ನಾಮಿನೇಟ್ ಮಾಡುವ ಅಧಿಕಾರ ಕಳೆದುಕೊಂಡ ವರ್ತೂರು, ಸಂಗೀತಾ..! ನಾಮಿನೇಟ್ ಆದವರು ಇವರೇ ನೋಡಿ..!

By Shruthi Harishgowda

ಬಿಗ್ ಬಾಸ್ ಸೀಸನ್ 10 ಈಗ 76ನೇ ದಿನಕ್ಕೆ ಕಾಲಿಟ್ಟಿದೆ. ನೂರು ದಿನಗಳಿಗೆ ಇನ್ನೂ ಏನಿದ್ದರು 25 ದಿನಗಳಷ್ಟೇ ಬಾಕಿ ಇದ್ದು, ಎಲ್ಲರೂ ಕೂಡ ಸೇಫ್‌ ಆಗಿ ಆಟವಾಡಬೇಕು ಎಂದು ಅಂದುಕೊಂಡಿದ್ದಾರೆ. ಕಾರ್ತಿಕ್ ಹಾಗೂ ಸಂಗೀತಾ ಇಬ್ಬರೂ ಕೂಡ ಈಗ ಬೇರೆ ಬೇರೆ ಟೀಮ್ ನಲ್ಲಿ ಆಟವಾಡಲು ನಿರ್ಧಾರ ಮಾಡಿದಂತೆ ಕಾಣುತ್ತಿದೆ. ಈ ವಾರ ಸಂಗೀತ ಅವರು ಮನೆಯಲ್ಲಿ ನ್ಯಾಮಿನೇಟ್ ಮಾಡುವ ಒಂದು ಅವಕಾಶವನ್ನು ಕಳೆದುಕೊಂಡಿದ್ದಾರೆ. ಅದು ಯಾಕೆಂದರೆ ಬಿಗ್‌ ಬಾಸ್ ಬಿಗ್ ಬ್ರೇಕಿಂಗ್ ನ್ಯೂಸ್ ಟಾಸ್ಕ್ ನಲ್ಲಿ ಕಳಪೆ ಪ್ರದರ್ಶನ ತೋರಿದಕ್ಕೆ ಸಂಗೀತಾ ನಾಮಿನೇಟ್ ಮಾಡುವ ಅಧಿಕಾರವನ್ನು ಕಳೆದುಕೊಂಡು ತಾವೇ ಈ ವಾರ ನಾಮಿನೇಟ್ ಆಗಿ ಇದ್ದಾರೆ.

ಇನ್ನು ವರ್ತೂರು ಸಂತೋಷ್ ಕೂಡ ಬಿಗ್ ಬ್ರೇಕಿಂಗ್ ನ್ಯೂಸ್ ಟಾಸ್ಕ್ ನಲ್ಲಿ ಯಾವುದೇ ರೀತಿಯಲ್ಲಿ ಪರ್ಫಾರ್ಮೆನ್ಸ್ ಮಾಡದ್ದಕ್ಕೆ ಅವರು ಕೂಡ ಈ ವಾರ ನಾಮಿನೇಟ್ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಇವರ ಜೊತೆಗೆ ಅವಿನಾಶ್ ಶೆಟ್ಟಿ ಕೂಡ ಕನ್ಫ್ಯೂಸ್ ಆಗಿ ಟಾಸ್ಕ್‌ನಲ್ಲಿ ಕಳಪೆ ಪ್ರದರ್ಶನ ಮಾಡಿದ್ದಕ್ಕಾಗಿ ನಾಮಿನೇಟ್ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದು ಇವರಿಟ್ ಆಬ್ಬರೂ ಕೂಡ ಈ ವಾರ ಬಿಗ್ ಬಾಸ್ ಮನೆಯಲ್ಲಿ ನಾಮಿನೇಗಿದ್ದಾರೆ. ಇವರ ನಾಮಿನೇಟ್ ಆಗಿದ್ದಕ್ಕೆ ವರ್ತೂರು ಸಂತೋಷ್‌ಗೆ ಬೇಸರವಾಗಿದೆ ಆ ಬೇಸರವನ್ನು ಸಂಗೀತಾ ಮುಂದೆ ಹಾಕಿದ್ದಾರೆ.

Bigg Boss Kannada Season 10: 6 Members were Nominated in the 11th week of Bigg boss

ಇನ್ನು ಇದೇ ವೇಳೆ ಸಂಗೀತಾಗೆ ವರ್ತೂರು ಸಂತೋಷ್ ಬುದ್ಧಿ ಮಾತು ಹೇಳಿದ್ದಾರೆ. ನೀನು ಮತ್ತು ಕಾರ್ತಿಕ್ ಬೇರೆ ಬೇರೆಯಾಗಿ ಆಟವಾಡಿದರೆ ನೋಡಲು ಚೆನ್ನಾಗಿ ಇರುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ಸಂಗೀತಾ ಕೂಡ ತುಕಾಲಿ ಸಂತೋಷ್ ಯಾವ ರೀತಿ ನಾಮಿನೇಟ್ ಮಾಡುವಾಗ ಸ್ಟ್ಯಾಟರ್ಜಿ ಯೂಸ್ ಮಾಡುತ್ತಾರೆ ಎಂಬುವುದನ್ನು ವರ್ತೂರು ಸಂತೋಷ್‌ಗೆ ತಿಳಿಸಿದ್ದಾರೆ. ಇಲ್ಲಿ ಸಿರಿ ನಾಮಿನೇಟ್ ಮಾಡಿಲ್ಲ ಎಂದು ತುಕಾಲಿ ಸಂತೋಷ್ ಕೂಡ ಸಿರಿ ಅವರನ್ನು ನಾಮಿನೇಟ್ ಮಾಡಿಲ್ಲ ಎಂಬ ಮಾತನ್ನು ವರ್ತೂರು ಸಂತೋಷ್ ಮುಂದೆ ಹೇಳಿದ್ದಾರೆ. ವರ್ತೂರು ಸಂತೋಷ್ ಅವರು ಇಲ್ಲಿ ಸಂಗೀತಾ ಮಾತನ್ನು ಒಪ್ಪಿಕೊಂಡಂತೆ ಕಾಣುತ್ತಿದೆ. ಆದರೆ ಅವರು ಎಂದಿನಂತೆ ತುಕಾಲಿ ಸಂತೋಷ್ ಜೊತೆಯಲ್ಲಿ ತುಂಬಾ ಚೆನ್ನಾಗಿಯೇ ಮಾತನಾಡಿಕೊಂಡು ಇದ್ದಾರೆ.

ಸಂಗೀತಾ, ಅವಿನಾಶ್, ಸಿರಿ, ಪ್ರತಾಪ್ ನ್ಯಾಮಿನೇಟ್

ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವೆ ತಾವೇ ಗೆಲುವು ಸಾಧಿಸಬೇಕು ಎಂಬ ಹಠ ಹೆಚ್ಚಾಗಿದೆ. ಇದಕ್ಕಾಗಿ ಎಲ್ಲರೂ ಕೂಡ ಸೇಫ್ ಆಗಿ ಗೇಮ್ ಮಾಡಲು ನೋಡುತ್ತಾ ಇದ್ದಾರೆ ಈ ವಾರ ಸಂಗೀತ, ಅವಿನಾಶ್, ಸಿರಿ, ಪ್ರತಾಪ್ ಹಾಗೂ ಮೈಕಲ್ ಮನೆಯ ಸದಸ್ಯರಿಂದ ನಾಮಿನೇಟ್ ಆಗಿದ್ದಾರೆ. ಇಲ್ಲಿ ವರ್ತೂರು ಸಂತೋಷ್ ಅವರು ಮಾತ್ರ ಒಂದೇ ಒಂದು ಪಡೆದು ಸೇಫ್ ಆಗಿ ಇದ್ದರು ಆದರೆ ನಮ್ರತಾಗೆ ಒಂದು ವಿಶೇಷ ಅಧಿಕಾರವನ್ನು ಕೊಡಲಾಗಿತ್ತು.

Bigg Boss Kannada Season 10: 6 Members were Nominated in the 11th week of Bigg boss

ಆ ವಿಶೇಷ ಅಧಿಕಾರವನ್ನು ಬಳಸಿದ ನಮ್ರತಾ ವರ್ತೂರು ಸಂತೋಷ್ ಅವರನ್ನ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಇನ್ನು ವರ್ತೂರು ಸಂತೋಷ್ ರವರನ್ನು ಜ್ಞಾಮಿನೇಟ್ ಮಾಡಿದ್ದಕ್ಕೆ ಸೂಕ್ತವಾದ ಕಾರಣವನ್ನು ಕೂಡ ಕೊಟ್ಟಿದ್ದಾರೆ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾಗ ಯಾವ ರೀತಿ ಇದ್ದರೂ ಪುಶ್ ಅಪ್ ಮಾಡಿದಾಗ ಯಾವ ರೀತಿ ಇರುತ್ತಾರೆ ಎಂಬುದನ್ನೆಲ್ಲ ತಿಳಿಸಿ ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ಬೇಸರ ಮಾಡಿಕೊಂಡ ವರ್ತೂರು..!

ಇನ್ನು ಬಿಗ್ ಬಾಸ್ ಮನೆಯಲ್ಲಿ ನಮ್ರತಾ ತಮ್ಮನ್ನು ನೇರವಾಗಿ ನಾಮಿನೇಟ್ ಮಾಡಿದ್ದು ಯಾಕೋ ವರ್ತೂರು ಸಂತೋಷ್ ಅವರಿಗೆ ಇಷ್ಟವಾದಂತೆ ಕಾಣುತ್ತಿಲ್ಲ. ಇದಕ್ಕಾಗಿ ಸಂಗೀತಾ ಬಳಿಯೂ ಕೂಡ ಚರ್ಚೆ ಮಾಡಿದ್ದಾರೆ. ನನ್ನನ್ನ ಇಲ್ಲಿ ತನಕ ನನಗೆ ವೋಟ್ ಮಾಡಿದ ಜನರು ಉಳಿಸಿದ್ದಾರೆ ನಾನು ಇಲ್ಲಿ ಇರುವ ತನಕವೂ ಕೂಡ ಜನರಿಗಾಗಿ ಆಡುತ್ತೇನೆ ಎಂದಿದ್ದಾರೆ.

ಇನ್ನು ಸಂಗೀತಾ ಎಲ್ಲರೂ ಯಾವ ರೀತಿ ಮನೆಯಲ್ಲಿ ಇದ್ದಾರೆ ನೀವು ಅದನ್ನ ಅರ್ಥಮಾಡಿಕೊಳ್ಳಬೇಕು ಎಂದು ವರ್ತೂರು ಸಂತೋಷ್ ಬಳಿ ಹೇಳಿದ್ದಾರೆ. ಇದಕ್ಕೆ ವರ್ತೂರು ಸಂತೋಷ್ ನನಗೆ ಈಗ ಎಲ್ಲವೂ ಅರ್ಥವಾಗುತ್ತಾ ಇದೆ. ಆದರೆ ಬಿಗ್ ಬಾಸ್ ಎಂಬ ಬಸ್‌ನಲ್ಲಿ ಸುದೀಪ್ ಸರ್ ಬಂದು ಪ್ರಯಾಣಿಕರು ಇನ್ನೇನು ಇಳಿದುಕೊಳ್ಳಬೇಕು ಎಂದಾಗ ಎಲ್ಲರೂ ಕೂಡ ಇಲ್ಲಿಂದ ನಿರ್ಗಮಿಸಲೇಬೇಕು ಎಂದು ಹೇಳಿದ್ದಾರೆ.

More from Filmibeat

English summary
Bigg Boss Kannada 11th week nomination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X