Don't Miss!
- News
'ಈ ಬಾರಿ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ' ಕೊಡಿಶ್ರೀಗಳ ರಾಜಕೀಯ ಭವಿಷ್ಯ
- Sports
ಲೂನಾ ಸವಾರಿ ಮಾಡುವುದನ್ನು ನಿಲ್ಲಿಸು ಎಂದು ಚೇತೇಶ್ವರ ಪೂಜಾರಗೆ ಹೇಳಿದ್ದ ರವಿಶಾಸ್ತ್ರಿ
- Automobiles
ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ... ಹಿಂದೆಯೇ ಬಂತು ಟಿವಿಎಸ್!
- Technology
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಗ್ ಬಾಸ್: ಹಾಲಿನ ವಿಚಾರಕ್ಕೆ ರಾಕಿ-ಅಮೂಲ್ಯ ನಡುವೆ ಬ್ರೇಕಪ್ ಆಯ್ತಾ..?
ರಾಕಿ ಎಲ್ಲರ ಜೊತೆಗೂ ಬಹಳ ಅಚ್ಚುಕಟ್ಟಾಗಿ ಇರುತ್ತಾರೆ. ಎಲ್ಲರಿಗೂ ಸಪೋರ್ಟ್ ಮಾಡುತ್ತಾರೆ. ಅದರಲ್ಲೂ ಅಮೂಲ್ಯ ಅಂದ್ರೆ ಕೊಂಚ ಕಾಳಜಿ ಹೆಚ್ಚಾಗಿಯೇ ಇರುತ್ತದೆ. ಊಟ ಜೊತೆಗೆ ಮಾಡುತ್ತಾರೆ, ಟೈಮ್ ಪಾಸ್ ಜೊತೆಗೆ ಮಾಡುತ್ತಾರೆ, ಹರಟೆ ಜೊತೆಗೆ ಹೊಟೆಯುತ್ತಾರೆ. ಅಮೂಲ್ಯ ತನ್ನೆಲ್ಲಾ ಅನಿಸಿಕೆಗಳನ್ನು ರಾಕಿ ಬಳಿ ಹೇಳಿಕೊಳ್ಳುವಷ್ಟು ಆತ್ಮೀಯತೆಯನ್ನು ಬೆಳೆಸಿಕೊಂಡಿದ್ದಾರೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ಅಮೂಲ್ಯ ಹಾಗೂ ಪ್ರಶಾಂತ್ ಸಂಬರ್ಗಿ ನಡುವೆ ಆಗಾಗ ಜಗಳ ನಡೆಯುತ್ತಾ ಇದೆ. ಟಾಸ್ಕ್ ವಿಚಾರದಲ್ಲಿ ಬಿಟ್ಟುಕೊಡದ ಕಾರಣ, ಇಬ್ಬರಲ್ಲೂ ಮನಸ್ತಾಪ ಮುಂದುವರೆದಿದೆ. ಈ ವಿಚಾರಕ್ಕೂ ರಾಕಿ ತುಂಬಾ ಸಮಧಾನ ಮಾಡಿದ್ದಾರೆ. ಆದ್ರೆ ಹಾಲಿನ ವಿಚಾರಕ್ಕೆ ಇಬ್ಬರು ದೂರ ದೂರ ಆಗುತ್ತಿದ್ದಾರೆ.
BBK9:
ಬಿಗ್
ಬಾಸ್
ಸದಸ್ಯರಿಗೆ
ವಧು-ವರ
ಬೇಕಾಗಿದ್ದಾರೆ:
ವಧು-ವರಾನ್ವೇಷಣೆ
ಮಾಡಿದ
ಕಿಚ್ಚ!
ಬಿಗ್ ಬಾಸ್ ಮನೆ 65 ದಿನಗಳಿಗೆ ಕಾಲಿಟ್ಟಿದೆ. ಹೀಗಾಗಿ ಬಿಗ್ ಬಾಸ್ ಕೊಡುವ ಸೌಲಭ್ಯವನ್ನು ಕಡಿಮೆ ಮಾಡುತ್ತಿದೆ. ಅದರಲ್ಲೂ ಈಗ ಹಾಲನ್ನು ಹತ್ತು ಪ್ಯಾಕೇಟ್ ನೀಡಿದೆ. ಅದರಲ್ಲಿಯೇ ಹಂಚಿಕೊಂಡು ಕುಡಿಯಬೇಕಾಗಿದೆ. ಒಟ್ಟಿಗೆ ಮಾಡುವುದಾ, ಇಲ್ಲ ಜೊತೆಯಲ್ಲಿ ಬಳಕೆ ಮಾಡುವುದಾ ಎಂಬ ಗೊಂದಲದಲ್ಲಿದ್ದಾರೆ. ಆದ್ರೆ ಅಮೂಲ್ಯ ಕಾಂಪ್ರೂಮೈಸ್ ಆಗಿಲ್ಲ. ನಂಗೆ ಒಂದು ಪ್ಯಾಕೇಟ್ ಬೇಕು ಎಂದಿದ್ದಾರೆ. ನೀರಾಕುವುದು ಇಷ್ಟವಿಲ್ಲ, ಹೀಗಾಗಿ ನನಗೆ ಬೇಕು ಎಂದಿದ್ದಾರೆ.

ಅಮೂಲ್ಯ ಕಡೆಗೆ ಮಾತನಾಡಿದ ರಾಕಿ & ಮನೆಯವರು
ಹಾಲು ಕಡಿಮೆ ಇರುವುದರಿಂದ ಟೀಯನ್ನು ಎಲ್ಲರು ಒಟ್ಟಿಗೆ ಮಾಡೋಣಾ ಎಂಬುದು ಎಲ್ಲರ ವಾದ. ಹಾಲು ಎಲ್ಲರಿಗೂ ಒಂದೊಂದು ಪ್ಯಾಕೆಟ್ ಅಂತ ಎತ್ತಿಟ್ಟಿದ್ದಾರೆ. ಎಲ್ಲರಿಗೂ ಟೀ ಮಾಡುವುದಾ ಅಥವಾ ಒಬ್ಬೊಬ್ಬರಿಗೆ ಮಾಡುವುದಾ ಅಂತ ಕೇಳಿದಾಗ ರಾಜಣ್ಣ, ಸಂಬರ್ಗಿ, ಒಟ್ಟಿಗೆ ಎಂದಿದ್ದಾರೆ. ಆದರೆ ಇದರ ನಡುವೆ ಅಮೂಲ್ಯ ಅದಕ್ಕೆ ಒಪ್ಪಿಲ್ಲ. ನನಗೆ ಒಂದು ಪ್ಯಾಕ್ ಕೊಟ್ಟು ಬಳಿಕ ನೀವೆಲ್ಲಾ ಬೇಕಾದ್ರೆ ಜೊತೆಗೆ ಮಾಡಿಕೊಳ್ಳಿ ಎಂದಿದ್ದಾರೆ. ಇದಕ್ಕೆ ಸಂಬರ್ಗಿ ವಿರೋಧ ವ್ಯಕ್ತಪಡಿಸಿದ್ದು, ಅಮೂಲ್ಯ ಒಬ್ಬರಿಗೆ ಪ್ರಾಬ್ಲಮ್ ಇರುವುದು ಅಂತ ಹೇಳಿದಾಗ ಎಲ್ಲರೂ ಅದನ್ನು ಅಪೋಸ್ ಮಾಡಿದ್ದಾರೆ. ಆಗ ಅನುಪಮಾ ಸೆಲೆಕ್ಟೀವ್ ಆಗೋದು ಬೇಡ. ಹತ್ತು ಲೀಟರ್ ಅಷ್ಟೇ ಹಾಲು ಇರುವುದು ಎಂದಿದ್ದಾರೆ.

ಕಾಮನ್ ಸೆನ್ಸ್, ಅಡ್ಜೆಸ್ಟ್ ಮೆಂಟ್ ಎಲ್ಲವೂ ಬಂದೋಯ್ತು
ರಾಕಿ ಇದನ್ನೆಲ್ಲಾ ನೋಡಿ ಫೈನಲಿ ಎಲ್ಲರೂ ಅಮೂಲ್ಯ ಮಾತಿಗೆ ಒಪ್ಪಿಕೊಂಡಾಯಿತು. ಬಾತ್ ರೂಮಿನ ಬಳಿ ನಿಂತಿದ್ದಾಗ ಅಮೂಲ್ಯ ಬಳಿ ರಾಕಿ ಬಂದರು. ಆಗ ಅಮೂಲ್ಯ ಗುರಾಯಿಸ್ತಾ ಇದ್ದರು. ಅದನ್ನು ನೋಡಿ ಯಾಕೆ ಹಿಂಗೆ ಗುರಾಯಿಸ್ತಾ ಇರೋದು, ನೀನು ಕೇಳಿದ್ದನ್ನು ಕೊಟ್ಟಿಲ್ಲವಾ ಎಂದಾಗ, ಅಮೂಲ್ಯ ಕ್ಲಾಸ್ ತೆಗೆದುಕೊಂಡಿದ್ದಾರೆ. ಯಾಕೆ ನಾನು ಅಷ್ಟು ಸನ್ನೆ ಮಾಡಿದರು ನೀವೂ ನೋಡಲೇ ಇಲ್ಲ. ಎರಡು ಬಾರಿ ನನ್ನ ಕಡೆ ನೋಡಿದ್ರಿ, ಏನಾದ್ರೂ ಹೇಳಬೇಕು ಎಂದರೂ ಆ ಕಡೆ ಗಮನವನ್ನೇ ನೀವೂ ಕೊಡಲಿಲ್ಲ ಎಂದಾಗ ರಾಕಿ, ಸ್ವಲ್ಪ ಜೋರಾಗಿ ಹೇಳಬೇಕಿತ್ತು, ನನಗೆಲ್ಲಿ ಗೊತ್ತಾಗುತ್ತೆ. ಅದು ಕಾಮನ್ ಸೆನ್ಸ್ ಅಲ್ವಾ ಎಂದಾಗ ಹೌದು ನಮಗೆ ಕಾಮನ್ ಸೆನ್ಸ್ ಇಲ್ಲ ಬಿಡಿ, ಇಷ್ಟೆ ಡಿಸ್ಟೆನ್ಸ್ ನಲ್ಲಿ ಕುಳಿತುಕೊಳ್ಳಬೇಕು ಅಂತ ಗೊತ್ತಿರಲಿಲ್ಲ ಎಂದಿದ್ದಾರೆ.

ಬ್ರೇಕಪ್ ಅಲ್ಲ ಪ್ಯಾಚ್ ಅಪ್
ರಾಕೇಶ್ ಮತ್ತು ಅಮೂಲ್ಯ ಹಾಲಿನ ವಿಚಾರಕ್ಕೆ ಇಷ್ಟೊಂದು ಜೋರಾಗಿ ಜಗಳ ಆಡಿದ್ದನ್ನು ಕಂಡು ನೋಡುಗರು ಒಂದು ಕ್ಷಣ ದಂಗಾಗಿದ್ದರು. ಇಬ್ಬರದ್ದು ಸ್ನೇಹ ಮುರಿದು ಬಿತ್ತು ಎಂದುಕೊಂಡಿದ್ದರು. ಆದ್ರೆ ಅದು ತಮಾಷೆಯಾಗಿ. ಸಮಯ ಮುಂದೆ ಹೋದ ನಂತರ ಇಬ್ಬರು ನಗು ನಗುತ್ತಾ ಮಾತನಾಡಿಕೊಂಡು ಕೂತಿದ್ದರು. ಆ ಕ್ಯಾಪ್ಟನ್ ನಂಗೆ ಕಾಮನ್ ಸೆನ್ಸ್ ಇಲ್ಲ ಅಂತಾನೆ ರಾಕಿ ಅಂತ ಅಮೂಲ್ಯ ಅಂದ್ರೆ ನೀನು ಹಾಗೆ ಬೈಯೋದು ಅಲ್ವಾ ಅಂತ ರಾಕಿ ರೇಗಿಸಿಕೊಂಡು ಕೂತಿದ್ದರು.