BBK10: ತನಿಷಾ - ವರ್ತೂರು ಸಂತೋಷ್ ನಡುವೆ ಬಿರುಕು ಮೂಡಿಸಿದ್ದೇ ವಿನಯ್? ಕಿಚ್ಚನಿಂದ ಬದಲಾಗ್ತಾರಾ?
ಬಿಗ್ ಬಾಸ್ ಮನೆಯಲ್ಲಿ ಇತ್ತಿಚೆಗೆ ವರ್ತೂರು ಸಂತೋಷ್ ಹಾಗೂ ತನಿಷಾ ನಡುವೆ ಒಂದು ಸ್ನೇಹದ ಬಾಂಧವ್ಯ ಮೂಡಿದೆ. ಆ ಸ್ನೇಹ ಕೊಂಚ ಹೆಚ್ಚಾಗಿಯೇ ಮುಂದುವರೆದಿದೆ. ಮನೆಯವರೆಲ್ಲಾ ವರ್ತೂರು ಸಂತೋಷ್ ಹಾಗೂ ತನಿಷಾ ಅವರನ್ನು ರೇಗಿಸುವಷ್ಟು ಸ್ನೇಹದ ಆತ್ಮೀಯತೆ ಹೆಚ್ಚಾಗಿತ್ತು. ಕಿಚ್ಚ ಸುದೀಪ್ ಕೂಡ ಇಬ್ಬರನ್ನು ರೇಗಿಸಿದ್ದರು. ಆದರೆ, ಅದ್ಯಾಕೋ ಮೂರೇ ವಾರಕ್ಕೆ ಇಬ್ಬರ ನಡುವೆ ಅಂತರ ಮೂಡಿದೆ.
ತನಿಷಾ ಹೆಸರು ಹೇಳಿದರೆ ಸಾಕು ವರ್ತೂರು ಸಂತೋಷ್ ನಾಚಿ ನೀರಾಗುತ್ತಿದ್ದರು. ಅದಕ್ಕೆ ಅಂತಾನೇ ಬಿಗ್ ಬಾಸ್ ಬೆಂಕಿ ಎಂಬ ಸಿನಿಮಾದ ಪೋಸ್ಟರ್ ಅನ್ನೇ ರಿಲೀಸ್ ಮಾಡಿತ್ತು. ಅಂದಿನಿಂದಲೂ ತನಿಷಾ ಕೂಡ ವರ್ತೂರು ಜೊತೆಗೆ ಬಾಂಡಿಂಗ್ ಬೆಳೆಸಿಕೊಳ್ಳುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಆ ಬಾಂಡಿಂಗ್ ದೂರವಾಗುತ್ತಿದೆ.

ವಿನಯ್ ಟೀಂಗೆ ಸರೆಂಡರ್ ಆದ್ರಾ ವರ್ತೂರು?
ವರ್ತೂರು ಸಂತೋಷ್ ಮೊದಲಿನಿಂದಲೂ ತಮ್ಮದೇ ಆದ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದಾರೆ. ತಮ್ಮ ಇನೋಸೆಂಟ್‌ನಿಂದ ಎಲ್ಲರನ್ನು ಸೆಳೆದಿದ್ದಾರೆ. ವಾರದ ಕಥೆ ಕಿಚ್ಚನ ಜೊತೆಯಲ್ಲೂ ಸುದೀಪ್ ಅದನ್ನೇ ಹೇಳಿದ್ದರು. ಆದರೆ, ವಿನಯ್ ಟೀಂ ಸೇರಿದಾಗ ವರ್ತೂರು ಸಂತೋಷ್ ನಡವಳಿಕೆಯೇ ಬದಲಾಗಿ ಹೋಗಿತ್ತು. ಅದು ನೋಡುಗರ ಕಣ್ಣಿಗೂ ಎದ್ದು ಕಾಣುತ್ತಾ ಇತ್ತು. ಒರಟುತನ, ದ್ವೇಷ ಎಲ್ಲವೂ ಅದಾಗಿಯೇ ಬಂದಿತ್ತು. ಇದೇ ವಿಚಾರ ಕಿಚ್ಚನ ಪಂಚಾಯ್ತಿಯಲ್ಲಿ ಚರ್ಚೆಗೆ ಬಂದಿದೆ.
ವರ್ತೂರು ಮೇಲೆ ಬಂದ ಆರೋಪಗಳೇನು..?
ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯಲ್ಲಿ ನಡೆಯುವ ಎಲ್ಲಾ ಬೆಳವಣಿಗೆಯನ್ನು ಸುದೀಪ್ ತಿಳಿದುಕೊಳ್ಳುತ್ತಾರೆ. ಇನ್ನು ತನಿಷಾ ಹಾಗೂ ವರ್ತೂರ ಸಂತೋಷ್ ಸ್ನೇಹದ ನಡುವೆ ಮೂಡಿರುವ ಬಿರುಕಿನ ವಿಚಾರ ಗೊತ್ತಾಗುವುದಿಲ್ಲವಾ..? ಅದರ ಬಗ್ಗೆಯೇ ಪ್ರಶ್ನೆ ಕೇಳಿದ್ದಾರೆ. ತನುಷಾ ಹಾಗೂ ವರ್ತೂರು ನಡುವಿನ ಫ್ರೆಂಡ್‌ಶಿಪ್‌ನಲ್ಲಿ ಅಷ್ಟು ಕ್ಲೋಸ್ ಇಲ್ಲ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಒಂದಷ್ಟು ಮಂದಿ ಎಸ್ ಎಂದಿದ್ದಾರೆ. ಅದಕ್ಕೆ ತನಿಷಾ ಹಾಗೂ ಕಾರ್ತಿಕ್ ಕ್ಲಾರಿಟಿ ಕೂಡ ಕೊಟ್ಟಿದ್ದಾರೆ. ನಾನು ಮೊದಲು ಅವರ ಜೊತೆಗೆ ಕ್ಲೋಸ್ ಆಗಿ ಇದ್ದದ್ದೇ ಅವರ ಇನೊಸೆಂಟ್ ನೋಡಿ ಎಂದಿದ್ದಾರೆ.

ಕಿಚ್ಚನ ಥ್ಯಾಂಕ್ಸ್ ಹಿಂದೆ ಇದ್ದ ಕಾರಣವೇನು..?
ಕಿಚ್ಚ ಸುದೀಪ್ ಆರಂಭದಿಂದ ತನಿಷಾ ಅವರ ತಲೆಗೆ ಒಂದು ಹುಳ ಬಿಟ್ಟಿದ್ದರು. ಮಾತಿಗೆ ಮುಂಚೆ ಥ್ಯಾಂಕ್ಸ್ ಹೇಳುತ್ತಿದ್ದರು. ಇದು ತನಿಷಾ ಅವರನ್ನು ಸಾಕಷ್ಟು ಡಿಸ್ಟರ್ಬ್ ಮಾಡಿತ್ತು. ಹಲವು ಬಾರಿ ಕಿಚ್ಚನನ್ನು ಕೇಳಿದ್ದರು. ಕಡೆಯಲ್ಲಿ ಕಿಚ್ಚ ಸತ್ಯ ಹೇಳಿದ್ದರು. ವರ್ತೂರು ಉಗುರು ಕಟ್ ಮಾಡುವುದಕ್ಕೆ 40 ನಿಮಿಷ ತೆಗೆದುಕೊಂಡಿದ್ದೀರಲ್ಲ. ವರ್ತೂರು ನೀವೇ ಕಟ್ ಮಾಡುವುದಕ್ಕೂ ಅಷ್ಟು ನಿಮಿಷ ಸಮಯ ತೆಗೆದುಕೊಳ್ಳುತ್ತೀರಾ ಎಂದು ಕಿಚ್ಚ ಕಾಲೆಳೆದರು.
ಇನ್ಮುಂದೆ ಮತ್ತೆ ಸರಿ ಆಗ್ತಾರಾ ಬೆಂಕಿ-ವರ್ತೂರು?
ವರ್ತೂರು ಸಂತೋಷ್‌ನಲ್ಲಾಗಿರುವ ಕೆಲವೊಂದು ಬದಲಾವಣೆ ವೇದಿಕೆ ಮೇಲೆ ಅನಾವರಣವಾಗಿದೆ. ಅದರಲ್ಲೂ ಪ್ರತಾಪ್,ತನಿಷಾ, ಕಾರ್ತಿಕ್ ಎಲ್ಲರೂ ವರ್ತೂರು ಸಂತೋಷ್‌ನಲ್ಲಾದ ಬದಲಾವಣೆಯನ್ನು ಕಾರಣ ಸಮೇತ ಬಿಚ್ಚಿಟ್ಟಿದ್ದಾರೆ. ಇದನ್ನು ಕೇಳಿಸಿಕೊಂಡ ವರ್ತೂರು ತಾನು ಎಲ್ಲಿಯೂ ಬದಲಾವಣೆಯಾಗಿಲ್ಲ. ಬಿಗ್ ಬಾಸ್‌ನಲ್ಲಿ ನನ್ನದೇ ಆಟ ಆಡುತ್ತಿದ್ದೀನಿ. ಕಳೆದ ಕೆಲ ದಿನಗಳಿಂದ ಅವರ ಜೊತೆ ಹೆಚ್ಚು ಮಾತನಾಡುತ್ತಿಲ್ಲ ಎಂದು ಅವರೇ ಹೇಳಿದ್ದಾರೆ. ಈ ಮೂಲಕ ವರ್ತೂರು ಸಂತೋಷ್ ಸ್ವಲ್ಪ ಅರ್ಥ ಮಾಡಿಕೊಂಡಂತೆ ಕಾಣುತ್ತಿದ್ದಾರೆ.


Click it and Unblock the Notifications











