Bigg Boss Kannada OTT: ಕ್ಯಾಪ್ಟನ್ ಪಟ್ಟಕ್ಕೆ ಸೋಮಣ್ಣ, ಗುರೂಜಿಗೆ ಉತ್ತಮ, ಜಯಶ್ರೀಗೆ ಕಳಪೆ!

ಬಿಗ್ ಬಾಸ್ ಸ್ಪರ್ಧಿಗಳು ಒಟಿಟಿಯ ಕಾರ್ಯಕ್ರಮದ ಮೂರು ವಾರಗಳು ಈಗಾಗಲೇ ಮುಗಿದಿವೆ. ಇನ್ನುಳಿದ ಮೂರು ವಾರಗಳಲ್ಲಿ ಯಾರು ಜನರ ಮನ ಗೆಲ್ಲುತ್ತಾರೆ, ಯಾರು ಬಿಗ್ ಬಾಸ್ ಮುಖ್ಯ ಸೀಸನ್‌ಗೆ ಎಂಟ್ರಿ ಕೊಡ್ತಾರೆ ಎನ್ನುವ ಕುತೂಹಲ ಹೆಚ್ಚುತ್ತಿದೆ.

ಆಗಸ್ಟ್ 6ರಂದು ಬಿಗ್ ಬಾಸ್ ಕನ್ನಡ ಓಟಿಟಿ ಲಾಂಚ್ ಆಗಿದೆ. ಭಿನ್ನ ವ್ಯಕ್ತಿತ್ವಯುಳ್ಳ ಹಲವು ಸ್ಪರ್ಧಿಗಳು ಈ ಓಟಿಟಿ ಸೀಸನ್‌ಗಲ್ಲಿ ಭಾಗಿಯಾಗಿದ್ದಾರೆ. ಇನ್ನು ಮನೆಯಲ್ಲಿ 3 ಎಲಿಮಿನೆಷನ್ ಮತ್ತು ಮನೆಯ 3ನೇ ಕ್ಯಾಪ್ಟೆನ್ಸಿಯನ್ನು ಸ್ಪರ್ಧಿಗಳು ನೋಡಿದ್ದಾರೆ.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಪ್ರತೀ ಸ್ಪರ್ಧಿಗೂ ಒಮ್ಮೆಯಾದರೂ ಕ್ಯಾಪ್ಟನ್ ಆಗಬೇಕು ಎನ್ನುವ ಆಸೆ ಇರುತ್ತದೆ. ಅದಕ್ಕಾಗಿಯೇ ಹಲವರು ಹಲವರೊಂದಿಗೆ ಮುಖ ಕೆಡಿಸಿಕೊಳ್ಳುವುದು ಕೂಡ ಉಂಟು. ಇನ್ನು ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್ ವಿಶೇಷವಾಗಿ ನಡೆಯುತ್ತದೆ.

ಕ್ಯಾಪ್ಟನ್ಸಿ ಆಟದಲ್ಲಿ ಎಲ್ಲರಿಗೂ ಸಮಪಾಲು!

ಕ್ಯಾಪ್ಟನ್ಸಿ ಆಟದಲ್ಲಿ ಎಲ್ಲರಿಗೂ ಸಮಪಾಲು!

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಯ್ಕೆ ನಡೆಯುವುದೇ ಒಂದು ಸ್ವಾರಸ್ಯಕರ ಸಂಗತಿ. ಕ್ಯಾಪ್ಟನ್ಸಿ ಸಿಗಬೇಕು ಎಂದರೆ ಮನೆಯಲ್ಲಿ ಎಲ್ಲರ ಮನ ಗೆಲ್ಲುವುದರ ಜೊತೆ ಆಟ ಗೆಲ್ಲುವುದು ಕೂಡ ಮುಖ್ಯ ಆಗುತ್ತದೆ. ಮೊದಲ ವಾರದ ಅರ್ಜುನ್ ರಮೇಶ್ ಮನೆಯ ಕ್ಯಾಪ್ಟನ್ ಆಗಿದ್ದರು. ಎರಡನೇ ವಾರ ಜಶ್ವಂತ್ ಬೋಪಣ್ಣ ಮನೆಯ ಕ್ಯಾಪ್ಟನ್ ಆಗಿದ್ದರು. 3ನೇ ಕ್ಯಾಪ್ಟನ್ ಆಗಲೂ ಎಲ್ಲರಿಗೂ ಅವಕಾಶ ಸಿಕ್ಕಿತ್ತು.

ಏಕಾಗ್ರತೆಯ ಆಟ!

ಏಕಾಗ್ರತೆಯ ಆಟ!

ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ಮೊದಲು ತಂಡಗಳ ನಡುವೆ ಸ್ಪರ್ಧೆ ಇರುತ್ತಿತ್ತು. ಅದರಲ್ಲಿ ಜಯಗಳಿಸಿದ ತಂಡಕ್ಕೆ ಕ್ಯಾಪ್ಟೆನ್ಸಿ ಆಟದಲ್ಲಿ ಭಾಗಿ ಆಗಲು ಅವಕಾಶ ಸಿಗುತ್ತಿತ್ತು. ಹಾಗಾಗಿ ಕೆಲವರು ಅವಕಾಸದಿಂದ ವಂಚಿತರಾಗಿದ್ದು ಇದೆ. ಹಾಗಾಗಿ ಮನೆಯ ಎಲ್ಲರಿಗೂ ಈ ಬಾರಿ ಕ್ಯಾಪ್ಟನ್ ಆಗುವ ಅವಕಾಶ ಸಿಕ್ಕಿತ್ತು. ತಿರುಗುವ ಚುರ್ಚಿಯಲ್ಲಿ ಕುಳಿತುಕೊಂಡು, 15 ನಿಮಿಷಗಳನ್ನು ಸರಿಯಾಗಿ ಎಣಿಸಬೇಕು. 15 ನಿಮಿಷವನ್ನು ಸರಿಯಾಗಿ ಎಣಿಸಿದವರು ಆಟ ಗೆಲ್ಲುತ್ತಾರೆ ಎನ್ನುವ ನಿಯಮ. ಇದರಲ್ಲಿ ಟಾಪ್ 2ರಲ್ಲಿ ಇದ್ದಿದ್ದು ಆರ್ಯವರ್ಧನ್ ಮತ್ತು ಸೋಮಣ್ಣ ಮಾಚಿಮಾಡ.

ಟಾಸ್ಕ್ ಗೆದ್ದ ಸೋಮಣ್ಣ ಮಾಚಿಮಾಡ!

ಟಾಸ್ಕ್ ಗೆದ್ದ ಸೋಮಣ್ಣ ಮಾಚಿಮಾಡ!

ಬಿಗ್ ಬಾಸ್ ಕೊಟ್ಟ ಟಾಸ್ಕ್‌ನಲ್ಲಿ 15 ನಿಮಿಷ 1 ಸೆಕೆಂಡು ಸಮಯ ತೆಗೆದುಕೊಂಡು ಗೆದ್ದಿದ್ದಾರೆ. ಹಾಗಾಗಿ ಮನೆಯ ಕ್ಯಾಪ್ಟನ್ ಆಗಿ ಸೋಮಣ್ಣ ನೇಮಕಗೊಂಡಿದ್ದಾರೆ. ಸೋಮಣ್ಣ ಮತ್ತು ಆರ್ಯವರ್ಧನ್ ಮಾತ್ರ 15 ನಿಮಿಷಕ್ಕೆ ಹತ್ತಿರ ಇದ್ದದ್ದು. ಇನ್ನುಳಿದ ಸ್ಪರ್ಧಿಗಳು ಕೆಲವರು ಹೆಚ್ಚು ನಿಮಿಷ ಎಣಿಸಿದರೆ, ಮತ್ತೇ ಕೆಲವರೂ ತೀರಾ ಕಡಿಮೆ ಎಣಿಸಿದ್ದಾರೆ. ಸದ್ಯ ಮನೆಯ 3ನೇ ಕ್ಯಾಪ್ಟನ್ ಆಗಿ ಸೋಮಣ್ಣ ಮಾಚಿಮಾಡ ನೇಮಕಗೊಂಡಿದ್ದಾರೆ.

ಆರ್ಯವರ್ಧನ್ ಗುರು ಉತ್ತಮ, ಜಯಶ್ರಿ ಕಳಪೆ!

ಆರ್ಯವರ್ಧನ್ ಗುರು ಉತ್ತಮ, ಜಯಶ್ರಿ ಕಳಪೆ!

ಮನೆಯ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ಬಳಿಕ, ಉತ್ತಮ ಮತ್ತು ಕಳಪೆ ಪ್ರದರ್ಶನ ಕೊಟ್ಟ ಅಭ್ಯರ್ಥಿಗಳನ್ನು ಮನೆಯ ಸದಸ್ಯರು ಆಯ್ಕೆ ಮಾಡಿದ್ದರು. ಅದರಂತೆ ಈ ಬಾರಿ ಆರ್ಯವರ್ಧನ್ ಗುರೂಜಿಗೆ ಉತ್ತಮ ಪಟ್ಟಸಿಕ್ಕಿದೆ. ಇನ್ನು ಈ ಬಾರಿ ಕಳಪೆ ಬೋರ್ಡ್ ಜಯಶ್ರೀಗೆ ದಕ್ಕಿದ್ದು, ಜಯಶ್ರೀ ಜೈಲು ಸೇರಿದ್ದಾರೆ

More from Filmibeat

English summary
Bigg Boss Kannada OTT August 24th Episode Written Update, Somanna Machimada Become The Captain, Arya Vardhan Guruji Is Best Player Of The Week, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X