For Quick Alerts
  ALLOW NOTIFICATIONS  
  For Daily Alerts

  BBK9: ಬಿಗ್ ಬಾಸ್ ಮನೆ ತೊರೆದ ಸಾನ್ಯಾ.. ಗಳಗಳನೇ ಕಣ್ಣೀರಿಟ್ಟ ರೂಪೇಶ್!

  By ಎಸ್ ಸುಮಂತ್
  |

  ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ಆರನೇ ವಾರಕ್ಕೆ ಕಾಲಿಟ್ಟಿದೆ. ಪ್ರವೀಣರ ಜೊತೆಗೆ ನವೀನರನ್ನು ಸೇರಿಸಿ ಬಿಗ್ ಬಾಸ್ ಶೋ ನಡೆಸಲಾಗಿದೆ. ಈಗಾಗಲೇ ಸಾಕಷ್ಟು ಸದಸ್ಯರು ಮನೆಯಿಂದ ಹೊರ ಹೋಗಿದ್ದಾರೆ. ಐಶ್ವರ್ಯಾ ಪಿಸೆ, ನವಾಜ್, ದರ್ಶ್, ಮಯೂರಿ, ನೇಹಾ ಗೌಡ ಇದೀಗ ಸಾನ್ಯಾ ಐಯ್ಯರ್ ತಮ್ಮ ಬಿಗ್ ಬಾಸ್ ಜರ್ನಿಯನ್ನು ಮುಗಿಸಿ ವಾಪಾಸ್ ಆಗಿದ್ದಾರೆ.

  ಸಾನ್ಯಾ ಐಯ್ಯರ್ ಓಟಿಟಿ ಪ್ಲಾಟ್ ಫಾರಂ ಮೂಲಕ ಪ್ರವೀಣರ ಸ್ಥಾನದಲ್ಲಿಯೇ ಒಳಗೆ ಹೋಗಿದ್ದರು. ಓಟಿಟಿಯಲ್ಲಿ ಕೊಂಚ ಫ್ರೆಂಡ್‌ಶಿಪ್ ಮೂಲಕ ಗುರುತಿಸಿಕೊಂಡಿದ್ದ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಟಿವಿ ಸೀಸನ್‌ನಲ್ಲಿ ಪಕ್ಕ ಪ್ರೇಮಿಗಳಾಗಿದ್ದರು. ಇದು ಸ್ನೇಹವೋ.. ಪ್ರೇಮವೋ ರೂಪೇಶ್‌ಗೆ ತಡೆದುಕೊಳ್ಳುವುದಕ್ಕೆ ಆಗದಷ್ಟು ನೋವು ಕೊಟ್ಟಿದೆ.

  ಈ ವಾರ ಹೊರಗೆ ಬಂದ ಸಾನ್ಯಾ ಐಯ್ಯರ್

  ಈ ವಾರ ಹೊರಗೆ ಬಂದ ಸಾನ್ಯಾ ಐಯ್ಯರ್

  ಸಾನ್ಯಾ ಮತ್ತು ರೂಪೇಶ್ ಶೆಟ್ಟಿ ಒಬ್ಬರಿಗೊಬ್ಬರು ಬಿಟ್ಟು ಇರುತ್ತಾ ಇರಲಿಲ್ಲ. ಎಲ್ಲಿ ಇದ್ದರೂ ಇಬ್ಬರು ಜೊತೆಯಾಗಿಯೇ ಇರುತ್ತಿದ್ದರು. ಓಟಿಟಿ ಸೀಸನ್‌ಗಿಂತ ಟಿವಿ ಸೀಸನ್‌ನಲ್ಲಿ ಸಾನ್ಯಾ ತುಂಬಾನೇ ಅಟ್ಯಾಚ್ಡ್ ಆಗಿದ್ದರು. ರೂಪೇಶ್‌ಗಾಗಿ ಕಾಯುತ್ತಿದ್ದರು. ಎಷ್ಟೋ ಸಲ ರೂಪೇಶ್ ಊಟಕ್ಕೆ ಬಂದಿಲ್ಲ ಅಂತ ಉಪವಾಸವನ್ನೇ ಮಾಡಿದ್ದರು. ಆಟದಲ್ಲಿ ಪ್ರೋತ್ಸಾಹ ನೀಡುತ್ತಾ ಇದ್ದರು. ಇಬ್ಬರಿಗೂ ಅವರವರೇ ಜೋಡಿಯಾಗಿದ್ದರು. ಹೀಗಾಗಿ ಪ್ರಶಾಂತ್ ಸೇವ್ ಆಗಿ ಸಾನ್ಯಾ ಔಟ್ ಆದಾಗ ರೂಪೇಶ್ ಶೆಟ್ಟಿ ಅಕ್ಷರಶಃ ಮಾನಸಿಕವಾಗಿ ಕುಸಿದು ಬಿಟ್ಟರು.

  ಸಾನ್ಯಾಳಿಗಾಗಿ ಕಣ್ಣೀರು ಹಾಕಿದ ರೂಪೇಶ್

  ಸಾನ್ಯಾಳಿಗಾಗಿ ಕಣ್ಣೀರು ಹಾಕಿದ ರೂಪೇಶ್

  ಸಾನ್ಯಾರ ಜರ್ನಿ ಮುಗಿಯಿತು ಎಂದ ಕೂಡಲೇ ರೂಪೇಶ್ ಶೆಟ್ಟಿಗೆ ಮನಸ್ಸು ತಡೆಯುವುದಕ್ಕೆ ಆಗಲಿಲ್ಲ. ಅಳುತ್ತಲೇ ಇದ್ದರು. ಸುದೀಪ್ ಕಾರ್ಯಕ್ರಮ ಮುಗಿಸಿ, ಸಾನ್ಯಾಗೆ ಇನ್ನು ಐದು ನಿಮಿಷವಷ್ಟೇ ಎಂದು ಹೇಳಿದಾಗಂತು ತುಂಬಾನೇ ನೋವು ಅನುಭವಿಸಿದರು. ಯಾರ ಜೊತೆಗೂ ಮಾತನಾಡುವುದಕ್ಕೆ ಬಿಡದೆ ಪ್ರೈವೇಟ್ ಆಗಿ ಕರೆದುಕೊಂಡು ಹೋದ ರೂಪೇಶ್ ಶೆಟ್ಟಿ, ಸಾನ್ಯಾ ಮುಂದೆ ಮಂಡಿಯೂರಿ ಭಾವನಾತ್ಮಕವಾಗಿ ಬೇಡಿಕೊಂಡಿದ್ದಾರೆ. ನಾನು ಹೊರಗೆ ಬಂದರು ನೀನು ಇವತ್ತಿನ ಸಾನ್ಯಾ ಆಗಿಯೇ ಇರಬೇಕು. ನಂಗೆ ವಾರಕ್ಕೊಂದು ಟೀ ಶರ್ಟ್ ಕಳುಹಿಸಿಕೊಡಬೇಕು. ನಾನು ನಿನ್ನನ್ನು ಹೃದಯದಲ್ಲಿಟ್ಟುಕೊಂಡಿದ್ದೀನಿ ಎಂದು ತುಂಬಾನೇ ಎಮೋಷನಲ್ ಆಗಿದ್ದಿದ್ದು ಕಂಡು ಬಂತು.

  ಸಾನ್ಯಾಗೆ ನಿಜವಾಗಿಯೂ ಲವ್ ಆಗೋಯ್ತಾ..?

  ಸಾನ್ಯಾಗೆ ನಿಜವಾಗಿಯೂ ಲವ್ ಆಗೋಯ್ತಾ..?

  ಏನಾದರೂ ಡೆಡಿಕೇಟ್ ಮಾಡುವುದಾದರೇ ಯಾರಿಗೆ ಮಾಡುತ್ತೀರಿ ಎಂದು ಸಾನ್ಯಾರನ್ನು ಕೇಳಿದರೆ ಅದು ರೂಪೇಶ್ ಶೆಟ್ಟಿ ಆಗಿರುತ್ತಾರೆ. ಬಿಗ್ ಬಾಸ್ ಯಾರು ವಿನ್ ಆಗಬೇಕು ಎಂದರೆ ಅದು ರೂಪೇಶ್ ಶೆಟ್ಟಿ ಆಗಿರುತ್ತಾರೆ. ಸಾನ್ಯಾ ಸಾಕಷ್ಟು ಸಲ ಹೇಳಿದ್ದಾರೆ ರೂಪೇಶ್ ಶೆಟ್ಟಿ ನಂಗೆ ಫ್ಯಾಮಿಲಿ ಪರ್ಸನ್ ರೀತಿಯೇ ಆಗಿ ಹೋಗಿದ್ದಾರೆ ಎಂದು. ಹೀಗಾಗಿ ರೂಪೇಶ್ ಶೆಟ್ಟಿಗಾಗಿ ಬರೆದಿದ್ದ ಹಾಡು ಅವತ್ತು ಹಾಡುವಾಗ ಸ್ವರ ಮಿಸ್ಸಾಗಿತ್ತು. ಆದ್ರೆ ಇಂದು ಮನೆಯಿಂದ ಹೊರ ನಡೆಯುತ್ತಿರುವ ಸಾನ್ಯಾ ಬಳಿ ಮತ್ತೆ ಆ ಹಾಡನ್ನು ಹಾಡಲು ರೂಪೇಶ್ ಶೆಟ್ಟಿ ಕೇಳಿದ್ದು, ಎಲ್ಲರಿಗೂ ಇಷ್ಟವಾಗುವಂತೆ ಹಾಡಿದ್ದಾರೆ ಸಾನ್ಯಾ.

  ರೂಪೇಶ್ ಶೆಟ್ಟಿಗೆ ದುಃಖ ನಿಲ್ಲುತ್ತಿಲ್ಲ

  ರೂಪೇಶ್ ಶೆಟ್ಟಿಗೆ ದುಃಖ ನಿಲ್ಲುತ್ತಿಲ್ಲ

  ರೂಪೇಶ್ ಶೆಟ್ಟಿ ಸಾನ್ಯಾ ಅವರನ್ನು ಎಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದರು ಎಂಬುದು ಇಂದು ಸಾನ್ಯಾ ಹೊರಗೋದಾಗಲೇ ಎಲ್ಲರಿಗೂ ಅರ್ಥವಾಗಿದ್ದು. ರೂಪೇಶ್ ಶೆಟ್ಟಿಗೆ ದುಃಖ ತಡೆದುಕೊಳ್ಳುವುದಕ್ಕೆ ಆಗಿಲ್ಲ. ಈ ವೇಳೆ ರಾಕೇಶ್ ಸಮಾಧಾನ ಮಾಡಲು ಬಂದಾಗ, ತಬ್ಬಿಕೊಂಡು ದುಃಖ ತೋಡಿಕೊಂಡಿದ್ದಾರೆ. 100 ಡೇಸ್ ಜೊತೆಗಿದ್ದವಳು. ಈಗ ಬಿಟ್ಟು ಹೋಗಿದ್ದಾಳೆ. ಹುಡುಗಿಯರ ಬಗ್ಗೆ ಭಾವನೆಯೇ ಇರಲಿಲ್ಲ. ಆದ್ರೆ ಅವಳಿಂದ ಆ ಭಾವನೆ ಬಂದಿದ್ದು. ತುಂಬಾ ಒಳ್ಳೆ ಹುಡುಗಿ. ಮನೆಯಿಂದ ಬಂದಾಗಲೂ ನಾನು ಯಾರನ್ನು ಮಿಸ್ ಮಾಡಿಕೊಂಡು ಅತ್ತಿಲ್ಲ. ಅವಳಿಂದಾಗಿ ನಾನು ಬದಲಾಗಿದ್ದೇನೆ. ನನ್ನ ಲೈಫ್‌ಗೆ ಸಿಕ್ಕ ಫ್ರೆಂಡ್. ನನ್ನ ತುಂಬಾನೇ ಕೇರ್ ಮಾಡುತ್ತಿದ್ದಳು. ಕೇರ್ ಅಂದ್ರೆ ಏನು ಅಂತ ಗೊತ್ತಾಗಿದ್ದೆ ಅವಳಿಂದ. ಊಟ ಮಾಡದೆ ನಂಗೋಸ್ಕರ ಕಾಯುತ್ತಾ ಇದ್ಲು ಅಂತ ಕಣ್ಣೀರು ಹಾಕಿದಾಗ ರಾಕೇಶ್, ಅವಳು ನಿನ್ನನ್ನು ಡೈಲಿ ನೋಡುತ್ತಾಳೆ. ವಾರದ ಕೊನೆಯಲ್ಲಿ ಟೀ ಶರ್ಟ್ ಕಳುಹಿಸುತ್ತಾಳೆ. ಮನೆಯಿಂದ ಹೋದ ಮೇಲೂ ಭೇಟಿ ಮಾಡಬಹುದು ಎಂದು ಸಮಾಧಾನ ಮಾಡಿದ್ದಾರೆ.

  English summary
  Bigg Boss Kannada November 6th Episode Sanya Iyer Eliminated. Here is the details.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X