ಸಂಗೀತಾಗೆ ಬಿಗ್ ಶಾಕ್ ಕೊಟ್ಟ ಪ್ರತಾಪ್; ಇನ್ಮುಂದೆ ಸಪೋರ್ಟ್ ಮಾಡಲ್ಲ ಎಂದಿದ್ದೇಕೆ ಸಂಗೀತಾ?

By Shruthi Harishgowda

ಬಿಗ್ ಬಾಸ್ ಮನೆಯಲ್ಲಿ ಅಕ್ಕ ತಮ್ಮನಂತೆ ಪ್ರತಾಪ್ ಹಾಗೂ ಸಂಗೀತಾ ಇಬ್ಬರೂ ಇದ್ದರು. ಯಾವುದೇ ಒಂದು ನಿರ್ಧಾರವನ್ನು ತೆಗೆದುಕೊಳ್ಳುವಾಗ ಪ್ರತಾಪ್‌ನನ್ನು ಸಂಗೀತಾ ಬಿಟ್ಟುಕೊಳ್ಳುತ್ತಿರಲಿಲ್ಲ. ಅದೇ ರೀತಿ ಪ್ರತಾಪ್ ಕೂಡ ಸಂಗೀತಾ ವಿರುದ್ಧ ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾ ಇರಲಿಲ್ಲ.

ಈಗ ಪ್ರತಾಪ್ ಅಕ್ಕ ಸಂಗೀತಾ ವಿರುದ್ಧವೇ ನಿರ್ಧಾರವನ್ನು ತೆಗೆದುಕೊಂಡಿದ್ದು ಎಲ್ಲಿಲ್ಲದ ಬೇಸರವನ್ನ ತಂದಿದೆ. ಸಂಗೀತಾ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದು, ಪ್ರತಾಪ್ ಅವರನ್ನು ಎಲಿಮಿನೇಷನ್‌ನಿಂದ ಪಾರು ಮಾಡಿದ್ದರು. ಈ ವಾರ ಪ್ರತಾಪ್ ಈ ಮನೆಯಲ್ಲಿ ಉಳಿದುಕೊಳ್ಳಬೇಕು ಎಂದು ಹೇಳಿದರು.

Bigg Boss Kannada Season 10 about Sangeetha angry on Prathap decision

ಯಾವುದೇ ವಿಚಾರ ಬಂದರೂ ಕೂಡ ಪ್ರತಾಪ್‌ಗೆ ಸಪೋರ್ಟ್ ಮಾಡುತ್ತಾ ಸಂಗೀತಾ ನಿಂತುಕೊಳ್ಳುತ್ತಿದ್ದರು. ಆದರೆ, ಇಂದಿಗೆ ಇವರಿಬ್ಬರ ಬಾಂಡಿಂಗ್ ಮುಗಿಯುವಂತೆ ಕಾಣಿಸುತ್ತಾ ಇದೆ. ಅದಕ್ಕೆ ಕಾರಣ ಏನೆಂದರೆ, ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶನ ಮಾಡಿರುವ ಪ್ರತಾಪ್ ಆಟದಿಂದ ಸಂಗೀತಾ ಅವರನ್ನು ಹೊರಗಡೆ ಇಡುತ್ತೇನೆ ಎಂಬ ಮಾತಾಗಿದೆ. ಇದು ಬೆಳಗ್ಗೆ ಜಿಯೋ ಸಿನಿಮಾ ಬಿಟ್ಟಿರೋ ಪ್ರೋಮೊದಲ್ಲಿ ರಿವೀಲ್ ಆಗಿದೆ.

ಸಂಗೀತಾ ಯಾವುದೇ ಕಾರಣಕ್ಕೂ ಪ್ರತಾಪ್‌ ನನ್ನನ್ನು ಆಟದಿಂದ ಹೊರಗಡೆ ಇಡೋದಿಲ್ಲ ಎಂಬ ಮಾತನ್ನು ನಮ್ರತಾ ಬಳಿ ಹೇಳಿದ್ದರು. ಆದರೆ, ಪ್ರತಾಪ್ ಕೂಡ ಎಲ್ಲೋ ಒಂದು ಕಡೆ ನಾನು ಕೂಡ ಫಿನಾಲೆಯಲ್ಲಿ ಇರಬೇಕು ಎಂದು ಕೊಂಡಿದ್ದಾರೆ. ಇದಕ್ಕಾಗಿ ತಮ್ಮ ಪಾಯಿಂಟ್ ಹೆಚ್ಚು ಮಾಡಿಕೊಳ್ಳಲು ಸಂಗೀತಾ ಅವರನ್ನೇ ಆಟದಿಂದ ಹೊರಗಿಟ್ಟಿದ್ದಾರೆ.

Bigg Boss Kannada Season 10 about Sangeetha angry on Prathap decision

ಸಂಗೀತಾ ತಮಗೆ ಸಿಕ್ಕಿದ ಅವಕಾಶವನ್ನ ಬಳಸಿಕೊಂಡು ಪ್ರತಾಪ್ ಅವರನ್ನು ಸೇವೆ ಮಾಡಿದ್ದರು ಈ ಮೂಲಕ ಪ್ರತಾಪ್‌ಗೆ ಮತ್ತೊಮ್ಮೆ ಬಿಗ್ ಬಾಸ್ ಮನೆಯಲ್ಲಿ ಇರಲು ಜೀವದಾನ ದೊರಕಿದಂತೆ ಆಗಿತ್ತು. ಈ ಸಂಗತಿಯಾದರೂ ತನ್ನನ್ನು ಟಾಸ್ಕ್‌ಗೆ ಸೇರಿಸಿಕೊಂಡು ನಾನು ಫೈನಲ್‌ಗೆ ಹೋಗಬಹುದು ಎಂಬ ಕನಸನ್ನು ಸಂಗೀತಾ ಕಂಡಿದ್ದರು. ಆದರೆ, ಪ್ರತಾಪ್ ಆ ರೀತಿ ಮಾಡಲಿಲ್ಲ. ಬದಲಾಗಿ ಸ್ವಾರ್ಥತನದಿಂದ ಇಲ್ಲಿ ನಡೆದುಕೊಂಡಿದ್ದಾರೆ. ಈಗ ಕೊಟ್ಟಿರುವ ಟಾಸ್ಕ್‌ನಲ್ಲಿ ವಿಜೇತರಾದರೆ ಸಂಗೀತಾ ಅವರು ಪ್ರತಾಪ್‌ಗಿಂತ ಹೆಚ್ಚು ಅಂಕ ಪಡೆಯುವ ಹಿನ್ನೆಲೆಯಲ್ಲಿ ಪ್ರತಾಪ್ ಈ ನಿರ್ಧಾರವನ್ನು ತೆಗೆದುಕೊಂಡಂತೆ ಕಾಣಿಸುತ್ತಾ ಇದೆ. ಬಿಗ್ ಬಾಸ್ ಮನೆಯಲ್ಲಿರುವ ಇತರ ಸ್ಪರ್ಧಿಗಳಿಗಿಂತ ಪ್ರತಾಪ್ ಹಾಗೂ ಸಂಗೀತಾ ಅವರ ಪಾಯಿಂಟ್‌ಗಳು ಹೆಚ್ಚಾಗಿವೆ.

ಆಟದಿಂದ ಹೊರಗಿಟ್ಟ ಡ್ರೋನ್

ಬಿಗ್ ಬಾಸ್ ಮನೆಯಲ್ಲಿ ಈಗ ಕೆಲವರು ತಮ್ಮ ನಿಜವಾದ ಆಟವನ್ನು ಶುರು ಮಾಡಿದಂತೆ ಕಾಣಿಸುತ್ತಾ ಇದೆ ಅದರಲ್ಲಿ ಡ್ರೋನ್ ಪ್ರತಾಪ್ ಕೂಡ ಒಬ್ಬರು. ಸದ್ಯಕ್ಕೆ ಪ್ರತಾಪ್ ಸಂಗೀತಾ ಅವರನ್ನ ಆಟದಿಂದ ಹೊರಗಿಟ್ಟು ಬಿಗ್ ಬಾಸ್ ಮನೆಯಲ್ಲಿರುವ ಎಲ್ಲಾ ಸದಸ್ಯರಿಗೂ ಕೂಡ ಶಾಕ್ ನೀಡಿದ್ದಾರೆ. ಪ್ರತಾಪ್ ತೆಗೆದುಕೊಂಡಿರುವ ನಿರ್ಧಾರ ಸಂಗಿತಾಗೆ ಅಕ್ಷರಶ: ಶಾಕ್ ನೀಡಿದೆ. ಸಂಗೀತಾ ಈ ವಿಚಾರದ ಬಗ್ಗೆ ನಮ್ರತಾ ಬಳಿ ಚರ್ಚೆ ಮಾಡಿದ್ದರು. ಪ್ರತಾಪ್ ಯಾವುದೇ ಕಾರಣಕ್ಕೂ ಕೂಡ ನನ್ನನ್ನ ಟಾಸ್ಕ್ ನಿಂದ ಹೊರಗಡೆ ಇಡೋದಿಲ್ಲ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದರು. ಆದರೆ ಇಲ್ಲಿ ಸಂಗೀತ ಮಾತು ಉಲ್ಟಾ ಆಗಿದೆ.

ಎಲ್ಲರ ಮುಂದೆ ಬಂದ ಪ್ರತಾಪ್ ನಾನು ಸಂಗೀತಾ ಅವರನ್ನು ಟಾಸ್ಕ್‌ನಿಂದ ಹೊರಗಡೆ ಇಡುತ್ತಿದ್ದೇನೆ. ಇಲ್ಲಿ ನಾನು ನನ್ನ ಬುದ್ಧಿವಂತಿಕೆಯಿಂದ ಅವರನ್ನ ಹೊರಗೆ ಇಟ್ಟಿದ್ದೇನೆ ಎಂದು ಹೇಳಿದ್ದಾರೆ. ಪ್ರತಾಪ್ ಏನಾದರೂ ಸಂಗೀತಾ ಅವರನ್ನು ಸೆಲೆಕ್ಟ್ ಮಾಡಿಕೊಂಡಿದ್ದು, ಅದರಲ್ಲಿ ಸಂಗೀತಾ ಗೆಲುವು ಪಡೆದಿದ್ದರೆ ಡೈರೆಕ್ಟ್ ಫಿನಾಲೆಗೆ ಹೋಗುತ್ತಿದ್ದರು. ಸಂಗೀತಾ ಹಾಗೂ ಪ್ರತಾಪ್ ಇಬ್ಬರೂ ಕೂಡ ಬಿಗ್ ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಗಿಂತ ಪಾಯಿಂಟ್ಸ್ ಹೆಚ್ಚಾಗಿದೆ. ಹೀಗಾಗಿ ಪ್ರತಾಪ್, ಸಂಗೀತಾರನ್ನು ಹೊರಗಿಟ್ಟಿದ್ದಾರೆ.

ಫಿನಾಲೆ ಹೊತ್ತಿಗೆ ಒಂಟಿ ಆಗ್ತಾರ ಪ್ರತಾಪ್?

ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಅತಿ ಹೆಚ್ಚು ಒಡನಾಟ ಇಟ್ಟುಕೊಂಡಿದ್ದು ಸಂಗೀತಾ ಜೊತೆ ಮಾತ್ರ. ಈಗ ಸಂಗೀತಾ, ಪ್ರತಾಪ್ ತೆಗೆದುಕೊಂಡಿರುವ ನಿರ್ಧಾರದಿಂದಾಗಿ ನಾನು ಇನ್ಮುಂದೆ ಪ್ರತಾಪ್‌ಗೆ ಯಾವುದೇ ಕಾರಣಕ್ಕೂ ಸಪೋರ್ಟ್ ಮಾಡೋದಿಲ್ಲ ಎಂದು ಹೇಳಿದ್ದಾರೆ. ಇನ್ಮುಂದೆ ಸಂಗೀತಾ ಸಪೋರ್ಟ್ ಪ್ರತಾಪ್ ಗೆ ಇರೋದಿಲ್ಲವಂತೆ. ಹಾಗಾದ್ರೆ ಫಿನಾಲೆ ಹೊತ್ತಿಗೆ ಪ್ರತಾಪ್ ಒಂಟಿಯಾಗಿ ಇರ್ತಾರ ಎಂಬ ಪ್ರಶ್ನೆ ಕಾಡುತ್ತಿದೆ. ಯಾವಾಗಲೂ ಸಂಗೀತ ಜೊತೆಗೆ ಇರುತ್ತಿದ್ದಿದ್ದರಿಂದ ಸೇಫ್ ಆಗಿ ಇದ್ದರು ಈಗ ಸಂಗೀತಾ ಸಪೋರ್ಟ್ ಮಾಡಲ್ಲ ಎಂದಿರುವುದರಿಂದ ಪ್ರತಾಪ್ ಮುಂದೆ ನ್ಯಾಮಿನೇಟ್ ಆಗಬಹುದು.

More from Filmibeat

English summary
Bigg Boss Kannada Season 10 about Sangeetha angry on Prathap decision.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X