Bigg Boss Kannada OTT: ಲಿಮಿಟ್ ಕ್ರಾಸ್ ಮಾಡ್ಬೇಡಾ ಸೋನು.. ರಾಕೇಶ್ ಅಡಿಗ ತರಾಟೆ!
ಸೋನು ಶ್ರೀನಿವಾಸ್ ಗೌಡ.. ಸೋಶಿಯಲ್ ಮೀಡಿಯಾದಲ್ಲಿ ಈಕೆಯ ಪರಿಚಯ ಒಂದಷ್ಟು ಜನರಿಗೆ ಇತ್ತು. ಬಿಗ್ ಬಾಸ್‌ಗೆ ಬಂದ ಮೇಲೆ ಪರಿಚಯದ ಸಂಖ್ಯೆ ಹೆಚ್ಚಾಗಿದೆ. ಈಕೆ ಯಾರು? ಏನ್ ಆಟ್ಯಿಟ್ಯೂಡ್ ಅಂತ ಹುಡುಕುವವರ ಸಂಖ್ಯೆಯೇ ಹೆಚ್ಚಾಗಿತ್ತು. ಸೋನು ಗೌಡ ಸೋಶಿಯಲ್ ಮೀಡಿಯಾದಲ್ಲಿ ಐ ಡೋಂಟ್ ಕೇರ್ ರೀತಿ ಬಿಂಬಿಸಿಕೊಂಡವಳು. ಆದರೆ ಬಿಗ್ ಬಾಸ್ ಮನೆಯಲ್ಲಿ ಆಕೆಯನ್ನು ನೋಡಿದವರು ತಲೆ ತಲೆ ಚಚ್ಚಿಕೊಳ್ಳುತ್ತಾ ಇದ್ದಾರೆ.
ಬಿಗ್ ಬಾಸ್ ಎಂದರೆ ಒಂದು ಕಠಿಣ ಸಮಯ ಎದುರಿಸುವುದೇ ಆಗಿರುತ್ತದೆ. ಫೋನ್ ಇಲ್ಲದೆ, ಫ್ರೆಂಡ್ಸ್ ಇಲ್ಲದೆ, ಹೊಸ ಪರಿಚಯಗಳನ್ನು ಮಾಡಿಕೊಳ್ಳುತ್ತಾ, ಅಲ್ಲಿಯೇ ಎಲ್ಲಾ ರೀತಿಯ ಲೈಫ್ ಲೀಡ್ ಮಾಡಬೇಕಾಗುತ್ತದೆ. ಹೀಗಾಗಿ ಹೊಸಬರನ್ನೇ ತಮ್ಮ ತಮ್ಮ ಯೋಚನಾಶಕ್ತಿಗೆ ಅನುಗುಣವಾಗಿ ಫ್ರೆಂಡ್‌ಶಿಪ್ ಬೆಳೆಸುತ್ತಾರೆ. ಖುಷಿ ಖುಷಿಯಾಗಿ ಇರುತ್ತಾರೆ. ಈ ಖುಷಿ ಇರಬೇಕು ಎಂದರೆ ಅಲ್ಲಿ ಮುಖ್ಯವಾಗಿ ಎಂಟರ್ಟೈನ್ಮೆಂಟ್ ಬೇಕಾಗುತ್ತದೆ. ಅದಕ್ಕಾಗಿಯೇ ಯಾರನ್ನಾದರೂ ಸೆಲೆಕ್ಟ್ ಮಾಡ್ತಾರೆ. ಸದ್ಯದ ಬಿಗ್ ಬಾಸ್‌ನಲ್ಲಿ ಎಂಟರ್ಟೈನ್ಮೆಂಟ್ ಮಾಡುತ್ತಿದ್ದವರು ಎಂದರೆ ಸೋನು ಗೌಡ. ಆದರೆ ಈಗ ದೊಡ್ಡ ಕಿರಿಕಿರಿಯೇ ಶುರುವಾಗಿದೆ.

ಸೋನು ಬೆಸ್ಟ್ ಫ್ರೆಂಡ್ ರಾಕೇಶ್
ಬಿಗ್ ಬಾಸ್ ಮನೆಯಲ್ಲಿ ಸೋನುಳನ್ನು ಸಂಭಾಳಿಸುವುದು ಎಂದರೆ ಅದು ರಾಕೇಶ್ ಅಡಿಗ. ಹಾಗೆ ಹೆಚ್ಚು ಸಲುಗೆಯನ್ನು ನೀಡಿದ್ದಾನೆ. ಸಿಗರೇಟ್ ಸೇದುವುದಕ್ಕೂ ರಾಕೇಶ್ ಜೊತೆಗಾರನಾಗಿದ್ದಾನೆ. ಏನಾದರೂ ತಪ್ಪು ಮಾಡಿದರೂ ಅದನ್ನು ಸಮಾಧಾನವಾಗಿ ತಿದ್ದಿ ಹೇಳುತ್ತಾನೆ. ಸೋನು ಆ ಬುದ್ದಿ ಮಾತನ್ನು ಒಮ್ಮೆ ಕೇಳುತ್ತಾಳೆ. ಇನ್ನೊಮ್ಮೆ ನೋ ಎಂದು ಮುಖ ತಿರುಗಿಸಿ ಹೊರಡುತ್ತಾಳೆ. ಸೋನುಳನ್ನು ಸಂಭಾಳಿಸುವುದೇ ರಾಕೇಶ್‌ಗೆ ದೊಡ್ಡ ತಲೆ ನೋವಾಗಿದೆ.

ಸೋನು ಕಿರಿಕಿರಿಯಿಂದ ಮನೆಯವರೆಲ್ಲಾ ಭಯ
ಸೋನು ಶ್ರೀನಿವಾಸ್ ಗೌಡ ಏನಾದರೂ ತಪ್ಪು ಮಾಡಿದಾಗ ಇದು ತಪ್ಪು ಎಂದು ಹೇಳಿದರೆ ಅದನ್ನು ತಿದ್ದಿಕೊಳ್ಳುವುದಿಲ್ಲ. ಉದಾಹರಣೆಗೆ ನಿನ್ನ ಬಾಯಿ ಸ್ವಲ್ಪ ಕಡಿಮೆ ಮಾಡಮ್ಮ ಎಂದರೆ ಅದನ್ನು ಸರಿ ಮಾಡಿಕೊಳ್ಳಬೇಕು ಎಂಬ ಸ್ವಭಾವದವಳಲ್ಲ. ಬದಲಿಗೆ ನನಗೆ ಹೇಳಿದರಲ್ಲ ಎಂದು ಅದೇ ತಪ್ಪನ್ನು ಇನ್ನು ಹೆಚ್ಚು ಮಾಡುತ್ತಾಳೆ. ಹೀಗಾಗಿಯೇ ಆಕೆಯ ಬಾಯಿಯಿಂದಲೇ ಎಲ್ಲರೂ ಹೆದರಿದ್ದಾರೆ. ಅದಕ್ಕಾಗಿಯೇ ಆಕೆಯ ಬಳಿ ಯಾರು ಮಾತನಾಡಲು ಹೋಗುವುದಿಲ್ಲ.

ಸೋನು ಸಿಗರೇಟ್.. ಮನೆಯವರಿಗೆ ಶಿಕ್ಷೆ
ಬಿಗ್ ಬಾಸ್ ಸ್ಮೋಕಿಂಗ್ ಝೋನ್ ಸಮೇತ ಲಾಕ್ ಮಾಡಿದ್ದಾಗ ನಿಯಮ ಮೀರಿ ರಾಕೇಶ್ ಹಾಗೂ ಸೋನು ಸ್ಮೋಕಿಂಗ್ ಝೋನ್‌ಗೆ ಹೋಗಿ ಬಂದಿದ್ದರು. ಬಳಿಕ ಶಿಕ್ಷೆ ವಿಧಿಸಿದ ಬಿಗ್ ಬಾಸ್ ಅವರಿಬ್ಬರಿಗೆ ಮಾತ್ರ ಕೊಡಲಿಲ್ಲ ಮನೆ ಮಂದಿಗೆಲ್ಲಾ ಶಿಕ್ಷೆ ನೀಡಿದೆ. ಕೊಟ್ಟಿದ್ದ ಸೌಲಭ್ಯಗಳನ್ನು ಕಡಿತಗೊಳಿಸಿತ್ತು. ಇದು ತಪ್ಪು ಎಂದು ಹೇಳಲು ಹೊರಟರೆ ಸೋನು ಮನೆಯವರ ಮೇಲೆ ಎಗರಾಡಿದ್ದಾಳೆ. ಯಾರು ತಪ್ಪು ಮಾಡಲ್ವಾ? ಮಾಡಿದ ಸಣ್ಣ ತಪ್ಪಿಗೆ ಇಷ್ಟೆಲ್ಲಾ ಮಾತಾಡಬೇಕಾ? ಎಂಬ ರೇಂಜಿಗೆ ಎಗರಾಡಿದ್ದಾಳೆ.

ಸೋನುಗೆ ತರಾಟೆ
ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಸೋನುಳನ್ನು ಸೂಕ್ಷ್ಮವಾಗಿ ನೋಡಿಕೊಂಡು ಬಂದದ್ದು ರಾಕೇಶ್. ಆದರೆ ತಾಳ್ಮೆ ಎನ್ನುವುದು ಎಲ್ಲಿಯ ತನಕ ಇರಲು ಸಾಧ್ಯ. ತಾಳ್ಮೆ ಒಂದಲ್ಲ ಒಂದು ದಿನ ಕೆಡಲೇಬೇಕು. ಕೆಟ್ಟಿದೆ ಕೂಡ. ಮಾಡಿದ ಮಿಸ್ಟೇಕ್ ಬಗ್ಗೆ ಮಾತಾಡುತ್ತಿರುವಾಗ, ಸೋನು ನಾನು ಯಾವಾಗ ನಿನ್ನ ಮೇಲೆ ರೈಸ್ ಆಗುತ್ತೀನಿ ನಮ್ಮ ತಾಯಾಣೆ ಗೊತ್ತಿಲ್ಲ ಎಂದಿದ್ದಾಳೆ. ಇದಕ್ಕೆ ರಾಕಿ ಕಡೆಯಿಂದ ಇಂಥದ್ದೊಂದು ಉತ್ತರ ಬರುತ್ತೆ ಅಂತ ಸೋನು ಖಂಡಿತ ನಿರೀಕ್ಷೆ ಮಾಡಿಕೊಂಡಿರಲಿಲ್ಲ. ಆದರೆ ರಾಕಿ, ನೀನ್ ಯಾವಳೇ, ಯಾರ್ ನೀನು..? ನನ್ನ ಮೇಲೆ ರೈಸ್ ಆಗುವುದಕ್ಕೆ. ನಾನ್ ಹೇಳಬೇಕು ಅದನ್ನು ನೀನಲ್ಲ. ನಿನಗೆ ನಾನೇನು ಮಾಡುತ್ತಿಲ್ಲ. ಏನು ನಿಮ್ಮನೆ ಕೆಲಸದವನು ಅಂದುಕೊಂಡಿದ್ದೀಯಾ ಈ ರೀತಿ ಹೇಳುವುದಕ್ಕೆ ಅಥವಾ ಎಂಟರ್ಟೈನ್ ಮಾಡುವುದಕ್ಕೆ ಬಂದಿದ್ದೀನಾ ನಾನು. ಲಿಮಿಟ್ ಕ್ರಾಸ್ ಮಾಡಬೇಡ ಸೋನು ಎಂದು ಬುದ್ದಿ ಹೇಳಿದ್ದಾನೆ.


Click it and Unblock the Notifications











