ಕನ್ನಡದ ಬಿಗ್ ಬಾಸ್ 10 ಸೀಸನ್‌ಗಳ ರನ್ನರ್ ಅಪ್ ಸದ್ಯಕ್ಕೆ ಏನೆಲ್ಲ ಮಾಡಿಕೊಂಡಿದ್ದಾರೆ ನೋಡೋಣ ಬನ್ನಿ!
ಬಿಗ್ ಬಾಸ್ ಸೀಸನ್ 10 ಇತ್ತೀಚೆಗಷ್ಟೇ ಮುಗಿದಿದೆ. ವಿನ್ನರ್ ಯಾರು ಎಂಬುದು ಎಲ್ಲರಿಗೂ ತಿಳಿದೇ ಇದೆ. ಹಾಗಾದರೆ ಬಿಗ್ ಬಾಸ್ ನಲ್ಲಿ 10 ಸೀಸನ್‌ಗಳಿಂದ ರನ್ನರ್ ಅಪ್ ಆಗಿ ಬಂದಿರುವವರು ಯಾವ ಯಾವ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂಬುದನ್ನು ನೋಡೋಣ ಬನ್ನಿ.
ಬಿಗ್ ಬಾಸ್ ಸೀಸನ್ 1 ರ ರನ್ನರ್ ಅರುಣ್ ಸಾಗರ್ ಅವರು ಬಹಳ ವರ್ಷಗಳಿಂದ ನಟನಾ ಕ್ಷೇತ್ರದಲ್ಲಿ ಇರುವವರು. ಅದ್ಭುತ ಕಲಾ ವಿನ್ಯಾಸಕರಾಗಿರುವ ಇವರು ಇತ್ತೀಚೆಗಷ್ಟೇ ಹಂಪಿ ಉತ್ಸವದ ವೇದಿಕೆಯನ್ನು ವಿನ್ಯಾಸಗೊಳಿಸಿದರು. ತಮ್ಮ ಪತ್ನಿಯ ಜೊತೆ ಸೇರಿ ಆಗಾಗ ಹೊಸ ಹೊಸ ಕ್ರಾಂತಿಗಳನ್ನು ಮಾಡುವ ಮೂಲಕ ಥಿಯೇಟರ್ ಹಾಗೂ ಇನ್ನಿತರ ಆ್ಯಕ್ಟಿವಿಟಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ಇದೀಗ ಡ್ರಾಮಾ ಜ್ಯೂನಿಯರ್ಸ್‌ನ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ 2 ರನ್ನರ್ ಅಪ್ ಆಗಿರುವ ನಟ, ನಿರ್ದೇಶಕ, ನಿರ್ಮಾಪಕ ಸೃಜನ್ ಲೋಕೇಶ್ ಅವರು ಕಿರುತೆರೆ, ಹಿರಿತೆರೆ ಎರಡರಲ್ಲೂ ಕಾಣಿಸಿಕೊಂಡಿರುವ ಪ್ರತಿಭೆ. ಇದೀಗ ಹಲವಾರು ರಿಯಾಲಿಟಿ ಶೋಗಳಲ್ಲಿ ಬಿಸಿಯಾಗಿದ್ದಾರೆ. ಸದ್ಯಕ್ಕೆ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಿಗ್ ಬಾಸ್ ಸೀಸನ್ ಮೂರರ ರನ್ನರ್ ಅಪ್ ಆಗಿರುವ ಚಂದನ್ ಕುಮಾರ್ ಅವರು ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದರು. ಈಗಲೂ ಅಭಿನಯದಲ್ಲಿ ಬಿಸಿಯಾಗಿರುವ ಅವರು ಹೋಟೆಲ್ ಉದ್ಯಮಿಯು ಹೌದು. ಮಂಡಿಪೇಟೆ ಪಲಾವ್ ಎಂಬ ಹೋಟೆಲ್‌ಗಳನ್ನು ಬಹಳಷ್ಟು ಕಡೆ ತೆರೆದು ಮುನ್ನೆಡೆಸುತ್ತಿದ್ದಾರೆ.
ಬಿಗ್ ಬಾಸ್ ಸೀಸನ್ 4 ರನ್ನರ್ ಅಪ್ ಆಗಿರುವ ಕಿರಿಕ್ ಕೀರ್ತಿಯವರು ಮೊದಲಿನಿಂದಲೂ ರೇಡಿಯೋ ಹಾಗೂ ಟಿವಿಯಲ್ಲಿ ತಮ್ಮ ಟ್ಯಾಲೆಂಟ್ ಅನ್ನು ತೋರಿಸುತ್ತಾ ಬಂದಿದ್ದಾರೆ. ಇತ್ತೀಚಿಗಷ್ಟೇ ಕೆಲ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡ ಇವರು ಸದ್ಯಕ್ಕೆ ಪತ್ರಕರ್ತರಾಗಿ ತಮ್ಮ ಕೆಲಸ ಮುಂದುವರಿಸಿದ್ದಾರೆ.

ಬಿಗ್ ಬಾಸ್ ಸೀಸನ್ 5ರ ರನ್ನರ್ ಅಪ್ ಆಗಿರುವ ದಿವಾಕರ್ ಅವರು ದಿವಾಕರ್ 'ರೆಮಿಡಿಸ್' ಎಂಬ ತಮ್ಮದೇ ಕಂಪೆನಿ ಒಂದನ್ನು ನಡೆಸುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 6ರ ರನ್ನರ್ ಅಪ್ ಆಗಿರುವ ನವೀನ್ ಸಜ್ಜು ಮೂಲತಃ ಗಾಯಕನಾಗಿದ್ದು, ಇದೀಗ ಗಾಯನ ಹಾಗೂ ಸಂಗೀತ ಸಂಯೋಜನೆಯಲ್ಲಿ ಬ್ಯುಸಿಯಾಗಿದ್ದಾರೆ.
ಬಿಗ್ ಬಾಸ್ ಸೀಸನ್ 7ರ ರನ್ನರ್ ಅಪ್ ಆಗಿರುವ ಕುರಿ ಪ್ರತಾಪ್ ಅವರು ಮೂಲತ: ಕಾಮಿಡಿಯನ್ ಆಗಿದ್ದು, ಸದ್ಯಕ್ಕೆ ರಿಯಾಲಿಟಿ ಶೋಗಳಲ್ಲಿ ಆಂಕರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಿಗ್ ಬಾಸ್ ಸೀಸನ್ ಎಂಟರ ರನ್ನರ್ ಅಪ್ ಆಗಿರುವ ಕೆ ಪಿ ಅರವಿಂದ ಕೂಡ ಬಹಳಷ್ಟು ಫಾಲೋವರ್ಸ್ ಹೊಂದಿದ್ದು, ಇತ್ತೀಚೆಗಷ್ಟೇ 'ಅರ್ಧಂಬರ್ಧ ಲವ್ ಸ್ಟೋರಿ' ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.
ಬಿಗ್ ಬಾಸ್ ಸೀಸನ್ 9ರ ರನ್ನರ್ ಅಪ್ ಆಗಿರುವ ನಟ ರಾಕೇಶ್ ಅಡಿಗ ಸದ್ಯಕ್ಕೆ 'ನಾನು ಮತ್ತು ಗುಂಡ ಪಾರ್ಟ್ 2' ಸಿನಿಮಾದಲ್ಲಿ ನಟಿಸುವ ಮೂಲಕ ಬ್ಯುಜಿಯಾಗಿದ್ದಾರೆ. ಬಿಗ್ ಬಾಸ್ ಸೀಸನ್ ಹತ್ತರ ರನ್ನರ್ ಅಪ್ ಆಗಿರುವ ಡ್ರೋನ್ ಪ್ರತಾಪ್ ಅವರು ಸದ್ಯಕ್ಕೆ 'ಗಿಚ್ಚಿ ಗಿಲಿಗಿಲಿ' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.


Click it and Unblock the Notifications











