For Quick Alerts
  ALLOW NOTIFICATIONS  
  For Daily Alerts

  BBK 9 : ಬಿಗ್‌ಬಾಸ್ ಎಲಿಮಿನೇಶನ್: ಈ ವಾರ ಮನೆಯಿಂದ ಹೊರಬಿದ್ದವರ್ಯಾರು?

  By ಫಿಲ್ಮಿಬೀಟ್ ಡೆಸ್ಕ್
  |

  ಬಿಗ್‌ಬಾಸ್ ಕನ್ನಡ ಸೀಸನ್ 09 ವಾರದಿಂದ ವಾರಕ್ಕೆ ಕುತೂಹಲ ಕೆರಳಿಸುತ್ತಿದೆ. ಸಾಧಾರಣ ಮಟ್ಟದ ಸ್ಪರ್ಧಿಗಳೆಲ್ಲ ಈಗಾಗಲೇ ಮನೆಯಿಂದ ಹೊರಹೋಗಿದ್ದಾರೆ. ಇನ್ನುಳಿದಿರುವುದು ಗಟ್ಟಿ ಕಾಳುಗಷ್ಟೆ.

  ಇದೀಗ ಹತ್ತನೇ ವಾರ ನಡೆಯುತ್ತಿದ್ದು ಈ ವಾರ ಮನೆಯಿಂದ ಕಾವ್ಯಾಶ್ರೀ ಹೊರಗೆ ಹೋಗಿದ್ದಾರೆ. ನಿರೂಪಕಿ, ಕಿರುತೆರೆ ನಟಿಯಾಗಿರುವ ಕಾವ್ಯಾಶ್ರೀ ಅವರ ಬಿಗ್‌ಬಾಸ್ ಪಯಣ ನಿನ್ನೆ (ಡಿಸೆಂಬರ್ 04)ಕ್ಕೆ ಅಂತ್ಯವಾಗಿದೆ.

  BBK 09: ಬಿಗ್‌ಬಾಸ್ ಮನೆಯಿಂದ ಮತ್ತೊಂದು ಅಚ್ಚರಿಯ ಎಲಿಮಿನೇಶನ್BBK 09: ಬಿಗ್‌ಬಾಸ್ ಮನೆಯಿಂದ ಮತ್ತೊಂದು ಅಚ್ಚರಿಯ ಎಲಿಮಿನೇಶನ್

  ಕಾವ್ಯಾಶ್ರೀ ಬಗ್ಗೆ ಮೊದಲಿನಿಂದಲೂ ಕೆಲ ಅಪಸ್ವರಗಳಿದ್ದವು. ಕಾವ್ಯಾಶ್ರೀ ಟಾಸ್ಕ್‌ಗಳಲ್ಲಿ ಸರಿಯಾಗಿ ಪ್ರದರ್ಶನ ನೀಡುವುದಿಲ್ಲ. ಮನೆಯ ಕೆಲಸಗಳಲ್ಲಿ ಸರಿಯಾಗಿ ಭಾಗವಹಿಸುವುದಿಲ್ಲ ಎಂದು ಆದರೆ ಆಕೆಯ ಮುಗ್ಧತೆ ತುಂಬಿದ ಮಾತುಗಳು, ಆಗಾಗ್ಗೆ ಒಗೆಯುವ ಜೋಕ್‌ಗಳು ಪ್ರೇಕ್ಷಕರಿಗೆ ಹಾಗೂ ಮನೆಯ ಕೆಲವು ಸದಸ್ಯರಿಗೆ ಹಿಡಿಸಿದ್ದವು. ಹಾಗಾಗಿ ಇಷ್ಟು ವಾರಗಳು ಅವರು ಉಳಿದುಕೊಂಡಿದ್ದರು.

  ಈ ವಾರ ಅರುಣ್ ಸಾಗರ್, ದೀಪಿಕಾ, ಪ್ರಶಾಂತ್ ಸಂಬರ್ಗಿ, ಅಮೂಲ್ಯ, ಕಾವ್ಯಾಶ್ರೀ, ಅನುಪಮಾ, ಆರ್ಯವರ್ಧನ್, ದಿವ್ಯಾ ಹಾಗೂ ರೂಪೇಶ್ ಶೆಟ್ಟಿ ಅವರುಗಳು ಡೇಂಜರ್ ಜೋನ್‌ನಲ್ಲಿದ್ದರು. ಕೊನೆಗೆ ಕಾವ್ಯಾಶ್ರೀ ಅವರ ಹೆಸರನ್ನು ಸುದೀಪ್ ತೆಗೆದುಕೊಂಡರು.

  ಹತ್ತು ವಾರ ಮನೆಯಲ್ಲಿದ್ದ ಕಾವ್ಯಾಶ್ರೀ, ಮನೆಯ ಸದಸ್ಯರೊಟ್ಟಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಹಾಗಾಗಿ ಅಳುತ್ತಲೇ ಮನೆಯಿಂದ ಕಾವ್ಯಾಶ್ರೀ ಹೊರನಡೆದರು. ಘಟಾನುಘಟಿ ಸ್ಪರ್ಧಿಗಳ ನಡುವೆ ಕಾವ್ಯಾಶ್ರೀ ಹತ್ತು ವಾರ ಉಳಿದಿದ್ದು ಕಡಿಮೆ ಸಾಧನೆಯೇನಲ್ಲ.

  ಕಳೆದ ವಾರ ವಿನೋದ್ ಗೊಬ್ರಗಾಲ ಎಲಿಮಿನೇಟ್ ಆಗಿದ್ದರು, ಅದರ ಬೆನ್ನಲ್ಲ ಕಾವ್ಯಾಶ್ರೀ ಎಲಿಮಿನೇಟ್ ಆಗಿದ್ದಾರೆ. ಇಬ್ಬರೂ ಸಹ ಯಾವುದೇ ಹಿನ್ನೆಲೆ ಇರದೆ ಟಿವಿ ಲೋಕದಲ್ಲಿ ತಮ್ಮದೇ ಆದ ಗುರುತು ಪಡೆದುಕೊಂಡವರು. ಇಬ್ಬರು ಒಬ್ಬರ ಹಿಂದೊಬ್ಬರು ಎಲಿಮಿನೇಟ್ ಆಗಿದ್ದಾರೆ.

  Bigg Boss Kannada Season 09: Kavyashree Eliminated From The House

  ಇದೀಗ ಬಿಗ್‌ಬಾಸ್ ಮನೆಯಲ್ಲಿ ಅರುಣ್ ಸಾಗರ್, ವೈಲ್ಡ್‌ ಕಾರ್ಡ್‌ ಮೇಲೆ ವಾಪಸ್ ಬಂದಿರುವ ದೀಪಿಕಾ, ಅಮೂಲ್ಯ, ಅನುಪನಾ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರ್ಗಿ, ಆರ್ಯವರ್ಧನ್, ದಿವ್ಯಾ ಉರುಡುಗ, ರಾಕೇಶ್ ಅಡಿಗ ಅವರುಗಳು ಮಾತ್ರವೇ ಉಳಿದಿದ್ದಾರೆ. ಇವರಲ್ಲಿ ಯಾರು ವಿನ್ನರ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

  English summary
  Bigg Boss Kannada season 09: Kavyashree eliminated from the house. She stayed for 10 weeks in the house.
  Monday, December 5, 2022, 12:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X