For Quick Alerts
  ALLOW NOTIFICATIONS  
  For Daily Alerts

  Bigg Boss Kannada OTT: ಆಯ್ತು ಬಿಡಿ ನಂಬುತ್ತೀವಿ : ನಂದಿನಿ ಗಾಬರಿಗೆ ಬಿಗ್ ಬಾಸ್ ರಿಯಾಕ್ಷನ್!

  By ಎಸ್ ಸುಮಂತ್
  |

  ಪ್ರತಿವಾರ ಬೆಸ್ಟ್ ಪರ್ಫಾಮರ್ ಯಾರು? ವರ್ಸ್ಟ್ ಪರ್ಫಾಮರ್ ಯಾರು? ಎಂಬ ಆಯ್ಕೆಗಳಿರುತ್ತವೆ. ಅದರಂತೆ ಈ ವಾರ ಕೂಡ ಆ ಆಯ್ಕೆ ಪ್ರಕ್ರಿಯೆ ನಡೆದಿದೆ. ವರ್ಸ್ಟ್ ಪರ್ಫಾಮರ್‌ಗೆ ಜೈಲುವಾಸಕ್ಕೆ ಕಳುಹಿಸಲಾಗುತ್ತದೆ. ಈ ವಾರ ಜೈಲಿಗೆ ಹೋಗಿದ್ದು ಜಶ್ವಂತ್. ಪ್ರೇಮಿಯನ್ನು ಸಮಾಧಾನ ಮಾಡುತ್ತಾ ಕುಳಿತಿದ್ದ ನಂದು ನಿದ್ದೆಗೆ ಜಾರಿ ಬಿಟ್ಟಿದ್ದಾಳೆ‌. ಆದರೆ ಬಿಗ್ ಬಾಸ್ ಎಚ್ಚರಿಸಿದಾಕ್ಷಣ ಅವಳ ಮುಖ ಒಂಥರ ಬಿಳುಚಿಕೊಂಡಿದೆ.

  ಮನೆಗೆ ಬಂದಾಗಿನಿಂದ ಸದಸ್ಯರಿಗೆ ಭಯ ಇತ್ತು. ಜಶು ಮತ್ತು ನಂದಿನಿ ತುಂಬಾ ಸ್ಟ್ರಾಂಗ್ ಅಂದುಕೊಂಡಿದ್ದರು. ಜಶ್ವಂತ್ & ನಂದಿನಿ ಆಟ ಆಡಿದ್ದು ಅದೇ ರೀತಿಯಾಗಿತ್ತು. ಎಲಿಮಿನೇಟ್ ಅಂತ ಬಂದಾಗ ಅವರಿಬ್ಬರ ವಿಚಾರದಲ್ಲಿ ಕಾರಣ ಕೊಡುತ್ತಾ ಇದ್ದದ್ದೇ ಅವರಿಬ್ಬರು ಸ್ಟ್ರಾಂಗ್ ಎಂದು. ಆದರೆ ಈ ವಾರ ಜಶ್ವಂತ್ ಗೆ ಅದೇನಾಯ್ತೋ ಏನೋ ಕಳಪೆ ತೆಗೆದುಕೊಂಡಿದ್ದಾರೆ.

  Bigg boss Kannada OTT: ರಾಕೇಶ್ ಅಡಿಗ ಎದುರಾಳಿಗೆ ಶುಭಕೋರಿದ ಎಕ್ಸ್ ಗರ್ಲ್‌ಫ್ರೆಂಡ್ ದಿವ್ಯಾ ಸುರೇಶ್!Bigg boss Kannada OTT: ರಾಕೇಶ್ ಅಡಿಗ ಎದುರಾಳಿಗೆ ಶುಭಕೋರಿದ ಎಕ್ಸ್ ಗರ್ಲ್‌ಫ್ರೆಂಡ್ ದಿವ್ಯಾ ಸುರೇಶ್!

  ನಂದುಗೆ ಸಾಂಗ್ ಹಾಕಿದ ಬಿಗ್ ಬಾಸ್

  ನಂದುಗೆ ಸಾಂಗ್ ಹಾಕಿದ ಬಿಗ್ ಬಾಸ್

  ವರ್ಸ್ಟ್ ಪರ್ಫಾಮೆನ್ಸ್ ಕೊಟ್ಟವರಿಗೆ ಜೈಲಿಗೆ ಕಳುಹಿಸಲಾಗುತ್ತದೆ. ಜೈಲಿನ ಮುಂಭಾಗ ಸೋಫಾ ಹಾಕಲಾಗಿರುತ್ತದೆ. ಆ ಸೋಫಾದಲ್ಲಿ ಜೈಲಿನ ಒಳಗಿರುವವರಿಗೆ ಬೇಸರವಾಗದಂತೆ ನೋಡಿಕೊಳ್ಳಲು ಸೋಫಾ ಮೇಲೆ ಕುಳಿತ ಉಳಿದ ಸದಸ್ಯರು ಮಾತುಕತೆಯಲ್ಲಿ ತೊಡಗುತ್ತಾರೆ. ಹೀಗೆ ಜಶ್ವಂತ್‌ಗೆ ಬೇಸರವಾಗಬಾರದು ಎಂದುಕೊಂಡ ನಂದಿನಿ ಅವನ ಜೊತೆ ಮಾತನಾಡುತ್ತಾ ಕುಳಿತಿದ್ದರು. ಆದರೆ ಹಾಗೇ ನಿದ್ದೆಗೆ ಜಾರಿ ಬಿಟ್ಟಿದ್ದಾರೆ.

  Bigg Boss Kannada OTT: ಗುರೂಜಿ ಹಾಗೂ ಸೋಮಣ್ಣಗೆ ನಿದ್ದೆ ಗಿಫ್ಟ್ : ಆದರೆ 30 ನಿಮಿಷ ಮಾತ್ರ?Bigg Boss Kannada OTT: ಗುರೂಜಿ ಹಾಗೂ ಸೋಮಣ್ಣಗೆ ನಿದ್ದೆ ಗಿಫ್ಟ್ : ಆದರೆ 30 ನಿಮಿಷ ಮಾತ್ರ?

  ನಂದು ಶಾಕ್ ಆಗಿದ್ದು ಯಾಕೆ?

  ನಂದು ಶಾಕ್ ಆಗಿದ್ದು ಯಾಕೆ?

  ಬಿಗ್ ಬಾಸ್ ಮನೆಯಲ್ಲಿ ಯಾರಾದರೂ ಮಲಗಿದರೆ ಅವರನ್ನು ಎಬ್ಬಿಸುವುದು ಬಿಗ್ ಬಾಸ್. ಮನೆಯಲ್ಲಿಯೇ ಇರುವ ಕಾರಣ ನಿದ್ದೆಗೆ ಜಾರುವುದು ಸಾಮಾನ್ಯ. ಅದರಂತೆ ನಂದಿನಿ ಕೂಡ ಒಂದು ಕ್ಷಣ ಕಣ್ಣು ಮುಚ್ಚಿದ್ದಾಳೆ. ಆದರೆ ತಕ್ಷಣ ಬಂದ ಬಿಗ್ ಬಾಸ್ ಧ್ವನಿಗೆ ಬೆಚ್ಚಿಬಿದ್ದಿದ್ದಾಳೆ. ನಾನಲ್ಲ ನಾನಲ್ಲ ಎಂದಿದ್ದಾಳೆ. ಈ ಪ್ರೋಮೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಮಾಡಲಾಗಿದ್ದು, ಆಯ್ತು ಬಿಡಿ ನಂಬೋಣಾ ಎಂದು ಕ್ಯಾಪ್ಶನ್ ಹಾಕಲಾಗಿದೆ.

  ಜಶ್ವಂತ್ ವಿರುದ್ಧ ಜಯಶ್ರೀ ಹೇಳಿದ್ದೇನು?

  ಜಶ್ವಂತ್ ವಿರುದ್ಧ ಜಯಶ್ರೀ ಹೇಳಿದ್ದೇನು?

  ಈ ವಾರ ಜಶ್ವಂತ್ ಗೆ ಕಳಪೆ ಬೋರ್ಡ್ ನೀಡಲಾಗಿದೆ. ಈ ವೇಳೆ ಮನೆಯವರೆಲ್ಲಾ ಕಳಪೆ ಬೋರ್ಡ್ ನೀಡುವುದರ ಜೊತೆಗೆ ಕಾರಣವನ್ನು ಹೇಳಬೇಕಾಗುತ್ತದೆ. ಆದರೆ ಜಶ್ವಂತ್ ಇದನ್ನು ಒಪ್ಪಿಕೊಳ್ಳುವುದಕ್ಕೆ ರೆಡಿ ಇಲ್ಲ. ಹೀಗಾಗಿ ಜಯಶ್ರೀ ಅದನ್ನು ವಿರೋಧಿಸಿದ್ದಾಳೆ‌. ಹೇಗೆ ಗೆಲುವನ್ನು ರಿಸೀವ್ ಮಾಡಿಕೊಳ್ತೀವಿ ಹಾಗೇ ಸೋಲನ್ನು ರಿಸೀವ್ ಮಾಡಿಕೊಳ್ಳಬೇಕು. ನೀನು ಈಗ ಕೇವಲ ಗೆಲುವು ಬೇಕು ಎಂಬುದನ್ನಷ್ಟೇ ಹೇಳುತ್ತಿದ್ದೀಯಾ ಎಂದು ಜಯಶ್ರೀ ವಾದ ಮಾಡಿದ್ದಾಳೆ. ಜಶ್ವಂತ್ ಮಾತನಾಡಲು ಹೋದಾಗಲೂ ಬಿಡದೆ ಜಯಶ್ರೀ ತನ್ನ ಸಮರ್ಥನೆ ನೀಡಿದ್ದಾಳೆ.

  ಓವರ್ ಕಾನ್ಫಿಡೆನ್ಸ್ ಜಾಸ್ತಿ ಆಯ್ತಾ?

  ಓವರ್ ಕಾನ್ಫಿಡೆನ್ಸ್ ಜಾಸ್ತಿ ಆಯ್ತಾ?

  ಜಶ್ವಂತ್ ಮನೆಗೆ ಬಂದಾಗಿನಿಂದ ಚೆನ್ನಾಗಿ ಆಡುತ್ತಿದ್ದ. ಮನೆಯವರು ಕೂಡ ಅದನ್ನೇ ಹೇಳುತ್ತಿದ್ದರು. ಆದರೆ ಈ ವಾರ ಜಶ್ವಂತ್ ಯಾವ ಆಟವನ್ನು ಸರಿಯಾಗಿ ಆಡಿಲ್ಲ. ಒಂದೆರಡು ಆಟದಲ್ಲಿ ಸೋಲು ಕಂಡಿದ್ದರೆ, ಇನ್ನೊಂದೆರಡು ಆಟದಲ್ಲಿ ನಿಯಮ ಮೀರಿದ್ದಾರೆ. ಇದು ಓವರ್ ಕಾನ್ಫಿಡೆನ್ಸ್ ಏನಾದರೂ ಹೆಚ್ಚಾಯ್ತಾ ಎಂಬ ಚರ್ಚೆಗಳು ನಡೆಯುತ್ತಿವೆ. ಜೊತೆಗೆ ಇತ್ತೀಚೆಗೆ ನಂದು ಹಾಗೂ ಜಶ್ವಂತ್ ನಡುವೆ ರಾಮಾಯಣವೇ ನಡೆಯುತ್ತಿದೆ. ಇದರ ನಡುವೆ ಜಶ್ವಂತ್ ಕಳಪೆ ಪರ್ಫಾಮರ್ ಆಗಿದ್ದು, ವೀಕ್ಷಕರ ತಲೆಗೆ ಹುಳ ಬಿಟ್ಟಂತಾಗಿದೆ.

  English summary
  Bigg Boss Kannada OTT September 9th Episode Written Update. Here is the details about jashwanth worst performance.
  Friday, September 9, 2022, 19:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X