For Quick Alerts
  ALLOW NOTIFICATIONS  
  For Daily Alerts

  BBK 9 : ಈ ವಾರ ಯಾರು ಕಳಪೆ? ಯಾರು ಉತ್ತಮ? ನೀಡಿದ ಕಾರಣಗಳೇನು?

  |

  ಬಿಗ್‌ಬಾಸ್ ಸೀಸನ್ 09ರ ಎರಡನೇ ವಾರ ಪೂರ್ಣವಾಗಲು ಬಂದಿದೆ. ಮೊದಲ ವಾರ ನಾಮಿನೇಟ್ ಆಗಿದ್ದವರಲ್ಲಿ ಐಶ್ವರ್ಯಾ ಪಿಸೆ ಮನೆಯಿಂದ ಹೊರಗೆ ಹೋಗಿದ್ದಾರೆ. ಈ ಬಾರಿಯೂ ಒಬ್ಬರು ಮನೆಯಿಂದ ಹೊರಗೆ ಹೋಗುವವರಿದ್ದಾರೆ.

  ವೀಕೆಂಟ್ ಪಂಚಾಯಿತಿ ಪ್ರಾರಂಭವಾಗುವ ಮುನ್ನ ಶುಕ್ರವಾರ, ವಾರದ ಕ್ಯಾಪ್ಟನ್ ಅನ್ನು ಆಯ್ಕೆ ಮಾಡುವ ಹಾಗೂ ವಾರದ ಕಳಪೆ ಆಟಗಾರ ಹಾಗೂ ಉತ್ತಮ ಆಟಗಾರನನ್ನು ಗುರುತಿಸುವ ಕಠಿಣವಾದ ಟಾಸ್ಕ್‌ ಮನೆಯ ಸದಸ್ಯರೆದುರು ಇತ್ತು.

  ಮೊದಲಿಗೆ ನಡೆದ ಟಾಸ್ಕ್‌ನಲ್ಲಿ ಆರ್ಯವರ್ಧನ್ ಗುರೂಜಿ ಅವರು ಟಾಸ್ಕ್‌ ಗೆದ್ದು ಕ್ಯಾಪ್ಟನ್ ಆಗಿ ಆಯ್ಕೆ ಆದರು. ಆ ನಂತರ ಉತ್ತಮ-ಕಳಪೆ ಆಟಗಾರರನ್ನು ಗುರುತಿಸುವ ಟಾಸ್ಕ್‌ ಪ್ರಾರಂಭವಾಯಿತು.

  ಮೊದಲಿಗೆ ಪ್ರಾರಂಭಿಸಿದ ಸಾನ್ಯಾ, ತನ್ನ ತಂಡದ ಕ್ಯಾಪ್ಟನ್ ಅನುಪಮಾಗೆ ಉತ್ತಮ ನೀಡಿ ವಿನೋದ್ ಗೊಬ್ರಗಾಲಗೆ ಕಳಪೆ ನೀಡಿದರು. ವಿನೋದ್, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಎಡವಿದರು ಎಂದರು. ನಂತರ ಬಂದ ದೀಪಿಕಾ, ಆರ್ಯವರ್ಧನ್‌ ಅವರಿಗೆ ಅತ್ಯುತ್ತಮ ಹಾಗೂ ಕಳಪೆಯನ್ನು ವಿನೋದ್‌ಗೆ ನೀಡಿದರು. ನಂತರ ಬಂದ ನಟಿ ಮಯೂರಿ ಸಹ ಆರ್ಯವರ್ಧನ್‌ಗೆ ಅತ್ಯುತ್ತಮ ಹಾಗೂ ವಿನೋದ್‌ಗೆ ಕಳಪೆ ನೀಡಿದರು. ನಂತರ ಬಂದ ಅಮೂಲ್ಯ, ಅತ್ಯುತ್ತಮವನ್ನು ಅನುಪಮಾಗೆ ಹಾಗೂ ಕಳಪೆಯನ್ನು ವಿನೋದ್‌ಗೆ ನೀಡಿದರು. ನಂತರ ಬಂದ ದರ್ಶ್‌ ಸಹ ಇದೇ ಮಾದರಿ ಅನುಸರಿಸಿದರು. ಬಳಿಕ ಬಂದ ರಾಕೇಶ್, ಅನುಪಮಾಗೆ ಅತ್ಯುತ್ತಮ ಹಾಗೂ ಪ್ರಶಾಂತ್ ಸಂಬರ್ಗಿಗೆ ಕಳಪೆ ನೀಡಿದರು.

  ಅನುಪಮಾ ಅವರು ರೂಪೇಶ್‌ಗೆ ಕಳಪೆಯನ್ನು, ಆರ್ಯವರ್ಧನ್‌ಗೆ ಉತ್ತಮವನ್ನೂ ನೀಡಿದರು. ದಿವ್ಯಾ ಅವರು ಅನುಪಮಾಗೆ ಉತ್ತಮ, ವಿನೋದ್‌ಗೆ ಕಳಪೆ ನೀಡಿದರು. ಬಳಿಕ ಬಂದ ನೇಹಾ, ಆರ್ಯವರ್ಧನ್‌ಗೆ ಅತ್ಯುತ್ತಮ, ರಾಕೇಶ್‌ಗೆ ಕಳಪೆ ನೀಡಿದರು. ರಾಕೇಶ್‌ ಪ್ರ್ಯಾಂಕ್ ಮಾಡಿದ್ದಕ್ಕೆ ಅವರಿಗೆ ಕಳಪೆ ಕೊಡುತ್ತಿರುವುದಾಗಿ ಹೇಳಿದರು. ನವಾಜ್‌ ಅವರು ಅರುಣ್‌ ಸಾಗರ್‌ಗೆ ಅತ್ಯುತ್ತಮ ಹಾಗೂ ರಾಕೇಶ್‌ಗೆ ಕಳಪೆ ನೀಡಿದರು. ಕಾವ್ಯಾಶ್ರೀ ಅವರು ಉತ್ತಮವನ್ನು ಗುರೂಜಿಗೆ ನೀಡಿ, ಕಳಪೆಯನ್ನು ರಾಕೇಶ್‌ಗೆ ನೀಡಿದರು. ಬಳಿಕ ಬಂದ ರೂಪೇಶ್ ಶೆಟ್ಟಿ, ಅನುಪಮಾಗೆ ಅತ್ಯುತ್ತಮ, ಪ್ರಶಾಂತ್‌ಗೆ ಕಳಪೆ ನೀಡಿದರು. ಬಳಿಕ ಬಂದ ಪ್ರಶಾಂತ್, ಆರ್ಯವರ್ಧನ್‌ಗೆ ಅತ್ಯುತ್ತಮ ಹಾಗೂ ರಾಕೇಶ್‌ಗೆ ಕಳಪೆ ನೀಡಿದರು.

  ಬಳಿಕ ಬಂದ ವಿನೋದ್, ರೂಪೇಶ್‌ ಶೆಟ್ಟಿಗೆ ಅತ್ಯುತ್ತಮ, ರಾಕೇಶ್‌ಗೆ ಕಳಪೆ ನೀಡಿದರು. ಬಳಿಕ ಬಂದ ಅರುಣ್ ಸಾಗರ್, ಆರ್ಯವರ್ಧನ್‌ಗೆ ಅತ್ಯುತ್ತಮ ಹಾಗೂ ಕಳಪೆಯನ್ನು ರಾಕೇಶ್‌ಗೆ ನೀಡಿದರು. ರೂಪೇಶ್ ರಾಜಣ್ಣ ಅವರು ಅತ್ಯುತ್ತಮವನ್ನು ಗುರೂಜಿಗೆ ಹಾಗೂ ಕಳಪೆಯನ್ನು ಪ್ರಶಾಂತ್ ಸಂಬರ್ಗಿಗೆ ನೀಡಿದರು. ಬಳಿಕ ಬಂದ ಆರ್ಯವರ್ಧನ್‌, ಕಾವ್ಯಾಶ್ರೀಗೆ ಕಳಪೆ ಹಾಗೂ ರೂಪೇಶ್‌ಗೆ ಅತ್ಯುತ್ತಮ ನೀಡಿದರು. ಅಂತಿಮವಾಗಿ ಮನೆಯರೆಲ್ಲರಿಂದ ಹೆಚ್ಚು ಮತ ಗಳಿಸಿದ್ದ ಆರ್ಯವರ್ಧನ್‌ಗೆ ಅತ್ಯುತ್ತಮ ನೀಡಲಾಯಿತು. ಆದರೆ ಕಳಪೆ ವಿಷಯದಲ್ಲಿ ವಿನೋದ್ ಹಾಗೂ ರಾಕೇಶ್‌ಗೆ ಸಮಾನ ಮತಗಳು ಬಿದ್ದಿದ್ದವು. ಆಗ ಮತ ಚಲಾಯಿಸಿದ ಹೊಸ ಕ್ಯಾಪ್ಟನ್ ಆರ್ಯವರ್ಧನ್ ಅವರು ರಾಕೇಶ್ ಅನ್ನು ಕಳಪೆ ಎಂದು ಘೋಷಿಸಿ ಅವರನ್ನು ಜೈಲಿಗೆ ಕಳಿಸಿದರು.

  English summary
  Bigg Boss Kannada Season 09: Aryavadhan became new captain of the house and Rakesh Adiga named as worst performer of the week.
  Saturday, October 8, 2022, 9:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X