Bigg Boss Kannada 10: ಬಿಗ್ ಬಾಸ್ ಜರ್ನಿಗೆ 50 ದಿನ.. ಮನೆ ಮಂದಿ ಮುಖದಲ್ಲಿ ಅಳು, ನಗು, ಕೋಪ
ಬಿಗ್ ಬಾಸ್ ಸೀಸನ್ ಕನ್ನಡ 10ರ ಜರ್ನಿಯಲ್ಲಿ ಮನೆ ಸದಸ್ಯರು ಅರ್ಧಕ್ಕೆ ಅರ್ಧ ಜರ್ನಿ ಮುಗಿಸಿದ್ದಾರೆ. ಇನ್ನು ಮುಂದೆ ಟಾಸ್ಕ್ ಟಫ್ ಆಗುತ್ತಾ ಹೋಗುತ್ತದೆ. ಎಮೋಷನ್ಸ್ ಜಾಸ್ತಿಯಾಗುತ್ತಾ ಹೋಗುತ್ತದೆ. ಐವತ್ತು ದಿನ ಪೂರೈಸುವುದು ಸುಲಭದ ಮಾತೇನು ಅಲ್ಲ. ಸದ್ಯಕ್ಕೆ ಮನೆಯಲ್ಲಿ ಸ್ಟ್ರಾಂಗ್ ಎನಿಸಿಕೊಂಡವರೇ ಉಳಿದುಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನೂರು ದಿನಗಳ ಆಟದಲ್ಲಿ ಕೊನೆಯವರೆಗೂ ಉಳಿಯುವುದು ಇಬ್ಬರು ಮಾತ್ರ. ವಾರಕ್ಕೆ ಒಬ್ಬರು ಮನೆಗೆ ಹೋಗುತ್ತಾರೆ. ಒಮ್ಮೊಮ್ಮೆ ಇಬ್ಬರು ಹೋಗುತ್ತಾರೆ. ಆಟದಲ್ಲಾಗಲಿ, ಓಟದಲ್ಲಿ ಆಗಲಿ ವೀಕ್ ಇರುವವರು ಆರಂಭದಲ್ಲಿ ಹೊರಗೆ ಹೋಗುತ್ತಾರೆ. ಆದರೆ, ದಿನ ಕಳೆದಂತೆ ಜನರಿಗೂ ಊಹೆ ಮಾಡಲು ಕಷ್ಟವಾಗಿ ಬಿಡುತ್ತದೆ. ಇದೀಗ ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರು ಇಂದಿಗೆ (ನವೆಂಬರ್ 26) 50 ದಿನ ಕಳೆದಿದ್ದಾರೆ .

ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ 50 ದಿನ
ಬಿಗ್ ಬಾಸ್ ನೂರು ದಿನಗಳ ಆಟ. ಈಗ ಬರೀ ಟಾಸ್ಕ್‌ಗಳ ಸಂಭ್ರಮಾಚರಣೆ. ಆದರೆ, ಇನ್ನು ಮುಂದೆ ದಿನ ಕಳೆದಂತೆ ಅಂದರೆ 80-90 ದಿನಗಳನ್ನು ಕಳೆಯುವವರು ಎಮೋಷನಲಿ ಸಿಕ್ಕಾಪಟ್ಟೆ ವೀಕ್ ಆಗಿರುತ್ತಾರೆ. ಆಗಲೂ ಸ್ಪೂರ್ತಿ ತುಂಬುವುದಕ್ಕೆ ಬಿಗ್ ಬಾಸ್ ಸಪೋರ್ಟಿವ್ ಆಗಿ ನಿಲ್ಲುತ್ತದೆ. ಆದರೆ, ಈಗ 50 ದಿನ ಪೂರೈಸಿದ ಖುಷಿಯನ್ನು ಮನೆ ಮಂದಿಗೂ ನೀಡಿದೆ.
ಕೇಕ್ ಕಟ್ ಮಾಡಿ ಸಂಭ್ರಮಾಚರಣೆ
ಬಿಗ್ ಬಾಸ್ ಮನೆಯಲ್ಲಿ ಏನನ್ನೇ ತಿನ್ನುವುದಕ್ಕೆ ಕೊಡಬೇಕು ಎಂದರೂ, ಅದನ್ನು ಸದಸ್ಯರು ಕಷ್ಟಪಟ್ಟೆ ಪಡೆಯಬೇಕು. ಆದರೆ, ಇವತ್ತು ಮನೆ ಸದಸ್ಯರಿಗೆ ಉಚಿತವಾಗಿ ಸ್ಪೆಷಲ್ ಕೇಕ್ ಸಿಕ್ಕಿದೆ. ಯಾಕಂದ್ರೆ, 50 ದಿನದ ಸಂಭ್ರಮಕ್ಕಾಗಿ ಮನೆ ಮಂದಿಗೂ ಆ ಸಂತಸದ ದಿನಗಳನ್ನು ಸೆಲೆಬ್ರೆಟ್ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಎಲ್ಲರೂ ಕೇಕ್ ಕಟ್ ಮಾಡಿ ಖುಷಿ ಪಟ್ಟಿದ್ದಾರೆ. ಕೇಕ್ ತಿಂದು, ಐವತ್ತು ದಿನಗಳ ಬಳಿಕ ಕೇಕ್ ತಿಂತಾ ಇದ್ದೀವಿ ಎಂದು ಖುಷಿ ಪಟ್ಟಿದ್ದಾರೆ.
ಬಿಗ್ ಬಾಸ್ ಇತಿಹಾಸದಲ್ಲಿ ಫಸ್ಟ್ ಸೆಲೆಬ್ರೆಷನ್
ಬಿಗ್ ಬಾಸ್‌ನಲ್ಲಿ ಈಗಾಗಲೇ 9 ಸೀಸನ್‌ಗಳು ಕಳೆದಿವೆ. ಆದರೆ, ಇಷ್ಟು ಸೀಸನ್‌ನಲ್ಲಿಯೂ ಬಿಗ್ ಬಾಸ್ ಮನೆಯೊಳಗೆ ಇದ್ದಾಗಲೇ ವಿಟಿಯನ್ನು ತೋರಿಸಿರಲಿಲ್ಲ. ಯಾಕಂದ್ರೆ ಅಲ್ಲಿ ಕೋಪ ಇದೆ. ಗಾಸಿಪ್ ಇದೆ. ಜಗಳ ಇರುತ್ತೆ. ಹೀಗಾಗಿ ಅದ್ಯಾವುದನ್ನು ಮನೆಯೊಳಗಿದ್ದಾಗಲೇ ತೋರಿಸುವುದಕ್ಕೆ ಹೋಗುವುದಿಲ್ಲ. ಮನೆಯಿಂದ ಯಾರು ಹೊರಗೆ ಬರುತ್ತಾರೋ ಅವರಿಗೆ ವಿಟಿ ತೋರಿಸುತ್ತಾರೆ. ಆದರೆ, ಈ ಸೀಸನ್‌ನಲ್ಲಿ ಐವತ್ತು ದಿನಕ್ಕೇನೆ ಮನೆ ಮಂದಿಗೆ ವಿಟಿ ತೋರಿಸಿದ್ದಾರೆ.
ವಿನಯ್ ಕಣ್ಣೀರು.. ಸಂಗೀತಾ ಬೇಸರ
ಐವತ್ತು ದಿನದ ಜರ್ನಿ ಅಂದರೆ ಸುಮ್ಮನೆ ಏನು ಅಲ್ಲ. ಆ ಜರ್ನಿಯಲ್ಲಿ ತಮ್ಮನ್ನು ತಾವೂ ನೋಡಿಕೊಳ್ಳುವುದಕ್ಕೆ ಇವತ್ತು ಬಿಗ್ ಬಾಸ್ ಅವಕಾಶ ನೀಡಿದೆ. ಅದನ್ನು ನೋಡಿದ ವಿನಯ್ ಕಣ್ಣಲ್ಲಿ ನೀರು ಬಂದಿದೆ. ಇಂಥದ್ದೊಂದು ಜರ್ನಿ ಎಲ್ಲೂ ಸಿಗುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಸಂಗೀತಾ ಕೂಡ ಜರ್ನಿ ನೋಡಿ ಸೈಲೆಂಟ್ ಆಗಿದ್ದು, ಅಸಮರ್ಥರಾಗಿ ಬಂದು, ಇಲ್ಲೊಂದು ಫ್ರೆಂಡ್‌ಶಿಪ್ ಬಿಲ್ಡ್ ಆಗಿತ್ತು. ಈಗ ವಿಲನ್‌ಗಳ ಜೊತೆಗೆ ಜರ್ನಿ ಹೇಗಿದೆ ಎಂಬುದನ್ನು ನೆನೆದಿದ್ದಾರೆ. ಮನೆ ಮಂದಿಯೆಲ್ಲಾ ತಮ್ಮ ಐವತ್ತು ದಿನದ ಜರ್ನಿ ಕಂಡು ಒಂದು ಕ್ಷಣ ಸೈಲೆಂಟ್ ಆಗಿದ್ದಾರೆ.


Click it and Unblock the Notifications











