Bigg Boss Kannada: ಬಿಗ್ ಬಾಸ್ ಸೀಸನ್ ಒಂದರ ಪ್ರಮುಖ ಸ್ಪರ್ಧಿಗಳು ಈಗೇನು ಮಾಡುತ್ತಿದ್ದಾರೆ?
ಬಿಗ್ ಬಾಸ್ ಕನ್ನಡದ ಬಿಗ್ ರಿಯಾಲಿಟಿ ಶೋ ಎಂದೇ ಪಾಪ್ಯುಲಾರಿಟಿಯನ್ನು ಪಡೆದುಕೊಂಡಿದೆ. ಪ್ರಸ್ತುತ ಬಿಗ್ ಬಾಸ್ ಸೀಸನ್ 11 ಭರ್ಜರಿಯಾಗಿಯೇ ನಡೆಯುತ್ತಿದ್ದು ಈಗಾಗಲೇ 10 ಸೀಜನ್ ಗಳು ಕಳೆದಿವೆ. 2013ರಲ್ಲಿ ಆರಂಭವಾದ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಸುದೀರ್ಘ ಪಯಣ ಮಾಡಿ ಇಂದು ಸೀಸನ್ 11ಕ್ಕೆ ಬಂದು ನಿಂತಿದೆ.
ಬಿಗ್ ಬಾಸ್ ಸೀಸನ್ ಒಂದರಲ್ಲಿ ಭಾಗವಹಿಸಿದ ಸ್ಪರ್ಧಿಗಳು ಈಗೇನು ಮಾಡುತ್ತಿದ್ದಾರೆ ಎಂಬ ಕುತೂಹಲ ಹಲವು ಬಿಗ್ ಬಾಸ್ ಪ್ರೇಕ್ಷಕರಿಗೆ ಇದೆ. ಬಿಗ್ ಬಾಸ್ ಸೀಸನ್ 1ರಲ್ಲಿ ನಟ ವಿಜಯ ರಾಘವೇಂದ್ರ ಅವರು ವಿನ್ನರ್ ಆಗಿ ನಟ ಅರುಣ್ ಸಾಗರ್ ರನ್ನರ್ ಅಪ್ ಆದರು. ಇವರೆಲ್ಲದೇ ನಾನಾ ಕ್ಷೇತ್ರಗಳಿಂದ ಕಲಾವಿದರು ಬಿಗ್ ಬಾಸ್ ಒಂದರ ಸ್ಪರ್ಧಿಗಳಾಗಿದ್ದರು .

ನಟಿ ಸಂಜನಾ ಗಲ್ರಾನಿ
ನಟಿ ಸಂಜನಾ ಗಲ್ರಾನಿ ಬಿಗ್ ಬಾಸ್ ಸೀಸನ್ ಒಂದರ ಸ್ಪರ್ಧೆಯಾಗಿದ್ದರು. 2005ರಲ್ಲಿ 'ಸೊಗ್ಗಡು' ಎಂಬ ತೆಲುಗು ಸಿನಿಮಾ ಇಂಡಸ್ಟ್ರಿಗೆ ಕಾಲಿಡುವುದರ ಮೂಲಕ ನಟನಾ ಪಯಣ ಆರಂಭ ಮಾಡಿದ ಈ ನಟಿ ಕನ್ನಡ ಸೇರಿದಂತೆ ತೆಲುಗು ತಮಿಳು ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾರೆ. ಕನ್ನಡದ 'ದಂಡುಪಾಳ್ಯ', 'ಗಂಡ ಹೆಂಡತಿ' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ನಿರ್ದೇಶಕ ಆರ್.ಪಿ ಪಟ್ನಾಯಕ್ ಅವರ ನಿರ್ದೇಶನದ 'ಶಾರದ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ನಟ ಅರುಣ್ ಸಾಗರ್
ಕನ್ನಡ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಬಹಳ ಪಾಪ್ಯುಲಾರಿಟಿ ಪಡೆದಿರುವ ಅರುಣ್ ಸಾಗರ್ 'ಭೂಮಿ ಗೀತಾ' ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಬಂದರು. ಇಲ್ಲಿಯವರೆಗೂ ಹಲವಾರು ಸಿನಿಮಾಗಳಷ್ಟೇ ಅಲ್ಲದೆ ರಿಯಾಲಿಟಿ ಶೋ ಗಳಲ್ಲೂ ಪ್ರಮುಖ ಪಾತ್ರವಹಿಸಿದ್ದಾರೆ ನಟ ಅರುಣ್ ಸಾಗರ್. ಕಸ್ತೂರಿ ವಾಹಿನಿಯಲ್ಲಿ ತರ್ಲೆ ಎಂಬ ಶೋ ಮಾಡಿ ಬಹಳ ಖ್ಯಾತಿಗಳಿಸಿದ್ದರು. ಇವರ ಮಜಾ ವಿತ್ ಸೃಜಾ ಎಂಬ ರಿಯಾಲಿಟಿ ಶೋ ಬಹಳಷ್ಟು ಪಾಪ್ಯುಲಾರಿಟಿ ಪಡೆದಿತ್ತು. ಶ್ರೀ ಮಂಜುನಾಥ ಸಿನಿಮಾಗೆ ಬೆಸ್ಟ್ ಆರ್ಟ್ ಡೈರೆಕ್ಟರ್ ಎಂಬ ರಾಜ್ಯ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆ ಇವರಿಗಿದೆ. ಪ್ರಸ್ತುತ ತಮ್ಮದೇ ಆದ ಆರ್ಟ್ ವರ್ಕ್ ಶಾಪ್‌ಗಳನ್ನು ನಡೆಸುವ ನಟ ಅರುಣ್ ಸಾಗರ್ ಮಕ್ಕಳಿಂದ ಹಿಡಿದು ಎಲ್ಲಾ ಆಸಕ್ತರಿಗೂ ನಟನೆ ಹಾಗು ಕಲೆಯೆಡೆಗೆ ಆಸಕ್ತಿ ಬರುವಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತಾರೆ.
ನಟ ವಿಜಯ ರಾಘವೇಂದ್ರ
'ಬಿಗ್ ಬಾಸ್ ಸೀಸನ್' ಒಂದರ ವಿನ್ನರ್ ನಟ ವಿಜಯ ರಾಘವೇಂದ್ರ ಅವರು 'ಚಿನ್ನಾರಿ ಮುತ್ತ' ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮನೆ ಮಗನಾಗಿದ್ದಾರೆ. 'ಸೇವಂತಿ ಸೇವಂತಿ' ಚಿತ್ರದ ಮೂಲಕ ಬಹಳಷ್ಟು ಖ್ಯಾತಿಗಳಿಸಿದ ಈ ನಟ, ಇತ್ತೀಚೆಗೆ 'ರಾಘು', 'ಮರೀಚಿ', 'ಕದ್ದ ಚಿತ್ರ', 'ಕೇಸ್ ಆಫ್ ಕೊಂಡಾಣ' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಟಿ ನಿರೂಪಕಿ ಅಪರ್ಣಾ ವಸ್ತಾರೆ
ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ಮೂಡಿ ಬಂದ 'ಮಸಣದ ಹೂವು' ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾದವರು ನಟಿ ಅಪರ್ಣಾ. ಡಿ ಡಿ ಚಂದನ ವಾಹಿನಿ ಆಕಾಶವಾಣಿ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಗುರುತಿಸಿಕೊಳ್ಳಲು ಆರಂಭಿಸಿದ ನಟಿ ಅಪರ್ಣಾ ಇಂದು ಕನ್ನಡ ಕಂಡ ಅತ್ಯಂತ ಯಶಸ್ವಿ ಹಾಗೂ ಸಮರ್ಥ ನಿರೂಪಕಿಯರಲ್ಲೊಬ್ಬರು. ನಂತರ ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳಲ್ಲಿ ಗುರುತಿಸಿಕೊಂಡರು. ಬಿಗ್ ಬಾಸ್ ಸೀಸನ್ 1ರಲ್ಲಿ 40 ದಿನಗಳಿಗಿಂತಲೂ ಹೆಚ್ಚಿನ ಕಾಲ ಇದ್ದು ಜನಮನ ರಂಜಿಸಿದ್ದರು. ದುರಾದೃಷ್ಟವಷಾತ್ ನಟಿ ಅಪರ್ಣಾ 2024 ಜುಲೈನಲ್ಲಿ ದೈವಾಧೀನರಾದರು.
ನಿರೂಪಕಿ ಅನುಶ್ರೀ
ಪ್ರಸ್ತುತ ಕನ್ನಡ ಕಿರುತೆರೆಯ ಅತ್ಯಂತ ಯಶಸ್ವಿ ನಿರೂಪಕಿ ನಟಿ ಅನುಶ್ರೀ ಕೂಡ ಬಿಗ್ ಬಾಸ್ ಸೀಸನ್ 1ರ ಸ್ಪರ್ಧಿಯಾಗಿದ್ದರು. ಪ್ರಸ್ತುತ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸರಿಗಮಪ ರಿಯಾಲಿಟಿ ಶೋ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುತ್ತಾರೆ. ನಿರೂಪಣೆ ಅಷ್ಟೇ ಅಲ್ಲದೆ ನಟನೆಯಲ್ಲಿಯೂ ಆಸಕ್ತಿ ಇದ್ದ ಈ ನಟಿ ಬೆಂಕಿ ಪಟ್ಟಣ, ಉಪ್ಪು ಹುಳಿ ಖಾರ ಮುಂತಾದ ಚಿತ್ರಗಳಲ್ಲಿಯೂ ನಟಿಸಿದ್ದಾರೆ.


Click it and Unblock the Notifications











