BBK9 : ರೂಪೇಶ್ ಶೆಟ್ಟಿಗೆ ಮುಜುಗರವನ್ನುಂಟು ಮಾಡಿದ ಸಾನ್ಯಾ ನಡೆ : ರಾಜಣ್ಣ, ಆರ್ಯವರ್ಧನ್ ನೋಡಿ ಶಾಕ್!

By ಎಸ್ ಸುಮಂತ್

ಒಟಿಟಿ ಸೀಸನ್‌ನಲ್ಲಿ ಬೆಸ್ಟ್ ಫ್ರೆಂಡ್ಸ್ ಆಗಿ ಗುರುತಿಸಿಕೊಂಡಿದ್ದ ಸಾನ್ಯಾ ಮತ್ತು ರೂಪೇಶ್ ಶೆಟ್ಟಿ, ಬಿಗ್ ಬಾಸ್ ಟಿವಿ ಸೀಸನ್‌ನಲ್ಲಿ ಪಕ್ಕಾ ಲವ್ ಬರ್ಡ್ಸ್ ಆಗಿದ್ದಾರೆ. ಸಾನ್ಯಾ, ರೂಪೇಶ್ ಶೆಟ್ಟಿ ಜೊತೆಗೇನೆ ಹೆಚ್ಚು ಸಮಯ ಕಳೆಯುವುದಕ್ಕೆ ಇಷ್ಟ ಪಡುತ್ತಾರೆ.

ರೂಪೇಶ್ ಶೆಟ್ಟಿಗಾಗಿ ಸಾನ್ಯಾ ಗಿಫ್ಟ್ ನೀಡುತ್ತಾರೆ ಇತ್ಯಾದಿ ಇತ್ಯಾದಿ ಇತ್ಯಾದಿ. ಬೆಸ್ಟ್ ಯಾರು ಅಂದ್ರೆ ಸಾನ್ಯಾ ಬಾಯಲ್ಲಿ ಬರುವ ಪದ ರೂಪೇಶ್ ಶೆಟ್ಟಿಯೇ ಆಗಿರುತ್ತದೆ. ಏನಾದರೂ ಡೆಡಿಕೇಷನ್ ಮಾಡುವುದಾದರೆ ಯಾರಿಗೆ ಎಂದು ಕೇಳಿದರೆ ಅಲ್ಲಿಯೂ ರೂಪೇಶ್ ಶೆಟ್ಟಿಯೇ ಆಗಿರುತ್ತಾರೆ. ಆದ್ರೆ ಅಂಥದ್ದೊಂದು ಗಟ್ಟಿ ಬಾಂಧವ್ಯ ಮುಜುಗರಕ್ಕೀಡು ಮಾಡಿದೆ.ಅತಿಯಾದರೆ ಅಮೃತವೂ ವಿಷ ಎನ್ನುವ ಮಾತು ಸುಳ್ಳಲ್ಲ. ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ವಿಚಾರದಲ್ಲಿ ಅದು ಪ್ರೂವ್ ಆಗುತ್ತಾ ಇದೆ.

ರೂಪೇಶ್ ಶೆಟ್ಟಿ ತಾಳ್ಮೆ ಇರುವಂತ ಮನುಷ್ಯ. ಆದ್ರೆ ಸಾನ್ಯಾ ಹಠಮಾರಿ ಎಂಬಂತೆ ಅಥವಾ ತನ್ನದೇ ಮಾತು ನಡೆಯಬೇಕು ಎಂಬ ನಡವಳಿಕೆಯನ್ನೇ ಆಗಾಗ ಪ್ರದರ್ಶನ ಮಾಡುತ್ತಾರೆ. ಇಂಥ ನಡವಳಿಕೆಯಿಂದ ರೂಪೇಶ್ ಶೆಟ್ಟಿಗೆ ಬೇಸರವಾಗಿದೆ.

ರೂಪೇಶ್ ಶೆಟ್ಟಿಗಾಗಿ ಹಾಡು ಬರೆದ ಸಾನ್ಯಾ

ರೂಪೇಶ್ ಶೆಟ್ಟಿಗಾಗಿ ಹಾಡು ಬರೆದ ಸಾನ್ಯಾ

ಹಾಡು ಎಂಬ ಕಲೆ ಪ್ರಾಕ್ಟೀಸ್ ಇದ್ದಾಗ ಸುಲಲಲಿತವಾಗಿ ಮೂಡಿ ಬರುತ್ತೆ. ಅದೇ ಪ್ರಾಕ್ಟೀಸ್ ಇಲ್ಲದೆ ಹೋದರೆ ಗಂಟಲು ಕಟ್ಟಿ ಸ್ವರ ಅಲ್ಲಿಯೇ ಉಳಿದು ಬಿಡುತ್ತದೆ. ಪಾಪ ಸಾನ್ಯಾ, ರೂಪೇಶ್ ಶೆಟ್ಟಿಗಾಗಿ ಒಂದು ಹಾಡನ್ನು ಬರೆದಿದ್ದರು. ಅದು 'ಪ್ರೀತಿ ವರವಾಗುವುದೇ' ಹಾಡು. ಈ ಹಾಡು ಹಾಡುವಾಗ ಸಾನ್ಯಾ ಮುಖದಲ್ಲಿದ್ದ ನಾಚಿಕೆ, ಎಕ್ಸೈಟ್‌ಮೆಂಟ್ ಎಲ್ಲರಿಗೂ ಕಾಣಿಸುತ್ತಾ ಇತ್ತು. ಆದರೆ ಅದೃಷ್ಟವಶಾತ್ ಹಾಡು ಹಾಡುವಾಗ ಗಂಟಲಲ್ಲಿ ಕಿಚ್ ಕಿಚ್ ಉಂಟಾಗಿದೆ. ಹಾಡು ಒಂದೇ ಸಾಲಿಗೆ ನಿಂತು ಹೋಗಿದೆ.

ಬೇಸರ ಮಾಡಿಕೊಂಡು ಕೂತ ಸಾನ್ಯ

ಬೇಸರ ಮಾಡಿಕೊಂಡು ಕೂತ ಸಾನ್ಯ

ಸಾನ್ಯಾ ಇತ್ತಿಚೆಗೆ ಸ್ವಲ್ಪ ಇರಿಟೇಟ್ ಪರ್ಸನಾಲಿಟಿ ತೋರಿಸುತ್ತಾ ಇದ್ದಾರೆ. ಕೇಳಿದ್ದೆ ಕೇಳುವುದು, ಹೇಳಿದ್ದೆ ಹೇಳುವುದು. ಈಗ ಹಾಡು ಹಾಡುವುದಕ್ಕೆ ಹೋಗಿ ಅರ್ಧಕ್ಕೆ ನಿಂತಿದೆ. ಯಾರಿಗೂ ಇದು ದೊಡ್ಡ ತಪ್ಪು ಎನಿಸಿಲ್ಲ. ಫಸ್ಟ ಆಫ್ ಆಲ್ ಯಾರಿಗಾಗಿ ಹಾಡಿದ್ದರೋ ಅವರೇ ಅಂದರೆ ರೂಪೇಶ್ ಶೆಟ್ಟಿಯೇ ಸಮಾಧಾನವಾಗಿದ್ದಾರೆ. ಆದ್ರೆ ಸಾನ್ಯಾ, ತನ್ನ ಪ್ರೀತಿಯೇ ಮುಳುಗಿ ಹೋಯಿತೋ ಏನೋ ಎಂಬಂತೆ ಕೋಪ ಮಾಡಿಕೊಂಡು ಕೂತಿದ್ದಾರೆ. ಸಮಾಧಾನ ಮಾಡಲು ಬಂದ ರೂಪೇಶ್‌ಗೆ ನಿಂಗೆ ಏನು ಗೊತ್ತು ಎಂದಿದ್ದಾರೆ.

ರೂಪೇಶ್ ಮಾತಿಗೆ ಕೆಂಡಕಾರಿದ ಸಾನ್ಯಾ

ರೂಪೇಶ್ ಮಾತಿಗೆ ಕೆಂಡಕಾರಿದ ಸಾನ್ಯಾ

ಸಾನ್ಯಾ ತನ್ನ ಬೆಸ್ಟ್ ಫ್ರೆಂಡ್ ಎಂದೇ ರೂಪೇಶ್ ಶೆಟ್ಟಿ ಭಾವಿಸಿದ್ದಾರೆ. ಅದೇ ಕಾರಣಕ್ಕೆ ಸಾನ್ಯಾ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ. ಸಾನ್ಯಾಗೆ ಬೇಜಾರು ಆಗದ ರೀತಿಯಲ್ಲಿ ನೋಡಿಕೊಳ್ಳುತ್ತಾರೆ, ನಡೆದುಕೊಳ್ಳುತ್ತಾರೆ. ಸಾನ್ಯಾ ಏರು ಧ್ವನಿಯಲ್ಲಿ ಮಾತನಾಡಿದರೂ ರೂಪೇಶ್ ಶೆಟ್ಟಿ ಮಾತ್ರ ಸಮಾಧಾನವಾಗಿಯೇ ಮಾತನಾಡುತ್ತಾರೆ. ಅದೇ ರೀತಿ ಹಾಡು ಹಾಡುವುದಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಸಾನ್ಯಾ ಬೇಸರ ಮಾಡಿಕೊಳ್ಳಬಾರದು ಎಂದು ರೂಪೇಶ್ ಶೆಟ್ಟಿ ಅಡುಗೆ ಮನೆಯಲ್ಲಿದ್ದ ಸಾನ್ಯಾಳನ್ನು ಸಂತೈಸಲು ಬಂದಿದ್ದಾರೆ. ಆದ್ರೆ ಅಲ್ಲಿಯೂ ಸಾನ್ಯಾ ರೊಚ್ಚಿಗೆದ್ದೆ ಮಾತನಾಡಿದ್ದಾರೆ.

ರೂಪೇಶ್ ಶೆಟ್ಟಿಗೆ ಮುಖಭಂಗ

ರೂಪೇಶ್ ಶೆಟ್ಟಿಗೆ ಮುಖಭಂಗ

ರೂಪೇಶ್ ರಾಜಣ್ಣ, ಆರ್ಯವರ್ಧನ್, ಸಾನ್ಯಾ ಅಡುಗೆ ಮನೆಯಲ್ಲಿದ್ದರು. ಆಗ ರಾಜಣ್ಣ ಹಾಡು ಸೂಪರ್ ಆಗಿತ್ತು ಎಂದಿದ್ದಾರೆ. ಅದಕ್ಕೆ ಸಾನ್ಯಾ ನಂಗೆ ಸಮಾಧಾನ ಆಗುವ ತನಕ ಬಾಕಿ ಇದೆ ಎಂದು ಅಳುವ ಧ್ವನಿಯಲ್ಲಿ ಹೇಳಿದ್ದಾರೆ. ಅದೇ ಸಮಯಕ್ಕೆ ಬಂದ ರೂಪೇಶ್ ಶೆಟ್ಟಿ, ಚೆನ್ನಾಗ್ ಹಾಡಿದ್ದೀಯ ಅಂತ ಹೇಳ್ತಾ ಇದ್ದೀನಿ ತಾನೇ. ಇನ್ನೊಂದ್ ಸಲ ಹಾಡು ಎಂದಾಗ ಹಾಡಬೇಕು. ಸಂಜೆ ಶುರು ಮಾಡಿಕೊಂಡಿರುವುದು. ಇರಿಟೇಟ್ ಮಾಡಿದ್ದಾಳೆ ಎಂದಿದ್ದೆ ತಡ ಸಾನ್ಯಾ ರೊಚ್ಚಿಗೆದ್ದು ಕೈಯಲ್ಲಿದ್ದ ಲೋಟವನ್ನು ಎಸೆದು ಎಲ್ಲರೂ ನೋಡುವಂತೆ ಸೀನ್ ಕ್ರಿಯೇಟ್ ಮಾಡಿದ್ದಾರೆ.

More from Filmibeat

English summary
Bigg Boss Kannada November 4th Episode Written Update. Here is the details about Santa irritate roopesh shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X