Bigg Boss Kannada OTT: ಪ್ರೀತಿ, ಪ್ರೇಮದ ಬಗ್ಗೆ ಸೋಮಣ್ಣ-ಜಯಶ್ರೀ ಟಾಕ್: ಆರ್ಯವರ್ಧನ್‌ಗೆ ಶಾಕ್!
ಆರ್ಯವರ್ಧನ್ ಅಂದ್ರೆನೇ ಮಗು ಥರ ಅನ್ನೋದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಅವರ ಮುಗ್ಧತೆಗೆ ಎಲ್ಲಾ ಫಿದಾ ಆಗಿದ್ದಾರೆ. ಅದಕ್ಕೆ ಬಿಗ್ ಬಾಸ್ ಮನೆಯಲ್ಲಿ ಅವರು ಇರಲೇಬೇಕೆಂದು ವೋಟ್ ಮಾಡಿ, ಅವರನ್ನು ಸೇಫರ್ ಝೋನ್‌ನಲ್ಲಿ ಇಟ್ಟಿದ್ದಾರೆ. ಬಿಗ್ ಮನೆ ಸದಸ್ಯರಿಗೆ ಹೋಲಿಕೆ ಮಾಡಿಕೊಂಡರೆ, ಆರ್ಯವರ್ಧನ್ ಮಾತಾಡುವುದು ಕಡಿಮೆನೇ. ಆದರೆ ಅವರ ಮಾತನ್ನು ಕೇಳುವುದಕ್ಕೇನೆ ಒಂದಷ್ಟು ಬಳಗವಿದೆ. ಅವರು ಮಾತನಾಡಿದ್ದು ಅರ್ಥವಾಗದೇ ಹೋದರೂ, ಆಗಾಗ ಮಾತನಾಡಿ ಮನರಂಜನೆ ನೀಡುತ್ತಾರೆ.
ಸಧ್ಯ ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮೆಚ್ಚುಗೆ ಪಡೆದಿರುವವರು ಆರ್ಯವರ್ಧನ್. ಅಷ್ಟೆ ಅಲ್ಲ ಕೇರಿಂಗ್ ವಿಚಾರ ಬಂದಾಗಲೂ ಹಿಂದೆ ಮುಂದೆ ನೋಡದೆ ಕಾಳಜಿ ತೋರಿಸುತ್ತಾರೆ. ಅದರಲ್ಲೂ ಸೋಮಣ್ಣ ಎಂದರೆ ತುಂಬಾನೇ ಇಷ್ಟಪಡುವ ಆರ್ಯವರ್ಧನ್, ಊಟ, ತಿಂಡಿ ವಿಚಾರದಲ್ಲೂ ಅವರಿಗೆ ಸಾಕಷ್ಟು ಕಾಳಜಿ ತೋರಿಸುತ್ತಾರೆ. ಯಾವಾಗಲೂ ಸೋಮಣ್ಣನ ಜೊತೆಗೆ ಇರುವ ಆರ್ಯವರ್ಧನ್, ಇದೀಗ ಅವರ ಪ್ರೀತಿ, ಮಾತುಕತೆ ಕೇಳಿ ಸುಮ್ಮನೆ ಕುಳಿತು ಬಿಟ್ಟಿದ್ದಾರೆ.

ಪ್ರೀತಿ-ಪ್ರೇಮದ ಬಗ್ಗೆ ಸೋಮಣ್ಣ ಮಾತುಕತೆ
ಸೋಮಣ್ಣರದ್ದು ಒಂದು ರೀತಿಯ ಸ್ಟ್ರಿಕ್ಟ್ ಬಿಹೇವಿಯರ್. ಇಷ್ಟವಾದರೆ ಎಲ್ಲರೊಟ್ಟಿಗೂ ಮಾತನಾಡುತ್ತಾರೆ. ತಪ್ಪು ಎನಿಸಿದರೆ ಅಲ್ಲಿಯೇ ಹೇಳಿ ಬಿಡುತ್ತಾರೆ. ಕೋಪ ಮಾಡಿಕೊಂಡರೆ ಅವರ ಧ್ವನಿಯಲ್ಲಿ ಎದ್ದು ಕಾಣುತ್ತದೆ. ಎಲ್ಲರೊಟ್ಟಿಗೂ ಬೆರೆಯುವ ಸೋಮಣ್ಣ, ಇತ್ತೀಚೆಗೆ ಚೈತ್ರಾ ಜೊತೆಗೂ ಒಳ್ಳೆ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಆ ಬಾಂಧವ್ಯದಿಂದಲೇ ಇಂದು ಬೆನ್ನಿಗೆ ಬೆನ್ನು ಹಾಕಿ ಚೈತ್ರಾ ಅಂಡ್ ಸೋಮಣ್ಣ ಸಿಕ್ಕಾಪಟ್ಟೆ ಡೀಪ್ ಡಿಸ್ಕಷನ್‌ನಲ್ಲಿ ಮುಳುಗಿದ್ದಾರೆ. ಅದು ಪ್ರೀತಿ, ಪ್ರೇಮದ ವಿಚಾರ.

ಕಂಕುಳಲ್ಲಿ ಎತ್ತಿಕೊಂಡು ಹೋಗುತ್ತಾರಂತೆ ಚೈತ್ರಾ
ಸೋಮಣ್ಣ, ಆರ್ಯವರ್ಧನ್, ಚೈತ್ರಾ, ಜಯಶ್ರೀ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಈ ಮಧ್ಯೆ ಚೈತ್ರಾ, ಸೋಮಣ್ಣನನ್ನು ಓಡಿ ಹೋಗುವ ಅಂತ ಹೇಳುತ್ತಿದ್ದಾರೆ. ಬಾರದೆ ಇದ್ದಲ್ಲಿ ನಿಮ್ಮನ್ನು ಎತ್ತಿಕೊಂಡು ಹೋಗುವ ಸಾಮರ್ಥ್ಯ ನನ್ನಲ್ಲಿದೆ. ನಿಮ್ಮನ್ನು ಕಂಕುಳಲ್ಲಿ ಇಟ್ಟುಕೊಂಡು ಓಡಿ ಹೋಗುತ್ತೇನೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ, ಹಾಗೆ ಮಾರ್ಕೆಟ್, ಶಿವಾಜಿನಗರದ ಕಡೆ ಓಡಿ ಹೋಗೋಣಾ. ಯಾರು ಗುರುತಿಸಿದಂತೆ ಒಂದು ಡ್ರೆಸ್ ಹಾಕಿಕೊಂಡು ಹೋಗೋಣಾ. ಆಗ ನಾವೂ ಅಂತ ಕಂಡು ಹಿಡಿಯುವುದಕ್ಕೆ ಆಗಲ್ಲ. ಶಿವಾಜಿನಗರದ ಕಡೆ ಹೋಗೋಣಾ ಎಂದಿದ್ದಾರೆ.

ಸೋಮಣ್ಣನಿಗೆ ಗುರೂಜಿ ಸಲಹೆ
ನಂಬರ್ ಅಂದ್ರೆ ನಾನು, ನಾನು ಅಂದರೆ ನಂಬರ್ ಎನ್ನುವ ಆರ್ಯವರ್ಧನ್ ಸಂಖ್ಯಾಶಾಸ್ತ್ರದ ಜ್ಯೋತಿಷ್ಯ ಹೇಳುವವರು. ಇದರಿಂದಲೇ ಹೆಚ್ಚು ಫೇಮಸ್ ಆಗಿರುವುದು. ಈ ಭವಿಷ್ಯವನ್ನು ಬಿಗ್ ಬಾಸ್ ಮನೆಯಲ್ಲಿಯೂ ಅಳವಡಿಸಿಕೊಂಡಿದ್ದಾರೆ. ಕೇಳಿದವರಿಗೆ ಆಗಾಗ ಭವಿಷ್ಯವನ್ನು ಹೇಳುತ್ತಿರುತ್ತಾರೆ. ಇತ್ತೀಚೆಗೆ ಜಯಶ್ರೀ ಕೈ ನೋಡಿ ಅವರ ಮುಂದಿನ ಭವಿಷ್ಯವನ್ನೇ ಹೇಳಿದ್ದರು. ಜೊತೆಗೆ ಯಾರಿಗೆ ಯಾವ ಬಣ್ಣ ಸೂಕ್ತ, ಲಕ್ ಅಂತಾನು ಹೇಳುತ್ತಿರುತ್ತಾರೆ. ಅದರಂತೆ ಇದೀಗ ಸೋಮಣ್ಣ ಮತ್ತು ಚೈತ್ರಾ ಶಿವಾಜಿನಗರದ ಕಡೆಗೆ ಓಡಿ ಹೋಗುವ ಬಗ್ಗೆ ಗುರೂಜಿ ಬಳಿ ಕೇಳಿದರೆ, ನೋಡಿ ಹೇಳಬೇಕು ಎಂದಿದ್ದಾರೆ.

ಪ್ರೀತಿ ಎಂದರೆ ಹೀಗಿರಬೇಕಂತೆ?
ಹೀಗೆ ಸೋಮಣ್ಣ ಮತ್ತು ಚೈತ್ರಾ ಬೆನ್ನಿಗೆ ಬೆನ್ನು ಹಾಕಿ ಮಾತನಾಡಿದ್ದು ಪ್ರೀತಿ ಪ್ರೇಮದ ವಿಚಾರ. ಸೋಮಣ್ಣ, ಚೈತ್ರಾಗೆ ಕೇಳಿದ್ದಾರೆ. ನಿಮಗೆ ಯಾವ ಥರದ ಪ್ರೀತಿ ಇಷ್ಟ ಅಲ್ಲಿ ಕೂತಿದ್ದಾರಲ್ಲ ಆ ಥರನಾ ಎಂದಾಗ, ಇಲ್ಲ ಆ ಥರ ಪ್ರೀತಿ ಎಲ್ಲಾ ಸಾಕಾಗಿದೆ ಎಂದಿದ್ದಾರೆ. ಯಾವ ಥರದ ಪ್ರೀತಿ ಬೇಕು ಎಂದಾಗ ಇಲ್ಲಿವರೆಗೂ ಎಕ್ಸ್ ಪೀರಿಯನ್ಸ್ ಮಾಡದೆ ಇರುವಂತ ಲವ್ ಬೇಕು ಎಂದಿದ್ದಾರೆ. ಹಾಗಾದ್ರೆ ಪ್ರೀತಿ ಎಂದರೆ ಏನು ಎಂದಾಗ, ಚೈತ್ರಾ ಏನೋ ಡೀಪ್ ಆಗಿ ವಿವರಿಸುತ್ತಾರೆ ಎಂದುಕೊಂಡರೆ ಪ್ರೀತಿ ಎಂದರೆ ಪುಸ್ತಕದ ಬದನೆಕಾಯಿ ಎಂದಿದ್ದಾರೆ.


Click it and Unblock the Notifications











