ಬಿಗ್ ಬಾಸ್ ಓಟಿಟಿ: ಆರ್ಯವರ್ಧನ್ ವಿಚಾರ.. ಸೋನು-ಸಾನ್ಯಾ ನಡುವೆ 'ನಾಯಿ' ಜಗಳ!
ಬಿಗ್ ಬಾಸ್ ಮನೆಯಲ್ಲಿ ಮೈಂಡ್ ಗೇಮ್ ಕೂಡ ಹೆಚ್ಚು ಜನ ಆಡುತ್ತಾರೆ. ಈಗ ಹೇಗಿರಬೇಕು, ಆಟದಲ್ಲಿ ಹೇಗೆ ಆಡಬೇಕು, ಮಾತು ಯಾವ ರೀತಿ ಇರಬೇಕು ಇದೆಲ್ಲವೂ ಸ್ಟಾಟರ್ಜಿಯನ್ನು ಸಾಮಾನ್ಯವಾಗಿ ಮನೆಗೆ ಹೋದವರೆಲ್ಲಾ ಬಳಸುತ್ತಾರೆ. ಏನೇ ಸ್ಟಾಟರ್ಜಿ ಬಳಸಿದರೂ ಒಮ್ಮೊಮ್ಮೆ ಕೋಪ ನೆತ್ತಿಗೇರಿದಾಗ ರಿಯಾಲಿಟಿ ಹೊರಗೆ ಬಂದು ಬಿಡುತ್ತದೆ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ಇತ್ತೀಚೆಗೆ ಸೋನು ಮತ್ತು ಸಾನ್ಯಾ ನಡುವಿನ ಮಾತಿನ ಚಕಮಕಿ.
ಸೋನು ಬಗ್ಗೆ ಎಲ್ಲರಿಗೂ ಗೊತ್ತೆ ಇದೆ. ಸುದೀಪ್ ಸರ್ ಹೇಳಿದರೂ ಅಷ್ಟೇ ರಾಕಿ ಸಾಫ್ಟ್ ಆಗಿ ಹೇಳಿದರೂ ಅಷ್ಟೇ ಸೋನು, ಸೋನುನೆ. ಬದಲಾವಣೆ ಎಂಬುದು ಕ್ಷಣಿಕ. ಬೇರೆಯವರಿಗೆ ಹೇಳಿ ಬಿಡುತ್ತಾಳೆ. ಆದರೆ ಬೇರೆಯವರ ಮಾತನ್ನು ಕೇಳಿಸಿಕೊಳ್ಳುವ ತಾಳ್ಮೆಯನ್ನು ತಂದುಕೊಳ್ಳುವುದಿಲ್ಲ. ಸದ್ಯ ಇದೇ ವಿಚಾರ ಸಾನ್ಯಾಳ ಕೋಪವನ್ನು ನೆತ್ತಿಗೇರಿಸಿದೆ. ಆ ಕೋಪದಲ್ಲಿ ಸಾನ್ಯಾ ಹೋಗೆಲೆ ಅಂತ ಎಲ್ಲರ ಹುಬ್ಬೇರಿಸುವಂತೆ ಮಾತನಾಡಿದ್ದಾಳೆ.

ಸೋನು ಮೇಲೆಕೆ ಸಾನ್ಯಾಗೆ ಕೋಪ
ಸೋನು ಬಾಯಿ ಮುಂದೆ ಎಂಬ ಒಂದೇ ಕಾರಣಕ್ಕೆ ಹಲವರು ಅವಳ ಬಳಿ ಮಾತನಾಡುವುದಿಲ್ಲ. ಸಾನ್ಯಾ ಕೂಡ ಅದೇ ವಿಚಾರಕ್ಕೆ ಸೋನುಳಿಂದ ಬಹಳ ದೂರ. ಆದ್ರೆ ಸಾಕಷ್ಟು ಸಲ ಅವಳು ಕೂಡ ಬುದ್ದಿ ಹೇಳುವುದಕ್ಕೆ ಹೋಗುತ್ತಾಳೆ. ತನಗೆ ಉಲ್ಟಾ ಹೊಡೆದಾಗ ಸುಮ್ಮನೆ ಆಗಿ ಬಿಡುತ್ತಾಳೆ. ಆದರೆ ಆ ಡಿಸ್ಟೆನ್ಸ್ ಇನ್ನು ಹೆಚ್ಚಾಗಲು ಕಾರಣ ಸೋನು, ಸಾನ್ಯಾಳ ಬಾರದ ಕಣ್ಣೀರಿನ ಬಗ್ಗೆ ಮಾತನಾಡಿದ್ದು. ಅವಕಾಶಕ್ಕಾಗಿ ಕಣ್ಣೀರು ಹಾಕುತ್ತಾಳೆ ಎಂದು ಹೇಳಿದ ಮಾತು ಸಾನ್ಯಾಳಿಗೆ ಸೋನು ಮೇಲೆ ಕೋಪ ತರಿಸಿದೆ. ಆ ಬಗ್ಗೆ ಈಗಾಗಲೇ ಸ್ಪಷ್ಟನೆಯನ್ನು ಪಡೆದಿದ್ದಾಳೆ. ಆದರೂ ಮನಸ್ಸಿನ ಬೇಸರ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಸೋನು ಪಾಲಿನ ಡವ್ ರಾಜ ಇವರೇ
ಸೋನು ಮತ್ತು ಆರ್ಯವರ್ಧನ್ ಇತ್ತೀಚೆಗೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಅದು ಎಷ್ಟರಮಟ್ಟಿಗೆ ಕ್ಲೋಸ್ ಎಂದರೆ ಆರ್ಯವರ್ಧನ್ ಅವರನ್ನು ಸೋನು ಬಹುವಚನದಲ್ಲಿ ಮಾತನಾಡಿಸುವುದೇ ಇಲ್ಲ. ಹೋಗು ಬಾ ಎಂದು ಏಕವಚನದಲ್ಲಿಯೇ ಮಾತನಾಡಿಸುತ್ತಾಳೆ. ಅದೇ ರೀತಿ ಈಗಲೂ ಮಾತನಾಡಿದ್ದಾಳೆ. ಆಹಾಹಾ ಡವ್ ರಾಜಾ ಎಂದಿದ್ದಾಳೆ. ಈ ಮಾತು ಎಲ್ಲೆಲ್ಲೋ ಹೋಗಿ ಇನ್ನೆಲ್ಲಿಗೋ ಬಂದು ಜಗಳಕ್ಕೆ ಕಾರಣವಾಗಿದೆ.

ಸಾನ್ಯಾಳನ್ನು ಗಪ್ ಚಿಪ್ ಮಾಡಿದ ಸೋನು
ಸೋನು ಒಂಥರ ಸ್ಪೆಷಲ್ ಕ್ಯಾರೆಕ್ಟರ್. ಹಾಗಂತ ಎಲ್ಲಾ ಸಮಯದಲ್ಲೂ ಆ ಕ್ಯಾರೆಕ್ಟರ್ ಅನ್ನು ರಿಸೀವ್ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಕೆಲವೊಮ್ಮೆ ಕಾಮಿಡಿಗೆ ಅಂತ ಮಾತ್ರ ರಿಸೀವ್ ಮಾಡಿಕೊಳ್ಳಬೇಕಾಗುತ್ತದೆ. ಅತಿಯಾದರೆ ಅಮೃತ ಕೂಡ ವಿಷ ಎಂಬ ಮಾತಿನಂತೆ, ಸೋನು ಬಳಿ ಮಾತನಾಡುತ್ತಾ ಕೂತರೆ ಮನಸ್ಸಿಗೆ ಬೇಸರವಾಗುವುದು ಗ್ಯಾರಂಟಿ. ಈಗ ಸಾನ್ಯಾಗೂ ಅದೇ ಆಗಿದ್ದು. ಗುರೂಜಿಯನ್ನು ಹಂಗೆಲ್ಲ ಅನ್ನಬೇಡ ಎಂದು ಸಾನ್ಯಾ ಬುದ್ದಿ ಮಾತು ಹೇಳಿದ್ದು ಅಷ್ಟೇ ರೊಚ್ಚಿಗೆದ್ದ ಸೋನು, ಸಾನ್ಯಾ ನೀನು ಸುಮ್ಮನೆ ಕುಳಿತುಕೋ. ಉರಿಯೋ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬೇಡ ಎಂದಿದ್ದಾಳೆ. ಆಗ ವಿವರಣೆ ನೀಡಲು ಹೋದಾಗಲೂ ಸೋನು ಕೇಳಲೆ ಇಲ್ಲ ಉಶ್ ಉಶ್ ಎಂದಿದ್ದಾಳೆ. ಮತ್ತಷ್ಟು ಕೋಪಗೊಂಡ ಸಾನ್ಯಾ ಉಶ್ ಉಶ್ ಅನ್ನೋದಕ್ಕೆ ನಾವೇನು ನಾಯಿನಾ, ಹೋಗೆಲೆ ಅಂತ ಮುಖಕ್ಕೆ ಹೊಡೆದವಳಂತೆ ಹೇಳಿ ಎದ್ದು ಹೋಗಿದ್ದಾಳೆ.

ಗುರೂಜಿ ಕೊಟ್ಟ ಸಲುಗೆಯೇ ಜಗಳಕ್ಕೆ ಕಾರಣವಾ..?
ಮನೆ ಮಂದಿಯೆಲ್ಲಾ ಒಂದೇ ಕಡೆ ನೆಲದ ಮೇಲೆ ಕುಳಿತಿದ್ದಾರೆ. ರೂಪೇಶ್, ಆರ್ಯವರ್ಧನ್ ಅವರ ದೇಹದ ತುಂಬೆಲ್ಲಾ ಎಣ್ಣೆ ಮಸಾಜ್ ಮಾಡುತ್ತಿದ್ದಾರೆ. ಈ ವೇಳೆ ನೋವಾದವರಂತೆ ಆರ್ಯವರ್ಧನ್ ಆಡಿದ್ದಾರೆ. ಇದನ್ನು ಗಮನಿಸಿದ ಸೋನು, ಓಓ ಡವ್ ರಾಜಾ ಎಂದಿದ್ದಾಳೆ. ಅದಕ್ಕೆ ಗುರೂಜಿ ನಾನು ಯಾವತ್ತಾದರೂ ಡವ್ ರಾಣಿ ಎಂದಿದ್ದೀನಾ ಎಂದಿದ್ದಾರೆ. ಮತ್ತೆ ರಿಯಾಕ್ಟ್ ಮಾಡಿದ ಸೋನು, ಈಗ ಏನು ಕಾಣೀಸ್ತು ನಿಮಗೆ. ಎಲ್ಲರೂ ಅವರವರ ಏಜ್ ಮೀರಿ ಮಾತನಾಡಿದಾಗಲೇ ದೊಡ್ಡವರು ಎನಿಸಿಕೊಳ್ಳುವುದು. ಕೆಟ್ಟದಾಗಿ ಮಾಡುತ್ತೀರಾ ಡವ್ ರಾಜಾ ಅನ್ನೋದ್ರಲ್ಲಿ ತಪ್ಪೇ ಇಲ್ಲ ಎಂದಿದ್ದಾಳೆ. ಅದೇ ಸಮಯದಲ್ಲಿ ಸಾನ್ಯಾ ಮಧ್ಯೆ ಮಾತನಾಡಿದ್ದು, ಆಗ ಜಗಳ ಜೋರಾಗಿ ಹತ್ತಿಕೊಂಡಿದೆ.


Click it and Unblock the Notifications











