Bigg Boss Kannada OTT: ಸೋಮಣ್ಣನ ವಿರುದ್ಧ ರೊಚ್ಚಿಗೆದ್ದ ಜಯಶ್ರೀ: ಮಾಚಿಮಾಡ ಹೇಳಿದ್ದೇನು ಗುರು?

By ಎಸ್ ಸುಮಂತ್

ಸೋಮಣ್ಣ ಮಾಚಿಮಾಡ ಬಿಗ್ ಬಾಸ್ ಮನೆಯಲ್ಲಿ ಸೀನಿಯರ್. ಆರ್ಯವರ್ಧನ್ ವಯಸ್ಸಿನಲ್ಲಿ ದೊಡ್ಡವರಾದರೂ ಎಲ್ಲವನ್ನು ನಿಭಾಯಿಸುವುದರಲ್ಲಿ ಸೋಮಣ್ಣ ದೊಡ್ಡವರೆನಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಸೋಮಣ್ಣಗೆ ಇತ್ತೀಚೆಗೆ ಎಲ್ಲರೂ ಸೇರಿ ಹೆಡ್ ಮಾಸ್ಟರ್ ಎಂಬ ಬಿರುದನ್ನು ನೀಡಿದ್ದಾರೆ. ಸೋಮಣ್ಣ ಮನಸ್ಸಲ್ಲಿ ಅಷ್ಟು ನೋವಿದ್ದರು ಎಲ್ಲದನ್ನು ಮರೆತು ಎಲ್ಲರ ಜೊತೆಗೂ ಬೆರೆಯುತ್ತಿರುತ್ತಾರೆ. ಆದರೆ ಅದ್ಯಾಕೋ ಜಯಶ್ರೀ, ಸೋಮಣ್ಣನ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಚೈತ್ರಾ ಮನೆಯಿಂದ ಹೊರ ನಡೆದ ಮೇಲೆ ಜಯಶ್ರೀ ಒಂಟಿಯಾಗಿಬಿಟ್ಟಿದ್ದೀನಿ ಅಂತ ಗೊಳೋ ಎನ್ನುತ್ತಿದ್ದರು. ಗೋಳಾಡುತ್ತಾ ಕುಳಿತಿದ್ದರು. ಅವರ ನೋವನ್ನು ಅರ್ಥ ಮಾಡಿಕೊಂಡ ಸೋಮಣ್ಣ ಸಮಾಧಾನ ಮಾಡಿದ್ದರು. ಆದರೆ ಜಯಶ್ರೀ ತಮಾಷೆ ಮಾಡಿದ್ದಕ್ಕೆಲ್ಲ ಮನಸ್ತಾಪ ಮಾಡಿಕೊಳ್ಳುತ್ತಿದ್ದಾರೆ. ಸೋಮಣ್ಣ ಹೇಳಿದ್ದನ್ನು ರಾಂಗ್ ಆಗಿ ಅರ್ಥ ಮಾಡಿಕೊಂಡು ತಿರುಗಿ ಬಿದ್ದಿದ್ದಾಳೆ.

ಸೋಮಣ್ಣನ ವಿಚಾರಕ್ಕೆ ಜಯಶ್ರೀ ಹೇಳಿದ್ದೇನು?

ಸೋಮಣ್ಣನ ವಿಚಾರಕ್ಕೆ ಜಯಶ್ರೀ ಹೇಳಿದ್ದೇನು?

ಜಯಶ್ರೀ ಹಾಗೂ ಸೋಮಣ್ಣನ ನಡುವಿನ ಜಗಳ ಇದೆ ಮೊದಲೇನಲ್ಲ. ಕ್ಯಾಪ್ಟನ್ ವಿಚಾರದಲ್ಲಿಯೂ ಈ ಹಿಂದೊಮ್ಮೆ ದೊಡ್ಡ ಮಟ್ಟದಲ್ಲಿಯೇ ಜಗಳವಾಗಿತ್ತು. ಥ್ಯಾಂಕ್ಸ್ ಹೇಳಿಲ್ಲ ಅಂತ ಸೋಮಣ್ಣ, ನಾನ್ಯಾಕೆ ಹೇಳಲಿ ಅಂತ ಜಯಶ್ರೀ. ಹೀಗೆ ಜಗಳ ಮುಂದುವರೆದು ಅದು ಸುದೀಪ್ ವೇದಿಕೆ ತನಕ ತಲುಪಿತ್ತು. ಇದೀಗ ಸೋಮಣ್ಣ ತಮಾಷೆ ಮಾಡಿದ್ದನ್ನು ಜಯಶ್ರೀ ಬೇರೆ ರೀತಿಯೇ ತಿಳಿದುಕೊಂಡಿದ್ದಾರೆ. ಸೋನು ಬಳಿ ಸೋಮಣ್ಣನ ಬಗ್ಗೆ ಮಾತನಾಡುತ್ತಿದ್ದಾರೆ.

ಜಯಶ್ರೀಯ ಬಗ್ಗೆ ಮಾತನಾಡುವಾಗ ಎಚ್ಚರ

ಜಯಶ್ರೀಯ ಬಗ್ಗೆ ಮಾತನಾಡುವಾಗ ಎಚ್ಚರ

ಬಿಗ್ ಬಾಸ್ ಓಟಿಟಿಯ ಇಂದಿನ ಸಂಚಿಕೆಯ ಪ್ರೋಮೊ ಒಂದು ರಿಲೀಸ್ ಆಗಿದೆ. ಅದರಲ್ಲಿ ಜಯಶ್ರೀ ಹಾಗೂ ಸೋಮಣ್ಣನ ಮಾತುಕತೆಗಳು, ಜಗಳ ವೈಷಮ್ಯ ಅನಾವರಣವಾಗಿದೆ. ಅಡುಗೆ ಮನೆಯಲ್ಲಿ ಸೋಮಣ್ಣ ಹಾಗೂ ಗುರೂಜಿ ತರಕಾರಿ ಕಟ್ ಮಾಡುತ್ತಾ ಮಾತನಾಡುತ್ತಿರುತ್ತಾರೆ. ಅಲ್ಲಿಗೆ ಬಂದ ಜಯಶ್ರೀ, ಗುರೂಜಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಬರೀ ನೀವಿಬ್ಬರೇ ಮಾಡಿ. ನಮಗ್ಯಾರಿಗೂ ಬಿಡಬೇಡಿ ಎಂದು ಆಗ ಅಲ್ಲಿಯೇ ಇದ್ದ ಸೋಮಣ್ಣ, ಜಯಶ್ರೀ ಮಾತೆಲ್ಲವನ್ನು ನಂಬಿಕೊಂಡು ಬಿಟ್ಟರೆ ಮುಗೀತು. ರೂಲ್ಸ್ ಎಲ್ಲಾ ಬ್ರೇಕ್ ಮಾಡುವುದೇ ಜಯಶ್ರೀ ಎಂದಿದ್ದಾರೆ.

ಸೋಮಣ್ಣನದ್ದು ನಮ್ಮ ಮುಂದೆ ಮಾತ್ರ ಪೌರುಷ

ಸೋಮಣ್ಣನದ್ದು ನಮ್ಮ ಮುಂದೆ ಮಾತ್ರ ಪೌರುಷ

ಸೋಮಣ್ಣ ಅವರು ತಮಾಷೆ ಮಾಡಿದರೋ, ಇಲ್ಲ ಬುದ್ದಿ ಮಾತು ಹೇಳಿದರೋ ತಿಳಿಯುತ್ತಿಲ್ಲ. ಆದರೆ ಜಯಶ್ರೀ ಅಂತು ತುಂಬಾನೇ ಕೋಪ ಮಾಡಿಕೊಂಡಿದ್ದಾಳೆ. ಬೆಡ್ ಮೇಲೆ ಮಲಗಿ ಸೋನು ಬಳಿ ಆಕ್ರೋಶದಿಂದ ಹೇಳುತ್ತಿದ್ದಾಳೆ. ಸೋಮಣ್ಣ ಮಾತನಾಡುವುದು, ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಅವರ ಒಂದೊಂದು ಮಾತುಗಳು ಅಸಹ್ಯ ಎನಿಸುತ್ತದೆ. ಏನು ಮಾತನಾಡುತ್ತೀನಿ ಎಂಬುದೇ ಗೊತ್ತಾಗುವುದಿಲ್ಲ. ಅವರದ್ದು ಏನಿದ್ದರು ನಮ್ಮ ಮುಂದೆ ಪೌರುಷ ಅಷ್ಟೇ. ನಾನು ಮಾತನಾಡುವುದಕ್ಕೆ ನಿಂತರೆ ಅಷ್ಟೇ ಎಂದು ಹೇಳಿದ್ದಾರೆ.

ಜಯಶ್ರೀ ಒಂದೊಂದು ದಿನ ಒಂದೊಂದು ರೀತಿ

ಜಯಶ್ರೀ ಒಂದೊಂದು ದಿನ ಒಂದೊಂದು ರೀತಿ

ಸೋಮಣ್ಣ ಗುರೂಜಿ ಬಳಿ ಮಾತನಾಡುವಾಗ ನಮ್ಮ ಜಯಶ್ರೀ ಎಂದೇ ಮೆನ್ಶನ್ ಮಾಡಿದ್ದಾರೆ. ಅಂದರೆ ಒಂದು ಸಲಿಗೆಯಿಂದ ರೇಗಿಸಿರಬೇಕು ಎಂಬ ಭಾವ ಮೂಡದೆ ಇರುವುದಿಲ್ಲ. ಆದರೆ ಜಯಶ್ರೀ ಮಾತ್ರ ಸಿಕ್ಕಾಪಟ್ಟೆ ರೊಚ್ಚಿಗೆ ಎದ್ದಿದ್ದಾರೆ. ಇನ್ನು ನಿನ್ನೆ ತಾನೇ ಸೋಮಣ್ಣ ಅವರನ್ನು ಹಾಡಿ ಕೊಂಡಾಡಿದ್ದಳು ಜಯಶ್ರೀ. ಗುರೂಜಿ ಜೊತೆ ಕೂತು ಎಲ್ಲರೂ ಸಮಯಕ್ಕೆ ತಕ್ಕಂತೆ ಮಾತನಾಡುವವರೇ ಆಗಿದ್ದಾರೆ ಎನ್ನುತ್ತಿದ್ದಳು. ಮಾತನಾಡಬೇಕಲ್ಲ ಅಂತ ಮಾತನಾಡುತ್ತಾರೆ ಅಂತ ದೂರು ನೀಡುತ್ತಿದ್ದಳು. ಅಲ್ಲಿಗೆ ಬಂದ ಸೋಮಣ್ಣ ಕೂಡ ಜಯಶ್ರೀ ಯಾವ ಪದ ಉಪಯೋಗಿಸಿದ್ದಳೋ ಅದೇ ಪದವನ್ನು ಬಳಸಿದರು. ಆಗ ಹೌದು ಹೌದು ಸೋಮಣ್ಣ ನಾನು ಈಗ ಅದನ್ನೇ ಮಾತನಾಡುತ್ತಿದ್ದೆ ಎಂದಿದ್ದಳು. ಆದರೀಗ ಸೋಮಣ್ಣ ಮಾತನಾಡುವುದೆಲ್ಲ ಅಸಹ್ಯ ಎಂದಿದ್ದಾಳೆ.

More from Filmibeat

English summary
Bigg Boss Kannada OTT September 8th Episode Written Update. Here is the details about Somanna and Jayashree Talk Fight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X