BBK10: ಬಿಗ್‌ಬಾಸ್ ಮೊದಲ ಎಮಿನೇಷನ್‌ಗೆ ಕೌಂಟ್‌ಡೌನ್: 8 ಜನರಲ್ಲಿ ಹೊರಗೆ ಬರೋದು ಯಾರು?

ಕನ್ನಡ ಕಿರುತೆರೆಯಲ್ಲಿ ಬಿಗ್‌ಬಾಸ್ ಸೀಸನ್- 10 ಶೋ ಒಂದು ವಾರ ಪೂರೈಸುತ್ತಾ ಬಂತು. ಈ ಬಾರಿ 17 ಜನ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿದ್ದಾರೆ. ಸಂಭಾವ್ಯರ ಪಟ್ಟಿಯಲ್ಲಿ ಇಲ್ಲದ ಹಲವರು ಈ ಬಾರಿ ಬಿಗ್‌ಬಾಸ್ ಮನೆ ಒಳಗೆ ಹೋಗಿದ್ದು ವಿಶೇಷ. ಸ್ಪರ್ಧಿಗಳ ನಡುವೆ ಗಲಾಟೆ, ಕಿತ್ತಾಟ, ಸ್ನೇಹ, ಟಾಸ್ಕ್ ಎಲ್ಲವೂ ಶುರುವಾಗಿದೆ.

ಗ್ರ್ಯಾಂಡ್ ಪ್ರೀಮಿಯರ್ ವೇಳೆ ಆಡಿಯನ್ಸ್ ಲೈವ್ ವೋಟಿಂಗ್‌ನಲ್ಲಿ 6 ಜನ ಫೇಲ್ ಆಗಿದ್ದರು. ಅಸಮರ್ಥರು ಎಂದು ಅವರನ್ನು ಗುಂಪು ಮಾಡಿ ಮನೆಯೊಳಗೆ ಕಳುಹಿಸಲಾಗಿದೆ. ಅವರಿಗೆ ಒಂದಷ್ಟು ಷರತ್ತುಗಳನ್ನು ವಿಧಿಸಲಾಗಿದೆ. ಜೊತೆಗೆ ಕೇಸರಿ ಬಣ್ಣದ ಯೂನಿಫಾರ್ಮ್ ನೀಡಿ ಮನೆಯಲ್ಲಿ ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಅಂತೂ ಇಂತೂ ಒಂದು ವಾರ ಮುಗಿಯೇ ಹೋಯ್ತು. 'ವಾರದ ಕತೆ ಕಿಚ್ಚನ ಜೊತೆ' ಟೈಮ್ ಬಂದಿದೆ.

Bigg boss Kannada season 10: 8 contestants Nominated first Week

ಕಿಚ್ಚನ ಪಂಚಾಯಿತಿಯಲ್ಲಿ ಯಾರು ಯಾರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ? ಯಾರಿಗೆ ಕಿಚ್ಚನ ಮೆಚ್ಚುಗೆ ಸಿಗುತ್ತದೆ? ಎನ್ನುವುದನ್ನು ಕಾದು ನೋಡಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ 8 ಜನರ ಮೇಲೆ ಎಲಿಮಿನೇಷನ್ ತೂಗುಗತ್ತಿ ನೇತಾಡುತ್ತಿದೆ. ಬಿಗ್‌ಬಾಸ್ ಸೀಸನ್-10 ಶೋನಿಂದ ಮೊದಲ ವಾರ ಯಾರು ಎಲಿಮಿನೇಷನ್ ಆಗಿ ಹೊರಗೆ ಬರುತ್ತಾರೆ? ಎನ್ನುವ ಕುತೂಹಲ ಇದೆ. ವೀಕ್ಷಕರು ವೋಟ್ ಮಾಡಿ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಮನೆಯೊಳಗೆ ಉಳಿಸುವ ಅವಕಾಶವೂ ಇದೆ.

ಈ ವಾರ ಎಲಿಮಿನೇಷನ್ ಆಗಲು 8 ಜನ ನಾಮಿನೇಟ್ ಆಗಿದ್ದಾರೆ. ಮೈಕೆಲ್, ತನಿಷಾ ಕುಪ್ಪಂಡ, ನೀತು ವನಜಾಕ್ಷಿ, ಸಿರಿ, ಸಂತೋಷ್ ಹಳ್ಳಿಕೆರೆ, ಸ್ನೇಕ್ ಶ್ಯಾಮ್, ಕಾರ್ತಿಕ್, ಡ್ರೋನ್ ಪ್ರತಾಪ್ ಈ ಲಿಸ್ಟ್‌ನಲ್ಲಿದ್ದಾರೆ. ಈ 8 ಜನರಲ್ಲಿ ಯಾರಿಗೆ ಬಿಗ್‌ಬಾಸ್ ಮನೆಯಲ್ಲಿ ಕೊನೆ ದಿನ ಅನ್ನೋದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.

Bigg boss Kannada season 10: 8 contestants Nominated first Week

ಇನ್ನು ಬಿಗ್‌ಬಾಸ್ ಸೀಸನ್-10ರ ಮೊದಲ ವಾರದ ಕಳಪೆ ಪಟ್ಟ ಭಾಗ್ಯಶ್ರೀಗೆ ಸಿಕ್ಕಿದೆ. ಅದೇ ರೀತಿ ಉತ್ತಮ ಸ್ಪರ್ಧಿ ಎನ್ನುವ ಪಟ್ಟ ನಟಿ ತನಿಷಾ ಕುಪ್ಪಂಡಗೆ ಸಿಕ್ಕಿದೆ. ಹಾಗಾಗಿ ತನಿಷಾ ಎಲಿಮಿನೇಟ್ ಆಗುವುದು ಅನುಮಾನ ಎನ್ನಲಾಗ್ತಿದೆ. ಇನ್ನುಳಿದಂತೆ ಯಾರೆಲ್ಲಾ ಉತ್ತಮ ಪ್ರದರ್ಶನ ತೋರಿದ್ದಾರೆ? ಯಾರು ವೀಕ್ಷಕರ ಮನ ಗೆದ್ದಿದ್ದಾರೆ? ಎನ್ನುವುದರ ಮೇಲೆ ಈ ವಾರದ ಎಲಿಮಿನೇಟ್ ಯಾರಾಗುತ್ತಾರೆ ಅನ್ನೋದು ಗೊತ್ತಾಗಲಿದೆ.

"ಕತೆ ಶುರುವಾಗುವ ಮುನ್ನವೇ ಮುಗಿಯೋದು ಯಾರ ಪಾಲಿಗೆ?" ಅಂತ ಕಲರ್ಸ್ ಕನ್ನಡ ಹೊಸ ಪ್ರೋಮೊ ರಿಲೀಸ್ ಆಗಿದೆ. ವಿನಯ್ ಗೌಡ ಹಾಗೂ ಸಂಗೀತಾ ಶೃಂಗೇರಿ ಹೊರತು ಪಡಿಸಿ ಬಹುತೇಕರಿಗೆ ಎಲ್ಲರೂ ಹೊಸ ಪರಿಚಯ. ಎಲ್ಲರೂ ತಮ್ಮ ತಮ್ಮ ಪರಿಚಯ ಮಾಡಿಕೊಳ್ಳುವುದರಲ್ಲಿ ವಾರ ಕಳೆದು ಹೋಗಿದೆ. ನಿಧಾನವಾಗಿ ಒಬ್ಬರ ಜೊತೆಗೆ ಒಬ್ಬರು ಬೆರೆಯಲು ಆರಂಭಿಸಿದ್ದಾರೆ. ಕಾಮಿಡಿ, ಗಲಾಟೆ, ಭಾವನಾತ್ಮಕ ಕ್ಷಣಗಳು ದಾಖಲಾಗುತ್ತಿದೆ.

ಮೊದಲ ವಾರ ಎಲಿಮಿನೇಷನ್ ಇರುತ್ತಾ? ಎನ್ನುವ ಅನುಮಾನವೂ ಕೆಲವರನ್ನು ಕಾಡುತ್ತಿದೆ. ಇನ್ನು ಶೋ ಶುರುವಾಗಿ 5 ದಿನಗಳು ಮಾತ್ರ ಕಳೆದಿದೆ. ಸ್ಪರ್ಧಿಗಳು ಮನೆಗೆ ಹೊಂದಿಕೊಳ್ಳಲು ಆರಂಭಿಸಿದ್ದಾರೆ. ಹಾಗಾಗಿ ಇಷ್ಟಬೇಗ ಎಲಿಮಿನೇಷನ್‌ ಇರಲ್ಲ ಎನ್ನುವ ಚರ್ಚೆಯೂ ನಡೆಯುತ್ತಿದೆ. ಈ ಹಿಂದೆ ಕೆಲ ಸೀಸನ್‌ಗಳಲ್ಲಿ ಈ ರೀತಿ ನಡೆದಿತ್ತು. ಹಾಗಾಗಿ ಈ ಸೀಸನ್‌ನಲ್ಲೂ ಅಂತ ಟ್ವಿಸ್ಟ್ ಇರುತ್ತಾ? ಕಾದು ನೋಡಬೇಕಿದೆ.

ಗ್ರ್ಯಾಂಡ್ ಪ್ರೀಮಿಯರ್ ಬಳಿಕ ಮತ್ತೊಮ್ಮೆ ಶೋನಲ್ಲಿ ಕಿಚ್ಚನನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಎಂದಿನಂತೆ ತಮ್ಮ ಸ್ಟೈಲಿಶ್ ಲುಕ್ ಹಾಗೂ ನಿರೂಪಣೆ ಶೈಲಿಯಿಂದ ವೀಕ್ಷಕರನ್ನು ರಂಜಿಸಲು ಸುದೀಪ್ ಸಿದ್ಧರಾಗಿದ್ದಾರೆ. "ವಾರದ ಕತೆ ಕಿಚ್ಚನ ಜೊತೆ" ರಾತ್ರಿ 9ಗಂಟೆಗೆ ಆರಂಭವಾಗಲಿದೆ. ಜಿಯೋ ಸಿನಿಮಾದಲ್ಲೂ ಲೈವ್ ವೀಕ್ಷಿಸಬಹುದು.

More from Filmibeat

English summary
BBK10: These eight contestants are nominated for eviction in first week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X