BBK10: ಫಿನಾಲೆಯಲ್ಲಿ ಯಾರ ಜೊತೆಗೆ ಯಾರು ಇರಬೇಕು? ಈ ಪ್ರಶ್ನೆಗೆ ನಗುತ್ತಿದ್ದವರು ಬೇಸರಕೊಂಡಿದ್ದೇಕೆ?
ಬಿಗ್ ಬಾಸ್ ಮನೆಯಲ್ಲಿ ಆಟ, ಮನರಂಜನೆ ಅಂತ ಸಮಯ ಕಳೆಯುತ್ತಿದ್ದ ಮಂದಿಗೆ ಕೊನೆಯ ದಿನದ ಬಗ್ಗೆ ಅಷ್ಟೇನು ಸೀರಿಯಸ್ ನೆಸ್ ಇದ್ದಂತೆ ಕಂಡಿರಲಿಲ್ಲ. ಪ್ರತಿ ವಾರವೂ ಕಳೆದಂತೆ ಈ ವಾರವೂ ಬಂದಿದೆ ಎಂದೇ ಸುಮ್ಮನೆ ಆಗಿದ್ದರು. ಆದರೆ, ಬಿಗ್ ಬಾಸ್ ಫೈನಲಿಸ್ಟ್ ಯಾರಾಗಬೇಕು ಎಂಬ ವಿಚಾರ ಬಂದಿದ್ದೇ ತಡ ಎಲ್ಲರ ಮನಸ್ಸುಗಳು ಬದಲಾಗಿ ಹೋಗಿದೆ.
ಫಿನಾಲೆಗೆ ಹೋಗುವುದಕ್ಕೆ ಇನ್ನು ಕೆಲವೇ ದಿನಗಳು ಉಳಿದಿವೆ. ಒಂದು ಕಡೆ ಆತಂಕ, ಒಂದು ಕಡೆ ಆತ್ಮ ವಿಶ್ವಾಸ. ಕಪ್ ಗೆಲ್ಲದೆ ಹೋದರೂ ಫಿನಾಲೆಯಾದರೂ ತಲುಪಬೇಕು ಎಂಬುದೇ ಹಲವರ ಆಸೆ. ಇನ್ನು ಕೆಲವರು ನಾವೇ ಬಿಗ್ ಬಾಸ್‌ಗೆ ಹೋಗುವುದು ಎಂಬುದನ್ನು ಫಿಕ್ಸ್ ಮಾಡಿಕೊಂಡಿದ್ದಾರೆ. ಇದರ ನಡುವೆ ಇಂದು ಬಿಗ್ ಬಾಸ್ ನೀಡಿದ ಟಾಸ್ಕ್ ಎಲ್ಲರನ್ನು ನಡುಗಿಸಿದೆ.

ಫೈನಲಿಸ್ಟ್ ಆಯ್ಕೆ ಮಾಡುವ ಅವಕಾಶ
ಬಿಗ್ ಬಾಸ್ ಒಂದು ಟಾಸ್ಕ್ ನೀಡಿತ್ತು. ಫಿನಾಲೆಗೆ ಯಾರ ಜೊತೆಗೆ ಯಾರು ನಿಲ್ಲಬೇಕು ಎಂಬುದನ್ನು ಒಬ್ಬೊಬ್ಬರೇ ವೈಯಕ್ತಿಕವಾಗಿ ತಿಳಿಸಬೇಕಿತ್ತು. ಅದರಂತೆ ವಿನಯ್ -ಕಾರ್ತಿಕ್, ನಮ್ರತಾ -ವಿನಯ್, ಕಾರ್ತಿಕ್ -ವಿನಯ್, ಸಂಗೀತಾ-ಪ್ರತಾಪ್, ಪ್ರತಾಪ್-ವರ್ತೂರು ಸಂತೋಷ್, ತುಕಾಲಿ-ಸಂಗೀತಾ ಹೆಸರನ್ನು ತೆಗೆದುಕೊಂಡಿದ್ದರು. ಇದನ್ನು ಊಹೆ ಮಾಡಲು ಹೇಳಿದಾಗಲೂ ಎಲ್ಲರೂ ಒಂದು ಹಂತಕ್ಕೆ ಸರಿಯಾಗಿಯೇ ಉತ್ತರ ನೀಡಿದ್ದರು.
ಪ್ರತಾಪ್ -ವಿನಯ್ ಸರಿಯಾದ್ರಾ?
ಈ ಟಾಸ್ಕ್ ಆದ ಮೇಲೆ ವಿನಯ್ ಕಳೆದು ಹೋಗುತ್ತಿರುವ ದಿನಗಳನ್ನು ನೆನೆದರು. ಇನ್ನುಳಿದಿರುವುದು ಕೆಲವೇ ದಿನಗಳು ಎಂದರು. ಕಾರ್ತಿಕ್ ನಾನು ಏನೇ ಜಗಳವಾಡಿದ್ದರೂ ಫಿನಾಲೆಯಲ್ಲಿ ಅವನು ನನ್ನ ಪಕ್ಕ ಇರಬೇಕು ಎಂದು ಬಯಸುತ್ತೇನೆ ಎಂದರು. ಇದೆ ವೇಳೆ ವಿನಯ್ ಮನೆಯವರೆಲ್ಲರಿಗೂ ಕ್ಷಮೆ ಕೇಳಿದರು. ಆಗ ಪ್ರತಾಪ್, ಅರಿತುಕೊಂಡ್ರಲ್ಲ ಅಷ್ಟೇ ಸಾಕು ಎಂದು ಪ್ರತಾಪ್ ಹೇಳಿದರು. ಆಗ ತಬ್ಬಿಕೊಂಡು ಸಮಾಧಾನ ಮಾಡಿದರು.

ಬಿಗ್ ಬಾಸ್ ನೀಡಿದ ಸೂಚನೆ ಏನು..?
ಎಲ್ಲರೂ ಕುಳಿತಿದ್ದಾಗ ಬಿಗ್ ಬಾಸ್ ಸೂಚನೆ ನೀಡಿದೆ. ವೀಕ್ಷಕರ ಪ್ರೀತಿ ಗಳಿಸಿ ಹದಿಮೂರನೇ ವಾರ ಉಳಿದುಕೊಂಡಿದ್ದೀರಿ ನೀವೂ. ಫಿನಾಲೆ ವಾರಕ್ಕೆ ಕಾಲಿಡುವವರು ಯಾರೂ ಎಂಬುದನ್ನ ನಿರ್ಧರಿಸಲು ಬಿಗ್ ಬಾಸ್ ನೀಡುವ ಟಾಸ್ಕ್‌ಗಳ ಮೂಲಕ ನಿರ್ಧಾರವಾಗಲಿದೆ. ವಾರದ ಕೊನೆಯಲ್ಲಿ ಹೆಚ್ಚು ಅಂಕ ಪಡೆದವರು ನಾಮಿನೇಷನ್‌ನಿಂದ ಪಾರಾಗಿ ಫಿನಾಲೆಗೆ ಟಿಕೆಟ್ ಪಡೆಯುತ್ತಾರೆ. ಇದು ಟಿಕೆಟ್ ಟು ಫಿನಾಲೆ ಟಾಸ್ಕ್ ಎಂದು ಸೂಚಿಸಿತ್ತು.
ನಮ್ರತಾಗೆ ಟಿಕೆಟ್ ಸಿಗುತ್ತಾ ಸಿಗಲ್ವಾ?
ಫಿನಾಲೆಗೆ ಹೋಗಬೇಕೆಂದರೆ ಈಗಿಂದಾನೇ ಟಿಕೆಟ್ ಪಡೆಯಬೇಕಾಗುತ್ತದೆ. ಆ ಟಿಕೆಟ್ ಪಡೆಯಲು ಟಾಸ್ಕ್‌ಗಳನ್ನು ಚೆನ್ನಾಗಿ ಆಡಬೇಕಾಗುತ್ತೆ. ಮೊದಲ ಆಟವನ್ನು ನಮ್ರತಾಗೆ ಕೊಡಲಾಗಿತ್ತು. ಅದಕ್ಕೆ ಮೂವರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಸಂಗೀತಾ, ವರ್ತೂರು, ಪ್ರತಾಪ್ ನಮ್ರತಾಗೋಸ್ಕರ ಆಡಿದರು. ಆದರೆ, ಮೂರನೇ ಹಂತ ಬರುವಷ್ಟರಲ್ಲಿ ನಮ್ರತಾ, ಸಂಗೀತಾ, ಪ್ರತಾಪ್ ಔಟ್ ಆಗಿದ್ದರು. ವರ್ತೂರು ಸಂತೋಷ್ ಉಳಿದಿದ್ದರು. ಇದು ಫಿನಾಲೆಗೆ ಟಿಕೆಟ್ ಆಗಿದ್ದ ಕಾರಣ, ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ಇವತ್ತಿನ ನಮ್ರತಾ ಭವಿಷ್ಯ ಇನ್ನು ಒಂದು ವಾರದ ತನಕ ಆಟವಾಡುವವರು ತೆಗೆದುಕೊಳ್ಳುವ ಅಂಕದ ಮೇಲೆ ನಿರ್ಧಾರವಾಗಲಿದೆ.


Click it and Unblock the Notifications











