Bigg Boss Season 09: ಎಲಿಮಿನೇಶನ್‌ನಿಂದ ಪಾರಾದ ಮೊದಲ ಮೂವರು ಸ್ಪರ್ಧಿಗಳು
ಬಿಗ್‌ಬಾಸ್ ಕನ್ನಡ ಸೀಸನ್ 09 ರಿಯಾಲಿಟಿ ಶೋ ಎರಡು ವಾರ ಪೂರೈಸಿದೆ. ಇದೀಗ ಈ ಸೀಸನ್‌ನ ಎರಡನೇ ವೀಕೆಂಡ್ ಎಪಿಸೋಡ್ ಬಂದಿದ್ದು, ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ.
ಎರಡನೇ ವಾರ ಮನೆಯಿಂದ ಹೊರ ಹೋಗಲು ದರ್ಶ್ ಚಂದಪ್ಪ, ನವಾಜ್, ಮಯೂರಿ, ಅಮೂಲ್ಯಾ, ದೀಪಿಕಾ, ಪ್ರಶಾಂತ್ ಸಂಬರ್ಗಿ, ನೇಹಾ ಗೌಡ, ಆರ್ಯವರ್ಧನ್ ಹಾಗೂ ರೂಪೇಶ್ ರಾಜಣ್ಣ ಅವರುಗಳು ನಾಮಿನೇಟ್ ಆಗಿದ್ದರು. ಈ ಒಂಬತ್ತು ಮಂದಿಯಲ್ಲಿ ಒಬ್ಬರು ಈ ವಾರ ಮನೆಯಿಂದ ಹೊರಗೆ ಹೋಗುವುದು ಪಕ್ಕಾ.
ಶನಿವಾರ ವೀಕೆಂಡ್ ಪಂಚಾಯಿತಿ ನಡೆಸಲು ಬಂದ ಸುದೀಪ್, ನಾಮಿನೇಟ್ ಆಗಿದ್ದ ಒಂಬತ್ತರಲ್ಲಿ ಮೂವರನ್ನು ಸೇಫ್ ಎಂದು ಘೋಷಿಸಿದರು.
ಮೊದಲಿಗೆ ನಟಿ ಅಮೂಲ್ಯ ಅವರನ್ನು ಸೇಫ್ ಎಂದು ಸುದೀಪ್ ಘೋಷಿಸಿದರು. ಬಳಿಕ ದೀಪಿಕಾ ದಾಸ್ ಅವರನ್ನು ಸೇಫ್ ಎಂದು ಘೋಷಿಸಿದರು. ಅಂತಿಮವಾಗಿ ಆರ್ಯವರ್ಧನ್ ಗುರೂಜಿಯನ್ನು ಸೇಫ್ ಎಂದರು.
ನಾನು ಪಕ್ಕಾ ಸೇಫ್ ಆಗುವುದಾಗಿ ನನಗೆ ಮೊದಲೇ ಗೊತ್ತಿತ್ತು ಎಂದು ಆರ್ಯವರ್ಧನ್ ಗುರೂಜಿ ಹೇಳಿದರು. ಕ್ಯಾಪ್ಟನ್ ಆದರೂ, ಸೇಫ್ ಆದರೂ ಸಹ ಈ ವಾರ ಆರ್ಯವರ್ಧನ್ ಅವರು ದಿವ್ಯಾ ಹಾಗೂ ಕಾವ್ಯಾಶ್ರೀ ಬಳಿ ಆಡಿದ್ದ ಕೆಲವು ಮಾತುಗಳಿಂದಾಗಿ ಸುದೀಪ್ ಅವರಿಂದ ಎಚ್ಚರಿಕೆಯ ಮಾತುಗಳನ್ನು ಕೇಳಬೇಕಾಯಿತು.

ಒಂಬತ್ತರಲ್ಲಿ ಮೂವರು ಸೇಫ್ ಆಗಿದ್ದು, ದರ್ಶ್ ಚಂದಪ್ಪ, ನವಾಜ್, ಮಯೂರಿ, ಪ್ರಶಾಂತ್ ಸಂಬರ್ಗಿ, ನೇಹಾ ಗೌಡ ಹಾಗೂ ರೂಪೇಶ್ ರಾಜಣ್ಣ ಅವರ ಮೇಲೆ ಇನ್ನೂ ಎಲಿಮಿನೇಶನ್ ಕತ್ತಿ ತೂಡಾಗುತ್ತಲೇ ಇದೆ. ಉಳಿದಿರುವ ಆರು ಜನರಲ್ಲಿ ಒಬ್ಬರು ನಾಳೆ ಅಂದರೆ ಭಾನುವಾರ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಲಿದ್ದಾರೆ.


Click it and Unblock the Notifications











