EXCLUSIVE: ಮೊದಲ ದಿನವೇ ಭಾರಿ ಹಿನ್ನೆಡೆ; ಬಿಗ್ ಬಾಸ್ ಮನೆಯಿಂದ ಹೊರಬಂದ ಬೆಳಗೆರೆ

Recommended Video

Bigg Boss Kannada season-7 Ravi Belagere Returns to BB House after Health Issues |FILMIBEAT KANNADA

ಪತ್ರಕರ್ತ ರವಿ ಬೆಳಗೆರೆ ಬಿಗ್‌ ಬಾಸ್ ಮನೆಯಿಂದ ಮೊದಲ ದಿನವೇ ಹೊರಬಂದಿದ್ದಾರೆ. 'ಫಿಲ್ಮಿ ಬೀಟ್ ಕನ್ನಡ'ಕ್ಕೆ ಲಭ್ಯವಾಗಿರುವ ಖಚಿತ ಮಾಹಿತಿ ಪ್ರಕಾರ, ರವಿ ಬೆಳಗೆರೆ ಸೋಮವಾರ ಪದ್ಮನಾಭ ನಗರದಲ್ಲಿರುವ 'ಹಾಯ್ ಬೆಂಗಳೂರು!' ಕಚೇರಿಯಲ್ಲಿ ಲಭ್ಯರಿದ್ದಾರೆ. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಅವರು ರಿಯಾಲಿಟಿ ಶೋ ಬಿಗ್‌ ಬಾಸ್‌ನಿಂದ ಅನುಮತಿ ಪಡೆದು ಹೊರ ಬಂದಿದ್ದಾರೆ. ಬಹುಶಃ ಈ ವಿಚಾರ ಸೋಮವಾರ ರಾತ್ರಿ ಪ್ರಸಾರವಾಗುವ ಸಂಚಿಕೆಯಲ್ಲಿ ಭಿತ್ತರವಾಗಲಿದೆ.

7ನೇ ಅವತರಣಿಕೆಯ ಬಿಗ್‌ ಬಾಸ್ ಕನ್ನಡ ಭಾನುವಾರವಷ್ಟೆ ಭರ್ಜರಿಯಾಗಿ ಆರಂಭವಾಗಿತ್ತು. ಶೋನಲ್ಲಿ 18 ಸ್ಪರ್ಧಿಗಳಿದ್ದು 50 ಲಕ್ಷ ಬಹುಮಾನಕ್ಕಾಗಿ ಒಟ್ಟು 100 ದಿನಗಳ ಕಾಲ ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿರುವ ಬಿಗ್‌ ಬಾಸ್‌ ಮನೆಯ ಕ್ಯಾಮೆರಾಗಳನ್ನು ಎದುರಿಸಲಿದ್ದಾರೆ. ಇವರುಗಳ ಪೈಕಿ ಮೂರನೇ ಸ್ಪರ್ಧಿಯಾಗಿ ಬೆಳಗೆರೆ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದರು.ಬಿಗ್ ಬಾಸ್ ಗೆ ಎಂಟ್ರಿ

ಮನೆಯ ಒಳಗೆ ಪ್ರವೇಶಿಸಿದ್ದ ಬೆಳಗೆರೆ ನಂತರ ಕಾಣೆಯಾಗಿದ್ದರು. ಭಾನುವಾರದ ಎಪಿಸೋಡಿನಲ್ಲಿ ಆರಂಭದಲ್ಲಿ ಕಾಣಿಸಿಕೊಂಡು ನಂತರ ನಾಪತ್ತೆ ಆದ ಅವರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಇದೀಗ ರವಿ ಬೆಳಗೆರೆ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಹೊರಬಂದಿದ್ದಾರೆ ಎಂಬ ಮಾಹಿತಿ ಆರಂಭದ ಅನುಮಾನಗಳನ್ನು ನಿಜವಾಗಿಸಿದೆ.

 ಶೋ ನಿರ್ದೇಶಕರು ಏನಂತಾರೆ?

ಶೋ ನಿರ್ದೇಶಕರು ಏನಂತಾರೆ?

ಈ ಕುರಿತು ಬಿಗ್‌ ಬಾಸ್ ಕನ್ನಡ ಶೋನ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್‌ ಅವರನ್ನು ಸಂಪರ್ಕಿಸಿದಾಗ, "ಸ್ವಲ್ಪ ಸಮಯ ಕೊಡಿ, ಖಾತ್ರಿ ಪಡಿಸಲು,'' ಎಂದರು.
"ಹೇಳ್ಬೇಕಾಗಿರೋ ಸಮಯದಲ್ಲಿ ಹೇಳ್ತೀನಿ. ಅಲ್ಲೀವರೆಗೂ ನನಗೆ ಸ್ವಲ್ಪ ಸಮಯ ಬೇಕು. ನೀವು ಏನು ನಮ್ಮ ಬಗ್ಗೆ ತನಿಖೆ ನಡೆಸುತ್ತಿದ್ದೀರಾ? ನಮಗೂ ಒಂದು ಸ್ವಾತಂತ್ರ್ಯ ಬೇಕು. ಅವರಿಗೆ (ರವಿ ಬೆಳಗೆರೆ) ಆರೋಗ್ಯ ಸಮಸ್ಯೆ ಇದೆ. ಅವರು ಅಕಸ್ಮಾತ್ ವಾಪಾಸ್ ಹೋಗ್ತಾರೆ ಅಂದ್ರೆ (ಬಿಗ್‌ ಬಾಸ್ ಮನೆಗೆ), ಈಗಲೇ ಹೊರಗೆ ಹೋದ್ರು ಅನ್ನೋದು ತಪ್ಪಾಗುತ್ತೆ ಅಲ್ಲವಾ?,'' ಎಂದರು.

 ಗುಂಡ್ಕಲ್ ನೀಡಿದ ಮುನ್ಸೂಚನೆ

ಗುಂಡ್ಕಲ್ ನೀಡಿದ ಮುನ್ಸೂಚನೆ

ಈ ಮೂಲಕ ಪರಮೇಶ್ವರ್ ಗುಂಡ್ಕಲ್ ಬಿಗ್‌ ಬಾಸ್ ಮನೆಯಲ್ಲಿ ಸದ್ಯಕ್ಕಿಲ್ಲ ಎಂಬುದನ್ನು ಪರೋಕ್ಷವಾಗಿ ಖಚಿತಪಡಿಸಿದರು. ಅಷ್ಟೆ ಅಲ್ಲ, ಶೋ ಆರಂಭದಲ್ಲಿಯೇ ಮನೆಯಿಂದ ಹೊರಬಿದ್ದಿರುವ ರವಿ ಬೆಳಗೆರೆ ಅವರನ್ನು ಮರಳಿ ಕರೆತರುವ ಪ್ರಯತ್ನವೊಂದು ಜಾರಿಯಲ್ಲಿದೆ ಎಂಬ ಸೂಚನೆಯನ್ನೂ ನೀಡಿದರು. ಈ ನಡುವೆ, ರವಿ ಬೆಳಗೆರೆ ಹೊರಬಿದ್ದಿರುವ ಮಾಹಿತಿಯನ್ನು ಪುತ್ರಿ ಭಾವನ ಬೆಳಗೆರೆ ಕೂಡ ಖಚಿತಪಡಿಸಿದ್ದಾರೆ.

 ಭಾವನಾ ಏನಂದ್ರು?

ಭಾವನಾ ಏನಂದ್ರು?

"ಬಿಗ್‌ ಬಾಸ್ ಮನೆಯಿಂದ ಅನಾರೋಗ್ಯದ ಕಾರಣಕ್ಕೆ ರವಿ ಬೆಳಗೆರೆ ಹೊರಬಂದಿದ್ದಾರೆ. ಲೋ ಬಿಪಿ ಹಿನ್ನೆಲೆಯಲ್ಲಿ ಅವರು ಮನೆಯೊಳಗೆ ಕುಸಿದು ಬಿದ್ದರು. ಹಾಗಂತ ಆರೋಗ್ಯದಲ್ಲಿ ದೊಡ್ಡ ಸಮಸ್ಯೆ ಏನಾಗಿಲ್ಲ. ಕೊನೆಗೆ ಬಿಗ್ ಬಾಸ್ ಅನುಮತಿ ಅವರು(ರವಿ ಬೆಳಗೆರೆ) ಹೊರಬಂದಿದ್ದಾರೆ,'' ಎಂದು 'ಫಿಲ್ಮಿ ಬೀಟ್‌ ಕನ್ನಡ'ಕ್ಕೆ ಭಾವನಾ ಬೆಳಗೆರೆ ಪ್ರತಿಕ್ರಿಯೆ ನೀಡಿದರು.

 ಬೆಳಗೆರೆ ಆರೋಗ್ಯ

ಬೆಳಗೆರೆ ಆರೋಗ್ಯ

ರವಿ ಬೆಳಗೆರೆ ಬಿಗ್‌ ಬಾಸ್‌ ಪ್ರವೇಶದ ಸುತ್ತ ಕಳೆದ ತಿಂಗಳಿನಿಂದಲೇ ಸುದ್ದಿಗಳು ಹೊರಬಂದಿದ್ದವು. ಈ ಸಮಯದಲ್ಲಿ ಅವರ ಆರೋಗ್ಯ ಸಮಸ್ಯೆ ಮುನ್ನೆಲೆಗೂ ಬಂದಿತ್ತು. ಯಾವುದೇ ವಿಶೇಷ ಅನುಕೂಲಗಳಿಲ್ಲದೆ ಬಿಗ್‌ ಬಾಸ್ ಮನೆಯೊಳಗೆ ರವಿ ಬೆಳಗೆರೆ ಹೇಗೆ ಕಾಲ ಕಳೆಯುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಬಿಗ್‌ ಬಾಸ್‌ ಶೋಗೆ ಸ್ಪರ್ಧಿಗಳ ಆಯ್ಕೆಯ ವಿಚಾರದಲ್ಲಿ ಬೆಳಗೆರೆ ಆರೋಗ್ಯ ಯಾಕೆ ಮೊದಲೇ ಆದ್ಯತೆಯ ಸಂಗತಿಯಾಗಲಿಲ್ಲ ಎಂಬುದು ಈಗ ಏಳುತ್ತಿರುವ ಪ್ರಶ್ನೆಯಾಗಿದೆ.

ಸಿಗರೇಟ್ ಗೆ ಬೇಡಿಕೆ ಇಟ್ಟಿದ್ದ ಬೆಳಗೆರೆ

ಸಿಗರೇಟ್ ಗೆ ಬೇಡಿಕೆ ಇಟ್ಟಿದ್ದ ಬೆಳಗೆರೆ

ಬಿಗ್‌ ಬಾಸ್ ಮನೆಗೆ ಪ್ರವೇಶಿಸುವ ಮುನ್ನವೇ ಸಿಗರೇಟಿನ ವಿಚಾರದಲ್ಲಿ ಕನ್ವೆನ್ಷನಲ್‌ಗಳನ್ನು ದಾಟಿ ಬೇಡಿಕೆ ಇಟ್ಟಿದ್ದ ಹಿರಿಯ ಪತ್ರಕರ್ತ, ಮನೆಯ ಕ್ಯಾಮೆರಾಗಳ ಮುಂದೆಯೂ ಇದೇ ಕೋರಿಕೆ ಇಟ್ಟಿದ್ದರು. ಹೀಗೆ ಸ್ಪರ್ಧಿಯೊಬ್ಬರ ನಿರ್ದಿಷ್ಟ ಬೇಡಿಕೆ ಮತ್ತು ಅಗತ್ಯಗಳನ್ನು ಬಿಗ್‌ ಬಾಸ್ ಮನೆಯ ನಿಯಮಗಳ ಅಡಿಯಲ್ಲಿ ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಇವೆಲ್ಲಕ್ಕೂ ಉತ್ತರ ಸಿಗುವ ಮುನ್ನವೇ ರವಿ ಬೆಳಗೆರೆ ಶೋನಿಂದ ಹೊರಬಂದಿದ್ದಾರೆ.

 ಮರಳಿ ಬರ್ತಾರಾ ರವಿ ಬೆಳಗೆರೆ?

ಮರಳಿ ಬರ್ತಾರಾ ರವಿ ಬೆಳಗೆರೆ?

'ಫಿಲ್ಮಿ ಬೀಟ್‌ ಕನ್ನಡ'ಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ರವಿ ಬೆಳಗೆರೆ ಅವರನ್ನು ಮರಳಿ ಬಿಗ್‌ ಬಾಸ್ ಮನೆಗೆ ಕರೆದೊಯ್ಯುವ ಪ್ರಯತ್ನವೊಂದು ಜಾರಿಯಲ್ಲಿದೆ. ಒಂದು ವೇಳೆ ವೈದ್ಯರು ಅನುಮತಿ ನೀಡಿದರೆ, ಬೆಳಗೆರೆ ಕೂಡ ಮಾನಸಿಕವಾಗಿ ಸಿದ್ಧರಾದರೆ ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಲೂ ಬಹುದು. ಏನಕ್ಕೂ 7ನೇ ಸೀಸನ್‌ ಬಿಗ್‌ ಬಾಸ್‌ ಕನ್ನಡ ಆರಂಭದಲ್ಲಿಯೇ ಹೀಗೊಂದು ತಿರುವು ತೆಗೆದುಕೊಂಡಿರುವುದರ ಪರಿಣಾಮ ಮಾತ್ರ ಮುಂದಿನ ದಿನಗಳಲ್ಲಿ ವ್ಯಕ್ತವಾಗಲಿದೆ.

More from Filmibeat

English summary
Bigg Boss Kannada season-7: senior Journalist Ravi Belagere out from Bigg Boss house
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X