BBK10: ಕೋಟಿ ಕೊಟ್ಟರೂ ಹೋಗಲ್ಲ ಎಂದಿದ್ದ ಸಂಗೀತಾ ಶೃಂಗೇರಿ ಕೊನೆಗೂ ಬಿಗ್ ಬಾಸ್ ಮನೆ ಪ್ರವೇಶ
15 ದಿನಗಳ ಹಿಂದೆಯೇ ಚಾರ್ಲಿ ಬಿಗ್‌ಬಾಸ್ ಮನೆ ಪ್ರವೇಶಿಸುವ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದರು. ಅಚ್ಚರಿ ಎನ್ನುವಂತೆ ಅದೇ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಸಂಗೀತಾ ಶೃಂಗೇರಿ ಕೂಡ ಈ ಬಾರಿ ದೊಡ್ಮನೆ ಬಾಗಿಲವರೆಗೂ ಬಂದಿದ್ದಾರೆ. 'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ದಾಕ್ಷಾಯಿಣಿ ಪಾತ್ರದ ಮೂಲಕ ಪರಿಚಿತರಾದ ಸಂಗೀತಾ ಈಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.
'ತೆಳ್ಳಗೆ ಬೆಳ್ಳಗೆ ಇದ್ದಾನೆ' ಎಂದು ಹೆಜ್ಜಾ ಹಾಕುತ್ತಾ ನಟಿ ಸಂಗೀರಾ ಶೃಂಗೇರಿ ಬಿಗ್‌ಬಾಸ್ ವೇದಿಕೆ ಏರಿದ್ದರು. ನನ್ನನ್ನು ಜನ ಬರೀ ನನ್ನ ಪಾತ್ರಗಳಲ್ಲಿ ಮಾತ್ರ ನೋಡಿದ್ದಾರೆ. ನನ್ನ ಕ್ಯಾರೆಕ್ಟರ್ ಏನು ಎನ್ನುವುದು ತೋರಿಸಲು ಬಿಗ್‌ಬಾಸ್ ಮನೆಗೆ ಹೋಗುತ್ತಿದ್ದೇನೆ. ಅಂದಹಾಗೆ ಈ ಹಿಂದೆ ಕೋಟಿ ಕೊಟ್ಟರೂ ಬಿಗ್‌ಬಾಸ್‌ಗೆ ಹೋಗಲ್ಲ ಎಂದು ಸಂಗೀತಾ ಹೇಳಿದ್ದರು. ಆದರೆ ಈಗ ದೊಡ್ಮನೆಗೆ ಎಂಟ್ರಿ ಕೊಟ್ಟುಬಿಟ್ಟಿದ್ದಾರೆ. ಇದೇ ವಿಚಾರಕ್ಕೆ ಕಿಚ್ಚ ಆಕೆಯನ್ನು ಕಿಚಾಯಿಸಿದ್ದರು.

ಫೇಸ್‌ಬುಕ್‌ನಲ್ಲಿ ಆಡಿಷನ್ ನೀಡಿ '777 ಚಾರ್ಲಿ' ಚಿತ್ರದ ನಾಯಕಿಯಾಗಿ ಸಂಗೀತಾ ಆಯ್ಕೆ ಆಗಿದ್ದರು. ಅದಕ್ಕೂ ಮುನ್ನ A+ ಎನ್ನುವ ಚಿತ್ರದಲ್ಲಿ ನಟಿಸಿದ್ದರು. 1saw2 ಎನ್ನುವ ಹಿಂದಿ ಶಾರ್ಟ್ ಫಿಲ್ಮ್‌ನಲ್ಲಿ ಮಿಂಚಿದ್ದರು. '777 ಚಾರ್ಲಿ' ಚಿತ್ರದ ದೇವಿಕ ಪಾತ್ರ ಒಳ್ಳೆ ಹೆಸರು ತಂದುಕೊಟ್ಟಿತ್ತು. ಬಳಿಕ ಪುನೀತ್ ರಾಜ್‌ಕುಮಾರ್, ಡಾರ್ಲಿಂಗ್ ಕೃಷ್ಣ ನಟನೆಯ 'ಲಕ್ಕಿಮ್ಯಾನ್' ಚಿತ್ರದಲ್ಲಿ ಕಾಣಿಸಿಕೊಂಡರು. 'ಶಿವಾಜಿ ಸೂರತ್ಕಲ್-2' ಚಿತ್ರದ ಹಾಡೊಂದರಲ್ಲಿ ಕುಣಿದರು.
ಸದ್ಯ ಸಂಗೀತಾ ಕೈಯಲ್ಲಿ 2 ಸಿನಿಮಾಗಳಿವೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಹಾಟ್ ಹಾಟ್ ಫೋಟೊಶೂಟ್‌ಗಳಿಂದ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಸಿಕ್ಸ್‌ಪ್ಯಾಕ್ ಹ್ಯಾಬ್ಸ್ ಮಾಡಿ ಎಲ್ಲರ ಹುಬ್ಬೇರಿಸಿದ್ದರು.
ಇನ್ನು 2014ರಲ್ಲಿ ಸಂಗೀತಾ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಟಾಪ್ 10 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದಿದ್ದರು. ಅಲ್ಲದೇ ವರ್ಲ್ಡ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಭಾಗವಹಿಸಿದರು, ರನ್ನರ್ ಅಪ್ ಆಗಿದ್ದರು. 2000ಕ್ಕೂ ಅಧಿಕ ಜನರು '777 ಚಾರ್ಲಿ' ಚಿತ್ರದ ನಾಯಕಿ ಪಾತ್ರಕ್ಕೆ ಆಡಿಷನ್ ಕೊಟ್ಟಿದ್ದರು. ಆದರೆ ಎಲ್ಲರನ್ನು ಮೀರಿ ಸಂಗೀತಾ ಗೆದ್ದಿದ್ದರು. ಒಳ್ಳೆ ಅವಕಾಶ ಪಡೆದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗಿ ಸದ್ದು ಮಾಡಿತ್ತು.
ಕಾಲೇಜು ದಿನಗಳಲ್ಲಿ ಎನ್‌ಸಿಸಿ ಕ್ರೆಡೆಟ್ ಆಗಿದ್ದ ಸಂಗೀತಾ ಕರ್ನಾಟಕ ಖೋಖೋ ತಂಡ ಪ್ರತಿನಿಧಿಸಿ ಗೋಲ್ಡ್ ಮೆಡಲ್ ಪಡೆದಿದ್ದರು. 2016ರಲ್ಲಿ ಸ್ಟಾರ್ ಸುವರ್ಣ ವಾಹಿನಿಯ 'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ನಟಿಸೋ ಅವಕಾಶ ಗಿಟ್ಟಿಸಿಕೊಂಡರು. 'ತೇನ ಮನಸುಲು' ಎನ್ನುವ ತೆಲುಗು ಧಾರಾವಾಹಿಯಲ್ಲೂ ನಟಿಸಿದ್ದರು.
76% ವೋಟ್ ಪಡೆದ ಸಂಗೀತಾ ದೊಡ್ಮನೆ ಒಳಗೆ ಹೋಗಲು ಕಾಯುತ್ತಿದ್ದರು. ಕೊನೆಗೆ ಆ ರೀತಿ ಕಾಯುತ್ತಿದ್ದ 6 ಜನರನ್ನು ಒಂದು ವಾರದಮಟ್ಟಿಗೆ ಮನೆ ಒಳಗೆ ಕಳುಹಿಸುತ್ತಿರುವುದಾಗಿ ಸುದೀಪ್ ಘೋಷಿಸಿದರು. ಈ ಒಂದು ವಾರದಲ್ಲಿ ಅವರ ಪರ್ಫಾರ್ಮನ್ಸ್ ಮೇಲೆ ಅವರ ಬಿಗ್‌ಬಾಸ್ ಭವಿಷ್ಯ ನಿರ್ಧಾರವಾಗಲಿದೆ. ಬಿಗ್‌ಬಾಸ್ ಮನೆಗೆ 'ಚಾರ್ಲಿ' ಕೂಡ ಹೋಗುತ್ತಿದೆ. ಇದೇ ವಿಚಾರ ಹೇಳಿದಾಗ ಆಕೆ ಖುಷಿಯಾಗಿದ್ದರು. ಚಾರ್ಲಿ ಚಾರ್ಲಿ ಎಂದು ಕರೆದರೂ ಚಾರ್ಲಿ ಮಾತ್ರ ಬರಲಿಲ್ಲ.


Click it and Unblock the Notifications










