For Quick Alerts
  ALLOW NOTIFICATIONS  
  For Daily Alerts

  BBK9: ದೀಪಿಕಾ ದಾಸ್ ಎಲಿಮಿನೇಟ್, ಫೈನಲ್‌ಗೆ ಹೋಗಿದ್ದು ಇವರಿಬ್ಬರೇ

  |

  ಬಿಗ್‌ಬಾಸ್ ಕನ್ನಡ ಸೀಸನ್ 09 ರ ಗ್ರ್ಯಾಂಡ್ ಫಿನಾಲೆ ನಿನ್ನೆಯೇ ಆರಂಭವಾಗಿದೆ. ಶನಿವಾರ ಹಾಗೂ ಭಾನುವಾರ ಎರಡು ಭಾಗಗಳಲ್ಲಿ ಫಿನಾಲೆಯು ಪ್ರಸಾರವಾಗುತ್ತಿದೆ.

  ನಿನ್ನೆ ಎಂದರೆ ಭಾನುವಾರ ನಡೆದ ಫಿನಾಲೆ ಕಾರ್ಯಕ್ರಮದಲ್ಲಿ ಮನೆಯ ಐದು ಕೊನೆಯ ಸ್ಪರ್ಧಿಗಳಲ್ಲಿ ದಿವ್ಯಾ ಉರುಡುಗ ಮನೆಯಿಂದ ಹೊರಗೆ ಹೋಗಿದ್ದರು. ಮನೆಯಲ್ಲಿ ಇನ್ನು ನಾಲ್ಕು ಜನ ಮಾತ್ರವೇ ಉಳಿದುಕೊಂಡಿದ್ದರು.

  ರೂಪೇಶ್ ರಾಜಣ್ಣ, ದೀಪಿಕಾ ದಾಸ್, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಅವರುಗಳು ಮನೆಯಲ್ಲಿ ಉಳಿದಿದ್ದರು. ಇವರಲ್ಲಿ ಇಬ್ಬರನ್ನು ಇಂದು ಎಲಿಮಿನೇಟ್ ಮಾಡಲಾಗಿದ್ದು ಇಬ್ಬರು ಸ್ಪರ್ಧಿಗಳು ಫೈನಲ್‌ಗೆ ಹೋಗಿದ್ದಾರೆ.

  ಬಿಗ್‌ಬಾಸ್ ಸೀಸನ್ 09 ರ ಫಿನಾಲೆ ಸಂಜೆ 7:30 ಗೆ ಪ್ರಸಾರವಾಗುತ್ತದೆಯಾದರೂ ಈಗಾಗಲೇ ಕಾರ್ಯಕ್ರಮದ ಚಿತ್ರೀಕರಣ ಮುಗಿದಿದೆ. ಕಾರ್ಯಕ್ರಮದ ಪ್ರೋಮೋ ಸಹ ಈಗಾಗಲೇ ಹೊರ ಬಂದಿದೆ.

  ಪ್ರತ್ಯಕ್ಷದರ್ಶಿಗಳ ಮಾಹಿತಿ ಆಧರಿಸಿ ಹೇಳುವುದಾದರೆ ಗೆದ್ದೇ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಹುಟ್ಟಿಸಿದ್ದ ಕನ್ನಡಪರ ಹೊರಾಟಗಾರ ರೂಪೇಶ್ ರಾಜಣ್ಣನನ್ನು ಮನೆಯಿಂದ ಎಲಿಮಿನೇಟ್ ಮಾಡಲಾಗಿದೆ. ರೂಪೇಶ್ ರಾಜಣ್ಣ ಬಳಿಕ ದೀಪಿಕಾ ದಾಸ್ ಸಹ ಎಲಿಮಿನೇಟ್ ಆಗಿದ್ದಾರೆ.

  ಇನ್ನುಳಿದ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಅವರುಗಳು ಫೈನಲ್‌ಗೆ ಎಂಟ್ರಿ ನೀಡಿದ್ದಾರೆ. ಇಬ್ಬರೂ ಸಹ ಒಟಿಟಿ ಸೀಸನ್‌ನಿಂದ ಬಿಗ್‌ಬಾಸ್ ಟಿವಿ ಸೀಸನ್‌ಗೆ ಬಂದಿದ್ದರು. ಒಟಿಟಿ ಸೀಸನ್‌ನಲ್ಲಿ ರಾಕೇಶ್ ಹಾಗೂ ರೂಪೇಶ್ ಇಬ್ಬರೂ ಅತ್ಯುತ್ತಮವಾಗಿ ಆಡಿದ್ದರು. ಅಲ್ಲಿ ರೂಪೇಶ್ ಶೆಟ್ಟಿ ಚಾಂಪಿಯನ್ ಎನಿಸಿಕೊಂಡಿದ್ದರು. ಟಿವಿ ಸೀಸನ್‌ನಲ್ಲಿ ರಾಕೇಶ್ ಹಾಗೂ ರೂಪೇಶ್ ನಡುವೆ ಯಾರು ಗೆಲ್ಲುತ್ತಾರೆ ಕಾದು ನೋಡಬೇಕಿದೆ.

  English summary
  Bigg Boss Kannada season 09: Rakesh Adiga And Roopesh Shetty enters BBK09 finals. Roopesh Rajanna and Deepika Das eliminated.
  Saturday, December 31, 2022, 17:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X