Bigg Boss Kannada OTT: ಫೀಲಿಂಗ್ ಲೆಸ್ ಹುಡುಗನಿಕ್ಯಾಕೆ ಕೇರ್ ಮಾಡೋದು ಸೋನು ಗೌಡ?
ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೆ ಮುನ್ನ ಸೋನು ಶ್ರೀನಿವಾಸ್ ಗೌಡನ ಹೆಸರು ಕೇಳಿದಾಕ್ಷಣಾ ಒಂದಷ್ಟು ನೆಗೆಟಿವ್ ಟ್ರೋಲ್‌ಗಳು ಕಂಡು ಬಂದವು. ಆದರೆ ಮನೆಯೊಳಗಿನ ಸದಸ್ಯರಿಗೆ ಸೋನು ಗೌಡನ ಬಗ್ಗೆ ಅಷ್ಟಾಗಿ ಪರಿಚಯವಿಲ್ಲದೆ ಇರಬಹುದು. ಸದ್ಯಕ್ಕೆ ಮನೆಯಿಂದ ಹೊರಗೆ ಬಂದವರನ್ನು ಕೇಳಿದರೆ ಸೋನು ಗೌಡ ದಿ ಬೆಸ್ಟ್ ಅಂತಾನೆ ಅಂತಾರೆ. ಕೆಲವೊಮ್ಮೆ ಇದೇ ಸೋನುಗೌಡ ಮಾತಿನಿಂದ ಎಲ್ಲರೂ ಕಿರಿಕಿರಿ ಅನುಭವಿಸಿದ್ದಾರೆ. ಆದರೆ ಸೋನು ಮನೆಗೆ ಹೋದಾಗ ಹೇಗಿದ್ದಳೋ ಈಗ ಅಷ್ಟರಮಟ್ಟಿಗೆ ಒರಟುತನ ಅವಳಲ್ಲಿ ಇಲ್ಲ. ಅದಕ್ಕೆಲ್ಲ ಕಾರಣ ರಾಕೇಶ್.
ಸೋನು ಮಾತಿನ ದಾಟಿಯಿಂದ ಯಾರು ಕೂಡ ಅವರ ಜೊತೆಗೆ ಸೇರುವುದಕ್ಕೆ ಇಷ್ಟಪಡುತ್ತಾ ಇರಲಿಲ್ಲ. ಆದರೆ ರಾಕಿ ಅವಳನ್ನು ಹತ್ತಿರ ಕೂರಿಸಿಕೊಂಡು ಮಗುಗೆ ಬುದ್ದಿ ಹೇಳಿದಂತೆ ಹೇಳುತ್ತಾ ಇದ್ದ. ಯಾರ ಮಾತನ್ನು ಕೇಳದ ಸೋನು, ರಾಕಿ ಅದು ತಪ್ಪು ಎಂದರೆ ಆ ಕೆಲಸವನ್ನು ಮಾಡುತ್ತಿರಲಿಲ್ಲ. ಮಿಸ್ ಆಗಿ ಮಾಡಿದರೂ ಮತ್ತೆ ಹೋಗಿ ಕ್ಷಮೆ ಕೇಳುತ್ತಾ ಇದ್ದಳು. ಇಂಥ ಸೋನುಗೆ ಇದೀಗ ರಾಕಿ ಮೇಲೆ ಲವ್ವಾಗಿದ್ಯಾ ಎಂಬ ಅನುಮಾನ ನೋಡುಗರಿಗೆ ಕಾಡುತ್ತಿದೆ.

ರಾಕಿಯ ಕೇರ್ ಟೇಕರ್ ಸೋನು
ಸೋನು ಜೈಲಿಗೆ ಹೋದಾಗ ರಾಕಿ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದರು. ರಾಕೇಶ್ ಮಾಡಿದ ಎಲ್ಲಾ ಸಹಾಯವನ್ನು ಮರೆತು ಬಿಟ್ಟಿದ್ದರು. ಜೈಲಿಗೆ ಹೋಗುವುದಕ್ಕೂ ಮುನ್ನ ಟೈಮ್ ಪಾಸ್ ಪಾರ್ಟನರ್ ಅಂತಷ್ಟೇ ಅಂದುಕೊಂಡಿದ್ದಳು. ಆದರೆ ಅವನ ತ್ಯಾಗ, ಅವನ ತಾಳ್ಮೆ ಬಗ್ಗೆ ಸುದೀಪ್ ಅದ್ಯಾವಾಗ ಸೋನುಗೆ ತಿಳಿ ಹೇಳಿದರೋ. ಅಲ್ಲಿಂದ ಬದಲಾದ ಸೋನು, ರಾಕಿಗೆ ತುಂಬಾ ಕಾಳಜಿ ತೋರಿಸಿಲು ಶುರು ಮಾಡಿದ್ದಾಳೆ. ತಿನ್ನುವ ವಿಚಾರದಲ್ಲೂ ಅಷ್ಟೇ ರಾಕೇಶ್‌ಗಾಗಿ ಎತ್ತಿ ಇಡುತ್ತಾರೆ. ಹಣ್ಣನ್ನು ಕಟ್ ಮಾಡುವಾಗ ಇದು ರಾಕಿಗೆ ಇರಲಿ ಎನ್ನುತ್ತಿದ್ದಾರೆ. ಸೋನು ಮಾಡುವ ಕೇರ್ ನೋಡಿ ಮನೆ ಮಂದಿಗೆಲ್ಲಾ ಆಶ್ಚರ್ಯವಾಗಿದೆ.

ಸೋನು ಬಗ್ಗೆ ರಾಕಿಗೆ ಯಾವ ಭಾವನೆಯೂ ಇಲ್ಲ
ಸೋನು ರಿಯಲ್ ಕ್ಯಾರೆಕ್ಟರ್ ಅನ್ನೇ ಎಲ್ಲೆಡೆ ತೋರಿಸುವುದು. ಆದರೆ ರಾಕಿಗೆ ಅವಳ ಮೇಲೆ ಇರುವ ಭಾವನೆಯೇ ಬೇರೆ. ಜಯಶ್ರೀ ಕೇಳುತ್ತಾಳೆ, ಸೋನುಗೆ ನಿನ್ನ ಮೇಲೆ ಇನ್ನು ಪೊಸೆಸಿವ್ ನೆಸ್ ಜಾಸ್ತಿ ಇದೆ ಎಂದು. ಆಗ ರಾಕಿ ಹೇಳುತ್ತಾನೆ ಅದು ನಂಗೆ ಗೊತ್ತಿದೆ. ಅದಕ್ಕೆ ಬೇಕು ಅಂತಾನೆ ನಾನು ಕಟ್ ಮಾಡುವುದು. ನಂಗೆ ಅವಳು ಮಾಡುವುದು ಎರಡು ದಿನದಿಂದ ಸಖತ್ ಟ್ರಿಗರ್ ಆಗುತ್ತಿದೆ. ನಾನು ಯಾವತ್ತು ಅವಳಿಗೆ ನೀನು ನನ್ನ ಬೆಸ್ಟ್ ಫ್ರೆಂಡ್. ಕೇರ್ ಟೇಕರ್ ಅಂತ ಹೇಳಿಯೇ ಇಲ್ಲ. ಮೊದಲಿನಿಂದಲೂ ಅವಳೇ ಅಂದುಕೊಂಡು ಬಿಟ್ಟಿದ್ದಾಳೆ ಎಂದಿದ್ದಾನೆ.

ಸೋನುಗೆ ಬೆಳೆದಿದೆ ಭಾವನೆ
ರಾಕಿ ಮತ್ತು ಜಯಶ್ರೀ ಮಾತನಾಡುವಾಗ ಅಲ್ಲಿಂದ ಎದ್ದು ಹೋದ ಸೋನು ತುಂಬಾನೇ ನೋವು ಮಾಡಿಕೊಂಡಿದ್ದಾಳೆ. ಮಿರರ್ ಮುಂದೆ ನಿಂತು ಒಬ್ಬಳೆ ಮಾತನಾಡಿಕೊಳ್ಳುತ್ತಿದ್ದಾಳೆ. ಅವನು ಬೇರೆ ಹುಡುಗಿಯರ ಜೊತೆ ಇದ್ದರೆ ನನಗೆ ಯಾಕೆ ಬೇಸರ ಆಗುತ್ತಿದೆ. ರಾಕಿಗೆ ಯಾಕೆ ಇಷ್ಟೊಂದು ಅಟ್ಯಾಚ್ ಆದೆ. ಒಂದು ತಾಯಿ ಮಗುಗೆ ಟ್ರೀಟ್ ಮಾಡಿದ್ದೀಯಾ ಅಷ್ಟೇ. ಫೀಲಿಂಗ್ಸ್ ಇಲ್ಲದೆ ಇರುವವನ ಹತ್ತಿರ ಹೋಗಿ, ಯಾಕೆ ಕೇರ್ ಮಾಡುತ್ತೀಯಾ ನೀನು ಎಂದು ತನಗೆ ತಾನೇ ಹೇಳಿಕೊಂಡು ನೊಂದುಕೊಂಡಿದ್ದಾಳೆ.

ಸೋನು ಬದಲಾಗುತ್ತಾರಾ?
ಸೋನು ಒಬ್ಬ ಎಂಟರ್ಟೈನರ್. ಮನೆಯಲ್ಲಿ ಇನ್ನೇನು ದಿನ ಮುಗಿಯುತ್ತಿದ್ದಂತೆ ಕೆಲವೊಬ್ಬರು ಇದ್ದಂತೆ ಇಲ್ಲವೇ ಇಲ್ಲ. ಅದರಲ್ಲೂ ರಾಕಿ ಮತ್ತು ಆರ್ಯವರ್ಧನ್ ನಡವಳಿಕೆಯಲ್ಲಿ ಕೊಂಚ ಬದಲಾದಂತೆ ಕಾಣುತ್ತಿದೆ. ರಾಕಿ, ಸೋನುಳನ್ನು ಅಷ್ಟಾಗಿ ಎಂಟರ್ಟೈನ್ ಮಾಡುತ್ತಿಲ್ಲ. ಈಗ ಜಯಶ್ರೀ ಹೇಳಿದ ಮಾತಿನಿಂದ ಇನ್ನಷ್ಟು ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಇದೆ. ಸೋನು ಗೊತ್ತಲ್ಲ. ಅವನು ಅಂತರ ಕಾಯ್ದುಕೊಂಡರೆ ಸೋನು ಪೂರ್ತಿ ಫ್ರೆಂಡ್‌ಶಿಪ್ ಅನ್ನೇ ಕಟ್ ಮಾಡಿಕೊಳ್ಳುವ ಹುಡುಗಿ. ಆದರೆ ಯಾರನ್ನು ಹಚ್ಚಿಕೊಳ್ಳದ ಸೋನು ರಾಕೇಶ್ ಅನ್ನು ಹಚ್ಚಿಕೊಂಡಿದ್ದಾರೆ. ಹೀಗಾಗಿ ಮನಸ್ಸಿಗೆ ನೋವಾಗಿರಬೇಕು ಅನ್ನುತ್ತಿದ್ದಾರೆ ವೀಕ್ಷಕರು.


Click it and Unblock the Notifications











