For Quick Alerts
  ALLOW NOTIFICATIONS  
  For Daily Alerts

  Bigg Boss Kannada Season 09: ಶಾಕ್ ನೀಡಿದ ಬಿಗ್‌ಬಾಸ್, ಈಡೇರಿತು ಆರ್ಯವರ್ಧನ್ ಆಸೆ!

  |

  ಬಿಗ್‌ಬಾಸ್ ಸೀಸನ್ 09 ರ ಹದಿಮೂರನೇ ದಿನ ಮನೆಯಲ್ಲಿ ಕೆಲವು ಆಸಕ್ತಿಕರ ಘಟನೆಗಳು ನಡೆದವು. ಖುಷಿಯಾಗಿದ್ದ ಕೆಲವು ಸದಸ್ಯರ ಮುಖದಲ್ಲಿ ತಟ್ಟನೆ ಬೇಸರ ಆವರಿಸಿಕೊಂಡಿತು, ಬೇಸರದಿಂದಿದ್ದವರ ಮುಖದಲ್ಲಿ ಸಂತಸ ಮೂಡಿತು. ಮಿಶ್ರ ಭಾವನೆ, ಕ್ರಿಯೆ, ಪ್ರತಿಕ್ರಿಯೆಗಳು ಮೂಡಿದ ದಿನವಾಗಿತ್ತು.

  ದಿನ ಆರಂಭವಾಗಿದ್ದು ಸಹ ಪ್ರ್ಯಾಂಕ್‌ನಿಂದಲೇ, ಮನೆಯಲ್ಲಿ ಸದಾ ಪ್ರ್ಯಾಂಕ್ ಮಾಡುವ ರಾಕೇಶ್ ವಿರುದ್ಧವೇ ಅನುಪಮಾ, ನೇಹಾ, ಅಮೂಲ್ಯ ಅವರುಗಳು ಪ್ರ್ಯಾಂಕ್ ಮಾಡಲೆಂದು ರಾಕೇಶ್‌ನ ಬಟ್ಟೆ ಬಚ್ಚಿಟ್ಟಿದ್ದರು. ಅಲ್ಲಿ ಇಲ್ಲಿ ಹುಡುಕಿ ಕೊನೆಗೆ ರಾಕೇಶ್‌ಗೆ ಬಟ್ಟೆ ಸಿಕ್ಕಿತು.

  Bigg Boss Kannada Season 09: ಶಾಕ್ ನೀಡಿದ ಬಿಗ್‌ಬಾಸ್, ಈಡೇರಿತು ಆರ್ಯವರ್ಧನ್ ಆಸೆ!Bigg Boss Kannada Season 09: ಶಾಕ್ ನೀಡಿದ ಬಿಗ್‌ಬಾಸ್, ಈಡೇರಿತು ಆರ್ಯವರ್ಧನ್ ಆಸೆ!

  ಆ ನಂತರ ಮನೆಯಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್‌ ನಡೆಯಬೇಕಿತ್ತು. ನಾಲ್ಕು ಟಾಸ್ಕ್‌ಗಳಲ್ಲಿ ಗೆದ್ದಿರುವ ಅನುಪಮಾ ತಂಡಕ್ಕೆ ಗುಡ್ ಎಂದ ಬಿಗ್‌ಬಾಸ್ ಅದರ ಜೊತೆಗೆ ದೊಡ್ಡ ಶಾಕ್ ಒಂದನ್ನು ಆ ತಂಡಕ್ಕೆ ನೀಡಿದರು. ಇದರಿಂದ ಇಡೀ ಮನೆಯ ವಾತಾವರಣವೇ ಬದಲಾಯ್ತು.

  ಶಾಕ್ ನೀಡಿದ ಬಿಗ್‌ಬಾಸ್

  ಶಾಕ್ ನೀಡಿದ ಬಿಗ್‌ಬಾಸ್

  ಆರ್ಯವರ್ಧನ್‌ ಅವರು ಕ್ಯಾಪ್ಟನ್ ಆಗಲು ಉತ್ಸಾಹದಿಂದಿರುವುದನ್ನು ತಿಳಿದು, ರಾಕೇಶ್, ಅನುಪಮಾ, ವಿನೋದ್ ಗೊಬ್ರಗಾಲ, ಸಾನ್ಯಾ, ದಿವ್ಯಾ ಹಾಗೂ ಇತರರು ಸೇರಿ ಕ್ಯಾಪ್ಟೆನ್ಸಿ ಟಾಸ್ಕ್‌ಗೆ ಆರ್ಯವರ್ಧನ್ ಹೆಸರು ಸಹ ಹೇಳದೆ ಬೇರೆ ನಾಲ್ಕು ಜನರನ್ನು ಆರಿಸಿದ್ದರು. ಆ ಬಳಿಕ ಆರ್ಯವರ್ಧನ್‌ಗೆ ತಾವು ಮಾಡಿದ್ದು ತಮಾಷೆಗೆ ಎಂದು ಹೇಳಿದ್ದರು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಗ್‌ಬಾಸ್, ಅನುಪಮಾ ತಂಡದವರು ಆರಿಸಿದ್ದ ರಾಕೇಶ್, ದರ್ಶ್, ಅನುಪಮಾ ಅವರುಗಳನ್ನೇ ಕ್ಯಾಪ್ಟೆನ್ಸಿ ಟಾಸ್ಕ್‌ಗೆ ಪರಿಗಣಿಸುತ್ತಿರುವುದಾಗಿ ಹೇಳಿಬಿಟ್ಟರು. ಇದು ಪ್ರ್ಯಾಂಕ್ ಮಾಡಿದ ರಾಕೇಶ್, ಅನುಪಮಾ ಹಾಗೂ ಇಡೀ ತಂಡಕ್ಕೆ ಶಾಕ್ ನೀಡಿತು.

  ಫೂಲ್ ಮಾಡಿದ ಬಿಗ್‌ಬಾಸ್

  ಫೂಲ್ ಮಾಡಿದ ಬಿಗ್‌ಬಾಸ್

  ಆ ನಂತರ ಮನೆಯ ಇತರೆ ಸದಸ್ಯರಾದ ಪ್ರಶಾಂತ್, ಅರುಣ್ ಸಾಗರ್, ದೀಪಿಕಾ, ನೇಹಾ ಹಾಗೂ ಇತರರು ರಾಕೇಶ್, ಅನುಪಮಾ ಹಾಗೂ ತಂಡಕ್ಕೆ ಬೈಯ್ಯಲು ಆರಂಭಿಸಿದರು. ಜವಾಬ್ದಾರಿಯಿಲ್ಲದೆ ಪ್ರ್ಯಾಂಕ್ ಮಾಡಿದ್ದೀರಿ ಎಂದರು. ಅರುಣ್ ಸಾಗರ್ ಸಾನ್ಯಾ ಮೇಲೆ ಗರಂ ಆದರು, ಪ್ರಶಾಂತ್ ಸಂಬರ್ಗಿ, ವಿನೋದ್ ವಿರುದ್ಧ, ನೇಹಾ, ರಾಕೇಶ್ ವಿರುದ್ಧ ಹೀಗೆ ಮಾತನಾಡುತ್ತಲೇ ಇದ್ದರು. ಕೊನೆಗೆ ದರ್ಶ್ ಹಾಗೂ ಇತರರು ಸೀನಿಯರ್‌ಗಳ ಮೇಲೆ ವಾಗ್ದಾಳಿ ನಡೆಸಿ, ನೀವು ಏಕೆ ನಮಗೆ ಎಚ್ಚರಿಸಲಿಲ್ಲ ಎಂದು ಪ್ರಶ್ನೆ ಮಾಡಿದರು. ಇನ್ನು ಕೆಲವರು, ಪ್ರ್ಯಾಂಕ್ ಮಾಡುವಾಗ ಎಲ್ಲರೂ ಜೊತೆಗಿದ್ದರು, ಇನ್ನೂ ಸ್ವಲ್ಪ ಹೊತ್ತು ಪ್ರ್ಯಾಂಕ್ ಮಾಡಬೇಕಿತ್ತು ಎಂದೆಲ್ಲ ಹೇಳಿ ಈಗ ನಮ್ಮನ್ನೇ ಬೈಯ್ಯುತ್ತಿದ್ದೀರಿ'' ಎಂದರು. ಒಟ್ಟಾರೆ ಮನೆಯಲ್ಲಿ ಬಿಸಿ ಬಿಸಿ ವಾತಾವರಣ ಇತ್ತು. ಪ್ರ್ಯಾಂಕ್ ಪ್ಲ್ಯಾನ್ ಮಾಡಿದ ರಾಕೇಶ್ ಅಡಿಗ, ಕ್ಷಮೆ ಕೇಳಿ, ನೇರವಾಗಿ ನಾಮಿನೇಟ್ ಆಗಲು ರೆಡಿ ಎಂದರು. ಅ ಬಳಿಕ ಇಡೀ ತಂಡದವರು ಕ್ಷಮೆ ಕೇಳಿದರು. ಆ ನಂತರ ಬಿಗ್‌ಬಾಸ್ ಮಾತನಾಡಿ ಇದೊಂದು ಟಾಸ್ಕ್‌ ಎಂದು ಹೇಳಿದರು. ಆಗ ಎಲ್ಲರೂ ನಿರಾಳರಾದರು.

  ಟಾಸ್ಕ್‌ನಲ್ಲಿ ಗೆದ್ದ ಆರ್ಯವರ್ಧನ್

  ಟಾಸ್ಕ್‌ನಲ್ಲಿ ಗೆದ್ದ ಆರ್ಯವರ್ಧನ್

  ಬಳಿಕ ಕ್ಯಾಪ್ಟೆನ್ಸಿ ಟಾಸ್ಕ್‌ಗೆ ನಾಲ್ಕು ಜನರನ್ನು ಆಯ್ಕೆ ಮಾಡಬೇಕಾಯಿತು. ಅನುಪಮಾ ತಂಡದಿಂದ ಆರ್ಯವರ್ಧನ್, ಅಮೂಲ್ಯಾ, ದಿವ್ಯಾ ಉರುಡುಗ, ದರ್ಶ್ ಚಂದಪ್ಪ ಅವರನ್ನು ಕಳಿಸಲಾಯ್ತು. ಕ್ಯಾಪ್ಟನ್ ಆಗಲೇ ಬೇಕು ಎಂದು ನಿಶ್ಚಯಿಸಿದ್ದ ಆರ್ಯವರ್ಧನ್ ಟಾಸ್ಕ್‌ನಲ್ಲಿ ಗೆದ್ದರು. ಆದರೆ ಅವರಿಗೆ ರಾಕೇಶ್ ಹಾಗೂ ರೂಪೇಶ್ ಕಂಡೂ ಕಾಣದಂತೆ ಸಹಾಯವನ್ನು ಮಾಡಿದರು. ಇದು ಕೆಲವರಿಗೆ ಬೇಸರ ಮೂಡಿಸಿತು. ಆದರೆ ಕ್ಯಾಪ್ಟನ್ ಆದ ಆರ್ಯವರ್ಧನ್ ಅಂತೂ ಬಹಳ ಖುಷಿ ಪಟ್ಟರು. ಅವರ ಮುದ್ದಿನ ಮಗಳ ಸಂದೇಶ ಸಹ ಅವರಿಗಾಗಿ ವಿಶೇಷವಾಗಿ ಪ್ರಸಾರವಾಯ್ತು.

  ವಾರದ ಅತ್ಯುತ್ತಮ-ಕಳಪೆ ಯಾರು?

  ವಾರದ ಅತ್ಯುತ್ತಮ-ಕಳಪೆ ಯಾರು?

  ಆ ನಂತರ ಆ ವಾರದ ಕಳಪೆ ಹಾಗೂ ಅತ್ಯುತ್ತಮ ನೀಡುವ ಸಮಯ ಎದುರಾಯ್ತು. ಹಲವು ಮಂದಿ ಆರ್ಯವರ್ಧನ್ ಅವರಿಗೆ ಅತ್ಯುತ್ತಮ ಪಟ್ಟ ನೀಡಿದರು. ಯಾರೂ ಅವರಿಗೆ ಕಳಪೆ ನೀಡಲಿಲ್ಲ. ಆದರೆ ಕಳೆದ ವಾರ ಕ್ಯಾಪ್ಟನ್ ಆಗಿದ್ದ ವಿನೋದ್ ಗೊಬ್ರಗಾಲಗೆ ಹೆಚ್ಚು ಮಂದಿ ಕಳಪೆ ನೀಡಿದರು. ಆ ಬಳಿಕ ಸರಣಿ ಪ್ರ್ಯಾಂಕ್ ಮಾಡಿದ ರಾಕೇಶ್ ಅಡಿಗಗೆ ಸಹ ಹೆಚ್ಚು ಜನ ಕಳಪೆ ನೀಡಿದರು. ಕೊನೆಗೆ ರಾಕೇಶ್ ಹಾಗೂ ವಿನೋದ್‌ಗೆ ನೀಡಿದ್ದ ಕಳಪೆ ಮತಗಳು ಸಮನಾದ ಕಾರಣ ಕ್ಯಾಪ್ಟನ್ ಆದ ಗುರೂಜಿ, ರಾಕೇಶ್‌ಗೆ ಕಳಪೆ ನೀಡಿದರಾದ್ದರಿಂದ ಅವರನ್ನು ಜೈಲಿಗೆ ಕಳಿಸುವಂತಾಯಿತು. ಆದರೆ ಆರ್ಯವರ್ಧನ್‌ ಅವರ ಆಸೆ ಒಂದೇ ವಾರದಲ್ಲಿ ಈಡೇರಿತು. ಅತ್ಯುತ್ತಮ ಹಾಗೂ ಕ್ಯಾಪ್ಟನ್ ಆಗಬೇಕು ಎಂದು ಆಸೆ ಪಟ್ಟಂತೆ ಈ ವಾರ ಕ್ಯಾಪ್ಟನ್ ಆದರು ಹಾಗೂ ಅತ್ಯುತ್ತಮ ಸಹ ಆದರು.

  English summary
  Bigg Boss Kannada Season 09 Day 13 Written Update: Aryavardhan become captain
  Friday, October 7, 2022, 23:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X