ಬಿಗ್‌ಬಾಸ್ ಪ್ರೋಮೊ: ಸುದೀಪ್‌ಗೆ ಬಿಡದೇ ಕಾಡುತ್ತಿದೆ ಎಂಟರ ನಂಟು
ನಟ ಸುದೀಪ್ ಅವರನ್ನು ಸಂಖ್ಯೆ ಎಂಟು ಬಿಡದೇ ಕಾಡುತ್ತಿದೆ. ಹೌದು, ಬಿಗ್ ಬಾಸ್ ಸೀಸನ್ ಎಂಟರ ಪ್ರೊಮೊ ಇಂದು ಬಿಡುಗಡೆ ಆಗಿದ್ದು, ಸುದೀಪ್ ಅನ್ನು ಎಲ್ಲೂ ಹೋಗಲು ಬಿಗ್‌ಬಾಸ್ ಬಿಡುತ್ತಿಲ್ಲ.
ಹಿಂದಿ, ತೆಲುಗು, ತಮಿಳು ಬಿಗ್‌ಬಾಸ್ ಗಳ ಬಳಿಕ ತಡವಾಗಿ ಕನ್ನಡ ಬಿಗ್‌ಬಾಸ್ ಆರಂಭವಾಗುತ್ತಿದ್ದು. ಬಿಗ್‌ಬಾಸ್ ನ ಪ್ರೋಮೊ ಇಂದು ಬಿಡುಗಡೆ ಆಗುತ್ತಿದೆ. ಪ್ರತಿವರ್ಷದಂತೆ ಬಿಗ್‌ಬಾಸ್ ಪ್ರೋಮೊ ಈ ಬಾರಿ ಸಹ ಕ್ರಿಯಾಶೀಲವಾಗಿದೆ.
ಪ್ರೊಮೋದಲ್ಲಿ ನಟ ಸುದೀಪ್ ಪ್ರವಾಸ ಹೊರಡಲು ತಮ್ಮ ಪಾಸ್‌ಪೋರ್ಟ್ ಅನ್ನು ಝೆರಾಕ್ಸ್ ಮಾಡಿಸಿಕೊಳ್ಳಲು ಮುಂದಾಗುತ್ತಾರೆ. ಆದರೆ ಪಾಸ್‌ಪೋರ್ಟ್‌ನ ಝೆರಾಕ್ಸ್ ಪ್ರತಿ ಬರುವ ಬದಲಿಗೆ ಬರೀ ಸಂಖ್ಯೆ 'ಎಂಟು' ಮಾತ್ರ ಬರುತ್ತದೆ.

ಸುದೀಪ್ ಬೆನ್ನು ಬಿಡದ ಸಂಖ್ಯೆ ಎಂಟು!
ಹತ್ತು ಹಲವು ಪ್ರಯತ್ನಗಳ ಬಳಿಕವೂ 'ಎಂಟು' ಸಂಖ್ಯೆ ಸುದೀಪ್ ಅವರ ಬೆನ್ನು ಬಿಡುವುದಿಲ್ಲ. ಕೊನೆಗೆ ಝೆರಾಕ್ಸ್ ಯಂತ್ರದಿಂದ 'ಬಿಗ್‌ಬಾಸ್' ನ ಲಾಂಛನ ಹೊರಗೆ ಬರುತ್ತದೆ. ಆಗ ಸುದೀಪ್‌ಗೆ ಅರ್ಥವಾಗುತ್ತದೆ ಬಿಗ್‌ಬಾಸ್ ಎಂಟನೇ ಸೀಸನ್‌ನ ಕಾರ್ಯ ತಮಗಾಗಿ ಕಾಯುತ್ತಿದೆಯೆಂದು.

ದಿನಾಂಕ ಇನ್ನೂ ಪ್ರಕಟವಾಗಿಲ್ಲ
ಬಿಗ್‌ಬಾಸ್ ರಿಯಾಲಿಟಿ ಶೋ ಶೀಘ್ರದಲ್ಲೇ ಬರಲಿದೆ ಎಂದು ಪ್ರೋಮೋ ನಲ್ಲಿ ಹೇಳಲಾಗಿದೆ. ಆದರೆ ದಿನಾಂಕವನ್ನು ಪ್ರಕಟಿಸಲಾಗಿಲ್ಲ. ಫೆಬ್ರವರಿ ಮೊದಲ ವಾರದಲ್ಲಿಯೇ ಬಿಗ್‌ಬಾಸ್ ಪ್ರಾರಂಭವಾಗುವ ಸಾಧ್ಯತೆ ಹೆಚ್ಚಿದೆ.

ಕಳೆದ ಶೋಗಳಿಗಿಂತಲೂ ಈ ಬಾರಿ ಭಿನ್ನ?
ಈ ಬಾರಿಯ ಬಿಗ್‌ಬಾಸ್ ಸ್ಪರ್ಧೆ ಕಳೆದ ಏಳು ಬಿಗ್‌ಬಾಸ್ ಶೋ ಗಳಿಗಿಂತಲೂ ತುಸು ಭಿನ್ನವಾಗಿರಬಹುದಾದ ನಿನರೀಕ್ಷೆ ಇದೆ. ಕೊರೊನಾ ಇನ್ನೂ ಪೂರ್ಣವಾಗಿ ಸಮಾಪ್ತಿಯಾಗದ ಸಮಯದಲ್ಲಿ ಶೋ ಮಾಡುತ್ತಿರುವ ಕಾರಣ ಬಿಗ್ ಬಾಸ್ ಶೋ ನಿಯಮಾವಳಿಗಳಲ್ಲಿ ತುಸು ಬದಲಾವಣೆ ನಿರೀಕ್ಷಿಸಬಹುದಾಗಿದೆ.

ಯಾರ್ಯಾರಿರಲಿದ್ದಾರೆ ಬಿಗ್‌ಬಾಸ್‌ನಲ್ಲಿ
ಈ ಬಾರಿಯ ಬಿಗ್‌ಬಾಸ್ ನಲ್ಲಿ ಯಾರ್ಯಾರು ಭಾಗವಹಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈಗಾಗಲೇ ಸಂಭಾವ್ಯ ಪಟ್ಟಿಗಳು ಹರಿದಾಡುತ್ತಿವೆಯಾದರೂ ಯಾವುದೂ ಸಹ ಅಧಿಕೃತವಲ್ಲ. ಡ್ರೋನ್ ಪ್ರತಾಪ್, ಇಂದ್ರಜಿತ್ ಲಂಕೇಶ್, ಶುಭಾ ಪೂಂಜಾ, ರಾಕೇಶ್ ಅಡಿಗ ಇನ್ನೂ ಕೆಲವರ ಹೆಸರುಗಳು ಮುಂಚೂಣಿಯಲ್ಲಿವೆ.


Click it and Unblock the Notifications











