ಬಿಗ್‌ಬಾಸ್‌ನಲ್ಲಿ ಕಾವ್ಯಶ್ರೀ ಹೇಳಿದ ಜೋಕ್ ಕೇಳಿದಿರಾ? ನಕ್ಕು ಸುಸ್ತಾಗುವುದು ಗ್ಯಾರೆಂಟಿ

By ಫಿಲ್ಮಿಬೀಟ್ ಡೆಸ್ಕ್

ಬಿಗ್‌ಬಾಸ್‌ ಕನ್ನಡ ಸೀಸನ್ 9 ನಲ್ಲಿ ಇತ್ತೀಚೆಗೆ ಜಗಳಗಳೇ ಹೆಚ್ಚಾಗಿತ್ತು. ಪ್ರಶಾಂತ್ ಸಂಬರ್ಗಿ-ರೂಪೇಶ್ ರಾಜಣ್ಣ. ಆ ಬಳಿಕ ರೂಪೇಶ್ ರಾಜಣ್ಣ-ಆರ್ಯವರ್ಧನ್ ಜಗಳ. ರೂಪೇಶ್ ರಾಜಣ್ಣ ವಿರುದ್ಧ ದಿವ್ಯಾ ಹಾಗೂ ರಾಕೇಶ್ ಅಡಿಗ ಜಗಳ ಹೀಗೆ ಒಂದರ ಹಿಂದೊಂದು ಜಗಳಗಳಾಗಿದ್ದವು.

ಪಕ್ಕಾ ಎಂಟರ್ಟೈನರ್‌ ಅರುಣ್ ಸಾಗರ್ ಸಹ ಯಾಕೋ ಇತ್ತೀಚೆಗೆ ತುಸು ಮಂಕಾದಂತಿದ್ದರು. ಜಗಳ, ಗಂಭಿರತೆಯಲ್ಲಿ ಮುಳುಗಿದ್ದ ಬಿಗ್‌ಬಾಸ್ ಮಂದಿಗೆ ಕಾವ್ಯಶ್ರೀ ಹೇಳಿರುವ ಜೋಕ್ ಮುದ ನೀಡಿದೆ. ಮನೆಯವರಿಗಿಂತಲೂ ಹೆಚ್ಚಿಗೆ ವೀಕ್ಷಕರಿಗೆ ಈ ಜೋಕ್ ಸಖತ್ ಮಜಾ ಕೊಟ್ಟಿದೆ.

ಕಾವ್ಯಾಶ್ರೀ ಆರಂಭದಿಂದಲೂ ಆರಕ್ಕೇರದ ಆದರೆ ಮೂರಕ್ಕಿಳಿಯದ ಸ್ಪರ್ಧಿಯಂತೆಯೇ ಬಿಗ್‌ಬಾಸ್‌ನಲ್ಲಿದ್ದಾರೆ. ಟಾಸ್ಕ್‌ಗಳಲ್ಲಿ ಅಷ್ಟೇನೂ ಚೆನ್ನಾಗಿ ಆಡಿರಲಿಲ್ಲ. ಟಾಸ್ಕ್‌ಗಳ ವಿಷಯ ಬಂದಾಗ ಕಾವ್ಯಶ್ರೀ ತುಸು ಹಿಂದೆಯೇ ಇದ್ದರು. ಅರುಣ್ ಸಾಗರ್‌ ಮಾದರಿಯಲ್ಲಾಗಲಿ ರಾಕೇಶ್ ಅಡಿಗ ಮಾದರಿಯಲ್ಲಾಗಲಿ ವಿಶೇಷ ಎನ್ನಿಸುವಂತ ಪ್ರತಿಭೆಯೂ ಈಕೆಗಿಲ್ಲ. ಆದರೂ ತಮ್ಮ ಮುಗ್ಧ ಮಾತು, ನಡವಳಿಕೆಯಿಂದ ಕಾವ್ಯಶ್ರೀ ಪ್ರೇಕ್ಷಕರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಇನ್ನೂ ಮನೆಯಲ್ಲಿಯೇ ಉಳಿದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಬಿಗ್‌ಬಾಸ್‌ ಮನೆಯಲ್ಲಿ ಕೆಲವರು ಜೋಕ್ ಮಾಡಲು ಹಾಡು ಹೇಳಲು ಎಂಟರ್ಟೈನ್ ಮಾಡಲು ಪ್ರಯ್ನಿಸಿದರೂ ಸಾಧ್ಯವಾಗುವುದಿಲ್ಲ. ಆದರೆ ಕಾವ್ಯಶ್ರೀ ತಮ್ಮ ಸಹಜ ಮುಗ್ಧ ನಡವಳಿಕೆ, ಮಾತಿನಿಂದಲೇ ಎಂಟರ್ಟೈನ್‌ಮೆಂಟ್ ಮಾಡುತ್ತಿದ್ದಾರೆ. ಕಾವ್ಯಶ್ರೀ ತಮ್ಮ ಮುಗ್ಧತೆಯಿಂದಲೇ ಹೇಳಿದ ಸಣ್ಣ ಮಾತೊಂದು ವೈರಲ್ ಜೋಕ್ ಆಗಿ ಪರಿಣಮಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಹಳ ವೈರಲ್ ಆಗಿದೆ.

ಅಪ್ಪ-ಅಮ್ಮನೊಂದಿಗೆ ಮಾತನಾಡಿರಲೇ ಇಲ್ಲವಂತೆ ಕಾವ್ಯಶ್ರೀ!

ಅಪ್ಪ-ಅಮ್ಮನೊಂದಿಗೆ ಮಾತನಾಡಿರಲೇ ಇಲ್ಲವಂತೆ ಕಾವ್ಯಶ್ರೀ!

ದಿವ್ಯಾ ಉರುಡುಗ, ಕಾವ್ಯಶ್ರೀ ಹಾಗೂ ಇನ್ನು ಕೆಲವರು ಬಿಗ್‌ಬಾಸ್‌ ಮನೆಯ ಅಂಗಳದ ಸೋಫಾದಲ್ಲಿ ಕುಳಿತಿರುತ್ತಾರೆ, ಕಾವ್ಯಶ್ರೀ ಮಾತ್ರ ಸೋಫಾದ ಮೇಲೆ ಮಲಗಿ ದಿವ್ಯಾ ಬಳಿ ಮಾತನಾಡುತ್ತಾ ಇರುತ್ತಾರೆ. ಈ ವೇಳೆ ಗಂಭೀರವಾಗಿ ಮಾತನಾಡುತ್ತಿದ್ದ ಕಾವ್ಯಶ್ರೀ, 'ನಾನು ಎರಡು ವರ್ಷ ನಮ್ಮ ಅಪ್ಪ ಅಮ್ಮನ ಜೊತೆಗೇ ಮಾತನಾಡುವುದು ಬಿಟ್ಟುಬಿಟ್ಟಿದ್ದೆ' ಎಂದರು. ಕಾವ್ಯಾಶ್ರೀ, ಏನೋ ತಮ್ಮ ಜೀವನದ ಕಷ್ಟದ ಸಮಯದ ಬಗ್ಗೆ ಕೇಳಿಕೊಳ್ಳುತ್ತಿರಬಹುದು ಎಂದುಕೊಂಡ ದಿವ್ಯಾ ಉರುಡುಗ, ಆಶ್ಚರ್ಯ ಹಾಗೂ ಸಹಾನುಭೂತಿಯ ದನಿಯಲ್ಲಿ ಯಾಕೆ ಎಂದು ಕೇಳಿದರು. ಆಗ ಕಾವ್ಯಾಶ್ರೀ, ಅದೇ ಗಂಭೀರ ದನಿಯಲ್ಲಿ, ಏಕೆಂದರೆ ನಾನು ಆಗಿನ್ನೂ ಸಣ್ಣವಳು, ನನಗೆ ಆಗ ಎರಡು ವರ್ಷ ವಯಸ್ಸಷ್ಟೆ, ಅದಕ್ಕೆ ನಾನು ಅವರೊಟ್ಟಿಗೆ ಮಾತನಾಡಿರಲಿಲ್ಲ' ಎನ್ನುತ್ತಾರೆ.

ಉತ್ತರ ಕೇಳಿ ಅವಾಕ್ಕಾದ ದಿವ್ಯಾ ಉರುಡುಗ

ಉತ್ತರ ಕೇಳಿ ಅವಾಕ್ಕಾದ ದಿವ್ಯಾ ಉರುಡುಗ

ಕಾವ್ಯಾರ ಉತ್ತರ ಕೇಳಿ ದಿವ್ಯಾ ಅವಾಕ್ಕಾಗಿ ಬಿಡುತ್ತಾರೆ. ಫೂಲ್ ಆದೆನೆಲ್ಲ ಮುಖ ಮುಚ್ಚಿಕೊಂಡು ನಗುತ್ತಾರೆ. ಆದರೆ ಕಾವ್ಯಶ್ರೀಯ ಈ ಜೋಕಿನ ವಿಡಿಯೋ ಇದೀಗ ಬಹಳ ವೈರಲ್ ಆಗಿದೆ. ಹಲವು ನೆಟ್ಟಿಗರು ಈ ವಿಡಿಯೋವನ್ನು ಹಂಚಿಕೊಂಡು ಕಾವ್ಯಾರ ಜೋಕನ್ನು, ಜೋಕ್ ಅನ್ನು ಡಿಲಿವರಿ ಮಾಡಿರುವ ರೀತಿಯನ್ನು ಮೆಚ್ಚಿಕೊಂಡಿದ್ದಾರೆ. ಇಷ್ಟು ದಿನ ಹೆಚ್ಚೇನು ಸದ್ದಾಗದಿದ್ದ ಒಂದೇ ಜೋಕಿನಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿಬಿಟ್ಟಿದ್ದಾರೆ.

ಕಪ್ಪೆ ಜೊತೆ ಕಾವ್ಯಶ್ರೀ ಕಾನ್‌ವರ್ಸೇಷನ್

ಕಪ್ಪೆ ಜೊತೆ ಕಾವ್ಯಶ್ರೀ ಕಾನ್‌ವರ್ಸೇಷನ್

ಕಾವ್ಯಶ್ರೀ ಅವರ, ಕಪ್ಪೆ ಕಾನ್‌ವರ್ಸೇಷನ್ ಸಹ ಬಹಳ ಜನಪ್ರಿಯ. ಬಿಗ್‌ಬಾಸ್ ಮನೆಯ ಅಂಗಳದಲ್ಲಿ ಓಡಾಡುವ ಕಪ್ಪೆಗಳೊಟ್ಟಿಗೆ ಕಾವ್ಯಶ್ರೀ ಗೆಳೆತನ ಮಾಡಿಕೊಂಡಿದ್ದಾರೆ! ಕಪ್ಪೆಗಳೊಟ್ಟಿಗೆ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಈ ಬಗ್ಗೆ ಸುದೀಪ್ ಸಹ ಆಗಾಗ್ಗೆ ಕಾವ್ಯಶ್ರೀಯ ಕಾಲೆಳೆಯುತ್ತಿರುತ್ತಾರೆ. ಆರಂಭದಿಂದಲೂ ಕಾವ್ಯಶ್ರೀ ಸ್ಟಾರ್ ಎಂಟರ್ಟೈನರ್‌ ಆಗಿ ಗರುತಿಸಿಕೊಂಡಿಲ್ಲವಾದರೂ ತಮ್ಮದೇ ಮಾದರಿಯಲ್ಲಿ ಎಂಟರ್ಟೈನ್‌ ಮಾಡುವಲ್ಲಿ ಹಿಂದುಳಿದಿಲ್ಲ. ಅಂದಹಾಗೆ ಈ ಬಾರಿ ಕಾವ್ಯಾಶ್ರೀಗೆ ಅತ್ಯುತ್ತಮ ಪಟ್ಟ ಸಹ ದೊರೆತಿದೆ.

More from Filmibeat

English summary
Bigg Boss Kannada season 09: Kavyashree joke video getting viral on social media. She became best contest of the week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X