಟ್ಟಿ ಎಂಬುದು ಗೊತ್ತಿರುವ ಕಾರಣ ಏನು ಮಾತನಾಡದೆ ಎಲ್ಲರೂ ತಿಂದು ಮುಗಿಸಿದ್ದಾರೆ.

    English summary
    Bigg Boss Kannada November 22nd Episode Written Update On Roopesh Shetty. Here is the details about food matter.
    Wednesday, November 23, 2022, 5:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X