Bigg Boss Kannada Season 09: ಶನಿವಾರ ಮನೆಯಲ್ಲಿ ನಡೆದಿದ್ದೇನು?

ಬಿಗ್‌ಬಾಸ್ ಸೀಸನ್ 09 ರ ಎರಡನೇ ವೀಕೆಂಡ್ ಬಂದು ಬಿಟ್ಟಿದೆ. ಇನ್ನೊಬ್ಬರನ್ನು ಮನೆಯಿಂದ ಹೊರಗೆ ಕಳಿಸಲು ಮತ್ತೆ ಸುದೀಪ್ ಬಂದಿದ್ದಾರೆ.

ವೀಕೆಂಡ್ ಎಪಿಸೋಡ್‌ನ ಮೊದಲ ದಿನ ಅಂದರೆ ಶನಿವಾರ ಸುದೀಪ್ ಆಗಮಿಸಿದ್ದು, ಸ್ಪರ್ಧಿಗಳೊಂದಿಗೆ ತುಸು ತಮಾಷೆಯಾಗಿ, ತುಸು ಗಂಭೀರವಾಗಿ ಮಾತನಾಡಿ, ಸ್ಪರ್ಧಿಗಳ ತಪ್ಪುಗಳನ್ನು ತಿಳಿಸಿ, ಕೆಲವು ಗೊಂದಲುಗಳನ್ನು ಪರಿಹರಿಸಿ, ಕೆಲವರಿಗೆ ಕ್ಲಾಸ್ ತೆಗೆದುಕೊಂಡು, ಕೆಲವರಿಗೆ ಗುಡ್ ಎಂದಿದ್ದಾರೆ.

ಎಲ್ಲದಕ್ಕಿಂತಲೂ ಮುಖ್ಯವಾಗಿ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದ ಒಂಬತ್ತು ಸದಸ್ಯರಲ್ಲಿ ಮೊದಲ ದಿನ ಮೂವರನ್ನು ಸೇಫ್ ಮಾಡಿದ್ದಾರೆ ಸುದೀಪ್.

ಎರಡನೇ ವೀಕೆಂಡ್‌ಗೆ ಎಪಿಸೋಡ್‌ಗೆ ಬಂದ ಸುದೀಪ್, ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಿಗ್ಗೆ ಮನೆಯಲ್ಲಿ ನಡೆದ ಕೆಲವು ಘಟನೆಗಳ ಮುಖ್ಯಾಂಶಗಳನ್ನು ತೋರಿಸಿದರು. ಕಳಪೆ-ಅತ್ಯುತ್ತಮ ನೀಡಿದ ಬಗ್ಗೆ ಮನೆಯಲ್ಲಿ ಇನ್ನೂ ಚರ್ಚೆಗಳು ನಿಂತಿಲ್ಲ. ಅದರಲ್ಲಿಯೂ ಪ್ರಶಾಂತ್ ಸಂಬರ್ಗಿ ಬಗ್ಗೆ ಚರ್ಚೆಗಳು ಜಾರಿಯಲ್ಲಿದ್ದವು. ಶನಿವಾರ ಬೆಳಿಗ್ಗೆ ಮತ್ತೆ ರಾಕೇಶ್, ಅರುಣ್ ಸಾಗರ್ ಅವರುಗಳು ಮುಖಕ್ಕೆ ಬಿಳಿ ಬಣ್ಣ ಬಳಿದುಕೊಂಡು ದೆವ್ವದ ರೀತಿ ಪ್ರ್ಯಾಂಕ್ ಮಾಡಿದರು.

ತಮಾಷೆ ಮಾಡಿದ ಸುದೀಪ್

ತಮಾಷೆ ಮಾಡಿದ ಸುದೀಪ್

ಆ ನಂತರ ಸುದೀಪ್ ಅವರು ಮನೆಯವರೊಟ್ಟಿಗೆ ಚರ್ಚೆ ಆರಂಭಿಸಿದರು. ಮೊದಲಿಗೆ ತುಸು ತಮಾಷೆ ಮಾಡಿದ ಸುದೀಪ್, ಮನೆಯಲ್ಲಿ ನಡೆದ ತಮಾಷೆಯ ಸಂಗತಿಗಳ ಬಗ್ಗೆ ಮಾತನಾಡಿದರು. ರೂಪೇಶ್-ಸಾನ್ಯಾ ವಿಷಯ. ಅನುಪಮಾ-ಕಾವ್ಯಾಶ್ರೀಯ ಹೂವೆ-ಹೂವೆ ಹಾಡಿನ ವಿಷಯ. ರಾಕೇಶ್ ಅವರ ಪ್ರ್ಯಾಂಕ್ ವಿಷಯ. ಪ್ರಶಾಂತ್ ಅವರ ಜೋರು ಧ್ವನಿಯ ವಿಷಯ. ಹೀಗೆ ತಮಾಷೆಯಾಗಿಯೇ ಚರ್ಚೆಗಳು ನಡೆದವು. ಅರುಣ್ ಸಾಗರ್- ಕಾವ್ಯಾಶ್ರೀ ಅವರುಗಳು ಸಾನ್ಯಾ-ರೂಪೇಶ್‌ರಂತೆ ನಟಿಸಿ ತೋರಿಸಿದ್ದು ಮನೆ ಮಂದಿಯನ್ನು ನಕ್ಕು ನಲಿಸಿತು.

ಪ್ರ್ಯಾಂಕ್‌ಗಳ ಬಗ್ಗೆ ಸುದೀಪ್ ಪ್ರಶ್ನೆ

ಪ್ರ್ಯಾಂಕ್‌ಗಳ ಬಗ್ಗೆ ಸುದೀಪ್ ಪ್ರಶ್ನೆ

ಆ ನಂತರ ತುಸು ಗಂಭೀರ ವಿಷಯಕ್ಕೆ ಬಂದ ಸುದೀಪ್, ಮನೆಯಲ್ಲಿ ನಡೆದ ಸರಣಿ ಪ್ರ್ಯಾಂಕ್‌ಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು. ಕೆಲವರು ರಾಕೇಶ್‌ರ ಸೋಷಿಯಲ್ ಎಕ್ಸ್‌ಪೆರಿಮೆಂಟ್ ಪ್ರ್ಯಾಂಕ್‌ ಚೆನ್ನಾಗಿತ್ತು ಎಂದರು ಆದರೆ ಮೂರ್ಛೆ ಬಂದಂತೆ ನಟಿಸಿದ ಪ್ರ್ಯಾಂಕ್ ಸರಿಯಲ್ಲ ಎಂದರು. ಇನ್ನು ಕೆಲವರು ಪ್ರ್ಯಾಂಕ್ ಎಂಬುದೇ ಸರಿಯಿಲ್ಲ ಎಂದರು. ಆರ್ಯವರ್ಧನ್‌ಗೆ ಮಾಡಿದ ಪ್ರ್ಯಾಂಕ್ ಹೇಗೆ ಪ್ರಶಾಂತ್ ಸಂಬರ್ಗಿ ಹಾಗೂ ಅರುಣ್ ಸಾಗರ್ ಮೊದಲು ಹೇಗೆ ಸ್ಪಂದಿಸಿದ್ದರು ಆ ನಂತರ ಅದು ತಪ್ಪೆಂದು ಬಿಗ್‌ಬಾಸ್ ಹೇಳಿದಾಗ ಹೇಗೆ ವರ್ತಿಸಿದರು ಎಂಬುದನ್ನು ವಿರೋಧಿಸಿದರು.

ಪ್ರಶಾಂತ್-ದೀಪಿಕಾಗೆ ಕ್ಲಾಸ್ ತೆಗೆದುಕೊಂಡ ಸುದೀಪ್

ಪ್ರಶಾಂತ್-ದೀಪಿಕಾಗೆ ಕ್ಲಾಸ್ ತೆಗೆದುಕೊಂಡ ಸುದೀಪ್

ಸ್ಯಾಂಡ್‌ವಿಚ್ ಮಾಡುವ ಟಾಸ್ಕ್‌ನಲ್ಲಿ ಪ್ರಶಾಂತ್ ಸಂಬರ್ಗಿ ಹಾಗೂ ದೀಪಿಕಾ ಅವರುಗಳು ಕ್ಯಾಪ್ಟನ್ ವಿನೋದ್ ಅವರೊಟ್ಟಿಗೆ ಮಾಡಿದ ವಾದದ ಬಗ್ಗೆ ಸುದೀಪ್ ಪ್ರಶ್ನೆ ಮಾಡಿದರು. ಸೌತೆಕಾಯ, ಈರುಳ್ಳಿಯ ಸಿಪ್ಪೆ ಸುಲಿಯಬೇಕು ಎಂಬುದನ್ನೂ ಸಹ ಬಿಗ್‌ಬಾಸ್ ನಿಮಗೆ ಹೇಳಬೇಕೆ? ಎಲ್ಲ ಗೊತ್ತಿದ್ದವರೂ ಹೀಗೆ ವಾದ ಮಾಡಿದರೆ ನಿಮ್ಮ ವ್ಯಕ್ತಿತ್ವ ಹಾಳಾಗುತ್ತದೆ ಎಂದು ಖಡಕ್ ಎಚ್ಚರಿಕೆ ಕೊಟ್ಟರು ಸುದೀಪ್, ತಪ್ಪಾಯಿತೆಂದರು ಪ್ರಶಾಂತ್ ಸಂಬರ್ಗಿ. ದೀಪಿಕಾ ಸಹ ಸಮಜಾಯಿಷಿ ನೀಡಿದರು.

ಆರ್ಯವರ್ಧನ್‌ ಎಚ್ಚರಿಕೆ ನೀಡಿದ ಸುದೀಪ್

ಆರ್ಯವರ್ಧನ್‌ ಎಚ್ಚರಿಕೆ ನೀಡಿದ ಸುದೀಪ್

ಆ ಬಳಿಕ ಆರ್ಯವರ್ಧನ್ ವಿಚಾರಕ್ಕೆ ಬಂದ ಸುದೀಪ್, ಆರ್ಯವರ್ಧನ್‌ ಕ್ಯಾಪ್ಟನ್ ಆಗಿದ್ದಕ್ಕೆ ಅಭಿನಂದನೆ ಸಲ್ಲಿಸಿದರು, ಬಳಿಕ ಆರ್ಯವರ್ಧನ್‌, ದಿವ್ಯಾ ಬಳಿ 'ಹಣ ಪಡೆದು ನಗಲ್ಲ' ಎಂದಿದ್ದರ ಬಗ್ಗೆ ಪ್ರಶ್ನೆ ಮಾಡಿದರು. ಬಳಿಕ ಕಾವ್ಯಾ ಸಹ 'ಬಣ್ಣದ ಮಾತಾಡೋಳು' ಎಂದಿದ್ದರ ಬಗ್ಗೆಯೂ ಪ್ರಶ್ನೆ ಮಾಡಿದರು. ಕೊನೆಗೆ ಆರ್ಯವರ್ಧನ್ ಕ್ಷಮೆ ಕೇಳಿದರು. ಸುದೀಪ್ ಸಹ ಆರ್ಯವರ್ಧನ್‌ಗೆ ಎಚ್ಚರಿಕೆ ಸಹ ನೀಡಿದರು. ಆ ಬಳಿಕ ಎಲಿಮಿನೇಶನ್‌ನಿಂದ ಆರ್ಯವರ್ಧನ್, ದೀಪಿಕಾ ದಾಸ್, ಅಮೂಲ್ಯ ಅವರು ಸೇಫ್ ಆಗಿದ್ದಾರೆಂದು ಸುದೀಪ್ ಹೇಳಿದರು. ನಾಳೆ ಅಂದರೆ ಭಾನುವಾರು, ಇನ್ನುಳಿದ ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಯಾರು ಹೊರಗೆ ಹೋಗಲಿದ್ದಾರೆ ನೋಡಬೇಕಿದೆ.

More from Filmibeat

English summary
Bigg Boss Kannada Season 09 day 14 written update. Sudeep warn some contestants.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X