Snehith Gowda : ಒಂಬತ್ತು ವಾರಗಳ ದೊಡ್ಮನೆ ಜರ್ನಿ ಮುಗಿಸಿದ ನಟ ಸ್ನೇಹಿತ್ ಗೌಡ

ಬಿಗ್ ಬಾಸ್ ಕನ್ನಡ ಸೀಸಸ್ ಒಂಬತ್ತನೇ ವಾರ ಮುಕ್ತಾಯವಾಗಿದ್ದು, ಕಳೆದ ವಾರ ಬಚಾವಾಗಿದ್ದ ನಟ ಸ್ನೇಹಿತ್ ಗೌಡ ಈ ಬಾರಿ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಕಳೆದ ವಾರವೇ ಸ್ನೇಹಿತ್ ಗೌಡ ಮತ್ತು ಮೈಕಲ್ ಅಜಯ್ ನಡುವೆ ಯಾರಾದರೂ ಮನೆ ಬಿಟ್ಟು ಹೋಗಬೇಕಿತ್ತು. ಆದರೆ, ಸುದೀಪ್ ಇಬ್ಬರನ್ನು ಉಳಿಸಿಕೊಂಡಿದ್ದರು.

ಬಿಗ್ ಬಾಸ್‌ಮನೆಯಲ್ಲಿ ಆಟ 60 ದಿನಗಳನ್ನ ಪೂರೈಸಿದೆ. ಇದೇ ವೇಳೆ ನಮ್ಮನೆ ಯುವರಾಣಿ ನಟ ಸ್ನೇಹಿತ್ ಔಟ್ ಆಗಿದ್ದಾರೆ. ನೀತು ವನಜಾಕ್ಷಿ ಬಳಿಕ ಸ್ನೇಹಿತ್ ಗೌಡ ಬಿಗ್ ಬಾಸ್ ಪ್ರಯಾಣ ಮುಗಿಸಿದ್ದಾರೆ. ಕಳೆದ ವಾರ ಕ್ಯಾಪ್ಟನ್ ಆಗಿದ್ದ ಸ್ನೇಹಿತ್‌ನಿಮದಾಗಿ ದೊಡ್ಮನೆಯಲ್ಲಿ ಹಲವು ಅವಘಡಗಳು ನಡೆದಿದ್ದವು.

Bigg Boss Kannada Season 10: Actor Snehith Gowda Eliminated from Bigg Boss House

ದೊಡ್ಮನೆ ಆಟಕ್ಕೆ ಸ್ನೇಹಿತ್ ಗುಡ್ ಬೈ

ಬಿಗ್ ಬಾಸ್ ಮನೆಗೆ ಎರಡನೇ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದ ಸ್ನೇಹಿತ್ ಮೊದ ಮೊದಲು ಎಲ್ಲರ ಜೊತೆಗೆ ಸ್ನೇಹದಿಂದಲೇ ಇರಲು ಆರಂಭಿಸಿದ್ದರು. ಯಾರಿಗೂ ಹರ್ಟ್ ಆಗುವಂತೆ ನಡೆದುಕೊಳ್ಳುತ್ತಿರಲಿಲ್ಲ. ವಿನಯ್ ತಂಡಕ್ಕೆ ಸೇರಿದ ಬಳಿಕ ಸ್ನೇಹಿತ್ ಅವರಲ್ಲಿ ಬದಲಾವಣೆಗಾಳಾಗಿದ್ದವು.

ಇದಾದ ನಂತರ ನಮ್ರತಾ ಅವರ ಹಿಂದೆ ಸುತ್ತಲು ಶುರು ಮಾಡಿದ್ದರು. ದೊಡ್ಮನೆಯಲ್ಲಿ ಎರಡೆರಡು ಬಾರಿ ಕ್ಯಾಪ್ಟನ್ ಆಗಿದ್ದ ಸ್ನೇಹಿತ್ ಗೌಡ, ಆಟಗಳಲ್ಲಿ ಚೆನ್ನಾಗಿಯೇ ಭಾಗವಹಿಸುತ್ತಿದ್ದರು. ಆದರೆ, ಯಾವಾಗಲು ವಿನಯ್ ಗೌಡ ಮತ್ತು ನಮ್ರತಾ ಗೌಡ ಅವರ ಜೊತೆಯಲ್ಲಿಯೇ ಇದ್ದು, ನಮ್ರತಾ ತರಹ ಚಮಚ ಎನಿಸಿಕೊಂಡಿದ್ದರು. ಈ ಬಾರಿ ಕ್ಯಾಪ್ಟನ್ ಆದಾಗಲಂತೂ ನಮ್ರತಾ ಅವರ ಮಾತನ್ನೇ ಕೇಳುತ್ತಿದ್ದರು.

Bigg Boss Kannada Season 10: Actor Snehith Gowda Eliminated from Bigg Boss House

ಕಳೆದ ವಾರವೇ ಮನೆಯಿಂದ ಹೋಗಬೇಕಿದ್ದ ಸ್ನೇಹಿತ್

ಸ್ನೇಹಿತ್ ಗೌಡ ಅವರು ಕಳೆದ ವಾರವೇ ಎಲಿಮಿನೇಟ್ ಆಗುವ ಸಾಧ್ಯತೆ ಇತ್ತು. ಕಳೆದ ವಾರದ ವೀಟಿಂಗ್ ಪ್ರಕಾರ ಅವರು ಕೊನೆಯ ಹಂತಕ್ಕೆ ಬಂದಿದ್ದರು. ಆದರೆ, ನಟ ಕಿಚ್ಚ ಸುದೀಪ್ ತಮ್ಮ ವಿಶೇಷ ಅಧಿಕಾರ ಬಖಸಿ ಅವರನ್ನು ಉಳಿಸಿಕೊಂಡಿದ್ದರು. ಆದರೆ, ಈ ಬಾರಿ ಅವರು ಮನೆಯಲ್ಲಿ ಕ್ಯಾಪ್ಟನ್ ಆಗಿ ನಡೆದುಕೊಂಡ ರೀತಿ ಜನರಿಗೆ ಮೆಚ್ಚುಗೆಯಾಗಿಲ್ಲ. ಹೀಗಾಗಿ ಅವರನ್ನು ಸೇವ್ ಮಾಡಿಲ್ಲ.

ಈ ಬಾರಿ ನಾಮಿನೇಟ್ ಆಗಿದ್ದು ಬರೋಬ್ಬರಿ ಒಂಬತ್ತು ಮಂದಿ. 9 ನೇ ವಾರದಲ್ಲಿ ಒಂಬತ್ತು ಸ್ಪರ್ಧಿಗಳು ಅವಿನಾಶ್, ಕಾರ್ತಿಕ್, ಮೈಕೆಲ್ ಅಜಯ್, ಪವಿ ಪೂವಪ್ಪ, ಡ್ರೋನ್ ಪ್ರತಾಪ್, ಸಂಗೀತಾ, ಸಿರಿ, ಸ್ನೇಹಿತ್, ತನಿಶಾ ನಾಮಿನೇಟ್ ಆಗಿದ್ದರು. ಇದರಲ್ಲಿ ಅವಿನಾಶ್ ಶೆಟ್ಟಿ ಮತ್ತು ಸ್ನೇಹಿತ್ ಕೊನೆಯಲ್ಲಿದ್ದರು. ಇಬ್ಬರಲ್ಲಿ ಅವಿನಾಶ್ ಶೆಟ್ಟಿ ಸೇಫ್ ಆಗಿ, ಸ್ನೇಹಿತ್ ಮನೆಯಿಂದ ಹೊರಹೋಗಿದ್ದಾರೆ.

ಸ್ನೇಹಿತ್ ಔಟ್...ಖುಷಿ ಪಟ್ಟ ಬಿಗ್ ಬಾಸ್ ವೀಕ್ಷಕರು!

ಇನ್ನು, ಬಿಗ್ ಬಾಸ್ ಮನೆಯಿಂದ ಸ್ನೇಹಿತ್ ಗೌಡ ಹೊರ ಹೋಗಿರುವುದಕ್ಕೆ ರಿಯಾಲಿಟಿ ಶೋ ವೀಕ್ಷಕರು ಖುಷಿ ಪಟ್ಟಿದ್ದಾರೆ. ಕಲರ್ಸ್ ಕನ್ನಡ ಎಲಿಮಿನೇಟ್ ಆಗಿರುವ ಸ್ಪರ್ಧಿಯ ಫೋಟೋ ಹಾಕಿದ್ದು, ಅದಕ್ಕೆ ಬಂದಿರುವ ಎಲ್ಲಾ ಕಾಮೆಂಟ್‌ಗಳಲ್ಲಿಯೂ ವೀಕ್ಷಕರು 'ಇದು ಖುಷಿ ಪಡುವ ಸುದ್ದಿ, ಕೊನೆಗೂ ಸ್ನೇಹಿತ್ ಹೊರಗೆ ಹೋದ' ಎಂಬ ಕಾಮೆಂಟ್‌ ಬರುತ್ತಿದೆ.

'ಇಡೀ ಬಿಗ್ ಬಾಸ್ ನೋಡುವ ವೀಕ್ಷಕರಿಗೆ ಖುಷಿ ಕೊಡುವ ಸುದ್ದಿ..... So good dicision..', 'ನಾನು ಫುಲ್ ಹ್ಯಾಪಿ ಒಳ್ಳೆಯ ನಿರ್ಧಾರ ಬಿಗ್ ಬಾಸ್', 'ಬಿಗ್ ಬಾಸ್‌ನ ಮೊದಲ ಸರಿಯಾದ ನಿರ್ಧಾರ', 'ಸಿಹಿ ಸುದ್ದಿ... ಮುಂದೆ ನಮ್ರತಾ ಹೋದ್ರೆ ಇನ್ನು ಸಂತೋಷ' ಎಂಬ ಕಾಮೆಂಟ್‌ಗಳು ತುಂಬಿಕೊಂಡಿವೆ.

More from Filmibeat

English summary
Snehith Gowda eliminated from Bigg Boss House
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X