Bigg Boss: ವರ್ತೂರು, ತನಿಷಾಗೆ ಹಸಿ ಮೆಣಸಿನ ಕಾಯಿ ತಿನ್ನಿಸಿದ ಸಂಗೀತಾ!
7ನೇ ವಾರ ಬಿಗ್‌ಬಾಸ್ ಮನೆಯ ಟಾಸ್ಕ್‌ಗಳು 'ಗಜಕೇಸರಿ' ಹಾಗೂ 'ಸಂಪತ್ತಿಗೆ ಸವಾಲ್' ತಂಡಗಳ ನಡುವಿನ ತಿಕ್ಕಾಟವನ್ನು ಮತ್ತಷ್ಟು ಹೆಚ್ಚಿಸಿದೆ. 6 ವಾರಗಳ ಬಳಿಕ ಆಟ ಮತ್ತಷ್ಟು ರೋಚಕ ಘಟ್ಟ ತಲುಪಿದೆ. ಸ್ಪರ್ಧಿಗಳು ಒಬ್ಬರನ್ನು ಒಬ್ಬರು ನಂಬಲು ಸಿದ್ಧರಿಲ್ಲ. ವೈಯಕ್ತಿಕ ದಾಳಿ, ಆರೋಪ ಪ್ರತ್ಯಾರೋಪ ಹೆಚ್ಚಾಗುತ್ತಿದೆ. ಸ್ನೇಹಿತರಾಗಿದ್ದವರೇ ಈಗ ಶತ್ರುಗಳು ಎನ್ನುವಂತಾಗಿಬಿಟ್ಟಿದ್ದಾರೆ.
ಕಳೆದ ವಾರ ಇಬ್ಬರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನುಳಿದವರು 3 ತಂಡಗಳಾಗಿ ಆಡುತ್ತಿದ್ದಾರೆ. 'ಸಂಪತ್ತಿಗೆ ಸವಾಲ್' ತಂಡದಲ್ಲಿ ತನಿಷಾ, ವರ್ತೂರು ಸಂತೋಷ್, ಮೈಕಲ್, ನೀತು, ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಇದ್ದಾರೆ. ಮತ್ತೊಂದು ಕಡೆ 'ಗಜಕೇಸರಿ' ತಂಡದಲ್ಲಿ ಸ್ನೇಹಿತ್, ವಿನಯ್, ಸಂಗೀತಾ, ನಮ್ರತಾ, ಸಿರಿ, ಪ್ರತಾಪ್ ಇದ್ದಾರೆ. ಈ ವಾರ ಎದುರಾಳಿ ತಂಡಕ್ಕೆ ಸವಾಲುಗಳನ್ನು ನೀಡಲು ಮತ್ತೊಂದು ತಂಡಕ್ಕೆ ಬಿಗ್‌ಬಾಸ್ ಟಾಸ್ಕ್ ನೀಡಿದ್ದಾರೆ.

ಸಂಗೀತಾ ತಮ್ಮ ಎದುರಾಳಿ ತಂಡದ ತುಕಾಲಿ ಹಾಗೂ ಕಾರ್ತಿಕ್ ಕ್ಲೀನ್ ಶೇವ್ ಮಾಡಿಕೊಳ್ಳಬೇಕು ಎನ್ನುವ ಸವಾಲು ನೀಡಿದ್ದರು. ಅದಕ್ಕೆ ಇಬ್ಬರೂ ಒಪ್ಪಿದ್ದರು. ಈಗಾಗಲೇ ಇಬ್ಬರು ತಲೆ ಬೋಳಿಸಿಕೊಂಡಿದ್ದು ಮುಂದಿನ ಸವಾಲನ್ನು ಎದುರಿಸಿದ್ದಾರೆ. ತನಿಷಾ ಹಾಗೂ ವರ್ತೂರು ಸಂತೋಷ್ ಹಸಿ ಮೆಣಸಿನ ಕಾಯಿ ತಿನ್ನಬೇಕು ಎಂದು ಸಂಗೀತಾ ಸವಾಲು ಎಸೆದಿದ್ದಾರೆ. ಕೂಡಲೇ ಸಂತೋಷ್ ಒಪ್ಪಿಕೊಳ್ಳಿ ಎಂದು ಹೇಳಿದ್ದರು.
ಸವಾಲು ಸ್ವೀಕರಿಸಿದ ಸಂತೋಷ್, ತನಿಷಾ ಹಸಿ ಮೆಣಸಿನ ಕಾಯಿ ತಿನ್ನುತ್ತಾ ಹೋಗಿದ್ದಾರೆ. ಇಬ್ಬರು ಕಷ್ಟ ಬೀಳುವುದನ್ನು ನೋಡಿ ಉಳಿದ ಸ್ಪರ್ಧಿಗಳ ಕಂಗಾಲಾಗಿದ್ದಾರೆ. ಟಾಸ್ಕ್ ಸಾಕು ನಿಲ್ಲಿಸಿ ಎಂದರೂ ಕೇಳದೇ ಕಷ್ಟ ಬಿದ್ದು ಇಬ್ಬರೂ ಮೆಣಸಿನ ಕಾಯಿ ತಿಂದಿದ್ದಾರೆ. ಪಟ್ಟು ಬಿಡದೇ ಗೆಲ್ಲಲು ಹಠ ಸಾಧಿಸಿದ್ದಾರೆ. "ಸವಾಲೆಸೆಯೋ ಆಟದಲ್ಲಿ ಸೋತು ಗೆಲ್ಲೋರು ಯಾರು? ಗೆದ್ದು ಸೋಲೋರು ಯಾರು?" ಎಂದು ಪ್ರೋಮೊ ರಿಲೀಸ್ ಆಗಿ ವೈರಲ್ ಆಗಿದೆ.

"ಟಾಸ್ಕ್ ಮಾಡಬಾರ್ದು ಅಂತ ನಾವು ಕೊಡುತ್ತಿರೋದು. ಅವ್ರು ಮಾಡ್ತಿದ್ದಾರೆ. ಅದು ನಮ್ಮ ತಪ್ಪಲ್ಲ, ಅವರ ತಪ್ಪು" ಎನ್ನುವ ವಿನಯ್ ಮಾತು ಪ್ರೋಮೊದಲ್ಲಿ ಹೈಲೆಟ್ ಆಗಿದೆ. ಬ್ರಹ್ಮಾಂಡ ಗುರೂಜಿ ಸಾಕು ಬಿಡ್ರೋ ಎಂದರೂ ಕೇಳದೇ ಇಬ್ಬರೂ ಮೆಣಸಿನ ಕಾಯಿ ತಿಂದಿದ್ದಾರೆ. ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್ ಶೋ 24 ಗಂಟೆಗಳ ಕಾಲ ಉಚಿತವಾಗಿ ವೀಕ್ಷಿಸುವ ಅವಕಾಶವಿದೆ.


Click it and Unblock the Notifications











