ನನಗೆ ಅವಕಾಶ ಕೊಡ್ಲಿಲ್ಲ, ಬರೀ ಕಾವ್ಯಾ- ಗಿಲ್ಲಿ ಜಪ ಮಾಡ್ತಿದ್ರು; ದೊಡ್ಮನೆ ಹಬ್ಬ ಬಗ್ಗೆ ರಕ್ಷಿತಾ ಬೇಸರ

ಬಿಗ್‌ಬಾಸ್ ಕನ್ನಡ ಸೀಸನ್ 12 ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಹಿಂದಿನ ಎಲ್ಲಾ ಸೀಸನ್‌ಗಳಿಗಿಂತ ಈ ಸೀಸನ್ ಸಿಕ್ಕಾಪಟ್ಟೆ ಹೈಲೆಟ್ ಆಗಿತ್ತು. ಗಿಲ್ಲಿ, ಅಶ್ವಿನಿ ಗೌಡ, ಕಾವ್ಯಾ, ರಕ್ಷಿತಾ, ರಘು, ಸೂರಜ್, ಧ್ರುವಂತ್ ಹೀಗೆ ಎಲ್ಲರೂ ವೀಕ್ಷಕರ ಗಮನ ಸೆಳೆದರು. ಶೋ ಮುಗಿದು ತಿಂಗಳು ಕಳೆದರೂ ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧಿಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.

ಗಿಲ್ಲಿ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಆಗೊಮ್ಮೆ ಈಗೊಮ್ಮೆ ರಕ್ಷಿತಾ, ಕಾವ್ಯಾ, ಅಶ್ವಿನಿ ಗೌಡ ಹೆಸರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಕಲರ್ಸ್ ಕನ್ನಡ ವಾಹಿನಿಯ 'ದೊಡ್ಮನೆ ಹಬ್ಬ' ಕಾರ್ಯಕ್ರಮದಲ್ಲಿ ಸ್ಪರ್ಧಿಗಳೆಲ್ಲಾ ರೀಯೂನಿಯನ್ ಆಗಿ ಸಂಭ್ರಮಿಸಿದ್ದರು. ಗಿಲ್ಲಿ ಮತ್ತೊಮ್ಮೆ ತಮ್ಮ ಕಾಮಿಡಿ ಪಂಚ್‌ಗಳ ಮೂಲಕ ಗಮನ ಸೆಳೆದರು. ಆದರೆ ಈ ಕಾರ್ಯಕ್ರಮದಲ್ಲಿ ನನಗೆ ಮಾತನಾಡಲು ಸರಿಯಾಗಿ ಅವಕಾಶ ಕೊಡಲಿಲ್ಲ ಎಂದು ರಕ್ಷಿತಾ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

Bigg Boss Kannada Rakshita Upset Over Dodmane Habba Spotlight Gilli Kavya Focus Sparks Debate

ನಾವು ಹೆಚ್ಚು ಮಾತನಾಡಬಾರದು ಅಂದ್ರು. ಆದರೆ ಗಿಲ್ಲಿ ಹಾಗೂ ಕಾವ್ಯಾ ಹೆಚ್ಚು ಮಾತನಾಡಿದರು ಎಂದು 'ಸಂಪೂರ್ಣ ನ್ಯೂಸ್' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ರಕ್ಷಿತಾ ಹೇಳಿದ್ದಾರೆ. "ರಕ್ಷಿತಾ ಇದು ನಾಮಿನೇಷನ್ ಅಲ್ಲ ಎಂದು ಗಿಲ್ಲಿ ಹೇಳುತ್ತಿದ್ದರು. ನಮಗೂ ಮಾತನಾಡಲು ಸಾಕಷ್ಟು ವಿಷಯಗಳಿತ್ತು. ನಾವು ಮಾತನಾಡುವಾಗ ಹೆಚ್ಚು ಮಾತನಾಡಬೇಡಿ ಅಂದ್ರು. ಆದರೆ ನಿರೂಪಕಿ ಪದೇ ಪದೆ ಗಿಲ್ಲಿ ಹಾಗೂ ಕಾವ್ಯಾ ಬಳಿ ಹೋಗಿ ಮಾತನಾಡುತ್ತಿದ್ದರು. ನಾವು ಸುಮ್ಮನೆ ನಿಂತಿದ್ದೆವು" ಎಂದು ರಕ್ಷಿತಾ ಹೇಳಿದ್ದಾರೆ.

ಗಿಲ್ಲಿ, ಕಾವ್ಯಾ ಜೊತೆ ಮಾತನಾಡಲಿ ಸಮಸ್ಯೆ ಇಲ್ಲ. ಆದರೆ ನಾವು 10 ನಿಮಿಷ ಸುಮ್ನೆ ನಿಂತಿದ್ದೀವಿ. ನಮಗೂ ಮಾತನಾಡೋಕೆ ಇತ್ತು. ಅದಕ್ಕೆ ಬೇಸರವಾಯಿತು ಎಂದು ರಕ್ಷಿತಾ ತಿಳಿಸಿದ್ದಾರೆ. "ನಾನು ಮತ್ತು ಕರಿಬಸಪ್ಪ ಕೊಂಚ ಹೆಚ್ಚು ಮಾತನಾಡ್ತೀವಿ. ಆ ರೀತಿ ಮಾತನಾಡುವಾಗ ಕಿವಿ ಮುಚ್ಚಿಕೊಳ್ಳುವುದು, ಕೆಳಗೆ ಕೂರುವುದು ಹೀಗೆ ಏನೇನೊ ಮಾಡ್ತಿದ್ರು. ಅವರಿಬ್ಬರು ಮಾತನಾಡುವಾಗ ಸಮಸ್ಯೆ ಇಲ್ವಾ?" ಎಂದು ರಕ್ಷಿತಾ ಪ್ರಶ್ನಿಸಿದ್ದಾರೆ.

ಬಿಗ್‌ಬಾಸ್ ಸೀಸನ್ 12 ಮುಗಿದ ಬಳಿಕ ಸ್ಪರ್ಧಿಗಳನ್ನೆಲ್ಲಾ ಒಂದ್ಕಡೆ ಸೇರಿಸಿ ಕಲರ್ಸ್ ಕನ್ನಡ 'ದೊಡ್ಮನೆ ಹಬ್ಬ' ಕಾರ್ಯಕ್ರಮ ಆಯೋಜಿಸಿತ್ತು. ಫೆಬ್ರವರಿ 14ರಂದು ಸಂಜೆ ಈ ಕಾರ್ಯಕ್ರಮ ಪ್ರಸಾರವಾಗಿತ್ತು. ಸ್ಪರ್ಧಿಗಳಿಗ ಫನ್ನಿ ಟಾಸ್ಕ್‌ಗಳನ್ನು ಕೊಟ್ಟು ವೀಕ್ಷಕರನ್ನು ರಂಜಿಸುವ ಪ್ರಯತ್ನ ಮಾಡಲಾಗಿತ್ತು. ಅಲ್ಲಿ ಕೂಡ ಗಿಲ್ಲಿ ಹಾಗೂ ಕಾವ್ಯಾ ಕ್ರೇಜ್ ಹೈಲೆಟ್ ಆಗಿದ್ದು ಸುಳ್ಳಲ್ಲ. ಪ್ರೋಮೊಗಳಲ್ಲಿ ಕೂಡ ಅದನ್ನೆಲ್ಲಾ ಬಳಸಿಕೊಳ್ಳಲಾಗಿತ್ತು. "ರಘು ಮತ್ತು ರಕ್ಷಿತಾಗೆ ಗಿಲ್ಲಿ ಸಮಸ್ಯೆನಾ ? ಗಿಲ್ಲಿ ಜೊತೆ ಕಾವ್ಯಾ ಜೊತೆ ಇದ್ರೆ ಸಮಸ್ಯೆನಾ ? ಒಂದು ಗೊತ್ತಾಗುತ್ತಿಲ್ಲ" ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಗಿಲ್ಲಿ ಅಕೌಂಟ್ ಅನ್ನು ರಘು ಅನ್‌ಫಾಲೋ ಮಾಡಿದ್ದರು. ಇದಕ್ಕೆ ಕಾರಣ ಏನಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಗಿಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ರಕ್ಷಿತಾ ಅಕೌಂಟ್ ಫಾಲೋ ಮಾಡುತ್ತಿದ್ದಾರೆ. ತಾನು ಫಾಲೋ ಗಿಲ್ಲಿ ಅಕೌಂಟ್ ಫಾಲೋ ಮಾಡಿದ್ರು, ಆತ ಮರಳಿ ತನ್ನ ಅಕೌಂಟ್ ಫಾಲೋ ಮಾಡ್ತಿಲ್ಲ ಎನ್ನುವ ಬೇಸರಕ್ಕೆ ರಘು ಹೀಗೆ ಮಾಡಿದ್ದಾರಾ? ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು.

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ, ರಘು ಹಾಗೂ ರಕ್ಷಿತಾ ನಡುವೆ ಆತ್ಮೀಯ ಸ್ನೇಹ ಇತ್ತು. ಆಗೊಮ್ಮೆ ಈಗೊಮ್ಮೆ ಗಿಲ್ಲಿ ಮೇಲೆ ರಘು ಮುನಿಸಿಕೊಂಡಿದ್ದು ಇದೆ. ಆದರೂ ಹೊರಗಡೆ ಬಂದಮೇಲೆ ಗಿಲ್ಲಿ ಕ್ರೇಜ್ ಬಗ್ಗೆ ರಘು ಮೆಚ್ಚಿ ಮಾತನಾಡಿದ್ದರು.

More from Filmibeat

Read more about: bigg boss 12 bigg boss gilli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X