ಬಿಗ್ ಬಾಸ್ ಪಟ್ಟ ಮುಡಿಗೇರಿಸಿಕೊಂಡ 6 ಮಂದಿ ವಿನ್ನರ್ಸ್ ಈಗ ಏನ್ಮಾಡ್ತಿದ್ದಾರೆ?

ಕನ್ನಡ ಕಿರುತೆರೆ ಲೋಕದ ಅತೀ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. 2013ರಲ್ಲಿ ಕನ್ನಡದಲ್ಲಿ ಪ್ರಾರಂಭವಾದ ಬಿಗ್ ಬಾಸ್ ಈಗ 6 ಸೀಸನ್ ಅನ್ನು ಯಶಸ್ವಿಯಾಗಿ ಮುಗಿಸಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಕನ್ನಡ ಬಿಗ್ ಬಾಸ್ ಮೂಡಿ ಬರುತ್ತಿದೆ. ಸ್ಪರ್ಧಿಗಳ ಚಟುವಟಿಗೆ ನೊಡುವ ಜೊತೆಗೆ ವಾರ ಕಥೆ ಕಿಚ್ಚನ ಜೊತೆ ನೋಡಲ ಪ್ರೇಕ್ಷಕರು ಉಸಿರು ಬಿಗಿಹಿಡಿದು ಕಾಯುತ್ತಿರುತ್ತಾರೆ.

ಈಗ ಮತ್ತೆ ಬಿಗ್ ಬಾಸ್ ಪ್ರಾರಂಭವಾಗುತ್ತಿದೆ. 7ನೇ ಸೀಸನ್ ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಆದ್ರೆ ಈ ಮೊದಲು ಕಳೆದ 6 ಸೀಸನ್ ಗೆದ್ದಿರುವ ಸ್ಪರ್ಧಿಗಳು ಈಗ ಏನ್ಮಾಡ್ತಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ವಿಜಯ್ ರಾಘವೇಂದ್ರ, ಅಕುಲ್ ಬಾಲಾಜಿ, ಶ್ರುತಿ, ಪ್ರಥಮ್, ಚಂದನ್ ಮತ್ತು ಶಶಿ ಕನ್ನಡ ಬಿಗ್ ಬಾಸ್ ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಆರು ಜನ ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? ಮುಂದೆ ಓದಿ..

ಮೊದಲ ಸೀಸನ್ ವಿನ್ನರ್ ವಿಜಯ್ ರಾಘವೇಂದ್ರ

ಮೊದಲ ಸೀಸನ್ ವಿನ್ನರ್ ವಿಜಯ್ ರಾಘವೇಂದ್ರ

2013ರಲ್ಲಿ ನಡೆದ ಮೊದಲ ಬಿಗ್ ಬಾಸ್ ವಿನ್ನರ್ ಆಗಿ ವಿಜಯ್ ರಾಘವೇಂದ್ರ ಹೊರಹೊಮ್ಮಿದ್ರು. ಅರುಣ್ ಸಾಗರ್ ರನ್ನರ್ ಅಪ್ ಆಗಿದ್ದರು. ವಿಜಯ್ ರಾಘವೇಂದ್ರ ಸಿನಿರಂಗದಲ್ಲಿ ಹೇಳಿಕೊಳ್ಳುವಷ್ಟು ಸಕ್ಸಸ್ ಸಿಕ್ಕಿಲ್ಲ. ಆದ್ರೆ ಬಿಗ್ ಬಾಸ್ ಗೆದ್ದ ಬಳಿಕ ಕೊಂಚ ಚೇತರಿಸಿಕೊಂಡಿದ್ದ ವಿಜಯ್ ನಂತರ ಒಂದಿಷ್ಟು ಸಿನಿಮಾಗಳನ್ನು ಮಾಡಿದ್ರು ಸಹ ನಿರೀಕ್ಷೆಯ ಸಕ್ಸಸ್ ಸಿಕ್ಕಿಲ್ಲ. ನಂತರ 2016ರಲ್ಲಿ ಡ್ರಾಮ ಜ್ಯೂನಿಯರ್ ರಿಯಾಲಿಟಿ ಶೋನ ಜಡ್ಜ್ ಆಗಿ ಕಾಣಿಸಿಕೊಂಡರು. ನಂತರ ಜನಕ್ಕೆ ಮತ್ತಷ್ಟು ಹತ್ತಿರವಾದರು. ಡ್ರಾಮ ಜ್ಯೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸಿನಿಮಾಗಳಲ್ಲು ಬ್ಯುಸಿಯಾಗಿದ್ದಾರೆ.

ನಿರೂಪಕ ಅಕುಲ್ ಬಾಲಾಜಿ

ನಿರೂಪಕ ಅಕುಲ್ ಬಾಲಾಜಿ

ಬಿಗ್ ಬಾಸ್ ಎರಡನೆ ಸೀಸನ್ ವಿನ್ನರ್ ಆಗಿ ನಿರೂಪಕ ಅಕುಲ್ ಬಾಲಾಜಿ ಹೊರಹೊಮ್ಮಿದ್ದರು. 2014ರಲ್ಲಿ ನಡೆದ ಬಿಗ್ ಬಾಸ್ ಸೀಸನ್-2ರಲ್ಲಿ ಸೃಜನ್ ಲೋಕೇಶ್ ರನ್ನರ್ ಅಪ್ ಆಗಿದ್ದರು. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೊದಲು ಅಕುಲ್ ರಿಯಾಲಿಟಿ ಶೋ ನಿರೂಪಣೆಯ ಮೂಲಕ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದರು. ಬಿಗ್ ಬಾಸ್ ವಿನ್ನರ್ ಪಟ್ಟ ಗೆದ್ದ ನಂತರವು ಅಕುಲ್ ನಿರೂಪಣೆ ವೃತ್ತಿ ಮುಂದುವರೆದಿದೆ.

ಹಿರಿಯ ನಟಿ ಶ್ರುತಿ

ಹಿರಿಯ ನಟಿ ಶ್ರುತಿ

ಹಿರಿಯ ನಟಿ ಶ್ರುತಿ ಬಿಗ್ ಬಾಸ್ ಮೂರನೆ ಸೀಸನ್ ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ರನ್ನರ್ ಅಪ್ ಆಗಿ ಚಂದನ್ ಹೊರಹೊಮ್ಮಿದ್ದರು. ಬಿಗ್ ಮನೆಯಿಂದ ಹೊರ ಬಂದ ನಂತರ ಶ್ರುತಿ ನಾಲ್ಕು ಸಿನಿಮಾಗಳನ್ನು ಮಾಡಿದ್ದಾರೆ. ಸದ್ಯ ಶ್ರುತಿ ನಿರ್ದೇಶಕ ಪಿ.ಶೇಷಾದ್ರಿ ನಿರ್ದೇಶನದ ಮೋಹನದಾಸ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

'ಬಿಗ್ ಬಾಸ್'ಗೆ ರವಿ ಬೆಳಗೆರೆ; ಹಬ್ಬಿದ ಸುದ್ದಿಯೂ, ಕುತೂಹಲ ಮೂಡಿಸಿದ ಪ್ರತಿಕ್ರಿಯೆಯೂ...

ಸೀಸನ್-4 ಪ್ರಥಮ್ ಮುಡಿಗೆ

ಸೀಸನ್-4 ಪ್ರಥಮ್ ಮುಡಿಗೆ

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೊದಲು ಪ್ರಥಮ್ ಅಂದ್ರೆ ಯಾರು ಅಂತ ಕರ್ನಾಟಕ ಜನರಿಗೆ ಗೊತ್ತಿರಲಿಲ್ಲ. ಆದ್ರೆ ಬಿಗ್ ಬಾಸ್ ಸೀಸನ್-4 ಪ್ರಥಮ್ ಯಾರು ಎನ್ನುವುದನ್ನು ಇಡೀ ನಾಡಿಗೆ ಪರಿಚಯ ಮಾಡಿಕೊಟ್ಟಿತ್ತು. ಖಂಡಿಸ್ತೀನಿ ಎನ್ನುತ್ತಲೆ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಪ್ರಥಮ್, ಜನರಿಂದ ಅತೀ ಹೆಚ್ಚು ಓಟು ಪಡೆದು ವಿನ್ನರ್ ಆಗಿ ಹೊರಹೊಮ್ಮಿದರು. ಬಿಗ್ ಮನೆಯಿಂದ ಹೊರ ಬಂದ ನಂತರ ಒಂದಿಷ್ಟು ವಿವಾದಗಳನ್ನು ಮಾಡಿಕೊಳ್ಳುವ ಜೊತೆಗೆ ನಾಯಕನಾಗಿಯೂ ಮಿಂಚಿದ್ದಾರೆ. ಎಂ ಎಲ್ ಎ, ದೇವರಂತ ಮನುಷ್ಯ ಸಿನಿಮಾಗಳು ರಿಲೀಸ್ ಆಗಿವೆ. ಸದ್ಯ ನಟಭಯಂಕರ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಬಿಗ್ ಬಾಸ್-5 ವಿನ್ನರ್ ಚಂದನ್ ಶೆಟ್ಟಿ

ಬಿಗ್ ಬಾಸ್-5 ವಿನ್ನರ್ ಚಂದನ್ ಶೆಟ್ಟಿ

ರ್ಯಾಪರ್ ಆಗಿದ್ದ ಚಂದನ್ ಶೆಟ್ಟಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಮತ್ತಷ್ಟು ಖ್ಯಾತಿಗಳಿಸಿದ್ರು. ಬಿಗ್ ಮನೆಯಲ್ಲಿ ಹಾಡುಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಚಂದನ್ ಸದ್ಯ ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಚಂದನ್ ಜೊತೆಯೆ ಬಿಗ್ ಮನೆಯಲ್ಲಿ ಕಾಣಿಸಿಕೊಂಡಿದ್ದ ಸಹ ಸ್ಪರ್ಧಿ ನಿವೇದಿತಾ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಸೀಸನ್ 6 ವಿನ್ನರ್ ಶಶಿ

ಸೀಸನ್ 6 ವಿನ್ನರ್ ಶಶಿ

ಕಳೆದ ಬಾರಿಯ ಬಿಗ್ ಬಾಸ್ ಅಂದ್ರೆ ಸೀಸನ್ 6ನ ವಿನ್ನರ್ ಆಗಿ ಕಾಮನ್ ಮ್ಯಾನ್ ಶಶಿ ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದರು. ಬಿಗ್ ಬಾಸ್ ಇತಿಹಾಸದಲ್ಲೆ ಕಾಮನ್ ಮ್ಯಾನ್ ಒಬ್ಬರು ಬಿಗ್ ಬಾಸ್ ವಿನ್ನರ್ ಪಟ್ಟ ಗೆದ್ದಿರುವುದು ಮೊದಲು. ರೈತನಾಗಿರುವ ಶಶಿ ಬಿಗ್ ಮನೆಯಿಂದ ಗೆದ್ದು ಬಂದ ನಂತರವು ಕೃಷಿಯನ್ನು ಮುಂದುವರೆಸಿದ್ದಾರೆ.

More from Filmibeat

English summary
Bigg Boss Kannada from the first season to the 6th season winner are now what they are doing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X